ಬಿಹಾರ: ಆಗಸ್ಟ್‌ 24ರಂದು ನಿತೀಶಕುಮಾರ್ ವಿಶ್ವಾಸ ಮತ ಯಾಚನೆ

ಪಾಟ್ನಾ: ಬಿಹಾರದಲ್ಲಿ ನೂತನ ಸರ್ಕಾರ ರಚನೆ ಮಾಡಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಆಗಸ್ಟ್‌ 24ರಂದು ವಿಶ್ವಾಸ ಮತ ಯಾಚಿಸಲಿದ್ದಾರೆ. ಬಿಜೆಪಿಯೊಂದಿಗೆ ಮೃತ್ರಿ ಮುರಿದುಕೊಂಡು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ನಿತೀಶಕುಮಾರ್ ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಏಳು ಪಕ್ಷಗಳೊಂದಿಗೆ ಸೇರಿ ಬುಧವಾರವೇ ಮಹಾಘಟಬಂಧನ ಸರ್ಕಾರ ರಚನೆ ಮಾಡಿದ್ದಾರೆ. ನೂತನ ಸರ್ಕಾರದಲ್ಲಿ ನಿತೀಶಕುಮಾರ್ ಮುಖ್ಯಮಂತ್ರಿ ಹಾಗೂ ಆರ್‌ಜೆಡಿಯ … Continued

ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಪ್ರಮಾಣವಚನ

ನವದೆಹಲಿ: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನಕರ್‌ ಅವರಿಗೆ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಬೋಧಿಸಿದರು. ಉಪರಾಷ್ಟ್ರಪತಿಯು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರೂ ಆಗಿರುತ್ತಾರೆ. ಆಗಸ್ಟ್ 6 ರಂದು ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರನ್ನು ಸೋಲಿಸಿ ಧನಕರ್ ಉಪಾಧ್ಯಕ್ಷರಾಗಿ … Continued

ದೋಣಿ ದುರಂತ: ಮೂವರ ಶವ ಪತ್ತೆ, 20ಕ್ಕೂ ಹೆಚ್ಚು ಜನರ ಸಾವಿನ ಶಂಕೆ

ಬಂದಾ (ಉತ್ತರಪ್ರದೇಶ) : ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಯಮುನಾ ನದಿಯಲ್ಲಿ 40 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, ಮಹಿಳೆಯರು ಸೇರಿದಂತೆ ಕನಿಷ್ಠ 20 ಪ್ರಯಾಣಿಕರ ಸಾವಿನ ಶಂಕೆ ವ್ಯಕ್ತವಾಗಿದೆ ಎಂದು ವರದಿಗಳು ತಿಳಿಸಿವೆ. ಘಟನೆ ನಡೆದಾಗ ಬೋಟ್‌ ಮರ್ಕಾ ಘಾಟ್‌ನಿಂದ ಫತೇಪುರಕ್ಕೆ ತೆರಳುತ್ತಿತ್ತು. ವರದಿಗಳನ್ನು ನಂಬುವುದಾದರೆ, ಮಹಿಳಾ ಪ್ರಯಾಣಿಕರು ರಕ್ಷಾ ಬಂಧನವನ್ನು ಆಚರಿಸಲು … Continued

ಈ ಆಹಾರವನ್ನು ಪ್ರಾಣಿಗಳೂ ತಿನ್ನುವುದಿಲ್ಲ; ಪೊಲೀಸ್ ಮೆಸ್‌ನ​ ಕಳಪೆ ಊಟ ಹಿಡಿದು ರಸ್ತೆಯಲ್ಲಿ ನಿಂತು ಅಳುತ್ತ ಜನರ ಗಮನ ಸೆಳೆದ ಕಾನ್​ಸ್ಟೆಬಲ್ | ವೀಕ್ಷಿಸಿ

ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಬುಧವಾರ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಮೆಸ್‌ನಲ್ಲಿ ನೀಡಲಾದ ಆಹಾರದ ಕಳಪೆ ಗುಣಮಟ್ಟದ ಬಗ್ಗೆ ರಸ್ತೆಯ ಮೇಲೆ ನಿಂತು ಅಳುತ್ತಾ ಜನರ ಗಮನವನ್ನು ಸೆಳೆದಿದ್ದಾರೆ..! ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಕಾನ್‌ಸ್ಟೇಬಲ್ ಮನೋಜ್ ಕುಮಾರ್ ಅವರು ರೊಟ್ಟಿ, ದಾಲ್ ಮತ್ತು ಅನ್ನದ ತಟ್ಟೆಯೊಂದಿಗೆ ರಸ್ತೆಯಲ್ಲಿ ಅಳುತ್ತಿರುವಾಗ ಹಿರಿಯ ಅಧಿಕಾರಿಯೊಬ್ಬರು … Continued

2020ರ ಜಾನುವಾರು ಕಳ್ಳಸಾಗಣೆ ಪ್ರಕರಣ: ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸಹಾಯಕ ಅನುಬ್ರತಾ ಮೊಂಡಲ್ ಬಂಧಿಸಿದ ಸಿಬಿಐ

ಕೋಲ್ಕತ್ತಾ: ಜಾನುವಾರು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಸಮನ್ಸ್‌ಗಳನ್ನು ಪದೇ ಪದೇ ತಪ್ಪಿಸಿಕೊಂಡ ನಂತರ ಹಿರಿಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅನುಬ್ರತ ಮೊಂಡಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಹಾಗೂ ಟಿಎಂಸಿಯ ಬಿರ್ಭೂಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಲ್ ಅವರನ್ನು 2020 ರ ಜಾನುವಾರು … Continued

ಕಾಶ್ಮೀರದ ರಾಜೌರಿಯ ಸೇನಾ ನೆಲೆ ಮೇಲೆ ಉಗ್ರರ ಆತ್ಮಾಹುತಿ ದಾಳಿ; ಇಬ್ಬರು ಉಗ್ರರ ಹತ್ಯೆ, ಮೂವರು ಸೈನಿಕರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿಯಿಂದ 25 ಕಿ.ಮೀ ದೂರದಲ್ಲಿ ನಡೆದ ಇಬ್ಬರು ಉಗ್ರರು ಆರ್ಮಿ ಕಂಪನಿ ಕಾರ್ಯಾಚರಣಾ ನೆಲೆಯ ಮೇಲೆ ಆತ್ಮಾಹುತಿ ದಾಳಿ (Suicide Attack) ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿರುವ ಸೇನಾ ಶಿಬಿರದ ಮೇಲೆ ಆತ್ಮಹತ್ಯಾ ದಾಳಿಗೆ ಯತ್ನಿಸಿದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಗುರುವಾರ ಹೊಡೆದುರುಳಿಸಿದೆ. ಈ ಕಾರ್ಯಾಚರಣೆ ವೇಳೆ … Continued

9 ತಿಂಗಳ ತುಂಬು ಗರ್ಭಿಣಿಯಾಗಿದ್ದಾಗ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಆಟವಾಡಿ ಪದಕ ಗೆದ್ದ ಹರಿಕಾ ದ್ರೋಣವಲ್ಲಿ…!

ನವದೆಹಲಿ: ಭಾರತದ ಸ್ಟಾರ್ ಚೆಸ್ ಆಟಗಾರ್ತಿ ಹರಿಕಾ ದ್ರೋಣವಲ್ಲಿ ಅವರು 44ನೇ ಚೆಸ್ ಒಲಿಂಪಿಯಾಡ್ ಮಹಿಳೆಯರ ವಿಭಾಗದಲ್ಲಿ ಕೊನೇರು ಹಂಪಿ, ಆರ್ ವೈಶಾಲಿ, ತಾನಿಯಾ ಸಚ್‌ದೇವ್ ಹರಿಕಾ ದ್ರೋಣವಲ್ಲಿ ಮತ್ತು ಭಕ್ತಿ ಕುಲಕರ್ಣಿ ಅವರನ್ನು ಒಳಗೊಂಡ ಭಾರತ ಎ ತಂಡಕ್ಕೆ ಮತ್ತೊಂದು ಗರಿಯನ್ನು ಸೇರಿಸಿದ್ದಾರೆ. ಚೊಚ್ಚಲ ಮಗುವಿನೊಂದಿಗೆ ಗರ್ಭಿಣಿಯಾಗಿರುವ ಗ್ರ್ಯಾಂಡ್‌ಮಾಸ್ಟರ್ ಹರಿಕಾ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ … Continued

ಕೇರಳದ ಮಲಪ್ಪುರಂನಲ್ಲಿ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾದ ತಾಯಿ-ಮಗ…!

ಮಲಪ್ಪುರಂ: ತಾಯಿ ಹಾಗೂ ಮಗ ಒಟ್ಟಿಗೇ ಕೋಚಿಂಗ್ ಹೋಗಿ, ಪಬ್ಲಿಕ್ ಸರ್ವಿಸ್ ಕಮಿಷನರ್(ಪಿಎಸ್‌ಸಿ) ಪರೀಕ್ಷೆ ಬರೆದು ಪಾಸಾಗಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ. ತಾಯಿ ಮಗನ ಸಾಧನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಲಪ್ಪುರಂ ಮೂಲದ 42 ವರ್ಷದ ಬಿಂದು ಹಾಗೂ ಅವರ ಮಗ 24 ವರ್ಷದ ವಿವೇಕ್ ಒಟ್ಟಿಗೇ ಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ. ಬಿಂದು ಲೋವರ್ … Continued

ಸ್ವಾತಂತ್ರ್ಯ ದಿನದಂದು 21-ಗನ್ ಸೆಲ್ಯೂಟ್‌ಗೆ ಸ್ವದೇಶಿ ಬಂದೂಕು ಬಳಕೆ: ರಕ್ಷಣಾ ಸಚಿವಾಲಯ

ನವದೆಹಲಿ: ಆತ್ಮನಿರ್ಭರ ಭಾರತದ ಕನಸನ್ನು ಬಲಪಡಿಸುವ ಪ್ರಯತ್ನದಲ್ಲಿ, 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಧ್ಯುಕ್ತ 21-ಗನ್ ಸೆಲ್ಯೂಟ್‌ಗೆ ಭದ್ರತಾ ಪಡೆಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಬಂದೂಕುಗಳನ್ನು ಬಳಸುತ್ತವೆ ಎಂದು ಭಾರತದ ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಹೇಳಿದ್ದಾರೆ.. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದೆ ನಾವು ಬ್ರಿಟಿಷ್ ಒಂದು ಪೌಂಡ್ ಗನ್ ಅನ್ನು ಬಳಸುತ್ತಿದ್ದೆವು, ಆದರೆ … Continued

ಜಾಗತಿಕ ಕದನ ವಿರಾಮಕ್ಕಾಗಿ ಪ್ರಧಾನಿ ಮೋದಿ ಸೇರಿದಂತೆ 3 ನಾಯಕರ ನೇತೃತ್ವದಲ್ಲಿ ಆಯೋಗದ ರಚನೆ ಪ್ರಸ್ತಾಪಿಸಿದ ಮೆಕ್ಸಿಕನ್ ಅಧ್ಯಕ್ಷ

ನವದೆಹಲಿ: ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ವಿಶ್ವಸಂಸ್ಥೆಗೆ ಲಿಖಿತ ಪ್ರಸ್ತಾವನೆಯನ್ನು ಸಲ್ಲಿಸಲು ಯೋಜಿಸಿದ್ದು, ವಿಶ್ವವನ್ನು ಶಾಂತಿಯನ್ನು ಉತ್ತೇಜಿಸಲು ಐದು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಆಯೋಗ ರಚಿಸುವ ಮಾತನ್ನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮೂವರು ವಿಶ್ವ ನಾಯಕರ ಹೆಸರು ಸೂಚಿಸಿದ್ದಾರೆ ಎಂದು ಎಂಎಸ್ಎನ್ ನ್ಯೂಸ್ ವರದಿ ಮಾಡಿದೆ. ನಾನು … Continued