ಅಮೆರಿಕದಿಂದ ‘ಸೆರೆಹಿಡಿಯಲ್ಪಟ್ಟ’ ವೆನೆಜುವೆಲಾ ಅಧ್ಯಕ್ಷರ ಮೊದಲ ಚಿತ್ರ ಹಂಚಿಕೊಂಡ ಟ್ರಂಪ್-ವೀಡಿಯೊ

ಸುರಕ್ಷಿತ ಮತ್ತು ವಿವೇಚನಾಯುಕ್ತ ಪರಿವರ್ತನೆ ನಡೆಯುವವರೆಗೆ ಅಮೆರಿಕವು ವೆನೆಜುವೆಲಾವನ್ನು ಮುನ್ನಡೆಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಮಿಲಿಟರಿ ಕಾರ್ಯಾಚರಣೆಯಲ್ಲಿ ಅಮೆರಿಕದ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದ ನಂತರ ಅವರ ಚಿತ್ರವನ್ನು ಅಮೆರಿಕ ಅಧ್ಯಕ್ಷರು ಹಂಚಿಕೊಂಡ ಬಳಿಕ ಈ ಹೇಳಿಕೆ ಬಂದಿದೆ. ಚಿತ್ರದಲ್ಲಿ ವೆನೆಜುವೆಲಾದ ಅಧ್ಯಕ್ಷರಿಗೆ ಕೈಕೋಳ ಹಾಕಿರುವುದು … Continued

ವಾದ್ಯಗಳ ಅಂಗಡಿಯಿಂದ ಮ್ಯಾಂಡೋಲಿನ್ ಕದ್ದೊಯ್ದ ಕಳ್ಳ ; ನಂತ್ರ ಕ್ಷಮೆಯಾಚನೆ ಪತ್ರ ಬರೆದು ವಾಪಸ್‌ ಇಟ್ಟು ಹೋದ…!

ನ್ಯೂಜೆರ್ಸಿ : ಅಮೆರಿಕದ ನ್ಯೂಜೆರ್ಸಿಯ ಹಳೆಯ ಸಂಗೀತ ವಾದ್ಯಗಳ ಮಳಿಗೆಯೊಂದರಲ್ಲಿ ನಡೆದ ವಿಚಿತ್ರ ಕಳ್ಳತನವೊಂದು ಭಾರೀ ಸುದ್ದಿಯಲ್ಲಿದೆ. ಮಳಿಗೆಯಿಂದ ಕಳ್ಳತನವಾಗಿದ್ದ ಎರಡು ಅಮೂಲ್ಯ ಮ್ಯಾಂಡೊಲಿನ್ ವಾದ್ಯಗಳನ್ನು ಕಳುವು ಮಾಡಿದ್ದ ಕಳ್ಳನೇ ಮರಳಿ ತಂದುಕೊಟ್ಟಿದ್ದು, ಜೊತೆಗೆ ಕೈಬರಹದಲ್ಲಿ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟು ಹೋಗಿದ್ದಾನೆ….! ಈ ತಿಂಗಳ ಆರಂಭದಲ್ಲಿ ನ್ಯೂಜೆರ್ಸಿಯ ‘ಲಾರ್ಕ್ ಸ್ಟ್ರೀಟ್ ಮ್ಯೂಸಿಕ್’ (Lark Street Music) … Continued

ಅದೃಷ್ಟ ಅಂದ್ರೆ ಇದಪ್ಪ…: 16,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಲಾಟರಿ ಗೆದ್ದ ವ್ಯಕ್ತಿ…!

ಅರ್ಕಾನ್ಸಾಸ್ (ಅಮೆರಿಕ): ಕ್ರಿಸ್‌ಮಸ್ ಮುನ್ನಾದಿನದಂದು ನಡೆದ ಪವರ್‌ಬಾಲ್ (Powerball) ಲಾಟರಿ ಡ್ರಾದಲ್ಲಿ ಅರ್ಕಾನ್ಸಾಸ್ ರಾಜ್ಯದ ವ್ಯಕ್ತಿಯೊಬ್ಬರು ಬರೋಬ್ಬರಿ $1.817 ಶತಕೋಟಿ (ಸುಮಾರು 16,322 ಕೋಟಿ ರೂಪಾಯಿ) ಮೊತ್ತದ ಬೃಹತ್ ಜಾಕ್‌ಪಾಟ್ ಗೆದ್ದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಯಾವುದೇ ವಿಜೇತರಿಲ್ಲದೆ ಬಾಕಿ ಉಳಿದಿದ್ದ ಈ ಲಾಟರಿ ಮೊತ್ತವು ಇದೀಗ ಒಬ್ಬ ವ್ಯಕ್ತಿಯ ಪಾಲಾಗಿದೆ. ಬುಧವಾರ ರಾತ್ರಿ ನಡೆದ … Continued

ಪ್ರತಿ ಗಂಟೆಗೆ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿರುವ ದೇಶ ಯಾವುದು ? ಟಾಪ್‌-10 ದೇಶಗಳ ಪಟ್ಟಿ ; ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತೆ..?

ವಿಶ್ವದ ಜನಸಂಖ್ಯೆಯು ಈಗಾಗಲೇ 800 ಕೋಟಿ ದಾಟಿದೆ. 146 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದ್ದರೆ, 140 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಎರಡನೇ ಸ್ಥಾನದಲ್ಲಿದೆ. ಆದರೆ, ಇತ್ತೀಚಿನ ಗ್ಲೋಬಲ್ ಇಂಡೆಕ್ಸ್ (Global Index) ವರದಿಯು ಜನಸಂಖ್ಯೆಯ ಬದಲಾಗಿ ಅತ್ಯಂತ ಕಳವಳಕಾರಿ ವಿಷಯವೊಂದನ್ನು ಎತ್ತಿ ತೋರಿಸಿದೆ. ಅದುವೇ … Continued

ವೀಡಿಯೊ..| ಬಾಕ್ಸಿಂಗ್ ಪಂದ್ಯದ ನಂತರ ಹೈಡ್ರಾಮಾ : ಭಾರತದ ಬಾಕ್ಸರ್‌ ಗೆ ಬಾಟಲಿಯಿಂದ ಹೊಡೆದ ಸೋತ ಅಮೆರಿಕನ್‌ ಬಾಕ್ಸರ್‌…!

ದುಬೈ: ಇಲ್ಲಿ ನಡೆದ ಮಿಸ್‌ಫಿಟ್ಸ್ ಬಾಕ್ಸಿಂಗ್ ಪಂದ್ಯಾವಳಿಯ ನಂತರ ಭಾರತದ ಬಾಕ್ಸರ್ ನೀರಜ್ ಗೋಯತ್ ಮತ್ತು ಅಮೆರಿಕದ ಆಂಥೋನಿ ಟೇಲರ್ ನಡುವೆ ತೀವ್ರ ಘರ್ಷಣೆ ನಡೆದಿದೆ. ಕೈಕುಲುಕಲು (Handshake) ನಿರಾಕರಿಸಿದ ವಿಷಯವಾಗಿ ಆರಂಭವಾದ ಜಗಳ, ಬಾಟಲಿ ತೂರಾಟ ಮತ್ತು ಕುರ್ಚಿ ಎತ್ತುವ ಹಂತಕ್ಕೆ ತಲುಪಿದ ಘಟನೆ ವರದಿಯಾಗಿದೆ. ಪಂದ್ಯ ಮುಗಿದ ನಂತರ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದ … Continued

ಗಾಜಾಕ್ಕೆ ಪಾಕ್ ಸೈನ್ಯ ; ಅಮೆರಿಕ ಅಧ್ಯಕ್ಷ ಟ್ರಂಪ್ ಒತ್ತಡಕ್ಕೆ ಇಕ್ಕಟ್ಟಿನಲ್ಲಿ ಸಿಲುಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್/ವಾಷಿಂಗ್ಟನ್ : ಪಾಕಿಸ್ತಾನದ ಅತ್ಯಂತ ಪ್ರಭಾವಿ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ಯಾಲೆಸ್ತೈನ್‌ನ ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪಿಸಲು ಪಾಕಿಸ್ತಾನಿ ಸೈನ್ಯವನ್ನು ಕಳುಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರುತ್ತಿರುವುದು ಮುನೀರ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ … Continued

ಬಾಂಗ್ಲಾದಲ್ಲಿ ಹಸೀನಾ ಪದಚ್ಯುತಿಗೆ ಕ್ಲಿಂಟನ್‌ ದಂಪತಿ-ಸೊರೊಸ್ ಹಣಕಾಸು ನೆರವು, ಬೈಡನ್‌ ಬೆಂಬಲ : ಮಾಜಿ ಸಚಿವನ ಸ್ಫೋಟಕ ಹೇಳಿಕೆ

ಕಳೆದ ಆಗಸ್ಟ್ 2024 ರಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ಆಡಳಿತ ಬದಲಾವಣೆಯ ಹಿಂದೆ ಅಮೆರಿಕದ ‘ಡೀಪ್ ಸ್ಟೇಟ್’ (Deep State) ಕೈವಾಡವಿದೆ ಎಂಬ ವದಂತಿಗಳು ಬಹಳ ಕಾಲದಿಂದ ಹರಿದಾಡುತ್ತಿದ್ದವು. ಇದೀಗ, ಬಾಂಗ್ಲಾದೇಶದ ಮಾಜಿ ಸಚಿವ ಮೊಹಿಬುಲ್ ಹಸನ್ ಚೌಧರಿ ಅವರು ಈ ಆರೋಪವನ್ನು ದೃಢಪಡಿಸಿದ್ದಾರೆ. ಜುಲೈ-ಆಗಸ್ಟ್ 2024 ರ ಬಿಕ್ಕಟ್ಟಿನ … Continued

ಪಾಕಿಸ್ತಾನದ ಪರಮಾಣು ಸ್ಥಾವರದ ಮೇಲೆ ದಾಳಿ ಮಾಡಲು ಇಂದಿರಾ ಗಾಂಧಿ ಒಪ್ಪಿಗೆ ನೀಡಿರಲಿಲ್ಲ : ಅಮೆರಿಕದ ಮಾಜಿ ಸಿಐಎ ಅಧಿಕಾರಿ

ವಾಷಿಂಗ್ಟನ್ ಡಿಸಿ: ಪಾಕಿಸ್ತಾನದ ಪರಮಾಣು ಬಾಂಬ್‌ ಮಹತ್ವಾಕಾಂಕ್ಷೆಯನ್ನು ತಡೆಯಲು, 1980 ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಕಹೂಟಾ (Kahuta) ಪರಮಾಣು ಘಟಕದ ಮೇಲೆ ಬಾಂಬ್ ದಾಳಿ ನಡೆಸಲು ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಲು ಪ್ರಸ್ತಾಪಿಸಿದ್ದ ರಹಸ್ಯ ಕಾರ್ಯಾಚರಣೆಯು “ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದಿತ್ತು” ಎಂದು ಸಿಐಎ (CIA) ಯ ಮಾಜಿ ಅಧಿಕಾರಿ ರಿಚರ್ಡ್ ಬಾರ್ಲೋ ಅವರು … Continued

ವೀಡಿಯೊ…| ಪತ್ರಿಕಾಗೋಷ್ಠಿ ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್ ಪಕ್ಕದಲ್ಲಿ ಕುಸಿದುಬಿದ್ದ ಔಷಧ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ

ವಾಷಿಂಗ್ಟನ್ ಡಿ.ಸಿ.: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಚೇರಿಯಲ್ಲಿ (ಓವಲ್ ಆಫೀಸ್) ಹೊಸ ಬೊಜ್ಜು ನಿವಾರಕ ಔಷಧಗಳ ಬೆಲೆ ಕಡಿಮೆ ಮಾಡುವ ಕುರಿತು ಘೋಷಣೆ ಮಾಡುತ್ತಿದ್ದ ವೇಳೆ ಫಾರ್ಮಾಸ್ಯುಟಿಕಲ್ ಕಂಪನಿಯ ಕಾರ್ಯನಿರ್ವಾಹಕರೊಬ್ಬರು ಪಕ್ಕದಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ನೇರ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವು ದಿಢೀರನೆ ಸ್ಥಗಿತಗೊಂಡಿತು. ಟ್ರಂಪ್ ಅವರು ಪ್ರಸಿದ್ಧ GLP-1 ಬೊಜ್ಜು … Continued

ಇ-ಮೇಲ್ ನಿಂದ ಮೂನ್ ಲೈಟಿಂಗ್ ಕಳ್ಳಾಟ ಬಯಲು ; ಭಾರತದ ಮೂಲದ ವ್ಯಕ್ತಿಗೆ ಅಮೆರಿಕದಲ್ಲಿ 15 ವರ್ಷ ಜೈಲು

ನ್ಯೂಯಾರ್ಕ್: ಈ ಹಿಂದೆ ಭಾರತದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮೂನ್ ಲೈಟಿಂಗ್ ಇದೀಗ ಅಮೆರಿಕದಲ್ಲೂ ಸದ್ದು ಮಾಡುತ್ತಿದ್ದು, ಭಾರತ ಮೂಲದ ವ್ಯಕ್ತಿ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನ ಸರ್ಕಾರಿ ಕಚೇರಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಾ ಬೇರೊಂದು ಸಂಸ್ಥೆಗೆ ಅನೌಪಚಾರಿಕವಾಗಿ ಕೆಲಸ ಮಾಡುತ್ತಿದ್ದ (ಮೂನ್‌ಲೈಟ್‌) ಭಾರತ ಮೂಲದ 39 ವರ್ಷದ … Continued