ಅಂಕೋಲಾ | ವಿದ್ಯುತ್ ತಂತಿ ತಗುಲಿ ಯುವಕ ಸಾವು

ಅಂಕೋಲಾ: ನಡೆದುಕೊಂಡು ಹೋಗುತ್ತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ (Electric Shock)‌ ಯುವಕನೊಬ್ಬ ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾದ ದಂಡೆಭಾಗದಲ್ಲಿ ನಡೆದಿದೆ ಎಂದು ವರದಿಯಾಗಿದೆ. ತಾಲೂಕಿನ ಅವರ್ಸಾ ದಂಡೇಬಾಗ ಬೇಟೆನಾಸ ದೇವಾಲಯದ ಸಮೀಪದ ನಿವಾಸಿ ಮಹಾಂತೇಶ ದೇವೇಂದ್ರ ಬಾನಾವಳಿಕರ(25) ಮೃತ ಯುವಕ ಎಂದು ಗುರುತಿಸಲಾಗಿದೆ. ಗುರುವಾರ ಅವರ್ಸಾದ … Continued

ಅಮೆರಿಕದ ಯಹೂದಿ ವಸ್ತುಸಂಗ್ರಹಾಲಯದ ಹೊರಗೆ ಗುಂಡಿನ ದಾಳಿ; ಇಬ್ಬರು ಇಸ್ರೇಲಿ ರಾಯಭಾರ ಕಚೇರಿ ಸಿಬ್ಬಂದಿ ಹತ್ಯೆ

ವಾಷಿಂಗ್ಟನ್ : “ಯೆಹೂದ್ಯ ವಿರೋಧಿ ಭಯೋತ್ಪಾದನೆಯ ಕೃತ್ಯ”ದಲ್ಲಿ, ಬುಧವಾರ ರಾತ್ರಿ (ಸ್ಥಳೀಯ ಸಮಯ) ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಯಹೂದಿ ವಸ್ತುಸಂಗ್ರಹಾಲಯದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಇಸ್ರೇಲಿ ರಾಯಭಾರ ಕಚೇರಿಗೆ ಸಂಬಂಧಿಸಿದ ಇಬ್ಬರು ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಎಲಿಯಾಸ್ ರೊಡ್ರಿಗಸ್ ಎಂದು ಗುರುತಿಸಲಾದ 30 ವರ್ಷದ ಶಂಕಿತನನ್ನು ಬಂಧಿಸಲಾಗಿದೆ. ನಂತರ … Continued

ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಮೂವರು ಸಾವು

ಬೆಂಗಳೂರು: ಬೆಂಗಳೂರಿನ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ನೀರು ತುಂಬಿದ್ದ ನೆಲಮಾಳಿಗೆಯಲ್ಲಿ ವೃದ್ಧ ಮತ್ತು ಬಾಲಕ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 63 ವರ್ಷದ ಮನಮೋಹನ ಕಾಮತ್ ಅವರು ನೆಲಮಾಳಿಗೆಯಿಂದ ನೀರನ್ನು ಹೊರಹಾಕಲು ಬಾಹ್ಯ ಮೋಟಾರ್ ಬಳಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಈ ವೇಳೆ ವಿದ್ಯುತ್‌ ಪ್ರವಾಹಕ್ಕೆ ಸಿಲುಕಿದ ನೆಲಮಾಳಿಗೆಯೊಳಗೆ ನಿಂತಿದ್ದ ದಿನೇಶ (12) … Continued

ಸಿಗರೇಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಸಾಫ್ಟ್‌ವೇರ್ ಉದ್ಯೋಗಿಯ ಮೇಲೆ ಕಾರು ಹರಿಸಿದ ಬೆಂಗಳೂರಿನ ವ್ಯಕ್ತಿ….!

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಹಿಟ್ ಅಂಡ್ ರನ್ ಘಟನೆಯಲ್ಲಿ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಸಾವಿಗೀಡಾಗಿದ್ದು, ಅವರ ಸ್ನೇಹಿತ ಗಾಯಗೊಂಡಿದ್ದಾರೆ. ಸಿಗರೇಟ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳವೇ ಇದಕ್ಕೆ ಕಾರಣ ಎನ್ನಲಾಗಿದೆ. ಮೇ 10 ರ ಮುಂಜಾನೆ ಈ ಘಟನೆ ನಡೆದಿದೆ ಎನ್ನಲಾಗಿದ್ದು ಮೃತ ಸಂಜಯ ಮತ್ತು ಅವರ ಸ್ನೇಹಿತ … Continued

ಜಮಖಂಡಿಯಲ್ಲಿ ಘೋರ ದುರಂತ ; ತಾಳಿ ಕಟ್ಟಿದ 15-20 ನಿಮಿಷದಲ್ಲೇ ಮದುಮಗ ಸಾವು…!

ಬಾಗಲಕೋಟೆ : ತಾಳಿ ಕಟ್ಟಿದ 15- 20 ನಿಮಿಷದಲ್ಲಿ ವರ (Groom) ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ತಾಳಿಕಟ್ಟಿ ಅಕ್ಷತೆ ಬಿದ್ದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮದುಮಗ ಕುಸಿದುಬಿದ್ದಿದ್ದಾರೆ. ಇದೆಲ್ಲವೂ ಎರಡೂ ಕುಟುಂಬಗಳು ಹಾಗೂ ಆಪ್ತರ … Continued

ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

ಬಳ್ಳಾರಿ: ಕುರಿ ಮೇಯಿಸಲು ಹೋದಾಗ ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಮೃತಪಟ್ಟ ಘಟನೆಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ. ಮೃತರನ್ನು ರಾರಾವಿ ಗ್ರಾಮದ ಭೀರಪ್ಪ (45), ಸುನೀಲ (26) ಎಂದು ಗುರುತಿಸಲಾಗಿದೆ. ಸಿಡಿಲು ಬಡಿದ ಪರಿಣಾಮ ವಿನೋದ (14) … Continued

‘ಕಾಮಿಡಿ ಕಿಲಾಡಿಗಳು-3’ ವಿಜೇತ ರಾಕೇಶ ಪೂಜಾರಿ ನಿಧನ

ಉಡುಪಿ: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ ಪೂಜಾರಿ ( 33) ಅವರು ಸೋಮವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ‌ ನಿಟ್ಟೆಯಲ್ಲಿ ಪರಿಚಯಸ್ಥರ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ಅವರಿಗೆ ಹೃದಯಾಘಾತವಾಗಿದ್ದು, ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಇಂದು, ಸೋಮವಾರ (ಮೇ 12) ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಇದ್ದಕ್ಕಿದ್ದಂತೆ ಲೋ … Continued

ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಶನಿವಾರ (ಮೇ 11) ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಜಮೀನಿನಲ್ಲಿ ಮೇವು ತೆಗೆದುಕೊಂಡು ವಾಪಸ್ ಬರುವಾಗ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಗವ್ವ ಜೀರಗಿವಾಡ ಮತ್ತು ಕಲಾವತಿ ಜೀರಗಿವಾಡ ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ … Continued

ಮದುವೆಯಲ್ಲಿ ತಂದೂರಿ ರೊಟ್ಟಿ ವಿಚಾರಕ್ಕೆ ಹೊಡೆದಾಟ : ಇಬ್ಬರು ಹುಡುಗರ ಕೊಲೆ, 6 ಜನರ ಬಂಧನ

ಅಮೇಥಿ: ಅಮೇಥಿ ಜಿಲ್ಲೆಯಲ್ಲಿ ಮದುವೆಯ ಹಬ್ಬದ ಸಂದರ್ಭದಲ್ಲಿ ತಂದೂರಿ ರೊಟ್ಟಿ ನೀಡುವ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುಗಿ, ಓರ್ವ ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಸಾವುಗಳಿಗೆ ಸಂಬಂಧಿಸಿದಂತೆ ಇದುವರೆಗೆ ಆರು ಜನರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೇ 3 ರ ರಾತ್ರಿ ಸರೈ … Continued

ಆರತಿ ವೇಳೆ ಬೆಂಕಿ ತಗುಲಿ ಗಾಯ ; ಕೇಂದ್ರದ ಮಾಜಿ ಸಚಿವೆ ಗಿರಿಜಾ ವ್ಯಾಸ್‌ ನಿಧನ

ಉದಯಪುರ: ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್ (79) ಸುಟ್ಟ ಗಾಯಗಳಿಂದಾಗಿ ಗುರುವಾರ (ಮೇ 1) ರಾಜಸ್ಥಾನದ ಉದಯಪುರದಲ್ಲಿ ನಿಧನರಾದರು. ಮಾರ್ಚ್ 31ರಂದು ಉದಯಪುರದ ತಮ್ಮ ಮನೆಯಲ್ಲಿ ‘ಆರತಿ’ ಮಾಡುತ್ತಿದ್ದಾಗ ಬೆಂಕಿ ತಗುಲಿ ಅವರಿಗೆ ಸುಟ್ಟ ಗಾಯಗಳಾಗಿದ್ದವು. ವ್ಯಾಸ್ ಅವರನ್ನು ಉದಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಪ್ರಾಥಮಿಕ … Continued