ಮಹಾರಾಷ್ಟ್ರದ ಮಾಜಿ ಸಿಎಂ ಮನೋಹರ ಜೋಶಿ ನಿಧನ

ಮುಂಬೈ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭೆ ಮಾಜಿ ಸ್ಪೀಕರ್‌ ಮನೋಹರ ಜೋಶಿ ಅವರು ಮುಂಬೈ ಆಸ್ಪತ್ರೆಯಲ್ಲಿ ಇಂದು, ಶುಕ್ರವಾರ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಜೋಶಿ ಅವರ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಇಂದು, ಶುಕ್ರವಾರ ನಡೆಯಲಿದೆ. ಜೋಶಿ ಅವರನ್ನು ಹೃದಯಾಘಾತದ ಕಾರಣಕ್ಕೆ ಎರಡು ದಿನಗಳ ಹಿಂದೆ ಬುಧವಾರ ಮುಂಬೈನ … Continued

ಐಪಿಎಲ್‌(IPL) 2024 : ಮೊದಲ 17 ದಿನದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಮೊದಲ 17 ದಿನಗಳ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದ್ದು, ಪಂದ್ಯಾವಳಿಯು ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವು ಆರ್‌ಸಿಬಿಯನ್ನು ಎದುರಿಸಲಿದೆ. ಐಪಿಎಲ್ ಆವೃತ್ತಿಯ ಮೊದಲ ಪಂದ್ಯವನ್ನು ಸಿಎಸ್‌ಕೆ ಆಡುತ್ತಿರುವುದು ಇದು 9ನೇ ಬಾರಿ. ಎಲ್ಲಾ ದಿನದ ಪಂದ್ಯಗಳು … Continued

ಸಿಂಹಗಳಿಗೆ ಸೀತೆ, ಅಕ್ಬರ್‌ ಹೆಸರೇ ಯಾಕೆ..? ಸಿಂಹಗಳಿಗೆ ಇಟ್ಟ ಹೆಸರು ಬದಲಿಸಲು ಸೂಚಿಸಿದ ಕೋಲ್ಕತ್ತಾ ಹೈಕೋರ್ಟ್‌

ಕೋಲ್ಕತ್ತಾ : ಸಿಲಿಗುರಿಯ ಬಂಗಾಳ ಸಫಾರಿ ಪಾರ್ಕ್‌ನಲ್ಲಿ ಎರಡೂ ಪ್ರಾಣಿಗಳನ್ನು ಒಂದೇ ಆವರಣದಲ್ಲಿ ಇರಿಸಿದ ಸಿಂಹ ಹಾಗೂ ಸಿಂಹಿಣಿಗೆ ಇರಿಸಿದ “ಅಕ್ಬರ್” ಮತ್ತು ಸಿಂಹಿಣಿ “ಸೀತಾ” ಹೆಸರುಗಳು ವಿವಾದಕ್ಕೆ ಕಾರಣವಾದ ನಂತರ ಈ ಹೆಸರಿನ ಬದಲು ಬೇರೆ ಹೆಸರನ್ನು ಮರು ನಾಮಕರಣ ಮಾಡುವಂತೆ ಕೋಲ್ಕತ್ತಾ ಹೈಕೋರ್ಟ್ ಗುರುವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ. ಸಿಲಿಗುರಿಯ ಉತ್ತರ … Continued

ಇಬ್ಬರು ಕೊಲೆ ಅಪರಾಧಿಗಳನ್ನು ಸ್ಟೇಡಿಯಂನಲ್ಲಿ ನೂರಾರು ಜನರ ಎದುರು ಗಲ್ಲೆಗೇರಿಸಿದ ತಾಲಿಬಾನ್‌..!

ಘಜ್ನಿ (ಅಫ್ಘಾನಿಸ್ತಾನ) : ತಾಲಿಬಾನ್ ಅಧಿಕಾರಿಗಳು ಗುರುವಾರ ಪೂರ್ವ ಅಫ್ಘಾನಿಸ್ತಾನದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಕೊಲೆ ಆರೋಪಿಗಳಿಬ್ಬರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ದಾರೆ ಎಂದು ವರದಿಯಾಗಿದೆ. ತಾಲಿಬಾನ್ ಸುಪ್ರೀಂ ಲೀಡರ್ ಹಿಬತುಲ್ಲಾ ಅಖುಂದ್ಜಾದಾ ಸಹಿ ಮಾಡಿದ ಡೆತ್ ವಾರಂಟ್ ಅನ್ನು ಸುಪ್ರೀಂ ಕೋರ್ಟ್ ಅಧಿಕಾರಿ ಅತೀಕುಲ್ಲಾ ದರ್ವಿಶ್ ಗಟ್ಟಿಯಾಗಿ ಓದಿದ ನಂತರ ಘಜ್ನಿ ನಗರದಲ್ಲಿ ಇಬ್ಬರನ್ನೂ ಹಿಂಭಾಗಕ್ಕೆ ಗುಂಡು ಹಾರಿಸಿ … Continued

ಕಾಶ್ಮೀರದ ಗುಲ್ಮಾರ್ಗದಲ್ಲಿ ಹಿಮಪಾತ : ರಷ್ಯಾದ ಸ್ಕೈಯರ್ ಸಾವು, 6 ಜನರ ರಕ್ಷಣೆ

ಶ್ರೀನಗರ: ಇಂದು ಜಮ್ಮು ಮತ್ತು ಕಾಶ್ಮೀರದ ಸ್ಕೀ ರೆಸಾರ್ಟ್ ಪಟ್ಟಣವಾದ ಗುಲ್ಮಾರ್ಗದಲ್ಲಿ ಭಾರಿ ಹಿಮಕುಸಿತ ಸಂಭವಿಸಿದ ನಂತರ ರಷ್ಯಾದ ಒಬ್ಬ ಸ್ಕೈಯರ್ ಸಾವಿಗೀಡಾಗಿದ್ದಾರೆ. ರಷ್ಯಾದ ಏಳು ಸ್ಕೈಯರ್‌ಗಳು ಹಿಮಪಾತಕ್ಕೆ ಸಿಲುಕಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಬೃಹತ್ ಹಿಮಕುಸಿತವು ಗುರುವಾರ ಗುಲ್ಮಾರ್ಗದ ಮೇಲ್ಭಾಗ ಕಾಂಗ್‌ದೂರಿ ಇಳಿಜಾರುಗಳ ಬಳಿ ಅಪ್ಪಳಿಸಿದೆ … Continued

“ನಿಮ್ಮ ಬೌಲರ್ ಯಾರು?”: ಕಾಶ್ಮೀರದ ಗುಲ್ಮಾರ್ಗ ರಸ್ತೆಯಲ್ಲಿ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ | ವೀಕ್ಷಿಸಿ

ಭಾರತದ ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ ಪ್ರಸ್ತುತ ಕಾಶ್ಮೀರ ಮೊದಲ ಪ್ರವಾಸದಲ್ಲಿದ್ದು, ಅವರು ಅಲ್ಲಿನ ಗುಲ್ಮಾರ್ಗ್‌ನಲ್ಲಿ ಸ್ಥಳೀಯರೊಂದಿಗೆ ಗಲ್ಲಿ ಕ್ರಿಕೆಟ್ ಆಟದಲ್ಲಿ ತೊಡಗಿರುವ ವೀಡಿಯೊ ವೈರಲ್‌ ಆಗಿದೆ. ಗುಲ್ಮಾರ್ಗ್‌ದ ಸುಂದರವಾದ ಪರಿಸರದ ನಡುವೆ ಸಚಿನ್ ಒಂದು ಓವರ್ ಕ್ರಿಕೆಟ್‌ ಆಡಿದರು. ಸಾಮಾಜಿಕ ಮಾಧ್ಯಮದಲ್ಲಿ ತೆಂಡೂಲ್ಕರ್ ಅವರು ಸ್ಥಳೀಯರೊಂದಿಗೆ ಪಾಲ್ಗೊಂಡ ಮತ್ತು ಗಲ್ಲಿ ಕ್ರಿಕೆಟ್ ಆಟವನ್ನು ಆನಂದಿಸುವ … Continued

12 ಭಾರತೀಯ ಯುವಕರನ್ನು ವಂಚಿಸಿ ರಷ್ಯಾದ ಪರ ಯುದ್ಧದಲ್ಲಿ ಹೋರಾಡಲು ಕಳುಹಿಸಿದ ಏಜೆಂಟರು : ಸರ್ಕಾರದ ಸಹಾಯ ಕೋರಿದ ಓವೈಸಿ

ನವದೆಹಲಿ: ರಷ್ಯಾದಲ್ಲಿ ಸಿಕ್ಕಿಬಿದ್ದಿರುವ ಯುವಕರನ್ನು ಸುರಕ್ಷಿತವಾಗಿ ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಹೈದರಾಬಾದ್ ಸಂಸದ ಅಸಾದುದ್ದೀನ್‌ ಓವೈಸಿ ಅವರು, ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ ಅವರನ್ನು ವಿನಂತಿಸಿದ್ದಾರೆ. ಹೈದರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒವೈಸಿ, ಕರ್ನಾಟಕ, ತೆಲಂಗಾಣ, ಗುಜರಾತ್, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದ … Continued

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ : ಕಬ್ಬಿನ ಖರೀದಿ ದರ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ

ನವದೆಹಲಿ : ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. ಕಬ್ಬಿನ (sugarcane) ಖರೀದಿ ದರ ಹೆಚ್ಚಳಕ್ಕೆ ಕೇಂದ್ರ ಸಂಪುಟ ಸಭೆ ಅನುಮತಿ ನೀಡಿದ್ದು, ಪ್ರತಿ ಕ್ವಿಂಟಲ್‌ಗೆ 315 ರೂಪಾಯಿಗಳಿಂದ 340 ರೂ.ಗಳಿಗೆ ಏರಿಕೆ ಮಾಡಿದೆ. ಇದರೊಂದಿಗೆ ಕಬ್ಬಿನ ಎಫ್​ಆರ್​ಪಿ ಪ್ರತಿ ಕ್ವಿಂಟಲ್​ಗೆ 25 ರೂ. ಹೆಚ್ಚಿಸಿದೆ. ಅಲ್ಲದೆ, ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಎಫ್‌ಡಿಐಗೆ … Continued

ಲೋಕಸಭೆ ಚುನಾವಣೆ : ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌-ಸಮಾಜವಾದಿ ಪಕ್ಷದ ಮಧ್ಯೆ ಸ್ಥಾನ ಹಂಚಿಕೆ ಅಂತಿಮ

ಲಕ್ನೋ : 2024ರ ಲೋಕಸಭೆ ಚುನಾವಣೆಗೆ ಅಖಿಲೇಶ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದ್ದು,ಈ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ರವಿದಾಸ್ ಮೆಹ್ರೋತ್ರಾ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ವಿವರಗಳನ್ನು ಹಂಚಿಕೊಂಡ ಮೆಹ್ರೋತ್ರಾ ಅವರು, ಉತ್ತರ ಪ್ರದೇಶದಲ್ಲಿ ಸ್ಥಾನ ಹೊಂದಾಣಿಕೆಯಲ್ಲಿ ಸಮಾಜವಾದಿ ಪಕ್ಷ 63 … Continued

‘ದೆಹಲಿ ಚಲೋ’ : ಹರಿಯಾಣ ಗಡಿಯಲ್ಲಿ ನಡೆದ ಪ್ರತಿಭಟನೆ ವೇಳೆ ಓರ್ವ ಸಾವು, ಎರಡು ದಿನ ಪ್ರತಿಭಟನಾ ಮೆರವಣಿಗೆ ಸ್ಥಗಿತ

ನವದೆಹಲಿ: ಬ್ಯಾರಿಕೇಡ್‌ಗಳನ್ನು ತೆರವು ಮಾಡಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಬುಧವಾರ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು, ರಬ್ಬರ್ ಗುಂಡು ಹಾರಿಸಿದ್ದು, ಘರ್ಷಣೆಯಲ್ಲಿ 21 ವರ್ಷದ ರೈತ ಮೃತಪಟ್ಟಿದ್ದಾರೆ ಮತ್ತು ಇನ್ನು ಕೆಲವರು ಗಾಯಗೊಂಡಿದ್ದಾರೆ ಎಂದು ರೈತರು ಹೇಳಿದ್ದಾರೆ. ಫೆಬ್ರವರಿ 13 ರಂದು ‘ದೆಹಲಿ ಚಲೋ’ ಮೆರವಣಿಗೆ ಪ್ರಾರಂಭವಾದ ನಂತರ ನಡೆದ ಘರ್ಷಣೆಯಲ್ಲಿ … Continued