ವೀಡಿಯೊ…| ಮಾಲೀಕನ ಮೇಲೆ ಹಲ್ಲೆ ಮಾಡಿದ ಮೂವರು ದರೋಡೆಕೋರರ ಮೇಲೆ ಪ್ರತಿದಾಳಿ ನಡೆಸಿ ಓಡಿಸಿದ ನಾಯಿ…!

ಮೋರ್ಬಿ (ಗುಜರಾತ್) : ನಿಷ್ಠೆ ಮತ್ತು ಅಸಾಧಾರಣ ಧೈರ್ಯ ತೋರಿದ ಘಟನೆಯೊಂದರಲ್ಲಿ , ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಜರ್ಮನ್ ಶೆಫರ್ಡ್ ನಾಯಿ ತನ್ನ ಮಾಲೀಕನನ್ನು ಮೂವರು ಆಕ್ರಮಣಕಾರರು ನಡೆಸಿದ ಹಿಂಸಾತ್ಮಕ ದರೋಡೆ ಪ್ರಯತ್ನದಿಂದ ರಕ್ಷಿಸಿದೆ. ಬೆಳಗಿನ ಜಾವ ನಡೆದ ಇಡೀ ಘಟನೆಯು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ ಮತ್ತು ನಾಯಿ ದಾಳಿಕೋರರ ಮೇಲೆ ದಾಳಿ ಮಾಡಿದ ನಂತರ … Continued

ಒಂದೇ ಸಮನೆ ಅಳುತ್ತಿದೆ ಎಂದು ಕೋಪಗೊಂಡು ಮೂರು ತಿಂಗಳ ಮಗುವನ್ನು ಕೊಂದು ನೀರಿನ ಟ್ಯಾಂಕಿಗೆ ಎಸೆದ ತಾಯಿ…!

ಅಹಮದಾಬಾದ್: ಮೂರು ತಿಂಗಳ ಮಗು ಒಂದೇ ಸಮನೆ ನಿರಂತರವಾಗಿ ಅಳುತ್ತಿದ್ದ ಕಾರಣಕ್ಕೆ ಬೇಸತ್ತ 22 ವರ್ಷದ ಮಹಿಳೆಯೊಬ್ಬರು ಆತನನ್ನು ಭೂಗತ ನೀರಿನ ಟ್ಯಾಂಕ್‌ಗೆ ಎಸೆದು ಕೊಲೆ ಮಾಡಿದ ಆರೋಪದ ಮೇಲೆ ಇಲ್ಲಿ ಬಂಧಿತಳಾಗಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಕರಿಷ್ಮಾ ಬಾಘೇಲ್ ಎಂಬ 22 ವರ್ಷದ ಮಹಿಳೆ ಕಳೆದ ಶನಿವಾರ ತನ್ನ ಮೂರು ತಿಂಗಳ ಮಗ … Continued

ವೀಡಿಯೊ…| ಅಹಮದಾಬಾದಿನಲ್ಲಿ ಬಿಸಿಲಿನ ತಾಪಕ್ಕೆ ಎಚ್ಚರತಪ್ಪಿ ಬಿದ್ದ ಕಾಂಗ್ರೆಸ್ ನಾಯಕ ಪಿ ಚಿದಂಬರಂ ; ಆಸ್ಪತ್ರೆಗೆ ದಾಖಲು

ಅಹಮದಾಬಾದ್‌ : ಮಂಗಳವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಭಾಗವಹಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಬಿಸಿಲಿನ ತಾಪದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಐತಿಹಾಸಿಕ ಸಬರಮತಿ ಆಶ್ರಮದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ … Continued

ಏಪ್ರಿಲ್ 8, 9ರಂದು ಗುಜರಾತಿನಲ್ಲಿ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧಿವೇಶನ

ನವದೆಹಲಿ: ಮಂಗಳವಾರ(ಏಪ್ರಿಲ್‌ 8)ದಿಂದ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನಕ್ಕೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಏಪ್ರಿಲ್ 8 ಮತ್ತು 9 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ಎರಡು ದಿನಗಳ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನದಲ್ಲಿ ಕಾಂಗ್ರೆಸ್ 2027 ರಲ್ಲಿ ಗುಜರಾತಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಗುಜರಾತ್‌ನ ಇಬ್ಬರು … Continued

19 ವರ್ಷದ ಯುವತಿ ಮೇಲೆ ಅತ್ಯಾಚಾರ ಪ್ರಕರಣ ; ದಿಗಂಬರ ಜೈನಮುನಿಗೆ 10 ವರ್ಷ ಜೈಲು ಶಿಕ್ಷೆ

ಸೂರತ್‌ : ಗುಜರಾತಿನ ಸೂರತ್‌ನ ಸೆಷನ್ಸ್ ನ್ಯಾಯಾಲಯವು 2017 ರಲ್ಲಿ 19 ವರ್ಷದ ಹುಡುಗಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ ದಿಗಂಬರ ಪಂಗಡದ ಸನ್ಯಾಸಿ ಶಾಂತಿಸಾಗರಜಿ ಮಹಾರಾಜಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯವು ತಪ್ಪಿತಸ್ಥ ಸನ್ಯಾಸಿಗೆ 25,000 ರೂಪಾಯಿ ದಂಡವನ್ನೂ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಎ.ಕೆ. ಶಾಂತಿಸಾಗರಜಿ ಮಹಾರಾಜ … Continued

ವೀಡಿಯೊ..| ವಾಯು ಪಡೆ ಯುದ್ಧ ವಿಮಾನ ಪತನ ; ಓರ್ವ ಪೈಲಟ್‌ ಸಾವು : ಯುದ್ಧ ವಿಮಾನ ಬೀಳುವ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬುಧವಾರ ಗುಜರಾತ್‌ನ ಜಾಮನಗರದಲ್ಲಿ ಭಾರತೀಯ ವಾಯುಪಡೆಯ ಫೈಟರ್ ಜೆಟ್ ಪತನಗೊಂಡ ಕ್ಷಣಗಳ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ. ವೀಡಿಯೊ ಕ್ಲಿಪ್‌ ಜೆಟ್‌ ಕೆಳಕ್ಕೆ ಬರುತ್ತಿರುವುದನ್ನು ತೋರಿಸುತ್ತದೆ ಮತ್ತು ನಂತರ ದೂರದಿಂದ ಭಾರಿ ಸ್ಫೋಟ ಹಾಗೂ ಬೆಂಕಿ ಜ್ವಾಲೆಯನ್ನು ತೋರಿಸುತ್ತದೆ. ಜೆಟ್ ಕೆಲವು ಸೆಕೆಂಡುಗಳ ಕಾಲ ಸ್ಥಿರವಾಗಿ ಹಾರುತ್ತದೆ ಮತ್ತು ನಂತರ ಕೆಳಗೆ ಧುಮುಕುವುದನ್ನು ವೀಡಿಯೊ ತೋರಿಸುತ್ತದೆ. ಕೆಲವೇ … Continued

ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ : 13 ಕಾರ್ಮಿಕರ ಸಾವು ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ಪಾಲನಪುರ: ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಮಂಗಳವಾರ ಪಟಾಕಿ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಸಂಭವಿಸಿದ ಸ್ಫೋಟದಲ್ಲಿ ಕಟ್ಟಡ ಕುಸಿದು ಕನಿಷ್ಠ 13 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀಸಾ ಪಟ್ಟಣದ ಬಳಿ ಇರುವ ಘಟಕದಲ್ಲಿ ಈ ಘಟನೆ ನಡೆದಿದೆ. “ಮಂಗಳವಾರ ಬೆಳಿಗ್ಗೆ 9: 45 ರ ಸುಮಾರಿಗೆ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ, ಇದರಿಂದಾಗಿ … Continued

ಅಂಗಡಿಯೊಳಗೆ ಗುಂಡಿನ ದಾಳಿ ; ಭಾರತದ ಮೂಲದ ತಂದೆ-ಮಗಳು ಸಾವು

ನವದೆಹಲಿ:  24 ವರ್ಷದ ಭಾರತೀಯ ಯುವತಿ ಮತ್ತು ಆಕೆಯ 56 ವರ್ಷದ ತಂದೆಯನ್ನು ಅಮೆರಿಕದ ವರ್ಜೀನಿಯಾದಲ್ಲಿ ಅವರು ಕೆಲಸ ಮಾಡುತ್ತಿದ್ದ ಅಂಗಡಿಯೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಕೋಮಾಕ್ ಕೌಂಟಿಯಲ್ಲಿ ಅಂಗಡಿ ತೆರೆದ ಸ್ವಲ್ಪ ಸಮಯದ ನಂತರ ಗುರುವಾರ ಈ ಘಟನೆ ನಡೆದಿದೆ. ಜೋಡಿ ಕೊಲೆಗೆ ಸಂಬಂಧಿಸಿದಂತೆ ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ಎಂಬಾತನನ್ನು ಪೊಲೀಸರು … Continued

‘ಭಾರತದ ಮಗಳು…ಸಾವಿರಾರು ಮೈಲು ದೂರದಲ್ಲಿದ್ದರೂ ನಮ್ಮ ಹೃದಯಕ್ಕೆ ಹತ್ತಿರವಾಗಿದ್ದೀರಿ’ : ಸುನೀತಾ ವಿಲಿಯಮ್ಸ್‌ಗೆ ಪ್ರಧಾನಿ ಮೋದಿ ಪತ್ರ

ನವದೆಹಲಿ: ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿದ್ದು, ಈಗ ಅಲ್ಲಿಂದ ಭೂಮಿಗೆ ವಾಪಸಾಗಲು ಮಂಗಳವಾರ ಪ್ರಯಾಣ ಆರಂಭಿಸಿದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಪೂರ್ವಕ ಪತ್ರ ಬರೆದಿದ್ದಾರೆ. ಮಾರ್ಚ್ 18 ರಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಪತ್ರದಲ್ಲಿ, … Continued

ವೀಡಿಯೊ…| ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ ಸವಾರರಿಗೆ ಏಕಾಏಕಿ ಮುಂದೆ ಪ್ರತ್ಯಕ್ಷವಾದ ಎರಡು ಸಿಂಹಗಳು ; ಆಮೇಲೆ ಆಗಿದ್ದೇನು..?

ಗಾಂಧಿನಗರ: ಗುಜರಾತ್‍ನ ಗಿರ್ ಅರಣ್ಯದೊಳಗಿನ ರಸ್ತೆಯಲ್ಲಿ ಮೂವರು ಯುವಕರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಎರಡು ಸಿಂಹಗಳು ಆಕಸ್ಮಿಕವಾಗಿ ಅವರ ದಾರಿಗೆ ಅಡ್ಡ ಬಂದ ಘಟನೆಯೊಂದು ನಡೆದಿದೆ. ನಡುರಸ್ತೆಯಲ್ಲಿ ದೈತ್ಯ ಸಿಂಹವನ್ನು ಕಂಡು ಹೆದರಿದ ಬೈಕ್ ಸವಾರ ಮತ್ತು ಇಬ್ಬರು ಯುವಕರು ತಮ್ಮನ್ನು ರಕ್ಷಿಸಿಕೊಳ್ಳಲು ಬೈಕ್ ಬಿಟ್ಟು ಓಡಿ ಹೋಗಿದ್ದಾರೆ. ಆದರೆ ಆ ಸಿಂಹಗಳು ಇವರತ್ತ ಲಕ್ಷ್ಯ ಕೊಡದೆ … Continued