ವೀಡಿಯೊ..| ಸ್ಮಶಾನದ ಅಡಿಯಲ್ಲಿ ಹೆಜ್ಬೊಲ್ಲಾಗಳ ಬೃಹತ್‌ ಭೂಗತ ಸುರಂಗ ಪತ್ತೆ ; ಅದರಲ್ಲಿದ್ದವು ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರಗಳು, ರಾಕೆಟ್‌ಗಳು, ದ್ವಿಚಕ್ರವಾಹನಗಳು

ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸದಸ್ಯರು ಬಳಸುತ್ತಿದ್ದ ಅನೇಕ ಭೂಗತ ಸುರಂಗಗಳನ್ನು “ಕಿತ್ತುಹಾಕಲಾಗಿದೆ” ಎಂದು ಇಸ್ರೇಲಿ ಮಿಲಿಟರಿ ಭಾನುವಾರ ಹೇಳಿದೆ. ಇದರಲ್ಲಿ ಸ್ಮಶಾನದ ಅಡಿಯಲ್ಲಿ ಇರುವ ಭೂಗತ ಸುರಂಗವೂ ಸೇರಿದೆ ಎಂದು ಹೇಳಲಾಗಿದೆ. X ನಲ್ಲಿನ ಪೋಸ್ಟ್‌ನಲ್ಲಿ, ಇಸ್ರೇಲಿ ರಕ್ಷಣಾ ಪಡೆಗಳು (IDF) ಹಂಚಿಕೊಂಡ ವೀಡಿಯೊದಲ್ಲಿ ಕಿಲೋಮೀಟರ್ ಗಟ್ಟಲೆ ಉದ್ದದ ಸುರಂಗವು ಕಮಾಂಡ್ ಮತ್ತು ಕಂಟ್ರೋಲ್ ರೂಂಗಳು, ಮಲಗುವ … Continued

ಮುಸ್ಲಿಂ ಕುಟುಂಬದ ಮಗಳ ಮದುವೆ ಕಾರ್ಡ್‌ನಲ್ಲಿ ಗಣೇಶ, ಕೃಷ್ಣನ ಚಿತ್ರ ; ಈ ಮದುವೆ ಆಮಂತ್ರಣ ಪತ್ರ ಭಾರೀ ವೈರಲ್‌…!

ಲಕ್ನೋ : ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ, ತಿಲೋಯ್ ತೆಹ್ಸಿಲ್‌ನ ಪುರೆ ಅಲ್ಲಾದೀನ್ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮಗಳ ಮದುವೆಗೆ ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ವಿಶಿಷ್ಟವಾದ ವಿವಾಹ ಆಮಂತ್ರಣ ಪತ್ರವನ್ನು ಮುದ್ರಿಸಿದೆ. ವಧು, ವರ ಮತ್ತು ಕುಟುಂಬದ ಸದಸ್ಯರ ಹೆಸರುಗಳೊಂದಿಗೆ ಹಿಂದೂ ದೇವರುಗಳಾದ ಗಣೇಶ ಮತ್ತು ಕೃಷ್ಣನ ಚಿತ್ರಗಳನ್ನು ಒಳಗೊಂಡಿರುವ ಮದುವೆ ಕಾರ್ಡ್ ಮುದ್ರಿಸಿರುವುದು … Continued

ಪ್ರತಿಭಟನೆಗೆ ಬಗ್ಗಿದ ಸರ್ಕಾರ ; ರೈತರಿಗೆ ನೀಡಿದ್ದ ವಕ್ಫ್​ ನೋಟಿಸ್ ವಾಪಸ್ ; ರಾಜ್ಯ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು: ವಕ್ಫ್‌ ಆಸ್ತಿ ವಿವಾದ(Waqf Board land row) ರಾಜ್ಯದಲ್ಲಿ ಭುಗಿಲೆದ್ದ ನಂತರ ರಾಜ್ಯ ಸರ್ಕಾರ ರೈತರಿಗೆ ನೀಡಿದ್ದ ನೋಟಿಸ್ ಅನ್ನು ಅಧಿಕೃತವಾಗಿ ವಾಪಸ್ ಪಡೆದುಕೊಂಡಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿದೆ. ಆರಂಭದಲ್ಲಿ ರೈತರ ಜಮೀನಿನಿಂದ ಆರಂಭವಾದ ಈ ವಕ್ಫ್ ಆಸ್ತಿ ವಿವಾದ ಬಳಿಕ ಮಠಕ್ಕೆ ಹಾಗೂ ಹಿಂದೂ ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ … Continued

ವೀಡಿಯೊ…| ಹಳೆಯ ಕಾರಿಗೆ 4 ಲಕ್ಷ ರೂ. ವೆಚ್ಚದಲ್ಲಿ ವಿಧಿವತ್ತಾಗಿ ಅಂತ್ಯಸಂಸ್ಕಾರ ಮಾಡಿದ ಕುಟುಂಬ ; ಕಾರ್ಯಕ್ರಮದಲ್ಲಿ 1500 ಜನ ಭಾಗಿ…!

ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನ ನಡೆದ ವರದಿಯಾಗಿದೆ. ಮಾರುತಿ ಸುಜುಕಿ ವ್ಯಾಗನ್ ಆರ್ ಮಾಲೀಕರೊಬ್ಬರು ತಮ್ಮ ಪ್ರೀತಿಯ ಕಾರಿಗೆ ‘ಸಮಾಧಿ ಸಮಾರಂಭ’ ಅಥವಾ ಅಂತ್ಯಕ್ರಿಯೆ ನಡೆಸುವ ಮೂಲಕ ಸುದ್ದಿಯಾಗಿದ್ದಾರೆ…! ಈ ಅಂತ್ಯಕ್ರಿಯೆಯಲ್ಲಿ ಬರೋಬ್ಬರಿ 1,500 ಜನರ ಬೃಹತ್ ಜನಸ್ತೋಮ ಸೇರಿತ್ತು. ಕಾರಿನ ಮಾಲೀಕರ ಪ್ರಕಾರ, ವ್ಯಾಗನ್ ಆರ್ 12 ವರ್ಷಗಳಿಂದ ಅವರ ಬಳಿ … Continued

ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಿದ ಸ್ವಿಟ್ಜರ್ಲ್ಯಾಂಡ್‌ ಸರ್ಕಾರ

ಸ್ವಿಟ್ಜರ್ಲ್ಯಾಂಡ್‌ ಸರ್ಕಾರವು ಕೂಡ ಸಾರ್ವಜನಿಕ ಸ್ಥಳದಲ್ಲಿ ಕಣ್ಣು, ಮುಖ, ಮೂಗು ಬಾಯಿ ಮುಚ್ಚುವ ಮುಖಗವಸು (facial coverings in public) ಧರಿಸುವುದಕ್ಕೆ ನಿಷೇಧ ಹೇರಿದೆ. ಇದು 2025 ಜನವರಿ 1ರಿಂದ ಬುರ್ಖಾ ನಿಷೇಧ ಕಾನೂನು ಜಾರಿಗೆ ಬರಲಿದೆ. ಸ್ವಿಟ್ಜರ್ಲ್ಯಾಂಡ್‌ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ ಎಂಬ ಕಠಿಣ ಕಾನೂನು ಕ್ರಮವನ್ನು ಜಾರಿಗೊಳಿಸಿದೆ. ಹಾಗಾಗಿ … Continued

ಕೊನೆಗೂ ಕೆನಡಾದಲ್ಲಿ ʼಖಲಿಸ್ತಾನಿ ಪ್ರತ್ಯೇಕತಾವಾದಿಗಳುʼ ಇರುವುದನ್ನು ಒಪ್ಪಿಕೊಂಡ ಪ್ರಧಾನಿ ಜಸ್ಟಿನ್‌ ಟ್ರುಡೊ…!

ಒಟ್ಟಾವಾ : ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಇದ್ದಾರೆ ಎಂಬುದನ್ನು ಪ್ರಧಾನಿ ಜಸ್ಟಿನ್ ಟ್ರುಡೊ ಒಪ್ಪಿಕೊಂಡಿದ್ದಾರೆ. ಆದರೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿನ ಸಿಖ್ ಸಮುದಾಯವನ್ನು ಒಟ್ಟಾರೆಯಾಗಿ ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಾವಾದಲ್ಲಿರುವ ಪಾರ್ಲಿಮೆಂಟ್ ಹಿಲ್‌ನಲ್ಲಿ ಇತ್ತೀಚೆಗೆ ನಡೆದ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುವಾಗ ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಇದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕೆನಡಾದಲ್ಲಿ ಹಿಂದೂಗಳಲ್ಲಿ ಪ್ರಧಾನಿ … Continued

ವಕೀಲೆ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ : 20 ಲಕ್ಷ ರೂ. ಕೊಡ್ತೇವೆ ಹೇಳಿ ಕೇವಲ ₹ 1 ಲಕ್ಷ ಕೊಟ್ರು ; ಪೊಲೀಸರಿಗೆ ದೂರು ನೀಡಿದ ವಕೀಲೆಯ ಕೊಲೆ ಆರೋಪಿ…!

ಮೀರತ್‌ : ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ವರ್ಷದ ಹಿಂದಿನ ಕೊಲೆ ಪ್ರಕರಣವು ಅಚ್ಚರಿಯ ತಿರುವು ಪಡೆದುಕೊಂಡಿದೆ. ಕೊಲೆ ಮಾಡಿದ್ದಕ್ಕಾಗಿ ಭರವಸೆ ನೀಡಿದಷ್ಟು ಹಣ ಕೊಟ್ಟಿಲ್ಲ ಎಂದು ಗುತ್ತಿಗೆ ಕೊಲೆಗಾರನೇ ಪೊಲೀಸರಿಗೆ ದೂರು ನೀಡಿದ ಪ್ರಕರಣ ವರದಿಯಾಗಿದೆ. ವಕೀಲೆ ಅಂಜಲಿ ಅವರನ್ನು ಕೊಲ್ಲಲು 20 ಲಕ್ಷ ರೂ.ಗಳ ಗುತ್ತಿಗೆ ನೀಡಲಾಗಿತ್ತು, ಆದರೆ ಆ ಭರವಸೆ … Continued

ಭಾರತದ ವಿದೇಶಾಂಗ ಸಚಿವ ಜೈಶಂಕರ ಪತ್ರಿಕಾಗೋಷ್ಠಿ-ಸಂದರ್ಶನ ಪ್ರಸಾರ ಮಾಡಿದ್ದಕ್ಕೆ ಆಸ್ಟ್ರೇಲಿಯಾದ ಮಾಧ್ಯಮ ನಿರ್ಬಂಧಿಸಿದ ಕೆನಡಾ…!

ನವದೆಹಲಿ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಹಾಗೂ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರ ಜಂಟಿ ಪತ್ರಿಕಾಗೋಷ್ಠಿ ಹಾಗೂ ಎಸ್.ಜೈಶಂಕರ ಅವರ ಸಂದರ್ಶನ ಪ್ರಸಾರ ಮಾಡಿದ ಕೆಲವೇ ಗಂಟೆಗಳ ನಂತರ ಕೆನಡಾದಲ್ಲಿ ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆ ಆಸ್ಟ್ರೇಲಿಯಾ ಟುಡೇಯನ್ನು ಕೆನಡಾದಲ್ಲಿ ನಿಷೇಧಿಸಲಾಗಿದೆ ಎಂದು ಭಾರತ ಗುರುವಾರ ಹೇಳಿದೆ. .ವಿದೇಶಾಂಗ ಸಚಿವಾಲಯ (MEA)ದ … Continued

ವೀಡಿಯೊ…| ಸುಪ್ರೀಂ ಕೋರ್ಟ್‌ ಸಿಜೆಐ ಚಂದ್ರಚೂಡರ ʼಮರಣದಂಡನೆ ಪ್ರಶ್ನೆʼಗೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ವಕೀಲರ ಉತ್ತರ ಹೇಗಿದೆ ನೋಡಿ…

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ರಾಷ್ಟ್ರೀಯ ನ್ಯಾಯಾಂಗ ವಸ್ತುಸಂಗ್ರಹಾಲಯ ಮತ್ತು ಆರ್ಕೈವ್ (ಎನ್‌ಜೆಎಂಎ) ಉದ್ಘಾಟನಾ ಸಮಾರಂಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ ಅವರು ಗುರುವಾರ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ವಕೀಲರ ಜೊತೆ ಸಂವಾದ ನಡೆಸಿದರು. ಇತರ ನ್ಯಾಯಾಧೀಶರ ಸಮ್ಮುಖದಲ್ಲಿ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದ ಮುಖ್ಯ ನ್ಯಾಯಾಧೀಶ ಚಂದ್ರಚೂಡ ಅವರು ಭಾರತದಲ್ಲಿ ಮರಣದಂಡನೆಯ ಬಗ್ಗೆ ಪ್ರಶ್ನೆಯನ್ನು ಕೇಳುವ … Continued

ವಕ್ಫ್ ಭೂ ವಿವಾದ | ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕಳವಳಕಾರಿ ; ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್

ಹುಬ್ಬಳ್ಳಿ: ಕರ್ನಾಟಕದಲ್ಲಿ ಧಾರ್ಮಿಕ ಸಂಸ್ಥೆಗಳು ಸೇರಿದಂತೆ ವಿವಿಧ ಆಸ್ತಿಗಳ ಮಾಲೀಕತ್ವವನ್ನು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಹೇಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಮತ್ತು ಈ ವಿಷಯವನ್ನು ಜೆಪಿಸಿ ಮುಂದೆ ಇಡಲಾಗುವುದು ಎಂದು ಸಂಸದ ಮತ್ತು ವಕ್ಫ್ (ತಿದ್ದುಪಡಿ) ಮಸೂದೆ 2024ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ ಹೇಳಿದ್ದಾರೆ. ಗುರುವಾರ (ನವೆಂಬರ್ 7) ಹುಬ್ಬಳ್ಳಿಯಲ್ಲಿ ರೈತರು … Continued