‘ಭಾರತದ ಜೊತೆ ಕೆನಡಾ ಖಾಸಗಿಯಾಗಿ ಮಾತನಾಡಲು ಬಯಸುತ್ತದೆ…’: ತನ್ನ ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತ ಸೂಚಿಸಿದೆ ಎಂಬ ವರದಿ ನಂತರ ಕೆನಡಾ ಹೇಳಿಕೆ

ಒಟ್ಟಾವಾ : ಭಾರತದಿಂದ ತನ್ನ 41 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತವು ಕೆನಡಾಕ್ಕೆ ಸೂಚಿಸಿದೆ ಎಂಬ ವರದಿಯ ನಂತರ, ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು, ರಾಜತಾಂತ್ರಿಕ ಬಿಕ್ಕಟ್ಟನ್ನು ಪರಿಹರಿಸಲು ಕೆನಡಾವು ಭಾರತದೊಂದಿಗೆ ಖಾಸಗಿ ಮಾತುಕತೆಗಳನ್ನು ಬಯಸುತ್ತದೆ ಎಂದು ಹೇಳಿದ್ದಾರೆ. ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು, ಕೆನಡಾ … Continued

ಸಿಕ್ಕಿಂನಲ್ಲಿ ಮೇಘಸ್ಫೋಟ, ಪ್ರವಾಹ : 23 ಯೋಧರು ನಾಪತ್ತೆ

ಗ್ಯಾಂಗ್ಟಾಕ್ : ಉತ್ತರ ಸಿಕ್ಕಿಂನಲ್ಲಿ ಹಠಾತ್ ಮೇಘಸ್ಫೋಟದಿಂದಾಗಿ ಪ್ರವಾಹ ಉಂಟಾಗಿದೆ. ಇದು ಲಾಚೆನ್ ಕಣಿವೆಯ ಸೇನಾ ಶಿಬಿರಕ್ಕೆ ತೀವ್ರ ಹಾನಿಯುಂಟು ಮಾಡಿದ್ದು, 23 ಯೋಧರು ನಾಪತ್ತೆಯಾಗಿದ್ದಾರೆ ಎಂದು ವರದಿಗಳಿವೆ. ಅವರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂನಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ತೀಸ್ತಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಹಲವಾರು … Continued

‘ಶೀಘ್ರದಲ್ಲೇ ಬರಲಿದೆ…’ : ಮುಂಬರುವ ವಂದೇ ಭಾರತ ಸ್ಲೀಪರ್ ಕೋಚ್‌ ಚಿತ್ರಗಳನ್ನು ಹಂಚಿಕೊಂಡ ರೈಲ್ವೆ ಸಚಿವ ಅಶ್ವಿನಿ ವೈಷ್ಣವ

ನವದೆಹಲಿ: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಮುಂಬರುವ ವಂದೇ ಭಾರತ್ ಸ್ಲೀಪರ್ ರೈಲುಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹಂಚಿಕೊಂಡಿದ್ದಾರೆ. “ಕಾನ್ಸೆಪ್ಟ್ ಟ್ರೈನ್ – ವಂದೇ ಭಾರತ್ (ಸ್ಲೀಪರ್ ಆವೃತ್ತಿ). ಶೀಘ್ರದಲ್ಲೇ ಬರಲಿದೆ… 2024 ರ ಆರಂಭದಲ್ಲಿ” ಎಂದು ಸಚಿವರ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ವಂದೇ ಭಾರತ್ ರೈಲಿನ ಹೊಸ ಆವೃತ್ತಿಯು … Continued

ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ: ದಲಿತರು-ಹಿಂದುಳಿದ ವರ್ಗಗಳು ಯಾರು ಪ್ರಧಾನಿಯಾಗಬೇಕೆಂದು ಬಯಸುತ್ತಾರೆ..? ಮೋದಿಯೊ..? ರಾಹುಲ್‌ ಗಾಂಧಿಯೊ..? ಮತ್ತೊಬ್ಬರೊ..?

ನವದೆಹಲಿ: ಬಹುಪಾಲು ಇತರೆ ಹಿಂದುಳಿದ ವರ್ಗಗಳು (OBC) ಮತ್ತು ದಲಿತ ಮತದಾರರು ಲೋಕಸಭೆ ಚುನಾವಣೆ 2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಬೇಕು ಎಂದು ಬಯಸುತ್ತಾರೆ, ಆದರೆ ಅವರ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೂರದ ಎರಡನೇ ಆಯ್ಕೆಯಾಗಿದ್ದಾರೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷಾ ವರದಿ ತಿಳಿಸಿದೆ. . ದೇಶದ ಶೇಕಡಾ … Continued

ನಮಗೆ ಸಂಬಂಧ ಉಲ್ಬಣಗೊಳ್ಳುವುದು ಬೇಕಿಲ್ಲ, ಭಾರತದ ಜೊತೆ ರಚನಾತ್ಮಕ ಸಂಬಂಧ ಮುಂದುವರಿಯಲಿದೆ : ನಿಜ್ಜರ್ ಹತ್ಯೆಯ ವಿವಾದದ ನಂತರ ಕೆನಡಾ ಪ್ರಧಾನಿ

ಟೊರೊಂಟೊ: ಕೆನಡಾವು ಭಾರತ ಜೊತೆ “ಅತ್ಯಂತ ಸವಾಲಿನ ಸಮಯವನ್ನು” ಎದುರಿಸುತ್ತಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಮಂಗಳವಾರ ಹೇಳಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಜಗಳದ ನಡುವೆಯೂ ಕೆನಡಾವು ನವದೆಹಲಿಯೊಂದಿಗೆ “ರಚನಾತ್ಮಕ ಸಂಬಂಧ” ವನ್ನು ಮುಂದುವರೆಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಟ್ರೂಡೊ, … Continued

ಶಾಲಾ ವಿದ್ಯಾರ್ಥಿಗಳಿಂದ ನಮಾಜ್ ಮಾಡಿಸಿದ ಶಾಲೆ : ಪ್ರತಿಭಟನೆಗಳ ನಂತರ ತನಿಖೆಗೆ ಆದೇಶ

ಅಹಮದಾಬಾದ್: ಅಹಮದಾಬಾದ್‌ನ ಖಾಸಗಿ ಶಾಲೆಯೊಂದು ಜಾಗೃತಿ ಕಾರ್ಯಕ್ರಮದ ಭಾಗವಾಗಿ ಹಿಂದೂ ಧರ್ಮದ ವಿದ್ಯಾರ್ಥಿಗಳನ್ನು ತನ್ನ ಆವರಣದಲ್ಲಿ ನಮಾಜ್ ಮಾಡಲು ಹೇಳಿರುವುದು ಪ್ರತಿಭಟನೆಗೆ ಕಾರಣವಾಗಿದೆ. ಸೆಪ್ಟೆಂಬರ್ 29 ರಂದು ನಡೆದ ಘಟನೆಯ ಕುರಿತು ಘಟ್ಲೋಡಿಯಾ ಪ್ರದೇಶದಲ್ಲಿ ನೆಲೆಗೊಂಡಿರುವ ಕಲೋರೆಕ್ಸ್ ಫ್ಯೂಚರ್ ಸ್ಕೂಲ್ ಎಂಬ ಶಾಲೆಯ ವಿರುದ್ಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಶಾಲಾ ಆಡಳಿತ ಮಂಡಳಿಯು ಕ್ಷಮೆಯಾಚಿಸಿದ್ದು, … Continued

ವಿಭಜಿತ ಸೆಕೆಂಡುಗಳಲ್ಲಿ ಪರಮಾಣುಗಳಲ್ಲಿನ ಎಲೆಕ್ಟ್ರಾನ್‌ಗಳನ್ನು ನೋಡಿದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ

ಸ್ಟಾಕ್‌ಹೋಮ್ : ಭೌತಶಾಸ್ತ್ರದ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ವಿಭಜಿತ ಸೆಕೆಂಡುಗಳಲ್ಲಿ ಪರಮಾಣುಗಳಲ್ಲಿನ ಎಲೆಕ್ಟ್ರಾನ್‌ಗಳನ್ನು ನೋಡಿದ ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ಅಮೆರಿಕದಲ್ಲಿನ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಪಿಯರ್ ಅಗೋಸ್ಟಿನಿ; ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಆಫ್ ಕ್ವಾಂಟಮ್ ಆಪ್ಟಿಕ್ಸ್‌ನ ಮತ್ತು ಜರ್ಮನಿಯ ಮ್ಯೂನಿಚ್‌ನ ಲುಡ್ವಿಗ್ ಮ್ಯಾಕ್ಸಿಮಿಲಿಯನ್ ವಿಶ್ವವಿದ್ಯಾಲಯದ ಫೆರೆಂಕ್ ಕ್ರೌಸ್ ಮತ್ತು ಸ್ವೀಡನ್‌ನ ಲುಂಡ್ ವಿಶ್ವವಿದ್ಯಾನಿಲಯದ ಅನ್ನೆ … Continued

ವಿದೇಶಿ ಹಣದ ಪ್ರಕರಣ : ಯುಎಪಿಎ ಅಡಿ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಬಂಧನ

ನವದೆಹಲಿ : ನ್ಯೂಸ್‌ಕ್ಲಿಕ್‌ನ ಸಂಸ್ಥಾಪಕ, ಪತ್ರಕರ್ತ ಪ್ರಬೀರ ಪುರಕಾಯಸ್ಥ ಅವರನ್ನು ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿ ಬಂಧಿಸಲಾಗಿದೆ. ಸುದ್ದಿ ಪೋರ್ಟಲ್‌ನ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ ಚಕ್ರವರ್ತಿ ಅವರನ್ನೂ ಬಂಧಿಸಲಾಗಿದೆ. ನ್ಯೂಯಾರ್ಕ್ ಟೈಮ್ಸ್ ತನಿಖಾ ವರದಿಯ ನಂತರ, ನ್ಯೂಸ್‌ಕ್ಲಿಕ್‌ ನ್ಯೂಸ್ ಪೋರ್ಟಲ್ ಚೀನಾದ ಪ್ರಚಾರದ ನೆಟ್‌ವರ್ಕ್‌ನಿಂದ ಹಣವನ್ನು ಪಡೆದಿದೆ ಎಂದು ಆರೋಪಿಸಿದೆ. ಮಂಗಳವಾರ … Continued

ಏಷ್ಯನ್ ಗೇಮ್ಸ್- 2023 : ಚಿನ್ನ ಗೆದ್ದ ಅನ್ನು ರಾಣಿ, ಪಾರುಲ್ ಚೌಧರಿ-ದಾಖಲೆ ಪದಕ ಗೆಲ್ಲುವತ್ತ ಭಾರತ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತನ್ನ ಅತಿದೊಡ್ಡ ಪದಕ ಗಳಿಕೆಯ ಹಾದಿಯಲ್ಲಿದೆ. ಏಷ್ಯನ್ ಗೇಮ್ಸ್ 2018 ರಲ್ಲಿ, ಭಾರತವು 70 ಪದಕಗಳನ್ನು ಗೆದ್ದುಕೊಂಡಿದ್ದು ಏಷ್ಯನ್‌ ಗೇಮ್ಸ್‌ನಲ್ಲಿ ಇದುವರೆಗಿನ ಭಾರತದ ಅತ್ಯಧಿಕ ಪದಕಗಳ ಸಂಖ್ಯೆಯಾಗಿದೆ. 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಈಗಾಗಲೇ 69 ಪದಕಗಳನ್ನು ಗೆದ್ದಿದೆ. ಐದು ದಿನಗಳ ಪದಕ ಸ್ಪರ್ಧೆಗಳು ಉಳಿದಿವೆ. ಮಂಗಳವಾರ, ಅಥ್ಲೆಟಿಕ್ಸ್ ಬೆಳಿಗ್ಗೆ … Continued

ಹೋಮ್‌ ವರ್ಕ್‌ ಮಾಡದ್ದಕ್ಕೆ ತಲೆಗೆ ಹೊಡೆದ ಶಿಕ್ಷಕರು : ಯುಕೆಜಿ ವಿದ್ಯಾರ್ಥಿ ಸಾವು

ಹೈದರಾಬಾದ್: ಹೋಂ ವರ್ಕ್ ಪೂರ್ಣಗೊಳಿಸಿಲ್ಲವೆಂದು ಶಿಕ್ಷಕರೊಬ್ಬರು ಐದು ವರ್ಷದ ಬಾಲಕನಿಗೆ ತಲೆಗೆ ಸ್ಲೇಟ್‌ನಿಂದ ಹೊಡೆದ ನಂತರ ಆತ ಮೃತಪಟ್ಟಿದ್ದಾನೆ ಎಂದು ಆರೋಪಿಸಿರುವ ಘಟನೆ ವರದಿಯಾಗಿದೆ. ರಾಮಂತಪುರ ಸಮೀಪದ ವಿವೇಕನಗರದ ಪ್ಲೇ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ಬಾಲಕನ್ನು ಹೇಮಂತ (೫) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಶುಕ್ರವಾರ ಶಾಲೆಯಲ್ಲಿ ತಲೆಗೆ ಪಾಟಿಯಿಂದ ಹೊಡೆದ ನಂತರ ಬಾಲಕ … Continued