ಅಕ್ರಮ ಹಣ ವರ್ಗಾವಣೆ ಪ್ರಕರಣ: ಇ.ಡಿ. ಆರೋಪಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರು ಉಲ್ಲೇಖ

ನವದೆಹಲಿ: ಎನ್‌ಆರ್‌ಐ ಉದ್ಯಮಿ ಸಿ.ಸಿ. ಥಂಪಿ ಮತ್ತು ಬ್ರಿಟಿಷ್ ಪ್ರಜೆ ಸುಮಿತ್ ಚಡ್ಡಾ ವಿರುದ್ಧ ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮೊದಲ ಬಾರಿಗೆ ಹೆಸರಿಸಲಾಗಿದೆ. ರಾಬರ್ಟ್ ವಾದ್ರಾ ಮತ್ತು ಥಂಪಿ ಅವರಲ್ಲದೆ, ಪ್ರಿಯಾಂಕಾ ಗಾಂಧಿ ಕೂಡ ಫರಿದಾಬಾದ್‌ನಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. … Continued

ಲೋಕಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಶಿವಸೇನೆಯ 23 ಸ್ಥಾನಗಳ ಬೇಡಿಕೆ ತಿರಸ್ಕರಿಸಿದ ಕಾಂಗ್ರೆಸ್‌

ಮುಂಬೈ : ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದಲ್ಲಿ 23 ಸ್ಥಾನಗಳನ್ನು ನೀಡಬೇಕು ಎಂಬ ಮಿತ್ರಪಕ್ಷ ಶಿವಸೇನೆಯ (ಉದ್ಧವ್‌ ಠಾಕ್ರೆ ಶಿವಸೇನೆ) ಬೇಡಿಕೆಯನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರ ವಿಕಾಸ್ ಅಘಾಡಿ ಮೈತ್ರಿಕೂಟದ ಪಕ್ಷವಾದ ಶಿವಸೇನೆ (ಯುಬಿಟಿ) ನಾಯಕರು ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವೆ ಸೀಟು ಹಂಚಿಕೆ ಕುರಿತು ಚರ್ಚಿಸಲು ಭೇಟಿಯಾದ ನಂತರ … Continued

ಭಾರತದ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳ ಮರಣ ದಂಡನೆ ಶಿಕ್ಷೆ ಕಡಿಮೆ ಮಾಡಿದ ಕತಾರ್ ನ್ಯಾಯಾಲಯ

ನವದೆಹಲಿ : ನವದೆಹಲಿ: ಕತಾರ್‌ನಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳ ಶಿಕ್ಷೆಯನ್ನು ಕತಾರ್ ನ್ಯಾಯಾಲಯವು ತಗ್ಗಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ತಿಳಿಸಿದೆ. ಕತಾರ್‌ನ ಮೇಲ್ಮನವಿ ನ್ಯಾಯಾಲಯವು ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಯನ್ನು ಕಡಿಮೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, … Continued

ಗೇಟ್‌ ಮುರಿದು ಹರಿದ್ವಾರ ನ್ಯಾಯಾಲಯದ ಆವರಣಕ್ಕೆ ನುಗ್ಗಿದ ಕಾಡಾನೆ | ವೀಕ್ಷಿಸಿ

ಬುಧವಾರ ಹರಿದ್ವಾರದಲ್ಲಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಮತ್ತು ನ್ಯಾಯಾಲಯ ಸಂಕೀರ್ಣದ ಆವರಣಕ್ಕೆ ಕಾಡಾನೆಯೊಂದು ನುಗ್ಗಿದ ನಂತರ ಅವ್ಯವಸ್ಥೆ ಉಂಟಾಗಿಯಿತು ಹಾಗೂ ಸಿಬ್ಬಂದಿ ಹಾಗೂ ನೆರೆದಿದ್ದವರಲ್ಲಿ ಆತಂಕ ಮೂಡಿಸಿತು. ಬುಧವಾರ ಸಂಜೆ 4:45 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಕೇವಲ 150 ಮೀಟರ್ ದೂರದಲ್ಲಿರುವ ಮುಖ್ಯ ದ್ವಾರವನ್ನು ಭೇದಿಸಿದ ಆನೆ … Continued

ಖ್ಯಾತ ನಟ- ಡಿಎಂಡಿಕೆ ಪಕ್ಷದ ಮುಖ್ಯಸ್ಥ ವಿಜಯಕಾಂತ ನಿಧನ

ಚೆನ್ನೈ: ಡಿಎಂಡಿಕೆ ಪಕ್ಷದ ಸಂಸ್ಥಾಪಕ ನಾಯಕ ಮತ್ತು ಜನಪ್ರಿಯ ತಮಿಳು ನಟ ವಿಜಯಕಾಂತ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗಿದ್ದು, ಶೀಘ್ರದಲ್ಲೇ ಡಿಎಂಡಿಕೆ ಕಚೇರಿಗೆ ಕೊಂಡೊಯ್ಯಲಾಗುತ್ತದೆ. ವಿಜಯಕಾಂತ ಅವರು ವಿಜಯಕಾಂತ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ … Continued

‘ನಮ್ಮ ಸ್ನೇಹಿತನನ್ನು ನೋಡಲು ಸಂತೋಷವಾಗುತ್ತದೆ’ : ಪ್ರಧಾನಿ ಮೋದಿಯನ್ನು ರಷ್ಯಾಕ್ಕೆ ಆಹ್ವಾನಿಸಿದ ಅಧ್ಯಕ್ಷ ಪುತಿನ್

ಮಾಸ್ಕೊ : ವಿದೇಶಾಂಗ ಸಚಿವ ಎಸ್. ಜೈಶಂಕರ ಅವರು ಕ್ರೆಮ್ಲಿನ್‌ನಲ್ಲಿ ರಷ್ಯಾದ ನಾಯಕರನ್ನು ಭೇಟಿ ಮಾಡಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಮುಂದಿನ ವರ್ಷ ರಷ್ಯಾಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಆಹ್ವಾನಿಸಿದ್ದಾರೆ. “ನಮ್ಮ ಸ್ನೇಹಿತ ಪ್ರಧಾನಿ ಮೋದಿ ಅವರನ್ನು ರಷ್ಯಾದಲ್ಲಿ ನೋಡಲು ನಾವು ಸಂತೋಷಪಡುತ್ತೇವೆ” ಎಂದು ಪುತಿನ್ … Continued

ಎಂಫಿಲ್ ಮಾನ್ಯತೆ ಪಡೆದ ಪದವಿಯಲ್ಲ : ವಿದ್ಯಾರ್ಥಿಗಳಿಗೆ ಎಚ್ಚರಿಸಿದ ಯುಜಿಸಿ

ನವದೆಹಲಿ: ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಪ್ರೋಗ್ರಾಂಗೆ ದಾಖಲಾಗುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ. ಆಯೋಗವು ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ, ಅದನ್ನು ವಿಶ್ವವಿದ್ಯಾಲಯದ ಮಂಡಳಿ ರದ್ದುಗೊಳಿಸಿದ್ದರೂ ಸಹ ಕೆಲವು ವಿಶ್ವವಿದ್ಯಾನಿಲಯಗಳು ಕೋರ್ಸ್‌ಗೆ ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿವೆ. ಈ ಹಿಂದೆ, ವಿಶ್ವವಿದ್ಯಾಲಯಗಳು ಇನ್ನು ಮುಂದೆ ಎಂಫಿಲ್ ಪದವಿಗಳನ್ನು ನೀಡುವುದಿಲ್ಲ … Continued

ಎಸ್‌ ಬಿ ಐ ಗ್ರಾಹಕರಿಗೆ ಸಿಹಿಸುದ್ದಿ : ಎಫ್‌ ಡಿ ಮೇಲಿನ ಬಡ್ಡಿ ದರ ಹೆಚ್ಚಳ…

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಫಿಕ್ಸಿಡ್ ಡೆಪಾಸಿಟ್ ಹೂಡಿಕೆದಾರರಿಗೆ ಸಿಹಿಸುದ್ದಿ ನೀಡಿದೆ. ಎಸ್‌ಬಿಐ ಡಿಸೆಂಬರ್ 27 ರಿಂದ ಜಾರಿಗೆ ಬರುವಂತೆ ನಿಶ್ಚಿತ ಠೇವಣಿಗಳ(ಎಫ್‌ಡಿ) ಮೇಲಿ ಬಡ್ಡಿದರಗಳನ್ನು 50 ಬಿಪಿಎಸ್ ಏರಿಕೆ ಮಾಡಿದೆ. ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಎಸ್‌ಬಿಐ … Continued

ವೀಡಿಯೊ | ವಾಗ್ವಾದದ ನಂತರ ಇಬ್ಬರ ಮೇಲೆ ಕಾರ್‌ ಓಡಿಸಿದ ವ್ಯಕ್ತಿ, ಮಹಿಳೆ ಸಾವು

ಜೈಪುರ: ತೀವ್ರ ವಾಗ್ವಾದದ ನಂತರ ವ್ಯಕ್ತಿಯೊಬ್ಬ ಕಾರು ಹಾಯಿಸಿದ ನಂತರ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಜೈಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆ ಮಂಗಳವಾರ ಮುಂಜಾನೆ ಜೈಪುರದ ಜವಾಹರ್ ಸರ್ಕಲ್ ಪ್ರದೇಶದ ಹೋಟೆಲ್‌ನ ಹೊರಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೊಂದಲದ ದೃಶ್ಯಗಳು ಆರೋಪಿ ಮಂಗೇಶ ಅರೋರಾ ಎಂಬಾತನ ಕಾರು ಉಮಾ … Continued

ಮುಸ್ಲಿಂ ಲೀಗ್ ಜಮ್ಮು- ಕಾಶ್ಮೀರ (ಮಸರತ್ ಆಲಂ ಬಣ) ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ) (ಎಂಎಲ್‌ಜೆಕೆ-ಎಂಎ) ಅನ್ನು ಬುಧವಾರ ನಿಷೇಧಿತ ಸಂಘಟನೆ ಎಂದು ಸರ್ಕಾರ ಘೋಷಿಸಿದೆ. ಈ ಸಂಘಟನೆಯ ಸದಸ್ಯರು ದೇಶವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಸಂಘಟನೆ ಜನರನ್ನು ಪ್ರಚೋದಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ … Continued