ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ ಇರುವ ದೇಶಗಳು : ಮೊದಲನೇ ಶ್ರೇಯಾಂಕದಲ್ಲಿ 6 ದೇಶಗಳು, ಭಾರತದ ಶ್ರೇಯಾಂಕ ಯಾವುದು…?

ನವದೆಹಲಿ: ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ್ ಮತ್ತು ಸ್ಪೇನ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳುಳ್ಳ ದೇಶಗಳಾಗಿವೆ. ಇತ್ತೀಚಿನ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಈ ದೇಶಗಳು 194 ಜಾಗತಿಕ ತಾಣಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಅನುಮತಿಸುತ್ತವೆ. ಶ್ರೇಯಾಂಕವು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ​​(IATA) ದ ಡೇಟಾವನ್ನು ಆಧರಿಸಿದೆ. ಕಳೆದ ಐದು ವರ್ಷಗಳಿಂದ ಜಪಾನ್ … Continued

ಭಾರತದ ಜೊತೆ ವಿವಾದದಿಂದ ಹಿನ್ನಡೆ: ಹೆಚ್ಚಿನ ಪ್ರವಾಸಿಗರನ್ನು ಕಳುಹಿಸುವಂತೆ ಚೀನಾಕ್ಕೆ ಮನವಿ ಮಾಡಿದ ಮಾಲ್ಡೀವ್ಸ್ ಅಧ್ಯಕ್ಷ

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಯ ನಂತರ ಎರಡು ದೇಶಗಳ ನಡುವೆ ರಾಜತಾಂತ್ರಿಕ ಕಲಹ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಬುಕ್ಕಿಂಗ್ ರದ್ದುಗೊಳಿಸಿದ್ದರಿಂದ ವಿಚಲಿತರಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಮ್ಮ ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸುವ ಪ್ರಯತ್ನಗಳನ್ನು ‘ಚುರುಕುಗೊಳಿಸಬೇಕು’ ಎಂದು ಚೀನಾಕ್ಕೆ ಮನವಿ ಮಾಡಿದ್ದಾರೆ. ಭಾರತ-ಮಾಲ್ಡೀವ್ಸ್ … Continued

ಲಕ್ಷದ್ವೀಪ ಹೊಗಳಿದ ಇಸ್ರೇಲ್‌ : ಉಪ್ಪು ನೀರು ಶುದ್ಧೀಕರಿಸುವ ಯೋಜನೆ ಕೆಲಸ ತಕ್ಷಣವೇ ಪ್ರಾರಂಭಿಸ್ತೇವೆ ಎಂದ ದೇಶ

ನವದೆಹಲಿ: ಕಳೆದ ವರ್ಷ ತನ್ನ ತಂಡವು ಸುಂದರವಾದ ದ್ವೀಪಸಮೂಹಕ್ಕೆ ಭೇಟಿ ನೀಡಿದ ನಂತರ ಲಕ್ಷದ್ವೀಪದಲ್ಲಿ ನಿರ್ಲವಣೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಇಸ್ರೇಲ್ ಸೋಮವಾರ ಹೇಳಿದೆ. ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿಯು ಯೋಜನೆಯ ಕೆಲಸವನ್ನು ತ್ವರಿತವಾಗಿ ಪ್ರಾರಂಭಿಸಲು ತನ್ನ ಉತ್ಸುಕತೆಯನ್ನು ವ್ಯಕ್ತಪಡಿಸಿತು. X ನಲ್ಲಿನ ಪೋಸ್ಟ್‌ನಲ್ಲಿ, ಇಸ್ರೇಲ್ ರಾಯಭಾರ ಕಚೇರಿಯು, “ಕಳೆದ ವರ್ಷ ನಾವು ನಿರ್ಲವಣೀಕರಣ … Continued

‘ಭಾರತ ನಮ್ಮ ನಿಕಟ ಮಿತ್ರ ರಾಷ್ಟ್ರಗಳಲ್ಲಿ ಒಂದು ‘: ತಮ್ಮದೇ ಸಚಿವರು ನೀಡಿದ ಪ್ರಧಾನಿ ಮೋದಿ ವಿರೋಧಿ ಹೇಳಿಕೆ ಖಂಡಿಸಿದ ಮಾಲ್ಡೀವ್ಸ್ ಪ್ರವಾಸೋದ್ಯಮ

ಮಾಲೆ: ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ (MATI)ಯು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತನ್ನ ದೇಶದ ಕೆಲವು ಉಪ ಮಂತ್ರಿಗಳು ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿದೆ ಮತ್ತು ಭಾರತವನ್ನು “ನಮ್ಮ ನಿಕಟ ಮಿತ್ರರಾಷ್ಟ್ರಗಳಲ್ಲಿ ಒಂದು” ಎಂದು ಬಣ್ಣಿಸಿದೆ. ಈ ಹಿಂದೆ ಮಾಲ್ಡೀವ್ಸ್‌ನ ವಿವಿಧ ಬಿಕ್ಕಟ್ಟುಗಳಲ್ಲಿ ಭಾರತ ಯಾವಾಗಲೂ … Continued

ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ತನ್ನ ಮೂವರು ಸಚಿವರನ್ನು ಅಮಾನತು ಮಾಡಿದ ಮಾಲ್ಡೀವ್ಸ್‌ ಸರ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಅಪಹಾಸ್ಯ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್‌ನಲ್ಲಿ ಮೂವರು ಸಚಿವರ ತಲೆದಂಡವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಪ್ರವಾಸದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ಹಂಚಿಕೊಂಡ ಮಾಲ್ಡೀವ್ಸ್‌ನ ಮೂವರು ಸಚಿವರನ್ನು ಅಲ್ಲಿನ ಸರ್ಕಾರವು ಭಾನುವಾರ ಅಮಾನತುಗೊಳಿಸಿದೆ ಎಂದು ಮಾಲ್ಡೀವ್ಸ್ ವಕ್ತಾರರು ತಿಳಿಸಿದ್ದಾರೆ. ಭಾನುವಾರ ಭಾರತವು ಮಾಲ್ಡೀವ್ಸ್‌ … Continued

ಟಿ20 ವಿಶ್ವಕಪ್-2024 ವೇಳಾಪಟ್ಟಿ ಪ್ರಕಟ: ಜೂನ್ 9ರಂದು ಭಾರತ vs ಪಾಕಿಸ್ತಾನ ಪಂದ್ಯ

ದುಬೈ: ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದೆ. ಟೂರ್ನಿಯು ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದಲ್ಲಿ ಆಯೋಜನೆಗೊಳ್ಳಲಿದ್ದು, ಜೂನ್‌ 1ರಂದು ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಅಮೆರಿಕ ಹಾಗೂ ಕೆನಡಾ ಮುಖಾಮುಖಿಯಾಗಲಿವೆ. ಜೂನ್‌ 5ರಂದು ಐರ್ಲೆಂಡ್‌ ವಿರುದ್ಧ ಭಾರತ ತನ್ನ … Continued

‘ನಿಜಕ್ಕೂ, ಭಾರತ ಪ್ರಮುಖ ಶಕ್ತಿ…’: ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಆರ್ಥಿಕ ಬೆಳವಣಿಗೆ, ವಿದೇಶಾಂಗ ನೀತಿ ಶ್ಲಾಘಿಸಿದ ಚೀನಾದ ಸರ್ಕಾರಿ ಮಾಧ್ಯಮ

ನವದೆಹಲಿ: ನಾಲ್ಕು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಭಾರತದ ದೇಶೀ ಮತ್ತು ವಿದೇಶಿ ಪರಿಸ್ಥಿತಿಯು ಮಹತ್ತರವಾಗಿ ಬದಲಾಗಿದೆ. ಭಾರತವು ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಆಡಳಿತದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆದಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್‌ನಲ್ಲಿ ಪ್ರಕಟವಾದ ಲೇಖನ ಹೇಳಿದೆ. ಫುಡಾನ್ ವಿಶ್ವವಿದ್ಯಾನಿಲಯದ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರದ ನಿರ್ದೇಶಕ ಜಾಂಗ್ ಜಿಯಾಡಾಂಗ್ … Continued

ಲಕ್ಷಾಂತರ ದಕ್ಷಿಣ ಕೊರಿಯನ್ನರಿಗೆ ಅಯೋಧ್ಯೆ ʼಮಾತೃಭೂಮಿʼ : ಪ್ರತಿವರ್ಷ ಸಾವಿರಾರು ಜನ ಅಯೋಧ್ಯೆಗೆ ಭೇಟಿ ನೀಡ್ತಾರೆ, ಯಾಕೆಂದರೆ….

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಜನವರಿ 22ರಂದು ಪ್ರಧಾನಿ ಮೋದಿ ಅವರು ರಾಮ ಮಂದಿರವನ್ನು ಉದ್ಘಾಟಿಸಲಿದ್ದು, ನಂತರದಲ್ಲಿ ಸಾರ್ವಜನಿಕರಿಗೆ ರಾಮ ದರ್ಶನಕ್ಕೆ ದೇಗುಲ ತೆರೆಯಲಿದೆ. ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಗೆ ಸಂಬಂಧಿಸಿದ ಅನೇಕ ಕಥೆಗಳಿವೆ. ಅಯೋಧ್ಯೆ ಹಾಗೂ ವಿದೇಶಗಳ ನಡುವಿನ ಸಂಬಂಧದ ಬಗ್ಗೆ ಬಗ್ಗೆ ಅನೇಕ ಆಸಕ್ತಿದಾಯಕ ಕಥೆಗಳಿವೆ. … Continued

ಹೊಸ ವರ್ಷದ ಆರಂಭದ ದಿನವೇ ಇಸ್ರೋದಿಂದ ಮತ್ತೊಂದು ಮೈಲಿಗಲ್ಲು : ಕಪ್ಪು ಕುಳಿಗಳ ಅಧ್ಯಯನಕ್ಕೆ ಎಕ್ಸ್‌ಪೋಸ್ಯಾಟ್‌ ಉಪಗ್ರಹದ ಯಶಸ್ವಿ ಉಡಾವಣೆ

ನವದೆಹಲಿ: 2023 ರಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ವಿಶ್ವದ ಮೊದಲ ದೇಶವೆಂಬ ಹೆಗ್ಗಳಿಕೆ ಪಡೆದ ನಂತರ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಮತ್ತೊಂದು ಐತಿಹಾಸಿಕ ಉಡಾವಣೆ ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2024ರ ಆರಂಭದ ದಿನವೇ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) … Continued

26/11 ಮುಂಬೈ ದಾಳಿಯ ʼಮಾಸ್ಟರ್ ಮೈಂಡ್ʼ ಹಫೀಜ್ ಸಯೀದ್ ನನ್ನು ಗಡಿಪಾರು ಮಾಡಿ : ಪಾಕಿಸ್ತಾನಕ್ಕೆ ವಿನಂತಿ ಪತ್ರ ಕಳುಹಿಸಿದ ಭಾರತ

ನವದೆಹಲಿ: 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ವಿನಂತಿಯನ್ನು ಕಳುಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ಹೇಳಿದ್ದಾರೆ. ದೇಶದಲ್ಲಿ ವಿಚಾರಣೆ ಎದುರಿಸಲು ಭಯೋತ್ಪಾದಕನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಮಾಡಿದ ಇತ್ತೀಚಿನ ವಿನಂತಿಯಾಗಿದೆ ಮತ್ತು ಸಯೀದ್ ಭಾರತದಲ್ಲಿ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದಾನೆ … Continued