ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿನ ಬಳಿಕ ಶಬರಿಮಲೆ ವಿಷಯದ ಬಗ್ಗೆ ತೀರ್ಮಾನ: ಕೇರಳ ಸಿಎಂ

ಮಳಪ್ಪುರಂ: ಶಬರಿಮಲೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಗೊಂಡ ಬಳಿಕ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಳಪ್ಪುರಂ ನಲ್ಲಿ ಚುನಾವಣಾ ಪ್ರಚಾರ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವ ಬಗ್ಗೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿ, ಆ ಬಳಿಕ ಭಿನ್ನಾಭಿಪ್ರಾಯಗಳನ್ನು … Continued

ಭಾರತದಲ್ಲಿ ಇದುವರೆಗೆ ೪೦೦ ಜನರಿಗೆ ರೂಪಾಂತರಿ ಕೊರೊನಾ ವೈರಸ್‌ ಪತ್ತೆ

ಭಾರತದಲ್ಲಿ ಇದು ವರೆಗೆ ೪೦೦ಕ್ಕೂ ಹೆಚ್ಚು ಜನರಲ್ಲಿ ಬ್ರಿಟನ್‌, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ವೈರಸ್ʼಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದ ಹಲವು ಭಾಗಗಳಲ್ಲಿ ಹೊಸ ಪ್ರಭೇದಗಳ ಕೊರೊನಾ ವೈರಸ್‌ʼನಿಂದ ರೋಗಿಗಳು ಬಾಧಿತರಾಗಿದ್ದಾರೆ. ಈ ನಡುವೆ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ. ೪೦೦ ಪ್ರಕರಣಗಳ ಪೈಕಿ … Continued

ವರ್ಷದೊಳಗೆ ಎಲ್ಲ ಹೆದ್ದಾರಿ ಟೋಲ್‌ಗೇಟುಗಳಿಗೆ ಮುಕ್ತಿ…!

ನವ ದೆಹಲಿ: ಭಾರತದಲ್ಲಿ ಟೋಲ್ ಗೇಟುಗಳ ವ್ಯವಸ್ಥೆ ಸ್ಥಗಿತಗೊಳ್ಳಲಿವೆ ಮತ್ತು ಒಂದು ವರ್ಷದೊಳಗೆ ಸಂಪೂರ್ಣ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹವನ್ನು ಜಾರಿಗೆ ತರಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ. 93% ವಾಹನಗಳು ಫಾಸ್ಟ್ಯಾಗ್ ಬಳಸಿ ಟೋಲ್ ಪಾವತಿಸುತ್ತವೆ, ಆದರೆ ಉಳಿದ ಶೇಕಡಾ 7 ರಷ್ಟು ಜನರು … Continued

ಕುಸ್ತಿ ಪಂದ್ಯಾವಳಿ ಸೋತಿದ್ದಕ್ಕೆ ಖ್ಯಾತ ಕುಸ್ತಿಪಟುಗಳಾದ ಗೀತಾ-ಬಬಿತಾ ಫೋಗಾಟ್‌ ಸೋದರಿ ರಿತಿಕಾ ಆತ್ಮಹತ್ಯೆ

ಭಾರತೀಯ ಸ್ಟಾರ್ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಫೋಗಾಟ್ ಅವರ 17 ವರ್ಷದ ಸೋದರಸಂಬಂಧಿ ರಿತಿಕಾ ಫೋಗಾಟ್ ಮಾರ್ಚ್ 17 ರ ಬುಧವಾರ ಅಕಾಲಿಕವಾಗಿ ನಿಧನರಾಗಿದ್ದಾರೆ. ಕುಸ್ತಿ ಪಂದ್ಯದ ಸೋಲಿನ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಗಳು ಹೇಳುತ್ತವೆ. ವರದಿಗಳ ಪ್ರಕಾರ, ರಿತಿಕಾ ಮಾ.೧೪ರಂದು ಭರತ್‌ಪುರದ ಲೋಹಗಡ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಕೇವಲ ಒಂದು … Continued

ಬಿಎಸ್‌ಎನ್‌ಎಲ್ ಖಾಸಗೀಕರಣವಿಲ್ಲ: ಕೇಂದ್ರ ಸರ್ಕಾರ

ನವ ದೆಹಲಿ : ಬಿಎಸ್‌ಎನ್‌ಎಲ್ ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಸಂವಹನ ಖಾತೆ ರಾಜ್ಯ ಸಚಿವ ಸಂಜಯ್ ಧೋತ್ರೆ ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್‌) ತನ್ನ 4 ಜಿ ವೈರ್‌ ಲೆಸ್ ಸೇವೆ ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸುತ್ತಿದೆ ಎಂದು ಸಚಿವ … Continued

ಭಾರತದಲ್ಲಿ ಒಂದೇ ದಿನದಲ್ಲಿ 36 ಸಾವಿರದ ಸಮೀಪ ಬಂದ ಕೊರೊನಾ ಪ್ರಕರಣ..ಮತ್ತೆ ಬಾರಿಸಿದೆ ಎಚ್ಚರಿಕೆ ಗಂಟೆ..!!

ನವ ದೆಹಲಿ: ದೇಶದಲ್ಲಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ಕಳೆದ 24 ತಾಸಿನಲ್ಲಿ ಭಾರತದಲ್ಲಿ 35,871 ದೈನಂದಿನ ಕೊರೊನಾ ಪ್ರಕರಣಗಳು ದಾಖಲಾಗಿವೆ..!! ಇದು ಈ ವರ್ಷದ ಅತಿ ಗರಿಷ್ಠ ದೈನಂದಿನ ಪ್ರಕರಣವಾಗಿದೆ. ಪ್ರ ಒಂದೇ 172 ಜನರು ಇದರಿಂದ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 1,59,216ಕ್ಕೆ ಏರಿಕೆಯಾಗಿದೆ. ಬುಧವಾರ 17,741 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ … Continued

ಎರಡನೇ ಅಲೆಯೋ.. ಏರಿಳಿತವೋ..?: ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣದಿಂದ ಹೆಚ್ಚಿದ ಆತಂಕ

ಮುಂಬೈ: ಕಳೆದ ಕೆಲವು ದಿನಗಳಲ್ಲಿ ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಕೊವಿಡ್‌-19 ಪ್ರಕರಣಗಳ ಉಲ್ಬಣವು “ಮೊದಲ ಅಲೆಯ ಏರಿಳಿತ” ಅಲ್ಲ, ಆದರೆ “ಭಯಾನಕ ಎರಡನೇ ತರಂಗ” ಎಂದು ಆರೋಗ್ಯದ ಉನ್ನತ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ನ್ಯೂಸ್ ಚಾನೆಲ್ ಎನ್‌ಡಿಟಿವಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕೆಇಎಂ ಆಸ್ಪತ್ರೆಯ ಡೀನ್ ಹೇಮಂತ್ ದೇಶಮುಖ್, ಪ್ರಕರಣದ ಸಂಖ್ಯೆಗಳು … Continued

ಆಧಾರ ಲಿಂಕ್‌ ಆಗದ ಪಡಿತರ ಚೀಟಿ ರದ್ದು ಪಡಿಸಿದ ಕುರಿತು ಸರ್ಕಾರಗಳಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ನವದೆಹಲಿ: ಆಧಾರ ಕಾರ್ಡ್‌ನೊಂದಿಗೆ ಲಿಂಕ್‌ ಆಗದ ಮೂರು ಕೋಟಿ ಪಡಿತರ ಚೀಟಿಗಳನ್ನು ಕೇಂದ್ರ ಸರಕಾರ ರದ್ದುಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ, ಈ ಕುರಿತು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಂದ ಪ್ರತಿಕ್ರಿಯೆ ಕೇಳಿದೆ. ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರ ನ್ಯಾಯಪೀಠ, ಇದು ತುಂಬಾ ಗಂಭೀರ … Continued

ಬಿಜೆಪಿಗೆ ಸೇರಲು ಆಸಕ್ತಿ ತೋರಿದ ಟಿಎಂಸಿ ಸಂಸದ ಸಿಸಿರ್‌ ಅಧಿಕಾರಿ

ಕೋಲ್ಕತ್ತ: ವಿಧಾನಸಭಾ ಚುನಾವಣೆಗೆ ೧೦ ದಿನಗಳಿದ್ದರೂ ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಗೊಳ್ಳುವ ಮುಖಂಡರ ಸಂಖ್ಯೆ ಬೆಳೆಯುತ್ತಲೇ ಇದ್ದು, ಟಿಎಂಸಿ ಹಿರಿಯ ನಾಯಕ, ಸಂಸದ ಸಿಸಿರ್‌ ಅಧಿಕಾರಿ ಬಿಜೆಪಿಗೆ ಸೇರ್ಪಡೆಗೊಳ್ಳಲು ಸನ್ನದ್ಧರಾಗಿದ್ದಾರೆ. ಸುವೆಂದು ಅಧಿಕಾರಿಯ ತಂದೆ ಸಿಸಿರ್‌ ಅಧಿಕಾರಿ ಮಾರ್ಚ್‌ ೨೪ರಂದು ಪೂರ್ವ ಮಿಡ್ನಾಪುರದ ಕಾಂತಿಯಲ್ಲಿ ನಡೆಯುವ ಸಾರ್ವಜನಿಕ ರ್ಯಾಲಿಯಲ್ಲಿ ಬಿಜೆಪಿ ತೆಕ್ಕೆಗೆ ಸೇರಲಿದ್ದಾರೆ ಎಂದು ಬಿಜೆಪಿ ಮುಖಂಡ … Continued

ಪುರಿ ಜಗನ್ನಾಥ ಮಂದಿರ ಒಡೆತನದ ೩೫,೨೭೨ ಎಕರೆ ಜಮೀನು ಮಾರಾಟಕ್ಕೆ ಒಡಿಶಾ ಸರ್ಕಾರ ನಿರ್ಧಾರ

ಒಡಿಶಾ ಸರ್ಕಾರ ಪುರಿ ಜಗನ್ನಾಥ ಮಂದಿರಕ್ಕೆ ಸೇರಿದ ೩೫,೨೭೨ ಎಕರೆ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ೬ ರಾಜ್ಯಗಳಲ್ಲಿರುವ ಜಗನ್ನಾಥ ದೇವಸ್ಥಾನದ ಜಮೀನನ್ನು ಮಾರಾಟ ಮಾಡಲಾಗುವುದು ಎಂದು ಒಡಿಶಾ ಕಾನೂನು ಸಚಿವ ಪ್ರತಾಪ್‌ ಜೆನಾ ತಿಳಿಸಿದ್ದಾರೆ. ಒಡಿಶಾದ ೩೦ ಜಿಲ್ಲೆಗಳಲ್ಲಿ ದೇವಸ್ಥಾನ ಒಡೆತನದ ೬೦,೪೨೬ ಎಕರೆ ಜಮೀನಿದೆ. ಇದರಲ್ಲಿ ೩೫,೨೭೨ ಎಕರೆ ಜಮೀನನನ್ನು ಮಾರಾಟ ಮಾಡಲಾಗುವುದು. … Continued