ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು ; ಟ್ರಂಪ್ ಜೊತೆಗಿನ ಮಾತುಕತೆ ವೇಳೆ ಭಾರತದ ನಿಲುವು ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ತೈಲ ಹಾಗೂ ಇಂಧನ ಹಡಗುಗಳ ಸಂಚಾರಕ್ಕೆ ಇರಾನ್ ಹೇರಿರುವ ನಿರ್ಬಂಧಗಳ ನಡುವೆ, ಅತ್ಯಂತ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಹಡಗುಗಳ ಸಂಚಾರಕ್ಕೆ ಮುಕ್ತವಾಗಿಡುವ ಪ್ರಾಮುಖ್ಯತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಚರ್ಚಿಸಿದರು. … Continued

ಇರಾನಿನ ವಿದ್ಯುತ್ ಸ್ಥಾವರಗಳ ಮೇಲೆ ಸದ್ಯ ದಾಳಿ ಮಾಡಲ್ಲ ಎಂದ ಟ್ರಂಪ್‌ ; ಜಾಗತಿಕ ತೈಲ ಬೆಲೆಯಲ್ಲಿ 14% ಕುಸಿತ…!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ನಡೆಸಬೇಕಿದ್ದ ಮಿಲಿಟರಿ ದಾಳಿಯನ್ನು ಕನಿಷ್ಠ ಐದು ದಿನಗಳ ಕಾಲ ಮುಂದೂಡುವಂತೆ ಅಮೆರಿಕ ಸೇನೆಗೆ ಸೂಚನೆ ನೀಡಿದ ಬೆನ್ನಲ್ಲೇ ಸೋಮವಾರ ಜಾಗತಿಕ ಕಚ್ಚಾ ತೈಲ ಬೆಲೆಗಳು ಶೇಕಡಾ 14 ರಷ್ಟು ಭಾರಿ ಕುಸಿತ ಕಂಡಿವೆ. ಕಳೆದ ಎರಡು ದಿನಗಳಿಂದ … Continued

ಹಾರ್ಮುಜ್ ಜಲಸಂಧಿ ಉಳಿದವರಿಗೆ ತೆರೆದಿದೆ, ಶತ್ರುಗಳಿಗೆ ಮಾತ್ರ ಬಂದ್ ; ಅಮೆರಿಕ ಎಚ್ಚರಿಕೆಯ ನಂತರ ಇರಾನ್‌

ತೆಹ್ರಾನ್: ಇರಾನ್‌ ಸಂಘರ್ಷದಿಂದ ಕಚ್ಚಾ ತೈಲದ ಬಗ್ಗೆ ಜಾಗತಿಕವಾಗಿ ಅನಿಶ್ಚಿತತೆ ಉಂಟಾಗಿರುವ ಬೆನ್ನಲ್ಲೇ, ಇರಾನ್ ಭಾನುವಾರ ಮಹತ್ವದ ಹೇಳಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯು (Strait of Hormuz) ತೆರೆದಿದೆ, ಆದರೆ ಅದು ಇರಾನ್ ಶತ್ರುಗಳಿಗೆ ಮಾತ್ರ ಮುಚ್ಚಲ್ಪಟ್ಟಿದೆ ಎಂದು ಇರಾನ್ ತಿಳಿಸಿದೆ. ವಿದೇಶಿ ಹಡಗುಗಳು ‘ಸುರಕ್ಷತೆ ಮತ್ತು ಭದ್ರತೆ’ಗಾಗಿ ಇರಾನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದರೆ, ಈ … Continued

48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ವಿದ್ಯುತ್‌ ಸ್ಥಾವರಗಳ ಮೇಲೆ ದಾಳಿ ; ಇರಾನಿಗೆ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್/ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಶ್ವದ ತೈಲ ಪೂರೈಕೆಯ ಪ್ರಮುಖ ಕೇಂದ್ರವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಕೂಡಲೇ ಸಂಪೂರ್ಣವಾಗಿ ತೆರೆಯಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ … Continued

ಇರಾನ್-ಅಮೆರಿಕ ಯುದ್ಧ : ಇರಾನಿನ ಖಾರ್ಗ್ ದ್ವೀಪದ ಸೇನಾ ನೆಲೆಗಳು ಧ್ವಂಸ ; ಡೊನಾಲ್ಡ್ ಟ್ರಂಪ್ ಘೋಷಣೆ

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ನ ತೈಲ ರಫ್ತಿನ ಪ್ರಮುಖ ಕೇಂದ್ರವಾದ ಖಾರ್ಗ್ ದ್ವೀಪದ (Kharg Island) ಮೇಲಿರುವ ಎಲ್ಲಾ ಸೇನಾ ಗುರಿಗಳನ್ನು ಅಮೆರಿಕದ ಪಡೆಗಳು “ಸಂಪೂರ್ಣವಾಗಿ ಧ್ವಂಸಗೊಳಿಸಿವೆ” ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸಿದ್ದಾರೆ. ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಯನ್ನು ನಡೆಸಿದೆ … Continued

50 ವರ್ಷಗಳ ಬಳಿಕ ಅಮೆರಿಕದಲ್ಲಿ ಮೊದಲ ಬೃಹತ್ ತೈಲ ಸಂಸ್ಕರಣಾ ಘಟಕ : ಭಾರತದ ರಿಲಯನ್ಸ್ ಜೊತೆ $300 ಬಿಲಿಯನ್ ಮೆಗಾ ಒಪ್ಪಂದ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೂಡಿಕೆಯ ನೆರವಿನೊಂದಿಗೆ, ಅಮೆರಿಕವು ಕಳೆದ 50 ವರ್ಷಗಳಲ್ಲಿ ತನ್ನ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು (Oil Refinery) ಹೊಂದಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಈ ಕುರಿತು ಮಂಗಳವಾರ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ ‘ಅಮೆರಿಕಾ ಫಸ್ಟ್ ರಿಫೈನಿಂಗ್’ ಸಂಸ್ಥೆಯು ಅಮೆರಿಕದ 50 ವರ್ಷಗಳ … Continued

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ಜಾಗತಿಕ ತೈಲ ಬೆಲೆಯಲ್ಲಿ ಭಾರಿ ಕುಸಿತ

ಇರಾನ್ ಜೊತೆಗಿನ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ಮಂಗಳವಾರ ಜಾಗತಿಕ ತೈಲ ಬೆಲೆಗಳು ತೀವ್ರವಾಗಿ ಕುಸಿದಿವೆ. ನಡೆಯುತ್ತಿರುವ ಇರಾನ್‌-ಅಮೆರಿಕ ಸಂಘರ್ಷದ ವೇಳೆ ಅಂತಾರಾಷ್ಟ್ರೀಯ ತೈಲ ಮಾನದಂಡವಾದ ‘ಬ್ರೆಂಟ್ ಕ್ರೂಡ್’ ಬೆಲೆ ಪ್ರತಿ ಬ್ಯಾರೆಲ್‌ಗೆ $100 ದಾಟಿ ಭಾರಿ ಏರಿಕೆ ಕಂಡ ಮರುದಿನವೇ ಈ ಕುಸಿತ ಸಂಭವಿಸಿದೆ.  ಬೆಲೆಗಳು … Continued

ಪರ್ಷಿಯನ್ ಕೊಲ್ಲಿಯಲ್ಲಿ ಇರಾನಿನ ಮತ್ತೊಂದು ಯುದ್ಧನೌಕೆ ಮೇಲೆ ಅಮೆರಿಕ ದಾಳಿ ; ವಿಡಿಯೋ ವೈರಲ್

ನವದೆಹಲಿ: ಅಮೆರಿಕದ ಮಿಲಿಟರಿ ದಾಳಿಯಿಂದಾಗಿ ಇರಾನ್‌ನ ನೌಕಾಪಡೆಯ ಹಡಗೊಂದು ಸಮುದ್ರದ ಮಧ್ಯೆ ಸ್ಫೋಟಗೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪರ್ಷಿಯನ್ ಗಲ್ಫ್‌ನ ‘ಪೋರ್ಟ್‌ ಲೆಂಗೆಹ್’ (Bandar Lengeh) ಸಮೀಪ ಈ ಘಟನೆ ನಡೆದಿದೆ ಎಂದು ರಕ್ಷಣಾ ವ್ಯವಹಾರಗಳ ಮೇಲೆ ನಿಗಾ ಇಡುವ ಹಲವಾರು ಸಾಮಾಜಿಕ ಜಾಲತಾಣದ ಅಕೌಂಟ್ಸ್‌ಗಳು ವರದಿ ಮಾಡಿವೆ. ಈ ವಿಡಿಯೋದಲ್ಲಿರುವ ಹಡಗು ಇಸ್ಲಾಮಿಕ್ … Continued

ಇರಾನ್‌ ಯುದ್ಧ ; ಭಾರತವು 30 ದಿನಗಳ ಕಾಲ ರಷ್ಯಾದಿಂದ ತೈಲ ಖರೀದಿಸಲು ಆಕ್ಷೇಪವಿಲ್ಲ ಎಂದ ಅಮೆರಿಕ

ನವದೆಹಲಿ: ಇರಾನ್‌ ಸಂಘರ್ಷದ ನಡುವೆ ಭಾರತದ ತೈಲ ಸಂಸ್ಕರಣಾ ಘಟಕಗಳು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಲು ಅಮೆರಿಕದ ಹಣಕಾಸು ಇಲಾಖೆಯು 30 ದಿನಗಳ ಕಾಲ ‘ತಾತ್ಕಾಲಿಕ ವಿನಾಯಿತಿ’ (Waiver) ನೀಡುವುದಾಗಿ ಹೇಳಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಅಧ್ಯಕ್ಷ ಟ್ರಂಪ್ ಅವರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು … Continued

ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕಕ್ಕೆ ಎಷ್ಟು ವೆಚ್ಚವಾಗುತ್ತದೆ ಗೊತ್ತೆ..? ಯುದ್ಧದಿಂದಾಗುವ ಖರ್ಚು ಸುಮಾರು ₹18,87,00,00,00,000…!

ಅಮೆರಿಕ ಇರಾನ್‌ ಜೊತೆ ಯುದ್ಧದಲ್ಲಿ ತೊಡಗಿದೆ ಜೀವಹಾನಿ ಸೇರಿದಂತೆ ಸಂಭವಿಸುತ್ತಿರುವ ಮಾನವೀಯ ನಷ್ಟಗಳ ಹೊರತಾಗಿ, ಈ ಯುದ್ಧವು ಅಮೆರಿಕಕ್ಕೆ ಭಾರಿ ಆರ್ಥಿಕ ಹೊರೆಯಾಗಿಯೂ ಪರಿಣಮಿಸುತ್ತಿದೆ. ವರದಿಗಳ ಪ್ರಕಾರ, ಇರಾನ್ ಮೇಲಿನ ದಾಳಿಯ ಮೊದಲ 24 ಗಂಟೆಗಳಲ್ಲೇ ಅಮೆರಿಕಕ್ಕೆ 779 ಮಿಲಿಯನ್ ಡಾಲರ್ (ಸುಮಾರು 6,900 ಕೋಟಿ ರೂಪಾಯಿ) ಖರ್ಚಾಗಿದೆ. ಇದು 2026ರ ಇಡೀ ಅಮೆರಿಕದ ರಕ್ಷಣಾ … Continued