ಭಾರತ vs ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸರಣಿ : ಭಾರತದ ತಂಡ ಪ್ರಕಟ ; ಟಿ20ಗೆ ಸೂರ್ಯಕುಮಾರ, ಏಕದಿನಕ್ಕೆ ಕೆಎಲ್‌ ರಾಹುಲ್‌‌ಗೆ ನಾಯಕತ್ವ, ಟೆಸ್ಟ್ ಗೆ ರೋಹಿತ್‌ ನಾಯಕ

ನವದೆಹಲಿ: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಟಿT20 ಹಾಗೂ ಏಕದಿನದ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಸೂರ್ಯಕುಮಾರ ಯಾದವ್ ಅವರು T20I ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ಮುಂಬರುವ ಪ್ರವಾಸಕ್ಕಾಗಿ ಬಿಸಿಸಿಐ (BCCI) ಭಾರತದ ತಂಡಗಳನ್ನು ಪ್ರಕಟಿಸಿದೆ. ಭಾರತವು ದಕ್ಷಿಣ ಆಫ್ರಿಕಾದಲ್ಲಿ ಮೂರು T20Iಗಳು, ಅನೇಕ ಏಕದಿನದ ಪಂದ್ಯಗಳು ಮತ್ತು ಎರಡು … Continued

ರಾಜಸ್ಥಾನ ವಿಧಾನಸಭೆ ಚುನಾವಣೆ : ರಾಜಸ್ಥಾನದಲ್ಲಿ ಕಾಂಗ್ರೆಸ್‌ ಕೈ ಹಿಡಿಯಲ್ಲ ಮತದಾರ, ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಎಂದ ಎಕ್ಸಿಟ್‌ ಪೋಲ್‌ಗಳು

ನವದೆಹಲಿ : ಭಾರತದ ಚುನಾವಣಾ ಆಯೋಗವು (ಇಸಿಐ) ದೇಶದ ಐದು ರಾಜ್ಯಗಳಾದ ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣಗಳಲ್ಲಿ 2023 ರ ರಾಜ್ಯ ವಿಧಾನಸಭಾ ಚುನಾವಣೆಗಳ ಮತದಾನ ಪೂರ್ಣಗೊಂಡಿದ್ದು ಡಿಸೆಂಬರ್ 3ರಂದು ಫಲಿತಾಂಶಗಳು ಪ್ರಕಟವಾಗಲಿದೆ. ಐದು ರಾಜ್ಯಗಳ ಎಕ್ಸಿಟ್ ಪೋಲ್‌ಗಳು ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಗೆ ಅನುಕೂಲಕರ ಸಂಖ್ಯೆ ಸಿಗಲಿದೆ ಎಂದು ತೋರಿಸಿದರೆ … Continued

ಪಾತಾಳಕ್ಕೆ ಕುಸಿದ ಬೈಜೂಸ್‌ ಮಾರುಕಟ್ಟೆ ಮೌಲ್ಯ : ಒಂದು ವರ್ಷದಲ್ಲಿ 1.83 ಲಕ್ಷ ಕೋಟಿಯಿಂದ ₹25,000 ಕೋಟಿಗೆ ಇಳಿಕೆ….!

ನವದೆಹಲಿ : ಬೈಜುಸ್‌ಗೆ ಮತ್ತೊಂದು ಹೊಡೆತ ಬಿದ್ದಿದೆ. ಟೆಕ್ ಹೂಡಿಕೆದಾರ ಪ್ರೊಸಸ್ ಎಡ್‌ಟೆಕ್ ಸ್ಟಾರ್ಟ್‌ಅಪ್‌ನ ಮೌಲ್ಯವನ್ನು $3 ಶತಕೋಟಿ (₹25,000 ಕೋಟಿ ರೂ.)ಗೆ ಕಡಿತಗೊಳಿಸಿದೆ. ಕಳೆದ ವರ್ಷ ಅದರ ಗರಿಷ್ಠ ಮೌಲ್ಯ $22 ಶತಕೋಟಿ (1.83 ಲಕ್ಷ ಕೋಟಿ ರೂ.)ಗೆ ಹೋಲಿಸಿದರೆ 86%ರಷ್ಟು ಕಡಿಮೆಯಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕ್ಷಿಪ್ರ ವಿಸ್ತರಣೆಯ ನಂತರ ಬೈಜುಸ್ ನಗದು … Continued

ಮದುವೆಗೆ ಒಪ್ಪದ ಶಾಲಾ ಶಿಕ್ಷಕಿಯ ಅಪಹರಣ….

ಹಾಸನ: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಇಂದು, ಗುರುವಾರ ಬೆಳಗ್ಗೆ ನಡೆದಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದ ಅರ್ಪಿತಾ ಎಂಬವರನ್ನು ಶಾಲೆ ಮುಂಭಾಗದಿಂದಲೇ ಅಪಹರಿಸಲಾಗಿದೆ. ಶಿಕ್ಷಕಿ ಅರ್ಪಿತಾ ಗುರುವಾರ ಬೆಳಿಗ್ಗೆ ಶಾಲೆಗೆ ಹೊರಟಿದ್ದಾಗ, ಆಕೆಯ ಸಂಬಂಧಿ ರಾಮು ಎಂಬಾತ ಅಪಹರಣ ಮಾಡಿದ್ದಾನೆ ಎಂದು ಶಿಕ್ಷಕಿಯ … Continued

ʼಕೌನ್ ಬನೇಗಾ ಕರೋಡ್‌ ಪತಿʼಯಲ್ಲಿ ₹ 1 ಕೋಟಿ ಗೆದ್ದ ಅತ್ಯಂತ ಕಿರಿಯ ಸ್ಪರ್ಧಿಯಾದ 12 ವರ್ಷದ ಬಾಲಕ…!

ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ 12 ವರ್ಷದ ಬಾಲಕ ₹ 1 ಕೋಟಿ ಗೆದ್ದ ನಂತರ ಈ ಮೊತ್ತ ಗೆದ್ದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅಮಿತಾಭ್ ಬಚ್ಚನ್ ಆಯೋಜಿಸಿದ್ದ ಐಕಾನಿಕ್ ಶೋನ 15 ನೇ ಆವೃತ್ತಿಯಲ್ಲಿ ಹರಿಯಾಣದ ಮಹೇಂದ್ರಗಢ್‌ನ 8 ನೇ ತರಗತಿಯ ವಿದ್ಯಾರ್ಥಿ ಮಯಾಂಕ್ ₹ 1 … Continued

ಇಟಲಿಯ ಪೊಂಪೈ ಹಿಂದಿಕ್ಕಿ ʼವಿಶ್ವದ 8ನೇ ಅದ್ಭುತʼವಾದ ಕಾಂಬೋಡಿಯಾದ ಅಂಕೋರ್ ವಾಟ್ ವಿಷ್ಣು ದೇವಾಲಯ…!

ಕಾಂಬೋಡಿಯಾದ ಉತ್ತರ ಪ್ರಾಂತ್ಯದ ಸೀಮ್ ರೀಪ್‌ನಲ್ಲಿರುವ ಅಂಕೋರ್ ವಾಟ್ ದೇವಾಲಯವು ಇಟಲಿಯ ಪೊಂಪೈ ಅನ್ನು ಹಿಂದಿಕ್ಕಿ ವಿಶ್ವದ ಎಂಟನೇ ಅದ್ಭುತ ಎಂಬ ಪ್ರತಿಷ್ಠಿತ ಬಿರುದನ್ನು ಪಡೆದಿದೆ. “ವಿಶ್ವದ ಎಂಟನೇ ಅದ್ಭುತ” ಎಂಬ ಅನಧಿಕೃತ ಶೀರ್ಷಿಕೆಯನ್ನು ಕೆಲವೊಮ್ಮೆ ಕಟ್ಟಡಗಳು, ರಚನೆಗಳು, ಯೋಜನೆಗಳು, ವಿನ್ಯಾಸಗಳು ಅಥವಾ ಪ್ರಪಂಚದ ಏಳು ಅದ್ಭುತಗಳಿಗೆ ಹೋಲಿಸಬಹುದಾದುದಕ್ಕೆ ನೀಡಲಾಗುತ್ತದೆ. ಈ ಯುನೆಸ್ಕೊ (UNESCO) ವಿಶ್ವ … Continued

ಪ್ರೀತಿ ಸಾಯುವುದಿಲ್ಲ…?! : ಸಿನಿಮಾ ಕತೆಯಂತೆ ವಿಚ್ಛೇದನ ಪಡೆದು 5 ವರ್ಷಗಳ ನಂತರ ಮತ್ತೆ ಮದುವೆಯಾದ ದಂಪತಿ ; ಕಾರಣ ಇಲ್ಲಿದೆ

ಗಾಜಿಯಾಬಾದ್‌ : 2018 ರಲ್ಲಿ ವಿಚ್ಛೇದನ ಪಡೆದಿದ್ದ ಗಾಜಿಯಾಬಾದ್‌ನ ಕೌಶಂಬಿ ದಂಪತಿ ಇತ್ತೀಚೆಗೆ ಮತ್ತೆ ವಿವಾಹವಾಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಮತ್ತೆ ಒಂದಾಗಿದ್ದಾರೆ. .ವಿನಯ ಜೈಸ್ವಾಲ್ ಮತ್ತು ಪೂಜಾ ಚೌಧರಿ 2012 ರಲ್ಲಿ ವಿವಾಹವಾದರು ಆದರೆ ಮದುವೆಯಾದ ಒಂದು ವರ್ಷದಲ್ಲಿ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು. … Continued

ಚೆನ್ನೈ: ಭಾರೀ ಮಳೆ, ನವೆಂಬರ್‌ 30 ರಂದು ಶಾಲೆಗಳಿಗೆ ರಜೆ

ಚೆನ್ನೈ: ಭಾರೀ ಮಳೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿರುವುದರಿಂದ ಗುರುವಾರ (ನವೆಂಬರ್‌ 30) ಚೆನ್ನೈನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಡಿಸೆಂಬರ್ 2 ಮತ್ತು 3 ರಂದು ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯನ್ನು ಸೂಚಿಸಿದೆ. ಹವಾಮಾನ ಇಲಾಖೆ ಪ್ರಕಾರ, ತಮಿಳುನಾಡಿನ … Continued

ಐತಿಹಾಸಿಕ ಮೈಲಿಗಲ್ಲು…: ಕೇಂದ್ರದ ಜೊತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಅತ್ಯಂತ ಹಳೆಯ ಸಶಸ್ತ್ರ ಗುಂಪು ಯು ಎನ್‌ ಎಲ್‌ ಎಫ್‌

ನವದೆಹಲಿ: ಐತಿಹಾಸಿಕ ಬೆಳವಣಿಗೆಯಲ್ಲಿ, ಭಾರತ ಸರ್ಕಾರ ಮತ್ತು ಮಣಿಪುರ ಸರ್ಕಾರವು ಬುಧವಾರ ನವದೆಹಲಿಯಲ್ಲಿ ಮಣಿಪುರದ ಅತ್ಯಂತ ಹಳೆಯ ಕಣಿವೆ ಮೂಲದ ಸಶಸ್ತ್ರ ಗುಂಪು ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (UNLF) ಜೊತೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಶಾಂತಿ ಒಪ್ಪಂದವನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈಶಾನ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು … Continued

ಗಂಡ-ಹೆಂಡತಿ ಜಗಳದ ನಂತರ ಬ್ಯಾಂಕಾಕಿಗೆ ಹೋಗಬೇಕಾದ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಯ್ತು : ವರದಿ

ನವದೆಹಲಿ: ದಂಪತಿ ನಡುವೆ ಜಗಳ ನಡೆದ ಜಗಳದ ಕಾರಣಕ್ಕೆ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಲುಫ್ತಾನ್ಸಾ ವಿಮಾನವನ್ನು ಬುಧವಾರ ದೆಹಲಿಗೆ ತಿರುಗಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಅಶಿಸ್ತಿನ ಪ್ರಯಾಣಿಕರ ಬಗ್ಗೆ ಪೈಲಟ್‌ಗಳು ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಎಚ್ಚರಿಕೆ ನೀಡಿದ ನಂತರ ಬುಧವಾರ ಬೆಳಿಗ್ಗೆ ಮ್ಯೂನಿಚ್‌ನಿಂದ ಟೇಕ್ ಆಫ್ ಆಗಿದ್ದ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ … Continued