ಇರಾನ್ ಜೊತೆಗಿನ ಕದನ ವಿರಾಮ ಅವಧಿ ವಿಸ್ತರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್/ಇಸ್ಲಾಮಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಯನ್ನು ಸದ್ಯಕ್ಕೆ ತಡೆಹಿಡಿದಿದ್ದು, ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದಾರೆ. ಮಂಗಳವಾರ ಅಂತ್ಯಗೊಳ್ಳಬೇಕಿದ್ದ ಈ ಕದನ ವಿರಾಮವು, ಪಾಕಿಸ್ತಾನದ ಮನವಿಯ ಮೇರೆಗೆ ವಿಸ್ತರಣೆಯಾಗಿದೆ. ಕೆಲವೇ ಗಂಟೆಗಳ ಹಿಂದೆ ಇರಾನ್ ಮೇಲೆ ಬೃಹತ್ ದಾಳಿಯ ಎಚ್ಚರಿಕೆ ನೀಡಿದ್ದ ಟ್ರಂಪ್, ನಂತರ ದಿಢೀರ್ ನಿರ್ಧಾರ ಬದಲಿಸಿ ಕದನ ವಿರಾಮ ವಿಸ್ತರಿಸಿದ್ದಾರೆ. … Continued

ಹತ್ಯೆಯಾಗಿ 7 ವಾರ ಕಳೆದ್ರೂ ನಡೆಯದ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ ; ಇರಾನ್ ಆಡಳಿತಕ್ಕೆ ಕಾಡುತ್ತಿರುವ ಭೀತಿ ಯಾವುದು?

ತೆಹ್ರಾನ್: ಇರಾನ್‌ನ ಸಾಂಸ್ಕೃತಿಕ ಮತ್ತು ರಾಜಕೀಯ ಸಂಪ್ರದಾಯಗಳಿಗೆ ತದ್ವಿರುದ್ಧವಾದ ಬೆಳವಣಿಗೆಯೊಂದರಲ್ಲಿ, ದೇಶದ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಸಂಸ್ಕಾರ ಇನ್ನೂ ನಡೆದಿಲ್ಲ. 86 ವರ್ಷದ ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾಗಿ ಏಳು ವಾರಗಳೇ ಕಳೆದಿದ್ದರೂ, ಇರಾನಿನ ಆಡಳಿತವು ಅವರ ಸಮಾಧಿ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ. … Continued

“ನೀವೇ ಅನುಮತಿ ನೀಡಿದ್ದೀರಿ, ಈಗ ಗುಂಡು ಹಾರಿಸುತ್ತಿದ್ದೀರಿ?”: ಇರಾನ್ ದಾಳಿ ವೇಳೆ ಭಾರತೀಯ ಹಡಗಿನ ಸಂಭಾಷಣೆಯ ಆಡಿಯೋ ಬಹಿರಂಗ !

ನವದೆಹಲಿ/ದುಬೈ: ಜಗತ್ತಿನ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಐದನೇ ಒಂದು ಭಾಗದಷ್ಟು ಸಂಚಾರ ನಡೆಸುವ ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಶನಿವಾರ ಇರಾನ್‌ನ ಸಣ್ಣ ಯುದ್ಧನೌಕೆಗಳು (Gunboats) ಭಾರತದ ಧ್ವಜ ಹೊಂದಿದ್ದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಗುಂಡಿನ ದಾಳಿ ನಡೆಸಿವೆ. ಈ ಘಟನೆಯ ಬೆನ್ನಲ್ಲೇ ಭಾರತೀಯ ಹಡಗುಗಳು ಅಲ್ಲಿಂದ ಹಿಂದೆ ಸರಿದಿವೆ. ಅದೃಷ್ಟವಶಾತ್, … Continued

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕಕ್ಕೆ ಅಪಾಯಕಾರಿಯೇ? ಅಮೆರಿಕದ ವರದಿ ಎಚ್ಚರಿಕೆ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಪಾಕಿಸ್ತಾನ ಮತ್ತು ಅದರ ನಾಯಕರೊಂದಿಗೆ, ವಿಶೇಷವಾಗಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಜೊತೆ ಅಮೆರಿಕದ ಸ್ನೇಹ ವೃದ್ಧಿಸಿದೆ. ಫೆಬ್ರವರಿ 28 ರಿಂದ ಸಂಘರ್ಷದಲ್ಲಿ ತೊಡಗಿರುವ ಅಮೆರಿಕ ಮತ್ತು ಇರಾನ್ ನಡುವೆ ಸಂಧಾನ ಮಾಡಿಸಿದ್ದಕ್ಕಾಗಿ ಟ್ರಂಪ್ ಅವರು ಮುನೀರ್ ಅವರನ್ನು ‘ಫೆಂಟಾಸ್ಟಿಕ್ … Continued

ಅಮೆರಿಕದಿಂದ ʼಹಾರ್ಮುಜ್ʼ ದಿಗ್ಬಂಧನ : ಇರಾನಿಗೆ ದಿನಕ್ಕೆ ಅಂದಾಜು 4,000 ಕೋಟಿ ರೂ. ನಷ್ಟದ ಭೀತಿ…!

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕವು ಇರಾನ್‌ನ ಬಂದರುಗಳಿಗೆ ಹಾಗೂ ಆಯಕಟ್ಟಿನ ಪ್ರದೇಶವಾದ ‘ಹಾರ್ಮುಜ್ ಜಲಸಂಧಿ’ಗೆ (Strait of Hormuz) ನೌಕಾ ದಿಗ್ಬಂಧನ ವಿಧಿಸಲು ಮುಂದಾಗಿದೆ. ಈ ಕ್ರಮದಿಂದ ಇರಾನ್‌ಗೆ ಪ್ರತಿದಿನ ಸುಮಾರು 435 ಮಿಲಿಯನ್ ಡಾಲರ್ (ಅಂದಾಜು 4,081 ಕೋಟಿ ರೂಪಾಯಿ) ಆರ್ಥಿಕ ನಷ್ಟ ಉಂಟಾಗಲಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ … Continued

ಪ್ರಧಾನಿ ಮೋದಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್: ಹಾರ್ಮುಜ್ ಜಲಸಂಧಿ-ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚೆ

ನವದೆಹಲಿ: ಇರಾನ್‌ ಮತ್ತು ಅಮೆರಿಕದ ನಡುವೆ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ದೂರವಾಣಿ ಮೂಲಕ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಸುಮಾರು 40 ನಿಮಿಷಗಳ ಕಾಲ ನಡೆದ ಈ ಸಂಭಾಷಣೆಯಲ್ಲಿ ಪಶ್ಚಿಮ ಏಷ್ಯಾದ ಪ್ರಸ್ತುತ ಸ್ಥಿತಿಗತಿ ಮತ್ತು ಭಾರತ-ಅಮೆರಿಕ … Continued

ಇರಾನ್ ಮೇಲೆ ಅಮೆರಿಕದ ಕಡಲ ದಿಗ್ಬಂಧನ ; ಹಾರ್ಮುಜ್ ಜಲಸಂಧಿಯಲ್ಲಿ ಟ್ರಂಪ್ ಸಮರ ವ್ಯೂಹ: ‘ಮಹಾ ಅಸ್ತ್ರ’ಗಳ ನಿಯೋಜನೆ

ನವದೆಹಲಿ: ಇರಾನ್ ವಿರುದ್ಧದ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಅಮೆರಿಕದ ಸಶಸ್ತ್ರ ಪಡೆಗಳು ಇರಾನಿನ ಬಂದರು ಮತ್ತು ಕರಾವಳಿ ಪ್ರದೇಶಗಳ ಸುತ್ತ ಕಡಲ ದಿಗ್ಬಂಧನ (Naval Blockade) ವಿಧಿಸಿವೆ. ಈ ಕಾರ್ಯಾಚರಣೆಗಾಗಿ ಅಮೆರಿಕವು 15ಕ್ಕೂ ಹೆಚ್ಚು ಅತ್ಯಾಧುನಿಕ ಯುದ್ಧನೌಕೆಗಳನ್ನು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಿದೆ. ಈ ಕಾರ್ಯಾಚರಣೆಯ ಪ್ರಮುಖ ಭಾಗವಾಗಿ ಅಮೆರಿಕದ ಯುಎಸ್‌ಎಸ್‌ (USS) ಟ್ರಿಪೋಲಿ (LHA 7) … Continued

ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಭಾರತದ ಹಡಗುಗಳಿಗೆ ನಮ್ಮಿಂದ ಯಾವುದೇ ಶುಲ್ಕ ಇಲ್ಲ : ಇರಾನ್‌ ರಾಯಭಾರಿ ಸ್ಪಷ್ಟನೆ

ನವದೆಹಲಿ: ಇರಾನ್ ಮೇಲೆ ಅಮೆರಿಕದ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ, ಭಾರತದ ಸರಕು ಸಾಗಣೆ ನೌಕೆಗಳಿಗೆ ಸಂಬಂಧಿಸಿದಂತೆ ಇರಾನ್ ಮಹತ್ವದ ಹೇಳಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಭಾರತೀಯ ಕಚ್ಚಾ ತೈಲ ಹಡಗುಗಳಿಂದ ನಾವು ಯಾವುದೇ ರೀತಿಯ ‘ಟೋಲ್’ ಅಥವಾ ಸುಂಕವನ್ನು ವಸೂಲಿ ಮಾಡುತ್ತಿಲ್ಲ ಎಂದು ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಸೋಮವಾರ ತಿಳಿಸಿದ್ದಾರೆ. … Continued

ಅಮೆರಿಕದ ದಿಗ್ಬಂಧನ ಅಸ್ತ್ರ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡ ಭಾರತದ 15 ಹಡಗುಗಳು

ದುಬೈ/ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಅಮೆರಿಕವು ಇರಾನ್ ಬಂದರುಗಳ ಮೇಲೆ ದಿಗ್ಬಂಧನ ವಿಧಿಸಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಭಾರತದ ಧ್ವಜವಿರುವ ಕನಿಷ್ಠ 15 ವಾಣಿಜ್ಯ ಹಡಗುಗಳು ಜಾಗತಿಕ ಇಂಧನ ಸಾಗಣೆಯ ಪ್ರಮುಖ ಕೇಂದ್ರವಾದ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಎಚ್ಚೆತ್ತಿರುವ ಭಾರತೀಯ ನೌಕಾಸೇನೆಯು ತನ್ನ … Continued

ಇರಾನ್-ಅಮೆರಿಕ ಸಂಧಾನ ವಿಫಲ: ನೆತನ್ಯಾಹು ಮಾಡಿದ ಒಂದು ಕರೆ ಇಡೀ ಮಾತುಕತೆಯನ್ನೇ ಹಳಿ ತಪ್ಪಿಸಿತೇ?

ಇರಾನ್ ಮತ್ತು ಅಮೆರಿಕ ನಡುವಿನ ಸುದೀರ್ಘ ಸಂಘರ್ಷಕ್ಕೆ ಅಂತ್ಯಹಾಡಬಲ್ಲ ಒಂದು ಮಹತ್ವದ ರಾಜತಾಂತ್ರಿಕ ಸಂಧಾನವು ಅಂತಿಮ ಕ್ಷಣದಲ್ಲಿ ಹಳಿ ತಪ್ಪಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ ಮಾತುಕತೆಯ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಗೆ ಮಾಡಿದ ಒಂದು ಫೋನ್ ಕರೆ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದು … Continued