ಕೇರಳ ಸಿಎಂ ಗಾದಿಗೆ ‘ಕೈ’ ಕಚ್ಚಾಟ: ವೇಣುಗೋಪಾಲ vs ಸತೀಶನ್ ನಡುವೆ ಹಗ್ಗಜಗ್ಗಾಟ ; ಹೈಕಮಾಂಡ್‌ಗೆ ಇಕ್ಕಟ್ಟು

ತಿರುವನಂತಪುರಂ/ದೆಹಲಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದಿದ್ದರೂ, ಫಲಿತಾಂಶ ಬಂದು ವಾರ ಕಳೆದರೂ ಮುಖ್ಯಮಂತ್ರಿ ಪಟ್ಟಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಕಾಂಗ್ರೆಸ್‌ ಹೈಕಮಾಂಡ್ ಒದ್ದಾಡುತ್ತಿದೆ. ಆಡಳಿತರೂಢ ಎಲ್‌ಡಿಎಫ್‌ ಮಣಿಸಿ 102 ಸ್ಥಾನಗಳನ್ನು ಗೆದ್ದಿರುವ ಯುಡಿಎಫ್‌ (UDF) ಮೈತ್ರಿಕೂಟದಲ್ಲಿ ಈಗ ‘ನಾಯಕತ್ವದ ಸಂಘರ್ಷ’ ಮುನ್ನಲೆಗಷ್ಟೇ ಅಲ್ಲದೆ ಬೀದಿಗೂ ಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸದ್ಯ ನಾಲ್ವರು … Continued

ತಮಿಳುನಾಡು : ವಿಜಯ ನೇತೃತ್ವದ ಟಿವಿಕೆಗೆ ವಿಸಿಕೆ ಬೆಂಬಲ ; ಸರ್ಕಾರ ರಚನೆಗೆ ಹಾದಿ ಸುಗಮ

ಚೆನ್ನೈ : ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ ಅವರ ‘ಸಂಖ್ಯಾಬಲದ ಆತಂಕ’ ಕೊನೆಗೂ ಮುಗಿದಿದ್ದು, ತಮಿಳುನಾಡಿನಲ್ಲಿ ಸರ್ಕಾರ ರಚನೆ ಹಾದಿ ಸುಗಮವಾಗಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118 ಆಗಿದ್ದು, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಮೈತ್ರಿಕೂಟವು ಈ ಮೊದಲು 116 ಸದಸ್ಯರ ಬಲ ಹೊಂದಿತ್ತು. ಈಗ ವಿಸಿಕೆ (VCK) … Continued

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿಯನ್ನೇ ಬಿಜೆಪಿ ಆಯ್ಕೆ ಮಾಡಿದ್ದೇಕೆ ? ಇದರ ಹಿಂದಿನ ಲೆಕ್ಕಾಚಾರವೇನು ?

ಕೋಲ್ಕತ್ತಾ: ದಶಕಗಳ ಕಾಲ ಮಮತಾ ಬ್ಯಾನರ್ಜಿಯವರ ಅತ್ಯಂತ ಆಪ್ತ ಹೋರಾಟಗಾರನಾಗಿ, ಎಡಪಂಥೀಯರ ವಿರುದ್ಧ ಬೀದಿಗಿಳಿದು ಹೋರಾಡಿದ್ದ ಸುವೇಂದು ಅಧಿಕಾರಿ, ಈಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಉದಯದ ಮಹಾ ನಾಯಕನಾಗಿ ಹೊರಹೊಮ್ಮಿದ್ದಾರೆ. ಮೇ ೯ರಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಳ್ಳಲಿದ್ದು, ಇದು ರಾಜ್ಯದ ಅವರ ರಾಜಕೀಯ ಪಯಣದಲ್ಲಿ ಅತಿದೊಡ್ಡ ಮೈಲಿಗಲ್ಲಾಗಿದೆ. ಶುಕ್ರವಾರ … Continued

ತಮಿಳುನಾಡಲ್ಲಿ ಮುಗಿಯದ ಗೊಂದಲ : ಡಿಎಂಕೆ-ಎಐಎಡಿಎಂಕೆ ಸರ್ಕಾರ ರಚನೆಗೆ ಮುಂದಾದ್ರೆ ಟಿವಿಕೆಯ 107 ಶಾಸಕರಿಂದ ರಾಜೀನಾಮೆ..?!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಅತಂತ್ರ ವಿಧಾನಸಭೆ ಹಿನ್ನೆಯಲ್ಲಿ ಸರ್ಕಾರ ರಚನೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.  ಒಂದು ವೇಳೆ ಡಿಎಂಕೆ ಅಥವಾ ಎಐಎಡಿಎಂಕೆ ಅಡ್ಡಹಾದಿಯ ಮೂಲಕ ಸರ್ಕಾರ ರಚಿಸಲು ಮುಂದಾದರೆ ತನ್ನೆಲ್ಲಾ 107 ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ … Continued

ಟಿವಿಕೆಗೆ ಕಾಂಗ್ರೆಸ್‌ ಬೆಂಬಲ ; ಇದು ಅಪ್ಪಟ ವಿಶ್ವಾಸ ದ್ರೋಹ ಎಂದ ಡಿಎಂಕೆ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ದಶಕಗಳ ಕಾಲದ ಡಿಎಂಕೆ ಮತ್ತು ಎಐಎಡಿಎಂಕೆ ಏಕಸ್ವಾಮ್ಯವನ್ನು ಮುರಿದು ಇತಿಹಾಸ ಸೃಷ್ಟಿಸಿರುವ ನಟ ವಿಜಯ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಜೊತೆ ಕಾಂಗ್ರೆಸ್ ಮೈತ್ರಿಗೆ ಮುಂದಾಗಿರುವುದು ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ತನ್ನ ದೀರ್ಘಕಾಲದ ಮಿತ್ರಪಕ್ಷವಾದ ಕಾಂಗ್ರೆಸ್‌ನ ಈ ನಡೆಯನ್ನು ಡಿಎಂಕೆ “ಅಪ್ಪಟ ವಿಶ್ವಾಸದ್ರೋಹ” ಎಂದು ಕರೆದಿದೆ. … Continued

‘ಅನಿಲ್’ ಆರ್ಮಿಯ ಮಾಸ್ಟರ್ ಪ್ಲಾನ್: ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿದ ನಟ ʼವಿಜಯʼ ಪಡೆಯ 6 ರಣತಂತ್ರಗಳು !

ತಮಿಳುನಾಡು ರಾಜಕೀಯ ಭೂಪಟದಲ್ಲಿ ನಟ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಅಕ್ಷರಶಃ ಸಂಚಲನ ಸೃಷ್ಟಿಸಿದೆ. ಒಟ್ಟು 234  ಸ್ಥಾನಗಳಲ್ಲಿ108ರಲ್ಲಿ ಜಯಗಳಿಸಿರುವ ಟಿವಿಕೆ ಪಕ್ಷವು  ಬಹುಮತಕ್ಕೆ ಬೇಕಾದ 118 ಸ್ಥಾನಗಳ ಗಡಿಯ ಸಮೀಪಕ್ಕೆ ಬಂದು ನಿಂತಿದೆ. ಇದು ವರ್ಷಗಳ ಕಾಲ ನಡೆದ ವ್ಯವಸ್ಥಿತ ತಯಾರಿ ಮತ್ತು ಹಂತ ಹಂತವಾಗಿ ಕಟ್ಟಿದ ಭದ್ರ ಬುನಾದಿಯ ಫಲವಾಗಿದೆ. … Continued

ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ಕೋರಿದ ನಟ ವಿಜಯ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ, ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷದ ಬೆಂಬಲ ಕೋರಿದ್ದಾರೆ. ಈ ಬೆಳವಣಿಗೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮಂಗಳವಾರ ದೃಢಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ … Continued

ತೃಣಮೂಲ ಭದ್ರಕೋಟೆಯಲ್ಲೇ ಮಮತಾ ಸೋಲಿಸಿದ ಸುವೇಂದು ; ಭವಾನಿಪುರದಲ್ಲಿ ʼದೀದಿʼಯನ್ನು ಬಿಜೆಪಿ ‘ಚಕ್ರವ್ಯೂಹ’ದಲ್ಲಿ ಕೆಡವಿದ್ದು ಹೇಗೆ ?

ಕೋಲ್ಕತ್ತಾ: ಸರಿಯಾಗಿ ಐದು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಸೋಲಿನ ಕಹಿ ಉಣಿಸಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಈಗ 2026ರಲ್ಲಿ ಅದನ್ನು ಮರುಕಳಿಸಿದ್ದಾರೆ. ಈ ಬಾರಿ ನಂದಿಗ್ರಾಮದಲ್ಲಲ್ಲ, ಬದಲಿಗೆ ಮಮತಾ ಅವರ ಭದ್ರಕೋಟೆಯಾದ ಕೋಲ್ಕತ್ತಾದ ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಗೆಲುವಿನ ನಗೆ ಬೀರಿದ್ದಾರೆ. 2021ರಲ್ಲಿ ನಂದಿಗ್ರಾಮದ ಸೋಲಿನ ನಂತರ … Continued

ಪಶ್ಚಿಮ ಬಂಗಾಳ ಚುನಾವಣೆ : ಮಮತಾಗೆ ಭಾರೀ ಮುಖಭಂಗ ; ಸುವೇಂದು ಅಧಿಕಾರಿ ವಿರುದ್ಧ ದೊಡ್ಡ ಅಂತರದಲ್ಲಿ ಸೋಲು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲೇ ಮಮತಾ ಬ್ಯಾನರ್ಜಿ ಅವರು ಅತ್ಯಂತ ದೊಡ್ಡರಾಜಕೀಯ ಸೋಲನ್ನು ಅನುಭವಿಸಿದ್ದಾರೆ. ಹೈಪ್ರೊಫೈಲ್ ಕ್ಷೇತ್ರವೆಂದೇ ಗುರುತಿಸಲ್ಪಟ್ಟಿದ್ದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸುಮಾರು 15,105 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯೆಂದೇ ಪರಿಗಣಿಸಲ್ಪಟ್ಟಿದ್ದ ಭವಾನಿಪುರದಲ್ಲಿ … Continued

ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಜಯದತ್ತ ಬಿಜೆಪಿ, ತಮಿಳುನಾಡಿನಲ್ಲಿ ವಿಜಯ ಕಮಾಲ್‌, ಕೇರಳದ ಕಾಂಗ್ರೆಸ್ಸಿಗೆ ಜೈ, ಅಸ್ಸಾಂನಲ್ಲಿ ಬಿಜೆಪಿ ಮುನ್ನಡೆ

ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಡೆದ 2026 ರ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಆರಂಭವಾಗಿದೆ.  4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ರಾಜಕೀಯ ದಿಕ್ಕನ್ನು ಸೂಚಿಸುವ ಆರಂಭಿಕ ಟ್ರೆಂಡ್‌ಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಹಿಂದಿಕ್ಕಿ ಅಧಿಕಾರದತ್ತ ದಾಪುಗಾಲು ಇಡುತ್ತಿರುವುದು ಕಂಡುಬಂದಿದೆ.  … Continued