ಮನೆಯಲ್ಲಿ ಪೈಪಡ್ ಗ್ಯಾಸ್ (PNG) ಸಂಪರ್ಕ ಇರುವವರಿಗೆ ಇನ್ಮುಂದೆ ಎಲ್‌ಪಿಜಿ ಸಿಲಿಂಡರ್ ಇಲ್ಲ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಅನಿಲ ಮತ್ತು ತೈಲ ಸಾಗಣೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ‘ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ಆದೇಶ’ಕ್ಕೆ ತಿದ್ದುಪಡಿ ತಂದಿದೆ. ಇದರನ್ವಯ, ಈಗಾಗಲೇ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಹೊಂದಿರುವ ಮನೆಗಳಿಗೆ ಹೊಸ ಎಲ್‌ಪಿಜಿ (LPG) ಸಂಪರ್ಕ ಮತ್ತು ರೀಫಿಲ್‌ಗಳನ್ನು … Continued

ಹಾರ್ಮುಜ್ ಜಲಸಂಧಿ ಎಲ್ಲರಿಗೂ ಮುಕ್ತ, ಆದರೆ….: ಇರಾನಿನ ಷರತ್ತು ಏನೆಂದರೆ….

ತೆಹ್ರಾನ್: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿರುವ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಶನಿವಾರ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. “ಹಾರ್ಮುಜ್ ಜಲಸಂಧಿಯು ಎಲ್ಲರಿಗೂ ಮುಚ್ಚಿಲ್ಲ; ಇದು ಕೇವಲ ಅಮೆರಿಕ, ಇಸ್ರೇಲ್ ಮತ್ತು ಅವರ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಮಾತ್ರ ಬಂದ್ ಆಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶತ್ರು ರಾಷ್ಟ್ರಗಳಿಗೆ … Continued

ಇರಾನಿನಿಂದ ಭಾರತಕ್ಕೆ ಹೊರಟ 92,700 ಮೆಟ್ರಿಕ್ ಟನ್ ಎಲ್‌ಪಿಜಿ : ಮಾರ್ಚ್ 17ಕ್ಕೆ ಹಡಗು ಆಗಮನ, ಪ್ಯಾನಿಕ್ ಬುಕಿಂಗ್ ಹೆಚ್ಚಳ ; ಕೇಂದ್ರ

ನವದೆಹಲಿ: 92,700 ಮೆಟ್ರಿಕ್ ಟನ್ ಎಲ್‌ಪಿಜಿ (LPG) ಹೊತ್ತುಭಾರತಕ್ಕೆ ಬರುತ್ತಿರುವ ಎರಡು ಹಡಗುಗಳು ಇರಾನ್ ಕರಾವಳಿಯ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ ಮತ್ತು ಮಾರ್ಚ್ 16-17 ರೊಳಗೆ ಭಾರತದ ಬಂದರು ತಲುಪಲಿವೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ “ಎಲ್‌ಪಿಜಿ ಪೂರೈಕೆಯು ಸರ್ಕಾರದ ಪಾಲಿಗೆ ಕಳವಳಕಾರಿ ವಿಷಯವಾಗಿದೆ” ಎಂದು ಸರ್ಕಾರ ಹೇಳಿದೆಯಾದರೂ, ಯಾವುದೇ … Continued

ಇರಾನಿನ ನೂತನ ಸರ್ವೋಚ್ಚ ನಾಯಕ, ಐಆರ್‌ಜಿಸಿ ಅಧಿಕಾರಿಗಳ ಮಾಹಿತಿ ನೀಡಿದವರಿಗೆ 92 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ

ಇರಾನ್‌ನ  ನೂತನ ಸರ್ವೋಚ್ಚ ನಾಯಕ (Supreme Leader) ಮೊಜ್ತಬಾ ಖಮೇನಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸಂಬಂಧಿಸಿದ ಹಲವಾರು ಹಿರಿಯ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕವು 10 ಮಿಲಿಯನ್ ಡಾಲರ್ ಅಥವಾ ಪ್ರಸ್ತುತ ವಿನಿಮಯ ದರದಂತೆ 92,47,48,000 ರೂಪಾಯಿಗಳ ವರೆಗೆ ಬಹುಮಾನವನ್ನು ಘೋಷಿಸಿದೆ. ಡಿಪ್ಲೊಮ್ಯಾಟಿಕ್ ಸೆಕ್ಯುರಿಟಿ ಸರ್ವಿಸ್ ನಡೆಸುತ್ತಿರುವ ಅಮೆರಿಕ … Continued

ವೀಡಿಯೊ | ಯುದ್ಧದ ಮಧ್ಯೆ ರಹಸ್ಯ ‘ಕ್ಷಿಪಣಿ ನಗರ’ ಪ್ರದರ್ಶಿಸಿದ ಇರಾನ್ : ಭೂಗತ ಸುರಂಗದಲ್ಲಿ ‘ಆತ್ಮಾಹುತಿ’ ಡ್ರೋನ್‌ಗಳ ದೊಡ್ಡ ಸೈನ್ಯ…!

ನವದೆಹಲಿ: ಜಾಗತಿಕ ತೈಲ ಪೂರೈಕೆಯ ಶೇ. 20 ರಷ್ಟು ಪ್ರಮಾಣದ ತೈಲಗಳು ಹಾದುಹೋಗುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಅಂತಾರಾಷ್ಟ್ರೀಯ ಸಮುದ್ರ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಈಗ ಇರಾನ್ ಸೇನೆಯು ತನ್ನ ಬಳಿ ಬೃಹತ್ ಪ್ರಮಾಣದ ‘ಸುಸೈಡ್ ಡ್ರೋನ್ ಬೋಟ್’ (Suicide Drone Boats) ಗಳ ಸಂಗ್ರಹವಿರುವುದಾಗಿ ಘೋಷಿಸಿದ್ದು, ಇವುಗಳನ್ನು … Continued

ನೆಮ್ಮದಿ ಸುದ್ದಿ : ‘ಹಾರ್ಮುಜ್’ ಮೂಲಕ ಭಾರತದ 2 ಎಲ್‌ಪಿಜಿ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ, ಒಂದು ಹಡಗು ಭಾರತಕ್ಕೆ ಪ್ರಯಾಣ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಆವರಿಸಿರುವ ಬೆನ್ನಲ್ಲೇ, ಭಾರತ ಮತ್ತು ಇರಾನ್ ನಡುವೆ ಹಡಗುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ರಾಜತಾಂತ್ರಿಕ ಒಪ್ಪಂದ ಏರ್ಪಟ್ಟಿದೆ. ಇದರ ಫಲವಾಗಿ, ಸುಮಾರು 40,000 ಮೆಟ್ರಿಕ್ ಟನ್ ಅಡುಗೆ ಅನಿಲ (LPG) ಹೊತ್ತ ‘ಶಿವಾಲಿಕ’ ಹೆಸರಿನ ಬೃಹತ್ ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಮುಂದಿನ 7 ದಿನಗಳಲ್ಲಿ ಭಾರತದ ಕರಾವಳಿಯನ್ನು ತಲುಪಲಿದೆ … Continued

ರಹಸ್ಯ ಸುರಂಗಗಳು….ರಷ್ಯಾ ತೈಲ…: ಇರಾನ್ ಯುದ್ಧದಿಂದ ಉಂಟಾದ ‘ಇಂಧನ ಶಾಕ್’ನಿಂದ ಭಾರತ ಪಾರಾಗಿದ್ದು ಹೇಗೆ..?

ನವದೆಹಲಿ: ಇರಾನ್ ಯುದ್ಧದ ಭೀತಿಯು ಜಾಗತಿಕ ಇಂಧನ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಮುಖ್ಯವಾಗಿ ‘ಹಾರ್ಮುಜ್ ಜಲಸಂಧಿ’ (Strait of Hormuz) ಮುಚ್ಚಲ್ಪಟ್ಟಿರುವುದು ವಿಶ್ವದ ತೈಲ ಪೂರೈಕೆಗೆ ದೊಡ್ಡ ಹೊಡೆತ ನೀಡಿದೆ. ಭಾರತವು ತನ್ನ ಕಚ್ಚಾ ತೈಲದ ಶೇ. 90ರಷ್ಟು, ಎಲ್‌ಪಿಜಿ (LPG) ಅಗತ್ಯದ ಶೇ. 60ರಷ್ಟು ಮತ್ತು ಎಲ್‌ಎನ್‌ಜಿ (LNG) ಅಗತ್ಯದ ಶೇ. 50ರಷ್ಟನ್ನು ಆಮದಿನ ಮೇಲೆಯೇ … Continued

ಜಾಗತಿಕ ತಲ್ಲಣದ ನಡುವೆ ಮಹತ್ವದ ಬೆಳವಣಿಗೆ :ಹಾರ್ಮುಜ್ ಜಲಸಂಧಿ ಬಳಸಲು ಕೆಲವು ದೇಶಗಳಿಗೆ ಅನುಮತಿ ಎಂದ ಇರಾನ್

ತೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್‌ ಜೊತೆಗಿನ ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಆಯಕಟ್ಟಿನ ಹಾರ್ಮುಜ್ ಜಲಸಂಧಿ ಬಹುತೇಕ ಮುಚ್ಚಲ್ಪಟ್ಟಿದ್ದರೂ, ಕೆಲವು ದೇಶಗಳ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಇರಾನ್ ಉಪ ವಿದೇಶಾಂಗ ಸಚಿವ ಮಜೀದ್ ತಖ್ತ್-ರಾವಂಚಿ ತಿಳಿಸಿದ್ದಾರೆ. ಸುದ್ದಿಸಂಸ್ಥೆ ಎಎಫ್‌ಪಿ (AFP)ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಹಲವು ದೇಶಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ … Continued

ಇರಾನ್‌ನ ನೂತನ ಸರ್ವೋಚ್ಚ ನಾಯಕನ ಮೊದಲ ಹೇಳಿಕೆ : ಹಾರ್ಮುಜ್ ಜಲಸಂಧಿ ಉಲ್ಲೇಖ, ಅಮೆರಿಕಕ್ಕೆ ಖಡಕ್ ಎಚ್ಚರಿಕೆ

ತೆಹ್ರಾನ್‌ : ಇರಾನ್‌ನ ನೂತನ ಸುಪ್ರೀಂ ಲೀಡರ್ (ಪರಮೋಚ್ಚ ನಾಯಕ) ಆಗಿ ನೇಮಕಗೊಂಡ ನಂತರ ತಮ್ಮ ಮೊದಲ ಹೇಳಿಕೆ ನೀಡಿರುವ ಮೊಜ್ತಾಬಾ ಖಮೇನಿ, ಅಮೆರಿಕದ ವಿರುದ್ಧ ಹತೋಟಿಯ ಅಸ್ತ್ರವಾಗಿ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚಿರಲೇಬೇಕು ಮತ್ತು ಮಧ್ಯಪ್ರಾಚ್ಯದ ನೆರೆಹೊರೆಯ ರಾಷ್ಟ್ರಗಳ ಮೇಲಿನ ದಾಳಿಗಳು ಮುಂದುವರಿಯಲಿವೆ ಎಂದು ಹೇಳಿದ್ದಾರೆ. ಗುರುವಾರದಂದು ಸರ್ಕಾರಿ ಟಿವಿಯಲ್ಲಿ ಸುದ್ದಿ … Continued

ವೀಡಿಯೊ..| ಕಗ್ಗತ್ತಲಲ್ಲಿ ಸಾಹಸಮಯ ಪಯಣ : ಹಾರ್ಮುಜ್ ಜಲಸಂಧಿಯ ಅಪಾಯಕಾರಿ ಹಾದಿ ದಾಟಿ ಮುಂಬೈಗೆ ಬಂದ ಮೊದಲ ತೈಲ ನೌಕೆ

ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ನಂತರ, ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಹೊತ್ತು ತರುತ್ತಿರುವ ‘ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್’ (Shenlong Suezmax) ಎಂಬ ತೈಲ ನೌಕೆಯು ಸದ್ಯ ಇರಾನ್‌ ದಾಳಿಗೆ ಒಳಗಾಗಿರುವ ಹಾರ್ಮುಜ್ ಜಲಸಂಧಿಯನ್ನು ದಾಟಿ ಮುಂಬೈ ಬಂದರನ್ನು ಸುರಕ್ಷಿತವಾಗಿ ತಲುಪಿದೆ. ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಈ ಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ನೌಕೆ … Continued