ಪ್ರಶ್ನೆ ಕೇಳಲು ಲಂಚ ಪ್ರಕರಣ : ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಉಚ್ಚಾಟನೆ

  ನವದೆಹಲಿ : ತೃಣಮೂಲ ಕಾಂಗ್ರೆಸ್‌ ನಾಯಕಿ ಮಹುವಾ ಮೊಯಿತ್ರಾ ಅವರ ವಿರುದ್ಧದ ಪ್ರಶ್ನೆಗಾಗಿ ಲಂಚ (cash for query) ಆರೋಪದ ಕುರಿತು ನೈತಿಕ ಸಮಿತಿ ವರದಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿದೆ. ಸಂಸತ್ತಿನಲ್ಲಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ₹ 2 ಕೋಟಿ ನಗದು ಮತ್ತು “ಐಷಾರಾಮಿ … Continued

ಬಾಲಿವುಡ್‌ ನಟ ಜೂನಿಯರ್ ಮೆಹಮೂದ್ ನಿಧನ

ಮುಂಬೈ: ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಹಿರಿಯ ನಟ ಜೂನಿಯರ್ ಮೆಹಮೂದ್ ಅವರು ಗುರುವಾರ ರಾತ್ರಿ ಮುಂಬೈನಲ್ಲಿ ತಮ್ಮ 67 ನೇ ವಯಸ್ಸಿನಲ್ಲಿ ನಿಧನರಾರಾಗಿದ್ದಾರೆ. ಗುರುವಾರ ರಾತ್ರಿ ಅವರ ಸ್ಥಿತಿ ಹದಗೆಟ್ಟಿತು. ಅವರು ಮುಂಬೈನ ತಮ್ಮ ಮನೆಯಲ್ಲಿ ನಿಧನರಾದರು. ಅವರು ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ 250 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಜೂನಿಯರ್ ಮೆಹಮೂದ್ ಅವರ … Continued

ವೀಡಿಯೊ..| “ಮೋದಿಗೆ ಯಾರಾದ್ರೂ ಬೆದರಿಕೆ ಹಾಕಬಹುದೆಂದು ಊಹಿಸಲು ಸಾಧ್ಯವಿಲ್ಲ…”: ಪ್ರಧಾನಿ ಮೋದಿ ಕಠಿಣ ನಿರ್ಧಾರಗಳು ನನಗೆ ʼಅಚ್ಚರಿʼ ತಂದಿದೆ ಎಂದ ರಷ್ಯಾದ ಪುತಿನ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಳ್ಳುತ್ತಿರುವ “ಕಠಿಣ” ನಿರ್ಧಾರವನ್ನು ಶ್ಲಾಘಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮ ಬಳಕೆದಾರರ ಕುತೂಹಲ ಕೆರಳಿಸಿದೆ. ಅವರ ಭಾಷಣಕ್ಕೆ ಹಿಂದಿಯಲ್ಲಿ ಧ್ವನಿ ನೀಡಲಾಗಿದ್ದು, ರಷ್ಯಾದ ನಾಯಕ ಭಾರತ ಹಾಗೂ ರಷ್ಯಾ ನಡುವೆ ನಿರಂತರವಾಗಿ ಬೆಳೆಯುತ್ತಿರುವ ಸಂಬಂಧಗಳ ಬಗ್ಗೆ ಸುದೀರ್ಘವಾಗಿ ಮಾತನಾಡುವುದನ್ನು ವೀಡಿಯೊ ತೋರಿಸುತ್ತದೆ. “ರಷ್ಯಾ ಮತ್ತು … Continued

ಸಂವಿಧಾನದ 370ನೇ ವಿಧಿ ರದ್ದತಿ: ಡಿಸೆಂಬರ್‌ 11ಕ್ಕೆ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟ

  ನವದೆಹಲಿ : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿ 2019ರಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಡಿಸೆಂಬರ್‌ 11ರಂದು ಪ್ರಕಟಿಸಲಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ನ್ಯಾಯಮೂರ್ತಿಗಳಾದ ಸಂಜಯ ಕಿಶನ್‌ ಕೌಲ್‌, ಸಂಜೀವ ಖನ್ನಾ, ಬಿ.ಆರ್‌. … Continued

ಮಹಾರಾಷ್ಟ್ರ ಆಡಳಿತಾರೂಢ ಮೈತ್ರಿಕೂಟಕ್ಕೆ ನವಾಬ್ ಮಲಿಕ್ ಸೇರ್ಪಡೆ ವಿರೋಧಿಸಿ ಎನ್‌ ಸಿಪಿಯ ಅಜಿತ್ ಪವಾರಗೆ ಪತ್ರ ಬರೆದ ಫಡ್ನವೀಸ್‌

ಮುಂಬೈ : ಎನ್‌ಸಿಪಿ ಶಾಸಕ ನವಾಬ್ ಮಲಿಕ್ ಅವರನ್ನು ಮಹಾಯುತಿ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಪಕ್ಷದ ದೇವೇಂದ್ರ ಫಡ್ನವೀಸ್ ಅವರು ಮತ್ತೊಬ್ಬ ಉಪಮುಖ್ಯಮಂತ್ರಿ ಮತ್ತು ಮೈತ್ರಿಪಕ್ಷವಾದ ಎನ್‌ಸಿಪಿ ಅಜಿತ್ ಪವಾರ್ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ನವಾಬ್ ಮಲಿಕ್ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ … Continued

ವಾರಾಣಸಿಯ ಆಶ್ರಮದಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ವಾರಾಣಸಿ: ಆಂಧ್ರಪ್ರದೇಶದ ಒಂದೇ ಕುಟುಂಬದ ನಾಲ್ವರು ಗುರುವಾರ ವಾರಾಣಸಿಯ ಆಶ್ರಮವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರ ಪ್ರಕಾರ, ಕುಟುಂಬವು ಅನುಮಾನಾಸ್ಪದ ಹಣಕಾಸಿನ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಆಧ್ಯಾತ್ಮಿಕ ಪ್ರಯಾಣದ ಭಾಗವಾಗಿ ಕುಟುಂಬ ಡಿಸೆಂಬರ್ 3 ರಂದು ವಾರಣಾಸಿಗೆ ಆಗಮಿಸಿತ್ತು. ಅವರು ಡಿಸೆಂಬರ್ 7 ರಂದು ಬೆಳಿಗ್ಗೆ ಆಂಧ್ರಪ್ರದೇಶದ ತಮ್ಮೂರಿಗೆ ಮರಳಲು ಸಿದ್ಧತೆ ನಡೆಸಿತ್ತು. ಆದರೆ, … Continued

ಗುಜರಾತಿನ ಗರ್ಬಾ ನೃತ್ಯಕ್ಕೆ ಯುನೆಸ್ಕೋ ಮಾನ್ಯತೆ

ನವದೆಹಲಿ: ಗುಜರಾತಿನ ಸಾಂಪ್ರದಾಯಿಕ ನೃತ್ಯ ಪ್ರಕಾರವಾದ ಗರ್ಬಾವನ್ನು ಯುನೆಸ್ಕೋದ ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ’ (‘Intangible Cultural Heritage of Humanity’ (ICHH)) ಪಟ್ಟಿಯಲ್ಲಿ ಸೇರಿಸಲಾಗಿದೆ. ನವರಾತ್ರಿ ಉತ್ಸವದಲ್ಲಿ ಪ್ರದರ್ಶಿಸಲಾಗುವ ಗರ್ಬಾ, ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾದ ಭಾರತದಿಂದ 15ನೇ ಅಂಶವಾಗಿದೆ. ಬೋಟ್ಸ್ವಾನಾದ ಕಸಾನೆಯಲ್ಲಿ ಅಮೂರ್ತ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿ ಇತ್ತೀಚೆಗೆ ನಡೆದ ಅಂತರ್ … Continued

ಕತಾರಿನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಭೇಟಿಯಾದ ಭಾರತೀಯ ರಾಯಭಾರಿ

ನವದೆಹಲಿ : ಇನ್ನೂ ತಿಳಿದಿಲ್ಲದ ಕಾರಣಗಳಿಗಾಗಿ ಕತಾರಿನಲ್ಲಿ ಅಕ್ಟೋಬರ್‌ನಲ್ಲಿ ಮರಣದಂಡನೆ ಶಿಕ್ಷೆ ಗುರಿಯಾಗಿರುವ  ಮಾಜಿ ನೌಕಾಪಡೆಯ ಎಂಟು  ಮಾಜಿ  ಸಿಬ್ಬಂದಿಯನ್ನು ಕತಾರಿನ ಭಾರತದ ರಾಯಭಾರಿ ಭಾನುವಾರ ಭೇಟಿಯಾಗಿದ್ದಾರೆ ಎಂದು ಸರ್ಕಾರ ಗುರುವಾರ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಅವರು, “ನಮ್ಮ ರಾಯಭಾರಿ ಡಿಸೆಂಬರ್ 3 ರಂದು ಜೈಲಿನಲ್ಲಿರುವ ಎಲ್ಲಾ ಎಂಟು ಜನರನ್ನು ಭೇಟಿಯಾಗಲು … Continued

ಗುಂಡು ಹಾರಿಸಿ ಒಬ್ಬರನ್ನು ಸಾಯಿಸಿ, ಮೂವರನ್ನು ಗಾಯಗೊಳಿಸಿದ ಆರೋಪದ ಮೇಲೆ ಜನಪ್ರಿಯ ಕಿರುತೆರೆ ನಟನ ಬಂಧನ

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನೀಲಗಿರಿ ಮರಗಳನ್ನು ಕಡಿಯುವ ವಿಚಾರದಲ್ಲಿ ನಡೆದ ವಾದ ವಿವಾದದಲ್ಲಿ ಅಕ್ಕಪಕ್ಕದವರ ಮೇಲೆ ಗುಂಡು ಹಾರಿಸಿದ ನಂತರ ಒಬ್ಬರು ಸಾವಿಗೀಡಾಗಿ ಇತರ ಮೂವರು ಗಾಯಗೊಂಡ ನಂತರ ಜನಪ್ರಿಯ ಕಿರುತೆರೆ ನಟನನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ, ‘ಯೇ ಪ್ಯಾರ್ ನಾ ಹೋಗಾ ಕಾಮ್’ ಮತ್ತು ‘ಮಧುಬಾಲಾ’ ದಂತಹ ಜನಪ್ರಿಯ ಟಿವಿ ಶೋಗಳಲ್ಲಿ ನಟಿಸಿರುವ ಭೂಪಿಂದರ್ … Continued

ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ , ಉಪಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಪ್ರಮಾಣ ವಚನ ಸ್ವೀಕಾರ

ಹೈದರಾಬಾದ್: ನವೆಂಬರ್ 30 ರಂದು ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ಅನುಮುಲಾ ರೇವಂತ ರೆಡ್ಡಿ ಅವರು ಇಂದು, ಗುರುವಾರ (ಡಿಸೆಂಬರ್‌ 7) ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೈದರಾಬಾದ್‌ನ ಲಾಲ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 1 ಲಕ್ಷ … Continued