ಆಘಾತಕಾರಿ ವೀಡಿಯೊ..| : ಕ್ರಿಕೆಟ್ ಆಡುತ್ತಿದ್ದ 21 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ಕುಸಿದುಬಿದ್ದು ಸಾವು

ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್‌ನಿಂದ ಆಘಾತಕಾರಿ ಘಟನೆಯೊಂದು ಹೊರಬಿದ್ದಿದ್ದು, 21 ವರ್ಷದ ಬಿಟೆಕ್ ವಿದ್ಯಾರ್ಥಿಯೊಬ್ಬರು ಕ್ರಿಕೆಟ್‌ ಆಡುತ್ತಿರುವಾಗ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ, ಏಪ್ರಿಲ್ 4ರಂದು ಈ ಘಟನೆ ನಡೆದಿದ್ದು, ಆ ವಿದ್ಯಾರ್ಥಿಯನ್ನು ತೆಲಂಗಾಣದ ಖಮ್ಮಂ ಜಿಲ್ಲೆಯ ವಿನಯಕುಮಾರ ಎಂದು ಗುರುತಿಸಲಾಗಿದೆ. ಮೇಡ್ಚಲದ ಸಿಎಂಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗ ವಿನಯಕುಮಾರ ಇದ್ದಕ್ಕಿದ್ದಂತೆ … Continued

ಬೆಟ್ಟಿಂಗ್ ಆ್ಯಪ್‌ ಪ್ರಚಾರ : ನಟರಾದ ರಾಣಾ ದಗ್ಗುಬಾಟಿ, ವಿಜಯ ದೇವರಕೊಂಡ, ಪ್ರಕಾಶರಾಜ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ : ಅಕ್ರಮ ಬೆಟ್ಟಿಂಗ್, ಜೂಜು ಮತ್ತು ಕ್ಯಾಸಿನೊ ಆಪ್‌ಗಳನ್ನು ಉತ್ತೇಜಿಸಿ ಸಾರ್ವಜನಿಕರಿಗೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದಲ್ಲಿ ಟಾಲಿವುಡ್ ನಟರು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಸೇರಿದಂತೆ 25 ಜನರ ವಿರುದ್ಧ ತೆಲಂಗಾಣದ ಸೈಬರಾಬಾದ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ 25 ಮಂದಿಯಲ್ಲಿ ಖ್ಯಾತ ತೆಲುಗು ನಟರಾದ ರಾಣಾ ದಗ್ಗುಬಾಟಿ, … Continued

ಸರ್ಕಾರಿ ಕೆಲಸ ಸಿಗುತ್ತದೆಯೆಂದು ಗಂಡನನ್ನೇ ಕೊಂದ ಪತ್ನಿ…! ಪೊಲೀಸ್‌ ತನಿಖೆಯಲ್ಲಿ ರಹಸ್ಯ ಬಯಲು

ಹೈದರಾಬಾದ್‌ : ಪತಿಯನ್ನು ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಮಹಿಳೆಯನ್ನು ತೆಲಂಗಾಣದ ನಲ್ಗೊಂಡದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿಯ ತಾಯಿ ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಗಂಡನ ಸಾವಿನಿಂದ ತನಗೆ ಅಥವಾ ತನ್ನ ಮಕ್ಕಳಿಗೆ ಸರ್ಕಾರಿ ಕೆಲಸ ಸಿಗುತ್ತದೆ ಎಂದು ನಂಬಿದ್ದ ಆಕೆ ಗಂಡನನ್ನು ಕೊಲೆ … Continued

ತೆಲಂಗಾಣ ಸಿಎಂ ವಿರುದ್ಧ ವೀಡಿಯೊ ಪೋಸ್ಟ್‌ ಮಾಡಿದ್ದ ಇಬ್ಬರು ಮಹಿಳಾ ಪತ್ರಕರ್ತರ ಬಂಧನ

ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದ ಆರೋಪದ ಮೇಲೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಇಬ್ಬರು ಪತ್ರಕರ್ತರನ್ನು ಬುಧವಾರ ಬಂಧಿಸಿದ್ದಾರೆ. ಪಲ್ಸ್ ನ್ಯೂಸ್ ಎಂಡಿ ಪಿ. ರೇವತಿ ಮತ್ತು ಪಲ್ಸ್ ನ್ಯೂಸ್ ವರದಿಗಾರ್ತಿ ಬಂಡಿ ಸಂಧ್ಯಾ ಬಂಧಿತ ಪತ್ರಕರ್ತರಾಗಿದ್ದಾರೆ. ಕಾಂಗ್ರೆಸ್‌ ಕಾರ್ಯಾಧ್ಯಕ್ಷ ವಿಎಸ್‌ ವಂಶಿ ಕಿರಣ ನೀಡಿದ ದೂರಿನ … Continued

ವೀಡಿಯೊ…| ಕೇವಲ 4 ನಿಮಿಷಗಳಲ್ಲಿ ಎಟಿಎಂ ಯಂತ್ರ ಕಟ್‌ ಮಾಡಿ 30 ಲಕ್ಷ ರೂ. ದರೋಡೆ ಮಾಡಿದ ಮುಸುಕುಧಾರಿಗಳು…

ಹೈದರಾಬಾದ್‌ : ನಾಲ್ವರು ಮುಸುಕುಧಾರಿ ವ್ಯಕ್ತಿಗಳು ಎಟಿಎಂ ಕಿಯೋಸ್ಕ್‌ಗೆ ನುಗ್ಗಿ, ಯಂತ್ರವನ್ನು ಕಟ್ ಮಾಡಿ ಸುಮಾರು 30 ಲಕ್ಷ ರೂ.ಗಳನ್ನು ಕೇವಲ ನಾಲ್ಕು ನಿಮಿಷಗಳಲ್ಲಿ ತೆಗೆದುಕೊಂಡು ಮಾಡಿ ಪರಾರಿಯಾಗಿದ್ದಾರೆ. ಭಾನುವಾರ ಮುಂಜಾನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಟಿಎಂನಲ್ಲಿ ಈ ಕಳ್ಳತನ ನಡೆದಿದೆ. ಭಾನುವಾರ ಬೆಳಗಿನ ಜಾವ 1:56ಕ್ಕೆ ವ್ಯಕ್ತಿಯೊಬ್ಬ ಕಾರಿನಿಂದ … Continued

ಮೈ ಜುಂ ಎನ್ನುವ ವೀಡಿಯೊ…| ಕುಸಿದ ಸುರಂಗದ ಒಳಗೆ ಸಿಕ್ಕಿಬಿದ್ದ 8 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ದೃಶ್ಯಾವಳಿ

ಹೈದರಾಬಾದ್: ತೆಲಂಗಾಣದಲ್ಲಿ ಶನಿವಾರ ಕುಸಿದು ಬಿದ್ದ ಸುರಂಗದ ಒಂದು ಭಾಗದದಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದು, ರಕ್ಷಣಾ ಕಾರ್ಯಕರ್ತರು ಸುರಂಗದೊಳಗೆ ಹೋಗಿ ಸಿಕ್ಕಿಬಿದ್ದ ಕಾರ್ಮಿಕರ ಹೆಸರನ್ನು ಕರೆಯುತ್ತಿರುವ ದೃಶ್ಯಾವಳಿಗಳ ವೀಡಿಯೊ ಹೊರಹೊಮ್ಮಿದೆ. ನಾಗರ್‌ಕರ್ನೂಲ್‌ನಲ್ಲಿ ಸುರಂಗ ಶನಿವಾರ ಕುಸಿದಿದ್ದು, ಕನಿಷ್ಠ ಎಂಟು ಕಾರ್ಮಿಕರು ಅದರೊಳಗೆ ಸಿಕ್ಕಿಬಿದ್ದಿದ್ದಾರೆ. ರಕ್ಷಣಾ ಕಾರ್ಯಕ್ಕೆ ಉನ್ನತ ರಕ್ಷಣಾ ತಂಡಗಳನ್ನು … Continued

ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡಲು ಅನುಮತಿ ನೀಡಿದ ತೆಲಂಗಾಣ ಸರ್ಕಾರ

ಹೈದರಾಬಾದ್: ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರವು ಸೋಮವಾರ ರಂಜಾನ್ ಉಪವಾಸದ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಕೆಲಸದ ಸಮಯವನ್ನು ಕಡಿತಗೊಳಿಸಿದೆ. ಚಂದ್ರನ ದರ್ಶನದ ಆಧಾರದ ಮೇಲೆ ಮಾರ್ಚ್ 1 ಅಥವಾ 2 ರಂದು ಪ್ರಾರಂಭವಾಗುವ ರಂಜಾನ್ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಒಂದು ಗಂಟೆ ಮುಂಚಿತವಾಗಿ ಕಚೇರಿಗಳಿಂದ ಹೋಗಲು ತೆಲಂಗಾಣ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಆದೇಶಗಳು ಮುಸ್ಲಿಂ … Continued

ವೀಡಿಯೊ…| ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ…

ಬಿಜೆಪಿ ಸಂಸದ ಎಟೆಲಾ ರಾಜೇಂದರ ತೆಲಂಗಾಣದ ಮೇಡ್ಚಲ್ ಜಿಲ್ಲೆಯ ಪೋಚಾರಂನಲ್ಲಿ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ಈಗ ವಿವಾದದ ಕೇಂದ್ರಬಿಂದುವಾಗಿದೆ. ಈ ಪ್ರದೇಶದಲ್ಲಿ ಬಡವರ ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್‌ ಒಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳೀಯರು ಸಂಸದರ ಬಳಿ ತಮಗಾದ ಸಂಕಷ್ಟವನ್ನು ವಿವರಿಸಿದ … Continued

ಹೊಸ ವರ್ಷದ ಪಾರ್ಟಿಗೆ ಮದ್ಯ ಕದಿಯಲು ಬಾರ್‌ ಗೆ ಹೊಕ್ಕಿದ ಕಳ್ಳ ; ಕಂಠಪೂರ್ತಿ ಕುಡಿದು ಅಲ್ಲಿಯೇ ಮಲಗಿ ಸಿಕ್ಕಿಬಿದ್ದ…!

ಹೈದರಾಬಾದ್: ತೆಲಂಗಾಣದ(Telangana) ಮೇದಕ್‌ನಲ್ಲಿ ಹೊಸ ವರ್ಷದ ಆಚರಣೆಗೆಂದು(New Year) ಮದ್ಯ ಕದಿಯಲು ಯತ್ನಿಸಿದ ಐನಾತಿ ಕಳ್ಳ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಘಟನೆ ವರದಿಯಾಗಿದೆ. ಮದ್ಯವನ್ನು ಅಲ್ಲಿಯೇ ಕಂಠಪೂರ್ತಿ ಕುಡಿದು ಅಮಲೇರಿ ಅಂಗಡಿಯಲ್ಲೇ ಮಲಗಿದ್ದಾನೆ. ಬೆಳಿಗ್ಗೆ ಅಂಗಡಿ ಮಾಲೀಕ ಬಾಗಿಲು ತೆಗೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಮಾಲೀಕ ತಕ್ಷಣವೇ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಆತನನ್ನು … Continued

ಪೊಲಿಸ್‌ ಎನ್‌ಕೌಂಟರ್‌ ನಲ್ಲಿ ಉನ್ನತ ಕಮಾಂಡರ್‌ ಸೇರಿ 7 ನಕ್ಸಲರು ಸಾವು

ಹೈದರಾಬಾದ್‌: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇಂದು, ಭಾನುವಾರ ಬೆಳಗ್ಗೆ ಪೊಲೀಸರು ಎನ್‌ಕೌಂಟರ್‌ನಲ್ಲಿ ಏಳು ಮಾವೋವಾದಿಗಳು (Naxal Encounter). ಹೊಡೆದುರುಳಿಸಿದ್ದಾರೆ. ಪೊಲೀಸ್ ಮಾಹಿತಿ ನೀಡುತ್ತಿದ್ದರು ಎಂಬ ಅನುಮಾನದ ಮೇಲೆ ಇಬ್ಬರು ಬುಡಕಟ್ಟು ಜನರನ್ನು ಮಾವೋವಾದಿಗಳು ಬರ್ಬರವಾಗಿ ಕೊಂದ ನಂತರ ನಕ್ಸಲ್‌ ವಿರೋಧಿ ಕಾರ್ಯಾಚರಣೆ ಚುರುಕುಗೊಂಡಿತ್ತು ಚಲ್ಬಾಕ್‌ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ … Continued