ಹಾರ್ಮುಜ್ ಜಲಸಂಧಿ ಸಂಪೂರ್ಣ ಓಪನ್‌ : ಇರಾನಿನಿಂದ ಮಹತ್ವದ ಘೋಷಣೆ ; ಜಾಗತಿಕ ತೈಲ ಮಾರುಕಟ್ಟೆ ನಿರಾಳ

ತೆಹ್ರಾನ್/ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಉದ್ವಿಗ್ನತೆಯ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಲೆಬನಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ, ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ವಾಣಿಜ್ಯ ಹಡಗುಗಳ ಸಂಚಾರಕ್ಕಾಗಿ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ ಎಂದು ಇರಾನ್ ಘೋಷಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು … Continued

ಅಮೆರಿಕದಿಂದ ʼಹಾರ್ಮುಜ್ʼ ದಿಗ್ಬಂಧನ : ಇರಾನಿಗೆ ದಿನಕ್ಕೆ ಅಂದಾಜು 4,000 ಕೋಟಿ ರೂ. ನಷ್ಟದ ಭೀತಿ…!

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕವು ಇರಾನ್‌ನ ಬಂದರುಗಳಿಗೆ ಹಾಗೂ ಆಯಕಟ್ಟಿನ ಪ್ರದೇಶವಾದ ‘ಹಾರ್ಮುಜ್ ಜಲಸಂಧಿ’ಗೆ (Strait of Hormuz) ನೌಕಾ ದಿಗ್ಬಂಧನ ವಿಧಿಸಲು ಮುಂದಾಗಿದೆ. ಈ ಕ್ರಮದಿಂದ ಇರಾನ್‌ಗೆ ಪ್ರತಿದಿನ ಸುಮಾರು 435 ಮಿಲಿಯನ್ ಡಾಲರ್ (ಅಂದಾಜು 4,081 ಕೋಟಿ ರೂಪಾಯಿ) ಆರ್ಥಿಕ ನಷ್ಟ ಉಂಟಾಗಲಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ … Continued

ಪ್ರಧಾನಿ ಮೋದಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್: ಹಾರ್ಮುಜ್ ಜಲಸಂಧಿ-ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚೆ

ನವದೆಹಲಿ: ಇರಾನ್‌ ಮತ್ತು ಅಮೆರಿಕದ ನಡುವೆ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ದೂರವಾಣಿ ಮೂಲಕ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಸುಮಾರು 40 ನಿಮಿಷಗಳ ಕಾಲ ನಡೆದ ಈ ಸಂಭಾಷಣೆಯಲ್ಲಿ ಪಶ್ಚಿಮ ಏಷ್ಯಾದ ಪ್ರಸ್ತುತ ಸ್ಥಿತಿಗತಿ ಮತ್ತು ಭಾರತ-ಅಮೆರಿಕ … Continued

ಇರಾನ್ ಮೇಲೆ ಅಮೆರಿಕದ ಕಡಲ ದಿಗ್ಬಂಧನ ; ಹಾರ್ಮುಜ್ ಜಲಸಂಧಿಯಲ್ಲಿ ಟ್ರಂಪ್ ಸಮರ ವ್ಯೂಹ: ‘ಮಹಾ ಅಸ್ತ್ರ’ಗಳ ನಿಯೋಜನೆ

ನವದೆಹಲಿ: ಇರಾನ್ ವಿರುದ್ಧದ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಅಮೆರಿಕದ ಸಶಸ್ತ್ರ ಪಡೆಗಳು ಇರಾನಿನ ಬಂದರು ಮತ್ತು ಕರಾವಳಿ ಪ್ರದೇಶಗಳ ಸುತ್ತ ಕಡಲ ದಿಗ್ಬಂಧನ (Naval Blockade) ವಿಧಿಸಿವೆ. ಈ ಕಾರ್ಯಾಚರಣೆಗಾಗಿ ಅಮೆರಿಕವು 15ಕ್ಕೂ ಹೆಚ್ಚು ಅತ್ಯಾಧುನಿಕ ಯುದ್ಧನೌಕೆಗಳನ್ನು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಿದೆ. ಈ ಕಾರ್ಯಾಚರಣೆಯ ಪ್ರಮುಖ ಭಾಗವಾಗಿ ಅಮೆರಿಕದ ಯುಎಸ್‌ಎಸ್‌ (USS) ಟ್ರಿಪೋಲಿ (LHA 7) … Continued

ಇರಾನಿಗೆ ಶಾಕ್‌ ನೀಡಿದ ಅಮೆರಿಕ : ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್ ಮಾಡಲು ಟ್ರಂಪ್ ಆದೇಶ…!

ವಾಷಿಂಗ್ಟನ್: ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಇರಾನ್ ತನ್ನ ಪರಮಾಣು ಹಠವನ್ನು ಬಿಡದ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಯಕಟ್ಟಿನ ಪ್ರದೇಶವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ನೌಕಾಪಡೆಯ ಮೂಲಕ ಬಂದ್ ಮಾಡಲು (Blockade) ಅದೇಶಿಸಿದ್ದಾರೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸುದೀರ್ಘವಾಗಿ ನಡೆದ ಮಾತುಕತೆಗಳು ಸಕಾರಾತ್ಮಕವಾಗಿ ಸಾಗಿದ್ದವು ಎಂದು ಟ್ರಂಪ್ ಒಪ್ಪಿಕೊಂಡಿದ್ದಾರೆ. ಆದರೂ, … Continued

ಶೇ.50 ರಷ್ಟು ಸುಂಕ ಹೇರಿಕೆ ; ಇರಾನಿಗೆ ಶಸ್ತ್ರಾಸ್ತ್ರ ಪೂರೈಸುವ ರಾಷ್ಟ್ರಗಳಿಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಪರ ನಿಲ್ಲುವ ರಾಷ್ಟ್ರಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್‌ಗೆ ಮಿಲಿಟರಿ ಉಪಕರಣಗಳನ್ನು ಪೂರೈಸುವ ಯಾವುದೇ ದೇಶವು ಅಮೆರಿಕಕ್ಕೆ ರಫ್ತು ಮಾಡುವ ಎಲ್ಲಾ ಸರಕುಗಳ ಮೇಲೆ ಶೇ. 50 ರಷ್ಟು ಸುಂಕವನ್ನು (Tariff) … Continued

ಹಾರ್ಮುಜ್ ಜಲ ಮಾರ್ಗ ತೆರೆಯಲು ಒಪ್ಪಿದ ಇರಾನ್‌ ; ಎರಡು ವಾರಗಳ ಕಾಲ ಕದನ ವಿರಾಮಕ್ಕೆ ಸಮ್ಮತಿಸಿದ ಅಮೆರಿಕ

ವಾಷಿಂಗ್ಟನ್/ತೆಹ್ರಾನ್ : ಇಡೀ ನಾಗರಿಕತೆಯೇ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಸಮ್ಮತಿಸಿದ್ದಾರೆ. ಈ ಮೂಲಕ ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳ ಮೇಲಿನ ದಾಳಿಯನ್ನು ಅಮೆರಿಕ ಸದ್ಯಕ್ಕೆ ಸ್ಥಗಿತಗೊಳಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು … Continued

“ಇಡೀ ನಾಗರಿಕತೆಯೇ ಇಂದು ಅಂತ್ಯವಾಗಲಿದೆ”: ಇರಾನಿಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ; ʼಮನೋರೋಗಿʼ ಎಂದು ಕರೆದ ಇರಾನ್‌

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದು, “ಇಂದು ರಾತ್ರಿ ಇಡೀ ನಾಗರಿಕತೆಯೇ ನಾಶವಾಗಲಿದೆ” ಎಂದು ಹೇಳಿದ್ದಾರೆ. ತಮ್ಮ ‘ಟ್ರುತ್ ಸೋಶಿಯಲ್’ (Truth Social) ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, “ಒಂದು ಇಡೀ ನಾಗರಿಕತೆ ಇಂದು ರಾತ್ರಿ ಅಂತ್ಯವಾಗಲಿದೆ, ಅದು ಮತ್ತೆ ಎಂದಿಗೂ ಮರಳಿ ಬರುವುದಿಲ್ಲ. ಇದು ಸಂಭವಿಸುವುದು … Continued

ಇರಾನ್ ಭದ್ರ ಕೋಟೆಯೊಳಗೆ ಅಮೆರಿಕದ ಅದ್ಭುತ ಕಾರ್ಯಾಚರಣೆ : ಶತ್ರುಗಳ ನೆಲದಲ್ಲಿ ಸಿಲುಕಿದ್ದ ಪೈಲಟ್‌ಗಳನ್ನು ರಕ್ಷಿಸಿದ್ದೇ ರೋಚಕ…!

ವಾಷಿಂಗ್ಟನ್‌ : “ನಾವು ಅವನನ್ನು ಮರಳಿ ಕರೆತಂದಿದ್ದೇವೆ!” – ಇರಾನ್‌ನ ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಅಮೆರಿಕದ ಎಫ್-15 (F-15) ಯುದ್ಧ ವಿಮಾನದ ಸಿಬ್ಬಂದಿಯನ್ನು ಸಾಹಸಮಯವಾಗಿ ರಕ್ಷಿಸಿದ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ವಿಶ್ವದ ಅತ್ಯಂತ ಮಾರಕ ಆಯುಧಗಳು ಮತ್ತು ನೂರಾರು ವಿಶೇಷ ಪಡೆಗಳ ನೆರವಿನೊಂದಿಗೆ ಅಮೆರಿಕವು ಇರಾನ್‌ ನೆಲದಲ್ಲಿ ಈ “ಚಮತ್ಕಾರಿಕ” ಕಾರ್ಯಾಚರಣೆ … Continued

ಅಮೆರಿಕದ ದಾಳಿಯಲ್ಲಿ ಇರಾನಿನ ಹಲವು ಉನ್ನತ ಸೇನಾಧಿಕಾರಿಗಳು ಸಾವು ಎಂದ ಟ್ರಂಪ್‌ ; ವಿಡಿಯೊ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್ : ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಅಮೆರಿಕ “ಬೃಹತ್ ದಾಳಿ” ನಡೆಸಿದ್ದು, ಇದರಲ್ಲಿ ಇರಾನ್‌ನ ಹಲವಾರು ಉನ್ನತ ಸೇನಾ ಅಧಿಕಾರಿಗಳು ಹತರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಶನಿವಾರ (ಅಮೆರಿಕ ಕಾಲಮಾನ) ತಮ್ಮ ‘ಟ್ರುತ್ ಸೋಷಿಯಲ್’ (Truth Social) ಜಾಲತಾಣದಲ್ಲಿ ಅವರು ಈ  ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದಾಳಿಯ ನಂತರದ ದೃಶ್ಯಾವಳಿ ಎನ್ನಲಾದ … Continued