ಭಾರತದಲ್ಲಿ ಎರಡನೇ ದಿನವೂ ದೈನಂದಿನ ಕೊರೊನಾ ಪ್ರಕರಣ ತುಸು ಇಳಿಕೆ

ನವ ದೆಹಲಿ: ದೇಶದಲ್ಲಿ ಎರಡನೇ ಅಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು ಕಳೆದ 24 (ಮಂಗಳವಾರ) 56,211 ಹೊಸ ಕೊರೊನಾ ಸೋಂಕುಗಳು ಪತ್ತೆಯಾಗಿವೆ.ಒಂದೇ ದಿನ ಕೊರೊನಾ ಸೋಂಕಿಗೆ 271 ಜನರು ಮೃತಪಟ್ಟಿದ್ದಾರೆ. 37,028 ಜನ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೊರೊನಾ ಸೋಂಕು ಪೀಡಿತರಾದವರ ಸಂಖ್ಯೆ 1,20,95,855ಕ್ಕೆ ಏರಿಕೆ ಆಗಿದೆ.‌ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,62,114ಕ್ಕೆ … Continued

ಮಾರ್ಚ್‌ ತಿಂಗಳಲ್ಲೇ ಗರಿಷ್ಠ ತಾಪಮಾನದತ್ತ ತೆಲಂಗಾಣ..ಹಲವೆಡೆ 41 ಡಿಗ್ರಿ ಸೆಲ್ಸಿಯಸ್‌ ದಾಖಲು

ಮುಂದಿನ ಎರಡು ದಿನಗಳವರೆಗೆ ತೆಲಂಗಾಣದ ವಿವಿಧ ಭಾಗಗಳಲ್ಲಿ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮಾಹಿತಿ ನೀಡಿದೆ. ದೆಹಲಿ ಮಾರ್ಚ್‌ ‌ 28ರಂದು 76 ವರ್ಷಗಳ ಇತಿಹಾದಲ್ಲೇ ಗರಿಷ್ಠ ತಾಪಮಾನ ಕಂಡಿತ್ತು. ಇದಕ್ಕೆ ಕಾರಣ ಬಿಸಿ ಶಾಖದ ಅಲೆ ಎಂದು ಹೇಳಿತ್ತು. ಮಾರ್ಚ್‌ ತಿಂಗಳಲ್ಲೇ ತೆಲಂಗಾಣವೂ … Continued

ಹೆಲ್ಮೆಟ್ ಧರಿಸದ ಕಾರಣಕ್ಕೆ 9 ತಿಂಗಳ ಗರ್ಭಿಣಿ 3 ಕಿಮೀ ನಡೆಯುವಂತೆ ಮಾಡಿದ ಪೊಲೀಸರು…!

ಬರಿಪಾಡಾ: ಒಡಿಶಾದಲ್ಲಿ ಪೊಲೀಸ್ ಸಂವೇದನಾಶೀಲತೆಯ ಆಘಾತಕಾರಿ ಘಟನೆಯಲ್ಲಿ, ಒಂಭತ್ತು ತಿಂಗಳ ಗರ್ಭಿಣಿಯನ್ನು 3 ಕಿ.ಮೀ ನಡೆಯುವಂತೆ ಮಾಡಿದ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗಿದೆ. ಹೆಲ್ಮೆಟ್ ಇಲ್ಲದೆ ಪಿಲಿಯನ್ ಸವಾರಿ ಮಾಡುತ್ತಿದ್ದಾಳೆ ಎಂದು ದಂಡ ಪಾವತಿಸಲು ಪತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಕಾರಣ ಗರ್ಭಿಣಿಯೂ ಮೂರು ಕಿಮೀ ನಡೆಯಬೇಕಾಯಿತು. ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಭಾನುವಾರ … Continued

ಬಿಜೆಪಿ ೧೦೦ಸ್ಥಾನಗಳಲ್ಲಿ ಗೆದ್ದರೆ ಚುನಾವಣಾ ತಂತ್ರಜ್ಞ ವೃತ್ತಿ ತ್ಯಜಿಸುವೆ: ಪ್ರಶಾಂತ್‌ ಕಿಶೋರ್‌

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 100 ಕ್ಕೂ ಹೆಚ್ಚು ಸ್ಥಾನಗಳು ದೊರೆತರೆ ತಮ್ಮ ಚುನಾವಣಾ ತಂತ್ರಜ್ಞ ವೃತ್ತಿಯನ್ನೇ ತ್ಯಜಿಸುವುದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಕಳೆದ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ಬಿಜೆಪಿಯ ಸುತ್ತ ಸಾಕಷ್ಟು ಪ್ರಚೋದನೆಗಳು ಸೃಷ್ಟಿಯಾಗಿದ್ದವು, ಆದರೆ ಈಗ ಸ್ಥಿತಿ ಬದಲಾಗಿದೆ. ಡಿಸೆಂಬರ್‌ನಲ್ಲಿ ಬಿಜೆಪಿ 200 ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿತ್ತು ಎಂದರು. ಬಿಜೆಪಿಗೆ … Continued

ಮಹಿಳೆಯರಿಗೆ ಗೌರವ ನೀಡದ ಕಮಲ್‌ ಹಾಸನ್‌ ಮಹಿಳೆಯರಿಗೆ ಹೇಗೆ ರಕ್ಷಣೆ ಕೊಡ್ತಾರೆ: ಬಿಜೆಪಿ ನಾಯಕಿ ವನತಿ ಶ್ರೀನಿವಾಸ ಪ್ರಶ್ನೆ

ಚೆನ್ನೈ: ಮಹಿಳೆಯರಿಗೆ ಗೌರವ ನೀಡದ ನಟ ಕಮಲ್‌ ಹಾಸನ್‌ ಅವರ ಮಕ್ಕಳ್‌ ನೀಧಿ ಮಾಯಮ್‌ ಪಕ್ಷ ಮಹಿಳೆಯರಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ನನಗೆ ಅವಕಾಶ ನೀಡಿದ್ದಾರೆ. ಕಮಲ್‌ ಹಾಸನ್‌ ನನ್ನ … Continued

ಬಿಜೆಪಿ ವಿರುದ್ಧ ಎಲ್ಲ ವಿರೋಧ ಪಕ್ಷಗಳನ್ನುಒಗ್ಗೂಡಿಸಲು ರಾಹುಲ್‌ ಗಾಂಧಿ ನೇತೃತ್ವ ವಹಿಸಬೇಕು: ಸ್ಟಾಲಿನ್‌

ಚೆನ್ನೈ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಹೋರಾಡಲು ದೇಶಾದ್ಯಂತ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವ ವಹಿಸಬೇಕು ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಹೇಳಿದರು. ಸೇಲಂನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿ, ಈಗ ಫ್ಯಾಸಿಸ್ಟ್ ಸರ್ಕಾರದ ಹಿಡಿತದಲ್ಲಿ ಭಾರತ ನಾಶವಾಗುತ್ತಿದೆ. ಈ ಸಮಯದಲ್ಲಿ ಭಾರತವನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ … Continued

ಮಹಾರಾಷ್ಟ್ರದಲ್ಲಿ ಸೋಮವಾರ 31,643 ದೈನಂದಿನ ಪ್ರಕರಣ..ಕೊಂಚ ಇಳಿಕೆ

ಮುಂಬೈ: : ಹೆಮ್ಮಾರಿ ಕೊರೊನಾಕ್ಕೆ ಮಹಾರಾಷ್ಟ್ರ ತತ್ತರಗೊಂಡಿದ್ದು, ಕಳೆದ 24 ಗಂಟೆಯಲ್ಲಿ 31,643 ದೈನಂದಿನ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲೇ ಪ್ರತಿನಿತ್ಯ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣ ಸಂಖ್ಯೆ 27,45,518ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಒಂದೇ … Continued

ದೆಹಲಿಯಲ್ಲಿ ತೀವ್ರ ಶಾಖದ ಅಲೆ, 76 ವರ್ಷದಲ್ಲೇ ಮಾರ್ಚಿನಲ್ಲಿ ಅತಿ ಹೆಚ್ಚು ಉಷ್ಣತೆ ಎಂದ ಐಎಂಡಿ..!

ನವ ದೆಹಲಿ: ಹೋಳಿ ದಿನದಂದು ದೆಹಲಿಯು ಹೋಳಿಯ ದಿನವೇ ಗರಿಷ್ಠ ತಾಪಮಾನ ಕಂಡಿತು. ಈ ದಿನ 40.1 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿತ್ತು. ಇದು 76 ವರ್ಷಗಳಲ್ಲಿ ಮಾರ್ಚಿನಲ್ಲಿ ಕಂಡ ಅತಿ ಹೆಚ್ಚು ತಾಪಮಾನದ ದಿನವಾಗಿದೆ ಎಂದು ಭಾರತ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ನಗರಕ್ಕೆ ಪ್ರತಿನಿಧಿ ದತ್ತಾಂಶವನ್ನು ಒದಗಿಸುವ ಸಫ್ದರ್ಜಂಗ್ ವೀಕ್ಷಣಾಲಯವು ಗರಿಷ್ಠ … Continued

ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ: ಕೊ-ವಿನ್‌ ಪೋರ್ಟಲ್‌ ಸಾಮರ್ಥ್ಯ ಹೆಚ್ಚಳ

ನವ ದೆಹಲಿ: ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ನೋಂದಣಿಗೆಂದು ರೂಪಿಸಿರುವ ವೆಬ್​ಪೋರ್ಟಲ್ CoWIN ಸಾಮರ್ಥ್ಯ ಹೆಚ್ಚಿಸಲಾಗಿದೆ. ಪ್ರತಿದಿನ ಒಂದು ಕೋಟಿ ನೋಂದಣಿ ದಾಖಲಿಸುವ ಸಾಮರ್ಥ್ಯ ಈಗ ಕೋವಿನ್ ವೆಬ್​ಪೋರ್ಟಲ್​ಗೆ ಬಂದಿದೆ. ಏಪ್ರಿಲ್ 1ರ ನಂತರ 45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ನೋಂದಣಿಗೆ ಮುಂದಾಗುವವರ ಸಂಖ್ಯೆ ಹೆಚ್ಚಾಗಬಹುದು … Continued

ದೇಶದ ಭದ್ರತೆಗೆ ಧಕ್ಕೆ ಆರೋಪ:ಜಮ್ಮು-ಕಾಶ್ಮೀರ ಮಾಜಿ ಸಿಎಂ ಪಾಸ್ ಪೋರ್ಟ್ ಅರ್ಜಿ ತಿರಸ್ಕೃತ:

ಶ್ರೀನಗರ: ದೇಶದ ಭದ್ರತೆಗೆ ಧಕ್ಕೆ ತಂದ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಅವರ ಪಾಸ್ ಪೋರ್ಟ್ ಅರ್ಜಿ ತಿರಸ್ಕರಿಸಲಾಗಿದೆ. ಈ ಬಗ್ಗೆ ಸ್ವತಃ ಮೆಹಬೂಬಾ ಮುಫ್ತಿ ಅವರೇ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ದೇಶದ ಭದ್ರತೆಗೆ ಧಕ್ಕೆ ತಂದ … Continued