ವಿವಿಎಸ್ ಲಕ್ಷ್ಮಣ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗುವ ಸಾಧ್ಯತೆ ; ದ್ರಾವಿಡ್ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ಗೆ ಮಾರ್ಗದರ್ಶಕ ಆಗುವ ಸಾಧ್ಯತೆ : ವರದಿ

ಭಾರತ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಸ್ಥಾನವನ್ನು ರಾಹುಲ್ ದ್ರಾವಿಡ್ ತೆರವು ಮಾಡಲು ಸಜ್ಜಾಗಿದ್ದಾರೆ. ಏಕದಿನ (ODI) ವಿಶ್ವಕಪ್ 2023 ರ ಮುಕ್ತಾಯದೊಂದಿಗೆ ದ್ರಾವಿಡ್ ಅವರ ಅಧಿಕಾರಾವಧಿ ಮುಗಿದಿದ್ದು, ಅವರು ತಮ್ಮ ಒಪ್ಪಂದವನ್ನು ನವೀಕರಿಸಲು ಉತ್ಸುಕರಾಗಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಸ್ಪೋರ್ಟ್ಸ್ ಟಾಕ್‌ಗೆ ವರದಿ ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2024 ರ … Continued

ಪ್ರಶ್ನೆಗಾಗಿ ನಗದು ಪ್ರಕರಣ :ಲೋಕಪಾಲ ನಿರ್ದೇಶನದ ಮೇರೆಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ ; ವರದಿ

ನವದೆಹಲಿ : ಸಂಸತ್ತಿನಲ್ಲಿ ಪ್ರಶ್ನೆಗಾಗಿ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಪಾಲ ನಿರ್ದೇಶನದ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಪ್ರಾಥಮಿಕ ವಿಚಾರಣೆಯನ್ನು ದಾಖಲಿಸಿದೆ ಎಂದು ವರದಿಯಾಗಿದೆ. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ “ಪ್ರಶ್ನೆಗಾಗಿ ಲಂಚ” ಆರೋಪದ ತನಿಖೆಗಾಗಿ ಕೇಂದ್ರ ತನಿಖಾ ಸಂಸ್ಥೆ ಮಹುವಾ ಮೊಯಿತ್ರಾ … Continued

ಚೀನಾದಲ್ಲಿ ಎಚ್‌9ಎನ್‌2 ಸೋಂಕು ಮಕ್ಕಳಲ್ಲಿ ಉಲ್ಬಣ : ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ : ಕೋವಿಡ್‌-19 ಬಳಿಕ ಚೀನಾದಲ್ಲಿ ಉಲ್ಬಣಕ್ಕೆ ಕಾರಣವಾಗಿರುವ ‘ಎಚ್‌9ಎನ್‌2’ (ಏವಿಯನ್‌ ಇನ್‌ಫ್ಲುಯೆಂಜಾ ವೈರಸ್‌) ಸೋಂಕು ಈಗ ವಿಶ್ವದಾದ್ಯಂತ ಆತಂಕ ಮೂಡಿಸಿದೆ. ಉತ್ತರ ಚೀನಾದಲ್ಲಿ ಕಾಣಿಸಿಕೊಂಡಿರುವ ‘ಎಚ್‌9ಎನ್‌2’ ಸೋಂಕು ಪ್ರಕರಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ. ”ಚೀನಾದ ಬೀಜಿಂಗ್‌ ಹಾಗೂ ಲಿಯಾನಿಂಗ್‌ ನಗರಗಳಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಹೆಚ್ಚಿನ … Continued

ಡೇಟಿಂಗ್ ಆ್ಯಪ್ ಕೊಲೆ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ: ಉದ್ಯಮಿ ಎಂದಿದ್ದ ಯುವಕನ ಕೊಲೆ ಮಾಡಿದ್ದ ಯುವತಿ

ರಾಷ್ಟ್ರದ ಗಮನ ಸೆಳೆದ 2018 ರಲ್ಲಿ ನಡೆದ ಟಿಂಡರ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾದ 28 ವರ್ಷದ ಯುವಕನ ಕೊಲೆ ಪ್ರಕರಣದಲ್ಲಿ ಜೈಪುರ ನ್ಯಾಯಾಲಯವು ಮೂವರಿಗೆ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಷನ್ಸ್ ನ್ಯಾಯಾಧೀಶ ಅಜಿತಕುಮಾರ ಹಿಂಗರ್ ಅವರು ತಮ್ಮ ತೀರ್ಪಿನಲ್ಲಿ, ಪ್ರಾಸಿಕ್ಯೂಷನ್ ಸಾಕ್ಷ್ಯವು ಕೊಲೆಗೆ ಮೂವರು ಕಾರಣವೆಂದು ನಿರ್ಣಾಯಕವಾಗಿ ಸಾಬೀತುಪಡಿಸಿದೆ ಎಂದು ಹೇಳಿದರು. 28 ವರ್ಷದ … Continued

ವೀಡಿಯೊ…: “ಹೆಮ್ಮೆಯ ಭಾವನೆ” ; ಬೆಂಗಳೂರಲ್ಲಿ ತೇಜಸ್ ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ | ವೀಕ್ಷಿಸಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಶನಿವಾರ ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ಗೆ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರು ಮೂಲದ ರಕ್ಷಣಾ ವಲಯದ ಸಾರ್ವಜನಿಕ ವಲಯದ ಕಂಪನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಭೇಟಿ ನೀಡಿದರು ಮತ್ತು ಅದರ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕೆಲಸವನ್ನು … Continued

ಜನ್ಮ ದಿನಾಚರಣೆಗೆ ದುಬೈಗೆ ಕರೆದೊಯ್ಯಲು ನಿರಾಕರಿಸಿದ ಪತಿ : ಮುಖಕ್ಕೆ ಪತ್ನಿ ಗುದ್ದಿದ ರಭಸಕ್ಕೆ ಗಂಡನ ಪ್ರಾಣವೇ ಹಾರಿಹೋಯ್ತು…!

ಪುಣೆ: ತನ್ನ ಜನ್ಮದಿನದ ಆಚರಣೆಗಾಗಿ ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣಕ್ಕೆ ಪತ್ನಿಯು ತನ್ನ ಗಂಡನ ಮೂಗಿಗೆ ಬಲವಾಗಿ ಗುದ್ದಿದ ಪರಿಣಾಮ ಗಂಡ ಪ್ರಾಣ ಕಳೆದುಕೊಂಡ ಘಟನೆ ಪುಣೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಣೆಯ ವನವಡಿ ಪ್ರದೇಶದಲ್ಲಿ ದಂಪತಿ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ನಿಖಿಲ್ ಖನ್ನಾ (36) ಎಂದು … Continued

ಯುರೋಪಿಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ 13 ವರ್ಷದ ಭಾರತೀಯ ಮೂಲದ ಬಾಲಕ ಈಶ್ವರ ಶರ್ಮಾ

ಆಗ್ನೇಯ ಇಂಗ್ಲೆಂಡ್‌ನ 13 ವರ್ಷದ ಭಾರತೀಯ ಮೂಲದ ಯೋಗ ಪಟು ಸ್ವೀಡನ್‌ನಲ್ಲಿ ನಡೆದ ಯುರೋಪಿಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಯುರೋಪ್ ಕಪ್ 2023 ಅನ್ನು ಗೆದ್ದಿದ್ದಾರೆ. ಕಳೆದ ವಾರಾಂತ್ಯದಲ್ಲಿ, 12-14 ವರ್ಷ ವಯಸ್ಸಿನ ಬಾಲಕರ ವಿಭಾಗದಲ್ಲಿ ಯುರೋಪ್ ಕಪ್ 2023 ಅನ್ನು ಗೆದ್ದಿದ್ದಾನೆ ಈಶ್ವರ ಶರ್ಮಾ, ಮಾಲ್ಮೊದಲ್ಲಿ ಸ್ವೀಡಿಷ್ ಯೋಗ ಸ್ಪೋರ್ಟ್ಸ್ ಫೆಡರೇಶನ್ ಸಹಯೋಗದೊಂದಿಗೆ ಇಂಟರ್ನ್ಯಾಷನಲ್ … Continued

ಪಾಕಿಸ್ತಾನದ ಸಿಂಧ್‌ನಲ್ಲಿ ಹಿಂಗ್ಲಾಜ್ ಮಾತಾ ಮಂದಿರ ನೆಲಸಮ, ಎಲ್‌ಒಸಿ ಬಳಿ ಯುನೆಸ್ಕೋ ಮಾನ್ಯತೆ ಪಡೆದ ಶಾರದಾ ಪೀಠಕ್ಕೆ ಹಾನಿ : ವರದಿ

ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವಲ್ಲಿ ಪಾಕಿಸ್ತಾನ ಯಾವಾಗಲೂ ವಿಫಲವಾಗಿದೆ. ಹಿಂದೂ ಆರಾಧನಾ ಸ್ಥಳಗಳನ್ನು ಗುರಿಯಾಗಿಸುವ ಮತ್ತೊಂದು ನಿದರ್ಶನದಲ್ಲಿ, ಪಾಕಿಸ್ತಾನ ಸರ್ಕಾರವು ಸಿಂಧ್ ಪ್ರಾಂತ್ಯದ ಹಿಂಗ್ಲಾಜ್ ಮಾತಾ ಮಂದಿರವನ್ನು (ದೇವಾಲಯ) ಮತ್ತು ನಿಯಂತ್ರಣ ರೇಖೆಯ ಬಳಿ ಶಾರದಾ ಪೀಠ ಮಂದಿರವನ್ನು (ದೇವಾಲಯ) ಕೆಡವಿದೆ. ಪಾಕಿಸ್ತಾನದ ಅಧಿಕಾರಿಗಳು ಹಿಂದೂ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಿಂಧ್ ಪ್ರಾಂತ್ಯದ ಹಿಂಗ್ಲಾಜ್ … Continued

12 ಥಾಯ್ ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್ : ಥಾಯ್ಲೆಂಡ್ ಪ್ರಧಾನಿ

ಹಮಾಸ್‌ “12 ಥಾಯ್ ಒತ್ತೆಯಾಳುಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ ಎಂದು ಥಾಯ್ಲೆಂಡ್‌ನ ಪ್ರಧಾನಿ ಸ್ರೆಟ್ಟಾ ಥಾವಿಸಿನ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ರಾಯಭಾರ ಕಚೇರಿ ಅಧಿಕಾರಿಗಳು ಬಿಡುಗಡೆಗೊಂಡ ಒತ್ತೆಯಾಳುಗಳನ್ನು ಸ್ವೀಕರಿಸುವ ಹಾದಿಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. “12 ಥಾಯ್ ಒತ್ತೆಯಾಳುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಭದ್ರತಾ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೃಢಪಡಿಸಿದೆ. ರಾಯಭಾರ ಕಚೇರಿ … Continued

ಸಂಬಳ ಕೇಳಿದ್ದಕ್ಕೆ ದಲಿತ ಯುವಕನ ಬಾಯಿಗೆ ಚಪ್ಪಲಿ ತುರುಕಿದ ಮಹಿಳೆ…..!

ಮೊರ್ಬಿ (ಗುಜರಾತ್) : ತನ್ನ ಕಂಪನಿಯಲ್ಲಿ ಹದಿನೈದು ದಿನಗಳ ಕಾಲ ಕೆಲಸ ಮಾಡುತ್ತಿದ್ದ 21 ವರ್ಷದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉದ್ಯಮಿ ಮತ್ತು ಇತರ ಆರು ಮಂದಿಯ ವಿರುದ್ಧ ಗುಜರಾತ್‌ನ ಮೊರ್ಬಿ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂಬಳ ನೀಡಲು ಒತ್ತಾಯಿಸಿದ್ದಕ್ಕಾಗಿ ಆತನ ಬಾಯಲ್ಲಿ ಚಪ್ಪಲಿ ತುರುಕಿದ ಮಹಿಳೆ ನಂತರ … Continued