ವೀಡಿಯೊ…| ಸಂಗೀತ ಉತ್ಸವದಿಂದ ಅಪಹರಿಸಿದ ಒತ್ತೆಯಾಳುವಿನ ಮೊದಲ ವೀಡಿಯೊ ಬಿಡುಗಡೆ ಮಾಡಿದ ಹಮಾಸ್‌

ಪ್ರಮುಖ ಬೆಳವಣಿಗೆಯೊಂದರಲ್ಲಿ, ಹಮಾಸ್ ಗುಂಪು ಸೋಮವಾರ, ಒತ್ತೆಯಾಳುವಿನ ಮತ್ತೊಂದು ವೀಡಿಯೊವನ್ನು ಬಿಡುಗಡೆ ಮಾಡಿದೆ, ಅದರಲ್ಲಿ ಯುವತಿಯೊಬ್ಬಳು ಅಜ್ಞಾತ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದನ್ನು ತೋರಿಸಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಅಕ್ಟೋಬರ್ 7 ರಂದು ಹಮಾಸ್‌ ದಾಳಿಯಲ್ಲಿ 1,300 ಕ್ಕೂ ಹೆಚ್ಚು ಇಸ್ರೇಲಿ ಜನರು ಸಾವೀಗಾಡದ ನಂತರ ಇದಕ್ಕೆ ಪ್ರತೀಕಾರವಾಗಿ ಗಾಜಾ ಮೇಲೆ ಇಸ್ರೇಲ್‌ … Continued

‘ಯಾಕೆ ಅವರು ಪ್ಯಾಲೆಸ್ಟೀನಿಯರನ್ನು ತಮ್ಮ ದೇಶದೊಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ ?’ : ಗಾಜಾದ ಜನರಿಗೆ ತಮ್ಮ ‘ಬಾಗಿಲು ಮುಚ್ಚಿದ್ದಕ್ಕೆ’ ಅರಬ್ ರಾಷ್ಟ್ರಗಳ ಮೇಲೆ ನಿಕ್ಕಿ ಹ್ಯಾಲೆ ವಾಗ್ದಾಳಿ

ವಾಷಿಂಗ್ಟನ್: ಗಾಜಾ ಪ್ರದೇಶದ ಮೇಲೆ ಇಸ್ರೇಲ್‌ನ ಸನ್ನಿಹಿತ ಭೂ ಆಕ್ರಮಣಕ್ಕೆ ಮೊದಲು ತಮ್ಮ ಮನೆಗಳನ್ನು ತೊರೆಯುವಂತೆ ಗಾಜಾದ ನಾಗರಿಕರಿಗೆ ಇಸ್ರೇಲ್‌ ಸೂಚಿಸಿದ ನಂತರ ತಮ್ಮ ಬಾಗಿಲುಗಳನ್ನು ತೆರೆಯದ ಇಸ್ಲಾಮಿಕ್ ರಾಷ್ಟ್ರಗಳನ್ನು ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಟೀಕಿಸಿದ್ದಾರೆ. ಇರಾನ್ ಪರಮಾಣು ಒಪ್ಪಂದದ ಬಗ್ಗೆ ಅವರು ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು … Continued

ಜೈಲಿನಲ್ಲಿ 24 ವರ್ಷಗಳು ಕಳೆದ ನಂತರ ಇಸ್ರೇಲ್‌ ವಿರುದ್ಧ ಹಮಾಸ್ ದಾಳಿ ಮುನ್ನಡೆಸಿದ ʼಮಾಸ್ಟರ್ ಮೈಂಡ್ʼ ಈ ಯಾಹ್ಯಾ ಸಿನ್ವಾರ್ ಯಾರು..?

ಇಸ್ರೇಲ್ ನಗರಗಳ ಮೇಲೆ ಹಮಾಸ್‌ನ ಆಘಾತಕಾರಿ ದಾಳಿಯ ನಂತರದಲ್ಲಿ ಯಾಹ್ಯಾ ಸಿನ್ವಾರ್ ಎಂಬ ಹೆಸರು ಈಗ ಸದ್ದು ಮಾಡುತ್ತಿದೆ. ಇಸ್ರೇಲಿ ಅಧಿಕಾರಿಗಳು ಸಿನ್ವಾರ್ ನನ್ನು 1,300 ಇಸ್ರೇಲಿಗಳು, ಬಹುತೇಕವಾಗಿ ಇಸ್ರೇಲ್‌ ನಾಗರಿಕರ ಸಾವಿಗೆ ಕಾರಣವಾದ ದಾಳಿಯ ಹಿಂದಿನ ʼಮಾಸ್ಟರ್ ಮೈಂಡ್ʼ ಎಂದು ಆರೋಪಿಸಿದ್ದಾರೆ. ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಭೂ ಆಕ್ರಮಣಕ್ಕೆ ಸಿದ್ಧತೆ ನಡೆಸುತ್ತಿರುವಾಗ, ಇಸ್ರೇಲಿ ಪಡೆಗಳ … Continued

ಅಮೆರಿಕದಲ್ಲಿ ಗಾಜಾ ಯುದ್ಧ ಸಂಬಂಧಿತ ಹತ್ಯೆ : ಪ್ಯಾಲೇಸ್ತಿನಿ ಮೂಲದ ಅಮೆರಿಕ ಹುಡುಗನ 26 ಬಾರಿ ಇರಿದು ಕೊಂದ ವೃದ್ಧ, ತಾಯಿಗೆ ಗಂಭೀರ ಗಾಯ

ವಾಷಿಂಗ್ಟನ್ : ಅಮೆರಿಕದಲ್ಲಿ 71 ವರ್ಷದ ವ್ಯಕ್ತಿಯೊಬ್ಬ ಆರು ವರ್ಷದ ಬಾಲಕನನ್ನು ಮಾರಣಾಂತಿಕವಾಗಿ ಇರಿದು ಸಾಯಿಸಿದ್ದಾನೆ ಮತ್ತು ಆತನ 32 ವರ್ಷದ ತಾಯಿಯನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಆತ ಈ ರೀತಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 26 ಬಾರಿ ಇರಿತಕ್ಕೊಳಗಾದ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ, ಆದರೆ ಆತನ ತಾಯಿ … Continued

ಇಸ್ರೇಲ್ ಗಾಜಾ ಮೇಲೆ ಭೂ ಆಕ್ರಮಣವನ್ನು ವಿಳಂಬಗೊಳಿಸುತ್ತಿರುವುದು ಏಕೆ..?

1,300 ಕ್ಕೂ ಹೆಚ್ಚು ಇಸ್ರೇಲಿಗಳನ್ನು ಬಲಿತೆಗೆದುಕೊಂಡ ಅಭೂತಪೂರ್ವ ಹಮಾಸ್‌ ದಾಳಿಗೆ ಪ್ರತೀಕಾರವಾಗಿ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್)ಈಗ ಹಮಾಸ್ ಹಿಡಿತದಲ್ಲಿರುವ ಗಾಜಾ ಪಟ್ಟಿಯ ಮೇಲೆ ಭೂ ದಾಳಿಗೆ ಸಜ್ಜಾಗಿದೆ. ಇಸ್ರೇಲ್ ಗಾಜಾದಲ್ಲಿ ಹಮಾಸ್-ಸಂಯೋಜಿತ ಸ್ಥಳಗಳ ಮೇಲೆ ತನ್ನ ವೈಮಾನಿಕ ದಾಳಿಯನ್ನು ಮುಂದುವರೆಸಿದೆ, ಬಾಂಬ್ ದಾಳಿಯನ್ನು ನಿಲ್ಲಿಸದಿದ್ದರೆ “ಗಂಭೀರ ಪರಿಣಾಮಗಳನ್ನು” ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ. 2006 … Continued

ಗಾಜಾದಲ್ಲಿ ಇಸ್ರೇಲ್ ಕ್ರಮ “ಆತ್ಮ ರಕ್ಷಣೆಯ ವ್ಯಾಪ್ತಿ ಮೀರಿದೆ : ಚೀನಾ

ಬೀಜಿಂಗ್: ಗಾಜಾದಲ್ಲಿ ನಡೆಸುತ್ತಿರುವ ಇಸ್ರೇಲ್‌ನ ಕ್ರಮಗಳು “ಆತ್ಮರಕ್ಷಣೆಯ ವ್ಯಾಪ್ತಿಯನ್ನು ಮೀರಿ”ವೆ ಮತ್ತು ಇಸ್ರೇಲ್ ಸರ್ಕಾರವು “ಗಾಜಾದ ಜನರ ಮೇಲಿನ ಸಾಮೂಹಿಕ ಶಿಕ್ಷೆಯನ್ನು ನಿಲ್ಲಿಸಬೇಕು” ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾನುವಾರ ಹೇಳಿದ್ದಾರೆ. ಶನಿವಾರ ಸೌದಿ ಅರೇಬಿಯಾದ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅವರಿಗೆ ಕರೆ ಮಾಡಿದ ವಾಂಗ್ ಅವರ ಹೇಳಿಕೆಗಳಿಂದ ಗಾಜಾದಲ್ಲಿ ಹಮಾಸ್ … Continued

ಇಸ್ರೇಲ್-ಹಮಾಸ್‌ ಯುದ್ಧ : ಇಸ್ರೇಲಿ ವೈಮಾನಿಕ ದಾಳಿಯಲ್ಲಿ ʼಹಮಾಸ್ ವೈಮಾನಿಕ ಪಡೆಗಳ ಮುಖ್ಯಸ್ಥʼ ಸಾವು; ಇಸ್ರೇಲ್‌ ಮಿಲಿಟರಿ

ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರ ಗಾಜಾ ಪಟ್ಟಿಯಲ್ಲಿ ಹಮಾಸ್ ಭಯೋತ್ಪಾದಕ ಗುಂಪಿನ ಹಿರಿಯ ಕಮಾಂಡ್‌ ನನ್ನು ರಾತ್ರಿಯ ವೈಮಾನಿಕ ದಾಳಿಯಲ್ಲಿ ಕೊಂದಿರುವುದಾಗಿ ಹೇಳಿದೆ ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಇಸ್ರೇಲ್ ರಕ್ಷಣಾ ಪಡೆಗಳ ಪ್ರಕಾರ, ವೈಮಾನಿಕ ದಾಳಿಯ ವೇಳೆ ಹಮಾಸ್‌ನ ವೈಮಾನಿಕ ದಾಳಿಯ ಮುಖ್ಯಸ್ಥ ಮುರಾದ್ ಅಬು ಮುರಾದ್‌ನನ್ನು ಕೊಲ್ಲಲ್ಪಟ್ಟಿದ್ದಾನೆ. ಹಮಾಸ್‌ … Continued

ಗಾಜಾದಲ್ಲಿ ʼಹಮಾಸ್‌ʼ ನ 500 ಕಿಮೀ ಉದ್ದದ ರಹಸ್ಯ ʼಸುರಂಗ ಜಾಲʼಗಳು… ಭೂ ದಾಳಿ ವೇಳೆ ಇಸ್ರೇಲ್‌ ಸೈನ್ಯದ ಮುಂದಿರುವ ಕಠಿಣ ಸವಾಲು…

ಗಾಜಾ ಪಟ್ಟಿಯಲ್ಲಿ ಸಂಪೂರ್ಣ ಭೂ ದಾಳಿಗೆ ಇಸ್ರೇಲ್‌ ಸಜ್ಜಾಗುತ್ತಿರುವಾಗ, ಅವರು ಎದುರಿಸುತ್ತಿರುವ ದೊಡ್ಡ ಸವಾಲುಗಳೆಂದರೆ ಗಾಜಾದ ಅಡಿಯಲ್ಲಿ ಹಮಾಸ್‌ ನಿರ್ಮಾಣ ಮಾಡಿರುವ ವ್ಯಾಪಕ ಸುರಂಗ ಜಾಲ. ಭೂ ಆಕ್ರಮಣದಲ್ಲಿ, ಇಸ್ರೇಲ್ ಅದರ ವೈರಿ ಪ್ರಬಲವಾಗಿರುವ ಭೂಪ್ರದೇಶದಲ್ಲಿ ಶತ್ರುಗಳೊಂದಿಗೆ ಹೋರಾಡಬೇಕಾಗುತ್ತದೆ ಎಂದು ಹಲವಾರು ತಜ್ಞರು ಎಚ್ಚರಿಸಿದ್ದಾರೆ. ವ್ಯಾಪಕ ಸುರಂಗಗಳ ಜಾಲವನ್ನು ಹೊಂದಿರುವ ಗಾಜಾದ ಜನನಿಬಿಡ ಪ್ರದೇಶವು ಇಸ್ರೇಲ್‌ನ … Continued

ವೀಡಿಯೊ…| ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದ ಮೇಲೆ ಬಾಂಬ್‌ ದಾಳಿ : ಅದನ್ನು ಹಮಾಸ್ ತರಬೇತಿ ಶಿಬಿರವಾಗಿ ಬಳಸತ್ತಿತ್ತು ಎಂದ ಇಸ್ರೇಲ್‌

ಗಾಜಾದಲ್ಲಿರುವ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಮೇಲೆ ಬಾಂಬ್‌ ದಾಳಿ ನಡೆಸಿದ ಇಸ್ರೇಲಿ ರಕ್ಷಣಾ ಪಡೆಗಳು (IDF) ಅದನ್ನು ಧೂಳಿನ ಮಟ್ಟಕ್ಕೆ ಇಳಿಸಿದೆ ಎಂದು ಹೇಳಲಾಗಿದೆ. ಅದನ್ನು ” ಹಮಾಸ್‌ ಮಿಲಿಟರಿ ಗುಪ್ತಚರ ಕಾರ್ಯಕರ್ತರಿಗೆ ತರಬೇತಿ ಶಿಬಿರವಾಗಿ ಬಳಸುತ್ತಿದ್ದಾರೆ” ಎಂದು ಇಸ್ರೇಲ್‌ ಹೇಳಿದೆ. ಸ್ವಲ್ಪ ಸಮಯದ ಹಿಂದೆ, IDF ಫೈಟರ್ ಜೆಟ್‌ಗಳು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕ ಸಂಘಟನೆಯ … Continued

‘ಭಾರತ ಇಸ್ರೇಲ್‌ ಜೊತೆಗೆ ನಿಂತಿದೆ’: ಹಮಾಸ್ ದಾಳಿ ಕುರಿತು ಇಸ್ರೇಲ್ ಪ್ರಧಾನಿಯೊಂದಿಗೆ ಮಾತನಾಡಿದ ಪ್ರಧಾನಿ ಮೋದಿ

ನವದೆಹಲಿ: ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದಾರೆ ಹಾಗೂ ಭಾರತವು “ಎಲ್ಲಾ ರೂಪಗಳಲ್ಲಿ ಭಯೋತ್ಪಾದನೆಯನ್ನು ಖಂಡಿಸುತ್ತದೆ” ಎಂದು ಹೇಳಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ ಅವರು ನೆತನ್ಯಾಹು ಅವರೊಂದಿಗೆ ದೂರವಾಣಿ ಕರೆ ಮಾಡಿದ್ದು, ಅವರು “ಸದ್ಯದ ಪರಿಸ್ಥಿತಿಯ ಕುರಿತು … Continued