ಭೂಮಿಯಿಂದ ದೂರ ಸರಿಯುತ್ತಿರುವ ಚಂದ್ರ ; ಭೂಮಿಯ ಮೇಲಿನ ಒಂದು ದಿನ ಎಂದರೆ 25 ಗಂಟೆಗಳು ಎಂದಾಗಬಹುದು…!

ಭೂಮಿಯ ಮೇಲಿನ ಒಂದು ದಿನವನ್ನು 25 ಗಂಟೆಗಳೆಂದು ಅರ್ಥೈಸುವ ಕಾಲ ಮುಂದೊಂದು ದಿನ ಬರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ, ಯಾಕೆಂದರೆ ಚಂದ್ರನು ಭೂಮಿಯಿಂದ ನಿಧಾನವಾಗಿ ದೂರ ಸರಿಯುತ್ತಿದ್ದಾನೆ ಎಂದು ಸಂಶೋಧನೆಯೊಂದು ಹೇಳಿದೆ. ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯವು ನಡೆಸಿದ ಸಂಶೋಧನೆಯ ಪ್ರಕಾರ ಚಂದ್ರನು ಭೂಮಿಯಿಂದ ವರ್ಷಕ್ಕೆ ಸರಿಸುಮಾರು 3.8 ಸೆಂಟಿಮೀಟರ್‌ ಗಳಷ್ಟು ದೂರ ಹೋಗುತ್ತಿದ್ದಾನೆ. ಇದು ನಮ್ಮ ಗ್ರಹದಲ್ಲಿನ … Continued

ಬಾಂಗ್ಲಾದೇಶದ ಘರ್ಷಣೆಯಲ್ಲಿ 72 ಮಂದಿ ಸಾವು: ರಾಜಧಾನಿ ಢಾಕಾದಲ್ಲಿ ಅನಿರ್ದಿಷ್ಟಾವಧಿಗೆ ಕರ್ಫ್ಯೂ

ಢಾಕಾ : ಬಾಂಗ್ಲಾದೇಶದಲ್ಲಿ ಭಾನುವಾರ ನಡೆದ ಘರ್ಷಣೆಯಲ್ಲಿ ಕನಿಷ್ಠ 72 ಜನರು ಸಾವಿಗೀಡಾಗಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಬಾಂಗ್ಲಾದೇಶದಲ್ಲಿ ಭಾನುವಾರ ನಡೆದ ಘರ್ಷಣೆಯಲ್ಲಿ ಕನಿಷ್ಠ 72 ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಸ್ಟನ್ ಗ್ರೆನೇಡ್‌ಗಳನ್ನು ಪ್ರಯೋಗಿಸಿದ್ದಾರೆ. ಹಿಂಸಾತ್ಮಕ ಪರಿಸ್ಥಿತಿಯ ನಂತರ, ಭಾನುವಾರ … Continued

18,000 ಸಿಬ್ಬಂದಿ ಕಡಿತಗೊಳಿಸಲಿರುವ ಇಂಟೆಲ್‌

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕ ಚಿಪ್ ತಯಾರಕ ಇಂಟೆಲ್ ಗುರುವಾರ ತನ್ನ ಒಟ್ಟು ಉದ್ಯೋಗಿಗಳ ಶೇಕಡಾ 15 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ. ಇಂಟೆಲ್ ಇತ್ತೀಚೆಗೆ ಕೊನೆಗೊಂಡ ತ್ರೈಮಾಸಿಕದಲ್ಲಿ $1.6 ಶತಕೋಟಿ ನಷ್ಟ ಅನುಭವಿಸಿದ ನಂತರ ಈ ವರ್ಷ ಅಂದಾಜು $20 ಶತಕೋಟಿ ವೆಚ್ಚವನ್ನು ಕಡಿತಗೊಳಿಸುವ ಯೋಜನೆಯ ಭಾಗವಾಗಿ ಈ ಕ್ರಮ ಬಂದಿದೆ. “ನಾವು ಪ್ರಮುಖ … Continued

ಇಸ್ಮಾಯಿಲ್ ಹನಿಯೆಹ್ ಹತ್ಯೆ | ಟೆಹ್ರಾನ್ ಪ್ರತಿಷ್ಠಿತ ಪ್ರದೇಶದಲ್ಲಿ ಹಮಾಸ್ ಮುಖ್ಯಸ್ಥನಿಗಾಗಿ 2 ತಿಂಗಳಿಂದ ಕಾಯುತ್ತಿದ್ದ ಸಾವು..!

ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಗಾಗಿ ಅವರ ಸಾವು ಎರಡು ತಿಂಗಳ ಕಾಲ ಕಾಯುತ್ತಿತ್ತು…! ಅವರು ಆಗಮಿಸುವ ನಿರೀಕ್ಷೆಯಿದ್ದ ಇರಾನ್‌ನ ಅತಿಥಿಗೃಹಕ್ಕೆ ಬಾಂಬ್ ಅನ್ನು ರಹಸ್ಯವಾಗಿ ಕಳ್ಳಸಾಗಣೆ ಮಾಡಲಾಗಿತ್ತು ಹಾಗೂ ಅಲ್ಲಿ ಎರಡು ತಿಂಗಳ ಮೊದಲೇ ಬಾಂಬ್‌ ಅನ್ನು ಇಡಲಾಗಿತ್ತು ಎಂದು ಅಮೆರಿಕ ಮತ್ತು ಮಧ್ಯಪ್ರಾಚ್ಯದಲ್ಲಿನ ಹಲವಾರು ಅಧಿಕಾರಿಗಳನ್ನು ಉಲ್ಲೇಖಿಸಿ ದಿ ನ್ಯೂಯಾರ್ಕ್ ಟೈಮ್ಸ್ ವರದಿ … Continued

ವಾಯುದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ, ಅಕ್ಟೋಬರ್ 7ರ ದಾಳಿಯ ʼಮಾಸ್ಟರ್ ಮೈಂಡ್ʼ ಮೊಹಮ್ಮದ್ ಡೀಫ್ ಹತ್ಯೆ : ಇಸ್ರೇಲ್ ಘೋಷಣೆ

ಗಾಜಾದ ದಕ್ಷಿಣ ಪ್ರದೇಶವಾದ ಖಾನ್ ಯೂನಿಸ್‌ನಲ್ಲಿ ಕಳೆದ ತಿಂಗಳು ನಡೆಸಿದ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ ಕೊಲ್ಲಲ್ಪಟ್ಟಿದ್ದಾನೆ ಎಂದು ಇಸ್ರೇಲಿ ಸೇನೆ ಗುರುವಾರ ಘೋಷಣೆ ಮಾಡಿದೆ. ಟೆಹ್ರಾನ್‌ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾಗಿದ್ದಾರೆ ಎಂದು ಇರಾನ್ ರೆವುಲ್ಯಶನರಿ ಗಾರ್ಡ್‌ಗಳು ಮತ್ತು ಹಮಾಸ್‌ ಪ್ರಕಟಿಸಿದ ಒಂದು ದಿನದ ನಂತರ ತಾನು ಹಮಾಸ್ ಮಿಲಿಟರಿ … Continued

ಹಮಾಸ್ ಮುಖ್ಯಸ್ಥನ ಹತ್ಯೆಯ ನಂತರ ಇಸ್ರೇಲ್ ಮೇಲೆ ದಾಳಿಗೆ ಆದೇಶ ನೀಡಿದ ಇರಾನ್‌ ಸರ್ವೋಚ್ಚ ನಾಯಕ : ವರದಿ

ಟೆಹರಾನ್: ಇರಾನಿನ ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಗೆ ಪ್ರತೀಕಾರವಾಗಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ಮೇಲೆ ನೇರ ದಾಳಿ ಮಾಡುವಂತೆ ಇರಾನ್‌ಗೆ ಆದೇಶ ನೀಡಿದ್ದಾರೆ ಎಂದು ಇಬ್ಬರು ರೆವಲ್ಯೂಶನರಿ ಗಾರ್ಡ್ಸ್ ಸದಸ್ಯರು ಸೇರಿದಂತೆ ಮೂವರು ಇರಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. . ಹಮಾಸ್‌ … Continued

ಇರಾನ್‌ನಲ್ಲಿ ತಂಗಿದ್ದ ನಿವಾಸದ ಮೇಲೆ ದಾಳಿ ನಡೆಸಿ ಹಮಾಸ್‌ ಬಂಡೋಕರರ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆ

ಟೆಹ್ರಾನ್‌ : ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮತ್ತು ಅವರ ಅಂಗರಕ್ಷಕರಲ್ಲಿ ಒಬ್ಬರು ಇರಾನ್‌ನಲ್ಲಿ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ಫೆಲೆಸ್ತೀನ್ ಗುಂಪು ಹಮಾಸ್‌ ಇಂದು ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ಇಸ್ಮಾಯಿಲ್ ಹನಿಯೆಹ್ ಮಂಗಳವಾರ ಬೆಳಿಗ್ಗೆ “ಟೆಹ್ರಾನ್‌ನಲ್ಲಿರುವ ಅವರ ನಿವಾಸದ ಮೇಲೆ ವಿಶ್ವಾಸಘಾತುಕ ಜಿಯೋನಿಸ್ಟ್ ದಾಳಿಯಲ್ಲಿ” ಕೊಲ್ಲಲ್ಪಟ್ಟರು ಎಂದು ಹಮಾಸ್ ಹೇಳಿದೆ. … Continued

ವಾಯವ್ಯ ಪಾಕಿಸ್ತಾನದಲ್ಲಿ ಎರಡು ಬುಡಕಟ್ಟುಗಳ ನಡುವೆ ಸಶಸ್ತ್ರ ಘರ್ಷಣೆ ; 36 ಸಾವು, 162 ಮಂದಿಗೆ ಗಾಯ

ಇಸ್ಲಾಮಾಬಾದ್‌ : ವಾಯುವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಬುಡಕಟ್ಟು ಜಿಲ್ಲೆಯಲ್ಲಿ ಒಂದು ತುಂಡು ಭೂಮಿಗಾಗಿ ಹೋರಾಡುತ್ತಿರುವ ಎರಡು ಬುಡಕಟ್ಟುಗಳ ನಡುವೆ ನಡೆದ ಸಶಸ್ತ್ರ ಘರ್ಷಣೆಯಲ್ಲಿ ಕನಿಷ್ಠ 36 ಜನರು ಸಾವಿಗೀಡಾಗಿದ್ದಾರೆ ಮತ್ತು 162 ಇತರರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಪ್ಪರ್ ಕುರ್ರಂ ಜಿಲ್ಲೆಯ ಬೊಶೆರಾ ಗ್ರಾಮದಲ್ಲಿ ಐದು ದಿನಗಳ ಹಿಂದೆ ಭಾರಿ ಘರ್ಷಣೆಗಳು ಪ್ರಾರಂಭವಾದವು … Continued

ಅಮೆರಿಕದಿಂದ ‘ಗಡಿಪಾರು’ ಆಗುವ ಅಪಾಯ ಎದುರಿಸುತ್ತಿರುವ ಸಾವಿರಾರು ಭಾರತೀಯರ ಮಕ್ಕಳು : ಇದಕ್ಕೆ ಕಾರಣ ಏನು?

ನವದೆಹಲಿ: 2,50,000 ಕ್ಕೂ ಹೆಚ್ಚು ಕಾನೂನು ಬದ್ಧ ವಲಸಿಗರ ಮಕ್ಕಳು, ಅವರಲ್ಲಿ ಹೆಚ್ಚಿನವರು ಭಾರತೀಯ-ಅಮೆರಿಕನ್ನರು, “ವಯಸ್ಸಾದ” ಸಮಸ್ಯೆಯಿಂದಾಗಿ ಅಮೆರಿಕದಿಂದ ಗಡೀಪಾರು ಆಗುವ ಅಪಾಯವಿದೆ. ಇದಕ್ಕೆ ಕಾರಣ ಅಮೆರಿಕದ ವಲಸೆ ಕಾನೂನು. ಅಮೆರಿಕ ದೇಶದ ಕಾನೂನಿನ ಪ್ರಕಾರ ಬೇರೆ ದೇಶದ ಉದ್ಯೋಗಿಗಳ ಮಕ್ಕಳು, ಅಮೆರಿಕ ಪ್ರಜೆಗಳು ಅಲ್ಲವಾದರೆ 21 ವರ್ಷ ದಾಟಿದ ಬಳಿಕ ಅಮೆರಿಕದಲ್ಲಿ ಇರುವಂತಿಲ್ಲ. ಅವರು … Continued

ಗಾಜಾದಲ್ಲಿ 5 ಒತ್ತೆಯಾಳುಗಳ ಶವ ವಶಪಡಿಸಿಕೊಂಡ ಇಸ್ರೇಲ್ ಸೇನೆ

ಜೆರುಸಲೇಂ: ದಕ್ಷಿಣ ಇಸ್ರೇಲ್ ಮೇಲೆ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯ ಸಂದರ್ಭದಲ್ಲಿ ಗಾಜಾ ಪಟ್ಟಿಯಿಂದ ಒತ್ತೆಯಾಳಾಗಿ ಕರೆದೊಯ್ದಿದ್ದ ಐವರ ಶವಗಳನ್ನು ಇಸ್ರೇಲಿ ಪಡೆಗಳು ವಶಕ್ಕೆ ಪಡೆದಿವೆ ಎಂದು ಮಿಲಿಟರಿ ಗುರುವಾರ ತಿಳಿಸಿದೆ. ಒತ್ತೆಯಾಳು ಮಾಯಾ ಗೊರೆನ್ ಮತ್ತು ಸೈನಿಕರಾದ ರವಿದ್ ಆರ್ಯೆಹ್ ಕಾಟ್ಜ್, ಓರೆನ್ ಗೋಲ್ಡಿನ್, ಟೋಮರ್ ಅಹಿಮಾಸ್ ಮತ್ತು ಕಿರಿಲ್ ಬ್ರಾಡ್ಸ್ಕಿ … Continued