ಕೇವಲ ಒಂದೇ ಒಂದು ಸುಳಿವಿನಿಂದ 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾಂಟೆಡ್ ಸಿಮಿ ಉಗ್ರನ ಬಂಧಿಸಿದ ಪೊಲೀಸರು…!

ನವದೆಹಲಿ: 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಿಷೇಧಿತ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಗೆ ಸೇರಿದ್ದ ಹನೀಫ್ ಶೇಖ್ (47) ಎಂಬ ಉಗ್ರನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಫೆ 22ರಂದು ಬಂಧಿಸಿದೆ. 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನನ್ನು ಕೇವಲ ಒಂದೇ ಒಂದು ಸುಳಿವಿನ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ. ಅತ್ಯಂತ ನಟೋರಿಯಸ್ ಮತ್ತು ವಾಂಟೆಡ್ … Continued

ಅರುಣಾಚಲ ಪ್ರದೇಶ : ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಕಾಂಗ್ರೆಸ್, ಎನ್‌ಪಿಪಿಯ ನಾಲ್ವರು ಶಾಸಕರು

ಅಗರ್ತಲಾ : ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ, ವಿಪಕ್ಷವಾದ ಕಾಂಗ್ರೆಸ್‌ನ ಇಬ್ಬರು ಶಾಸಕರು ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಯ ಇಬ್ಬರು ಶಾಸಕರು ಮುಖ್ಯಮಂತ್ರಿ ಪೆಮಾ ಖಂಡು ಅವರ ಸಮ್ಮುಖದಲ್ಲಿ ಆಡಳಿತಾರೂಢ ಬಿಜೆಪಿ ಸೇರಿದ್ದಾರೆ. ಇಟಾನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಶಾಸಕರಾದ ನಿನೊಂಗ್ ಎರಿಂಗ್, ವಾಂಗ್ಲಿಂಗ್ ಲೋವಾಂಗ್‌ಡಾಂಗ್ ಮತ್ತು … Continued

ಹರ್ಯಾಣ ಐಎನ್‌ಎಲ್‌ಡಿ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ : ನಫೆ ಸಿಂಗ್ ಕಾರಿನ ಮೇಲೆ ಬಂದೂಕುಧಾರಿಗಳಿಂದ ದಾಳಿ

ಚಂಡೀಗಢ : ಭಾರತೀಯ ರಾಷ್ಟ್ರೀಯ ಲೋಕದಳ(INLD)ದ ಹರ್ಯಾಣ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಜಜ್ಜರ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಪಕ್ಷದ ಮತ್ತೊಬ್ಬ ನಾಯಕ ಕೂಡ ಮೃತಪಟ್ಟಿದ್ದು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿ ಬಂದ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದಾಗ … Continued

ವೀಡಿಯೊ…| ಸಮುದ್ರದಲ್ಲಿ ಮುಳುಗಿ ನೀರಿನೊಳಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ…!

ಗುಜರಾತಿನ ಸಮುದ್ರದ ಆಳವಾದ ನೀರಿನಲ್ಲಿ ಧುಮುಕುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಸ್ಥಾನದಪ್ರಾರ್ಥನೆ ಸಲ್ಲಿಸಿದರು. ಇದನ್ನು “ದೈವಿಕ ಅನುಭವ” ಎಂದು ಕರೆದ ಪ್ರಧಾನಿ ಮೋದಿ, “ಆಧ್ಯಾತ್ಮಿಕ ಭವ್ಯತೆಯ ಪುರಾತನ ಯುಗದೊಂದಿಗೆ ಸಂಪರ್ಕ ಹೊಂದಿದ್ದೇನೆ” ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ. “ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವುದು ಬಹಳ ದೈವಿಕ ಅನುಭವವಾಗಿತ್ತು. … Continued

ಕಾಂಗ್ರೆಸ್‌ ಜೊತೆ ಸೀಟು ಹಂಚಿಕೆ ಒಪ್ಪಂದದ ನಂತರ ರಾಹುಲ್ ಗಾಂಧಿ ಭಾರತ ಜೋಡಿ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡ ಅಖಿಲೇಶ ಯಾದವ್

ನವದೆಹಲಿ: ಉತ್ತರ ಪ್ರದೇಶದ ಆಗ್ರಾ ಮೂಲಕ ಸಾಗುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಅವರು ಪಾಲ್ಗೊಂಡಿದ್ದಾರೆ. ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಒಪ್ಪಂದ ಅಂತಿಮವಾದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಬಂದಿತು. ಎರಡು ಪಕ್ಷಗಳ ನಡುವಿನ … Continued

ಬಿಎಸ್‌ಪಿಗೆ ರಾಜೀನಾಮೆ ನೀಡಿದ ಸಂಸದ : ಬಿಜೆಪಿಗೆ ಸೇರ್ಪಡೆ

ನವದೆಹಲಿ: ಸಾರ್ವತ್ರಿಕ ಚುನಾವಣೆಗೆ ಮುನ್ನ ಮತ್ತೊಂದು ದೊಡ್ಡ ಪಕ್ಷಾಂತರದಲ್ಲಿ ಲೋಕಸಭೆ ಸಂಸದ ರಿತೇಶ ಪಾಂಡೆ ಅವರು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 42 ವರ್ಷದ ರಿತೇಶ ಪಾಂಡೆ ಅವರು ಉತ್ತರ ಪ್ರದೇಶದ ಅಂಬೇಡ್ಕರ ನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ತಂದೆ ರಾಕೇಶ ಪಾಂಡೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ … Continued

ಒಲ್ಲೆ ಎಂದಿದ್ದಕ್ಕೆ ಸೇಡು : ತನ್ನ ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಟಿವಿ ನಿರೂಪಕನನ್ನು ಅಪಹರಿಸಿದ ಮಹಿಳಾ ಉದ್ಯಮಿ…!

ಹೈದರಾಬಾದ್‌ ; ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದ ವಿಸ್ಮಯಕಾರಿ ಘಟನೆಯೊಂದರಲ್ಲಿ, ಮಹಿಳಾ ಉದ್ಯಮಿಯೊಬ್ಬರು ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಟಿವಿ ನಿರೂಪಕನನ್ನು ಅಪಹರಿಸಿದ ಆರೋಪ ಎದುರಿಸುತ್ತಿದ್ದಾರೆ…! ಪೊಲೀಸ್ ವರದಿಗಳ ಪ್ರಕಾರ, ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲ್ಪಟ್ಟ ಉದ್ಯಮಿ ಮಹಿಳೆಯನ್ನು ಟಿವಿ ನಿರೂಪಕನನ್ನು ಹಿಂಬಾಲಿಸಿದ ಆರೋಪದ ಮೇಲೆ ಮತ್ತು ಆತನ ಅಪಹರಣವನ್ನು ಆಯೋಜಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. … Continued

ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ತಮಿಳುನಾಡಿನ ಶಾಸಕಿ…!

ಚೆನ್ನೈ: ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ತಮಿಳುನಾಡಿನ ಎಸ್. ವಿಜಯಧರಣಿ ಅವರು ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಎಸ್. ವಿಜಯಧರಣಿ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಎಲ್. ಮುರುಗನ್ ಮತ್ತು ತಮಿಳುನಾಡು ಚುನಾವಣಾ ಉಸ್ತುವಾರಿ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ ಮೆನನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ತಮ್ಮ ಈ ಕ್ರಮವು ದಕ್ಷಿಣ ರಾಜ್ಯದಲ್ಲಿ ಪ್ರಧಾನಿ … Continued

ಜಯಲಲಿತಾ ಜನ್ಮದಿನವನ್ನು ವಿಶಿಷ್ಟ ಶೈಲಿಯಲ್ಲಿ ಆಚರಿಸಿದ ಎಐಎಡಿಎಂಕೆ : ಅವರ ಎಐ ರಚಿತ ಧ್ವನಿ ಕ್ಲಿಪ್ ಬಿಡುಗಡೆ | ಆಲಿಸಿ

ಚೆನ್ನೈ: ಎಐಎಡಿಎಂಕೆಯು ಪಕ್ಷದ ದಿವಂಗತ ಮುಖ್ಯಸ್ಥೆ ಜೆ.ಜಯಲಲಿತಾ ಅವರ 76 ನೇ ಜನ್ಮದಿನದ ಸಂದರ್ಭದಲ್ಲಿ ಕೃತಕಬುದ್ಧಿಮತ್ತೆ-ರಚಿಸಿದ ಧ್ವನಿ ಕ್ಲಿಪ್ (AI-generated voice clip) ಅನ್ನು ಶನಿವಾರ ಬಿಡುಗಡೆ ಮಾಡಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಸೇರಿದಂತೆ ಹಿರಿಯ ನಾಯಕರು ತಮಿಳುನಾಡು ಮಾಜಿ ಮುಖ್ಯಮಂತ್ರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ … Continued

ವೀಡಿಯೊ..| ತನ್ನ ಮರಿಯನ್ನು ಕಾಪಾಡಿದ ಅರಣ್ಯ ಸಿಬ್ಬಂದಿಗೆ ‘ಕೃತಜ್ಞತೆ’ ಸಲ್ಲಿಸಿದ ಕಾಡಾನೆ

ಚೆನ್ನೈ: ಕಾಡು ಪ್ರಾಣಿಗಳಿಗೆ ಭಾವನೆಗಳು ಇರುತ್ತವೆ ಎಂಬುದುಕ್ಕೆ ಆನೆಯ ವರ್ತನೆಯೊಂದು ಪುಷ್ಟೀಕರಿಸಿದೆ. ಆನೆ ಮರಿ ಜತೆ ಇರುವಾಗ ಬಹಳ ಅಪಾಯಕಾರಿ. ಆದರೆ, ಇಲ್ಲಿ ಕಾಡಾನೆ ತನ್ನ ಮಗುವನ್ನು ಕಾಪಾಡಿದ ವ್ಯಕ್ತಿಗೆ ಧನ್ಯವಾದ ಸಲ್ಲಿಸಿದ ವಿಶಿಷ್ಟ ಹಾಗೂ ಹೃದಯಸ್ಪರ್ಶಿ ಘಟನೆ ವೀಡಿಯೊದಲ್ಲಿ ಸೆರೆಯಾಗಿದೆ. ಮರಿಯಾನೆ ರಕ್ಷಿಸಿ, ಅದರ ತಾಯಿ ಜತೆ ಸೇರಿಸುವ ಅಸಾಧಾರಣ ಬದ್ಧತೆ ಹಾಗೂ ಧೈರ್ಯ … Continued