ಭಾರತ-ಅಮೆರಿಕ ವ್ಯಾಪಾರ ಒಪ್ಪಂದ : ಚೀನಾ, ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತ ಭಾರತಕ್ಕೆ ಹೇಗೆ ಅನುಕೂಲ..?

ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಇದರ ಅಡಿಯಲ್ಲಿ ಅಮೆರಿಕವು ಭಾರತೀಯ ಸರಕುಗಳ ಮೇಲಿನ ಪರಸ್ಪರ ಸುಂಕವನ್ನು ಪ್ರಸ್ತುತ ಶೇಕಡಾ 25 ರಿಂದ ಶೇಕಡಾ 18 ಕ್ಕೆ ಇಳಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಕರೆಯ ನಂತರ ಅಮೆರಿಕದ ಅಧ್ಯಕ್ಷರು ಸಾಮಾಜಿಕ … Continued

ಭಾರತದ ಜೊತೆ ಅಮೆರಿಕ ವ್ಯಾಪಾರ ಒಪ್ಪಂದ : ಭಾರತದ ಮೇಲಿನ ಪ್ರತಿ ಸುಂಕ ಇಳಿಕೆ ; ಟ್ರಂಪ್ ಘೋಷಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಭಾರತದ ಮೇಲಿನ ಪ್ರತಿ ಸುಂಕವನ್ನು (reciprocal tariffs) ಶೇ. 25 ರಿಂದ ಶೇ. 18ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. ಭಾರೀ ಸುಂಕಗಳಿಂದಾಗಿ ಹದಗೆಟ್ಟಿದ್ದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಈ ನಿರ್ಧಾರವು ಹೊಸ ಭರವಸೆ ಮೂಡಿಸಿದೆ. ಪ್ರಧಾನಿ … Continued

ವೈದ್ಯಕೀಯ ಲೋಕದ ಅದ್ಭುತ…! ಶ್ವಾಸಕೋಶಗಳಿಲ್ಲದೆಯೇ 48 ಗಂಟೆಗಳ ಕಾಲ ಬದುಕುಳಿದ ವ್ಯಕ್ತಿ…!! ಅದು ಸಾಧ್ಯವಾದದ್ದು ಹೇಗೆ..?

ವೈದ್ಯಕೀಯ ವಿಜ್ಞಾನವು ಇಂದು ಕಲ್ಪನೆಗೂ ನಿಲುಕದ ಸಾಧನೆಗಳನ್ನು ಮಾಡುತ್ತಿದೆ. ಅಂತಹದ್ದೇ ಒಂದು ರೋಚಕ ಮತ್ತು ಐತಿಹಾಸಿಕ ಸಾಧನೆಯ ವೈದ್ಯಕೀಯ ವಿದ್ಯಮಾನ ಅಮೆರಿಕದ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರನ್ನು, ಅವರ ದೇಹದಲ್ಲಿ ಶ್ವಾಸಕೋಶಗಳೇ ಇಲ್ಲದಿದ್ದರೂ ಬರೋಬ್ಬರಿ 48 ಗಂಟೆಗಳ ಕಾಲ ಬದುಕಿಸಿಡುವ ಮೂಲಕ ಶಸ್ತ್ರಚಿಕಿತ್ಸಕರು ವೈದ್ಯಕೀಯ ಲೋಕದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. … Continued

ಟ್ರಂಪ್ ‘ಸುಂಕ’ ಸಮರಕ್ಕೆ ಭಾರತದ ಉತ್ತರ ಹೇಗಿರಬೇಕು..? ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಕಂಡುಬಂದ ಜನಾಭಿಪ್ರಾಯವೇನು..?

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಜಾಗತಿಕ ವ್ಯಾಪಾರ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಸ್ನೇಹ-ವ್ಯಾಪಾರ ಎರಡನ್ನೂ ವ್ಯವಹಾರಿಕವಾಗಿಯೇ ನೋಡುತ್ತಿರುವ ಟ್ರಂಪ್, ಮಿತ್ರ ರಾಷ್ಟ್ರಗಳನ್ನೂ ಬಿಡದೆ ಭಾರಿ ಪ್ರಮಾಣದ ಆಮದು ಸುಂಕ ವಿಧಿಸುತ್ತಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್‌ ಭಾರತದ ಮೇಲೂ ಅತಿಹೆಚ್ಚು ಅಂದರೆ ಶೇ. 50ರಷ್ಟು … Continued

ಭಾರತ-ಯುರೋಪ್‌ ಒಕ್ಕೂಟದ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ: ಇದು ಟ್ರಂಪ್‌ಗೆ ಹೇಗೆ ‘ಟಕ್ಕರ್’ ಕೊಡಲಿದೆ ?

ನವದೆಹಲಿ: ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ಕೊನೆಗೂ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ಈ ಬೆಳವಣಿಗೆಯನ್ನು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ “ಎಲ್ಲಾ ಒಪ್ಪಂದಗಳ ತಾಯಿ” (Mother of all deals) ಎಂದು ಬಣ್ಣಿಸಿದ್ದಾರೆ. ಯಾಕೆಂದರೆ ಇದು … Continued

ಅಮೆರಿಕದ ಭೂಪಟದಲ್ಲಿ ಕೆನಡಾ, ವೆನೆಜುವೆಲಾ, ಗ್ರೀನ್‌ಲ್ಯಾಂಡ್ ಸೇರ್ಪಡೆ: ಟ್ರಂಪ್ ಪೋಸ್ಟ್‌ ಜಾಗತಿಕ ಚರ್ಚೆಗೆ ಗ್ರಾಸ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಬಿಡುಗಡೆ ಮಾಡಿರುವ ನೂತನ ಭೂಪಟವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮ್ಮ ‘ಟ್ರುತ್ ಸೋಶಿಯಲ್’ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಭೂಪಟದಲ್ಲಿ ಕೆನಡಾ, ವೆನೆಜುವೆಲಾ ಮತ್ತು ಗ್ರೀನ್‌ಲ್ಯಾಂಡ್ ರಾಷ್ಟ್ರಗಳನ್ನು ಅಮೆರಿಕದ ಭೂಭಾಗವೆಂದು ತೋರಿಸಲಾಗಿದೆ. AI ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದಂತೆ ಕಾಣುವ ಈ ಚಿತ್ರದಲ್ಲಿ, ಟ್ರಂಪ್ ಅವರು ಬ್ರಿಟನ್ … Continued

ಅಮೆರಿಕದ ಗ್ರೀನ್‌ಲ್ಯಾಂಡ್ ಸ್ವಾಧೀನ ಪ್ರಸ್ತಾವನೆಗೆ ವಿರೋಧ : ಯುರೋಪಿಯನ್ ರಾಷ್ಟ್ರಗಳ ಮೇಲೆ ಭಾರೀ ಸುಂಕ ಹೇರಿದ ಟ್ರಂಪ್‌

ಅಮೆರಿಕದ ಗ್ರೀನ್‌ಲ್ಯಾಂಡ್ ಸ್ವಾಧೀನ ಪಡಿಸಿಕೊಳ್ಳುವ ಯೋಜನೆಯನ್ನು ವಿರೋಧಿಸುತ್ತಿರುವ ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ. 10 ರಷ್ಟು ಆಮದು ಸುಂಕವನ್ನು (Tariff) ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಪ್ರಕಟಿಸಿದ್ದಾರೆ. ಫೆಬ್ರವರಿ 1 ರಿಂದ ಡೆನ್ಮಾರ್ಕ್, ಬ್ರಿಟನ್, ಫ್ರಾನ್ಸ್ ಮತ್ತು ಇತರ ಐರೋಪ್ಯ ಒಕ್ಕೂಟದ (EU) ರಾಷ್ಟ್ರಗಳ ಮೇಲೆ ಈ ಸುಂಕ ಜಾರಿಗೆ ಬರಲಿದೆ. ತಮ್ಮ … Continued

ಸುಂಕದ ಮೂಲಕ ಜಗತ್ತನ್ನು ಹೆದರಿಸುತ್ತಿರುವ ಟ್ರಂಪ್ ; ಆದ್ರೆ ಈಗ ಭಾರತದ ಸುಂಕಕ್ಕೆ ಹೆದರಿದ ಅಮೆರಿಕ ಸೆನೆಟರ್‌ಗಳು…!

ವಾಷಿಂಗ್ಟನ್ : ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಮಾತುಕತೆಗಳು ಮುಂದುವರಿಯುತ್ತಿರುವ ಬೆನ್ನಲ್ಲೇ, ಅಮೆರಿಕದ ಇಬ್ಬರು ಪ್ರಭಾವಿ ಸೆನೆಟರ್‌ಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಹತ್ವದ ಮನವಿ ಮಾಡಿದ್ದಾರೆ. ಭಾರತವು ಅಮೆರಿಕದ ಬೇಳೆಕಾಳುಗಳ (Pulse crops) ಆಮದಿನ ಮೇಲೆ ವಿಧಿಸಿರುವ ಹೆಚ್ಚಿನ ಸುಂಕವನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಅವರು … Continued

ಇರಾನ್‌ನಲ್ಲಿರುವ ಭಾರತೀಯರಿಗೆ ತಕ್ಷಣ ದೇಶ ತೊರೆಯಲು ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಇರಾನ್‌ನಲ್ಲಿ ದಿನೇ ದಿನೇ ಉಲ್ಬಣಿಸುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಅಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಭಾರತ ಸರ್ಕಾರ ಬುಧವಾರ (ಜನವರಿ 14, 2026) ತುರ್ತು ಸಲಹೆ (Advisory) ನೀಡಿದೆ. ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಲಭ್ಯವಿರುವ ವಿಮಾನಗಳು ಅಥವಾ ಇತರೆ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು … Continued

ಮೈಕ್ರೋವೇವ್‌ ಒವೆನ್‌ನಲ್ಲಿ ʼಪಾಲಕ್ ಪನೀರ್ʼ ಬಿಸಿ ಮಾಡಿದ ಪ್ರಕರಣ : ಅಮೆರಿಕ ವಿವಿಯಿಂದ ಇಬ್ಬರು ಭಾರತೀಯ ವಿದ್ಯಾರ್ಥಿಗಳಿಗೆ ₹1.6 ಕೋಟಿ ಪರಿಹಾರ…!

ಕೊಲೊರಾಡೋ (ಅಮೆರಿಕ) : ಕೇವಲ ಮಧ್ಯಾಹ್ನದ ಊಟದ ವಿಷಯಕ್ಕೆ ಆರಂಭವಾದ ವಿವಾದವೊಂದು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದಕ್ಕೆ ಭಾರೀ ದಂಡ ತೆರುವಂತೆ ಮಾಡಿದೆ. ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಭಾರತೀಯ ವಿದ್ಯಾರ್ಥಿಗಳು, ಜನಾಂಗೀಯ ತಾರತಮ್ಯದ ವಿರುದ್ಧ ಕಾನೂನು ಹೋರಾಟ ನಡೆಸಿ ಸುಮಾರು 1.65 ಕೋಟಿ ರೂಪಾಯಿ ($200,000) ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. … Continued