ಸಾಕು ಬೆಕ್ಕಿನ ಶವದೊಂದಿಗೆ ಎರಡು ದಿನ ಕಳೆದ ಮಹಿಳೆ…! ನಂತರ ಮನನೊಂದು ಆತ್ಮಹತ್ಯೆ…!!

ಲಕ್ನೋ: ಮಹಿಳೆಯೊಬ್ಬರು ತನ್ನ ಸಾಕು ಬೆಕ್ಕು ಸತ್ತ ನಂತರ ಅದರ ಶವದ ಜೊತೆ ಎರಡು ದಿನ ಕಾಲ ಕಳೆದ ಬಳಿಕ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. 35 ವರ್ಷದ ಮಹಿಳೆ ಪೂಜಾ ಎಂಬವರು ತನ್ನ ಪ್ರೀತಿಯ ಮುದ್ದಿನ ಬೆಕ್ಕಿನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಸನ್‌ಪುರ ಪಟ್ಟಣದ … Continued

ತಂದೆಗೆ ತಕ್ಕ ಪಾಠ ಕಲಿಸಲು ತನ್ನ ಮನೆಯಿಂದ 20 ಲಕ್ಷ ರೂ. ನಗದು, 80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಬಾಲಕ…!

ಕಾನ್ಪುರ: ತಂದೆಗೆ ತಕ್ಕ ಪಾಠ ಕಲಿಸಲು 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಆರು ಜನ ಸ್ನೇಹಿತರ ಜೊತೆ ಸೇರಿ ಕಾನ್ಪುರದ ತನ್ನ ಸ್ವಂತ ಮನೆಯಲ್ಲಿಯೇ 1 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ನಡೆದಿದೆ…! ತನ್ನ ತಂದೆ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿದ್ದಾಗಿ ಬಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ…!! ಕಾನ್ಪುರದ ಉಪನಗರವಾದ … Continued

ಕುಡಿದ ಅಮಲಿನಲ್ಲಿ ವಧುವಿನ ಬದಲು ಗೆಳೆಯನ ಕೊರಳಿಗೆ ಮಾಲೆ ಹಾಕಿದ ವರ…! ಕೋಪದಿಂದ ಮದುವೆ ರದ್ದುಗೊಳಿಸಿದ ವಧು…!!

ಬರೇಲಿ : ಮದ್ಯದ ಅಮಲಿನಲ್ಲಿದ್ದ ವರನೊಬ್ಬ ಮದುವೆಯ ಮಾಲೆಯನ್ನು ವಧುವಿನ ಕೊರಳಿಗೆ ಹಾಕುವ ಬದಲು ತನ್ನ ಸ್ನೇಹಿತನ ಕೊರಳಿಗೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಈ ವಿಲಕ್ಷಣ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವರ ಕುಡಿದಿದ್ದನ್ನು ಕಂಡು ಕೋಪಗೊಂಡ ವಧು, ಆತನನ್ನು ಮದುವೆಯಾಗಲು ನಿರಾಕರಿಸಿ ಮದುವೆಯನ್ನು ರದ್ದುಗೊಳಿಸಿದ್ದಾಳೆ. … Continued

ಮಹಾಕುಂಭ 2025 : ಈವರೆಗೆ 62 ಕೋಟಿ ಭಕ್ತರ ಆಗಮನ

ಆಗ್ರಾ : ಮಹಾಕುಂಭ ಮೇಳ 2025 ಮುಕ್ತಾಯಗೊಳ್ಳುವ ಮೂರು ದಿನಗಳ ಮೊದಲು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಹಾಕುಂಭಕ್ಕೆ ಈವರೆಗೆ 62 ಕೋಟಿ ಭಕ್ತರು ಆಗಮಿಸಿದ್ದಾರೆ ಎಂದು ಭಾನುವಾರ ತಿಳಿಸಿದ್ದಾರೆ. ಮತ್ತು ನಿರ್ದಿಷ್ಟ ಅವಧಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರು ಸೇರಿದ್ದು “ಶತಮಾನದ ಅಪರೂಪದ ಘಟನೆಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ. ಆಗ್ರಾದಲ್ಲಿ ನಡೆದ … Continued

ದಾಖಲೆ ಬರೆದ ಮಹಾಕುಂಭ ಮೇಳ 2025 ; ಈವರೆಗೆ ತ್ರಿವೇಣಿ ಸಂಗಮದಲ್ಲಿ 50 ಕೋಟಿಗೂ ಹೆಚ್ಚು ಭಕ್ತರಿಂದ ಪವಿತ್ರ ಸ್ನಾನ

ನವದೆಹಲಿ : ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಶುಕ್ರವಾರ ಸಂಜೆಯವರೆಗೆ 50 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಶುಕ್ರವಾರ ಸಂಜೆ 6 ಗಂಟೆ ವರೆಗೆ 92.84 ಲಕ್ಷ ಜನರು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದ್ದಾರೆ. ಗುರುವಾರ ರಾತ್ರಿ … Continued

ವೀಡಿಯೊ…| ಮಹಾ ಕುಂಭಮೇಳಕ್ಕೆ ಹೋಗಲು ರೈಲು ಹತ್ತಲು ಸಾಧ್ಯವಾಗದ್ದಕ್ಕೆ ರೈಲಿನ ಕಿಟಿಕಿಯನ್ನೇ ಒಡೆದು ಹಾಕಿದ ಪ್ರಯಾಣಿಕರು…

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುತ್ತಿರುವ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದೆ ಸ್ವತಂತ್ರ ಸೇನಾನಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ಗಾಜಿನ ಕಿಟಕಿಗಳನ್ನು ಒಡೆದ ಘಟನೆ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ರೈಲು ಹತ್ತಲಾಗದೆ ಹತಾಶೆಗೊಂಡ ಪ್ರಯಾಣಿಕರು ರೈಲಿಗೆ ಕಲ್ಲು ಎಸೆದು ಎಸಿ ಕಂಪಾರ್ಟ್‌ಮೆಂಟ್‌ಗಳ ಗಾಜುಗಳನ್ನು … Continued

ವೀಡಿಯೊ..| ಪ್ರಯಾಗರಾಜ್‌ ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಪ್ರಯಾಗರಾಜ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು, ಸೋಮವಾರ ಬೆಳಿಗ್ಗೆ ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ತೇಲುವ ಜೆಟ್ಟಿಯ ಮೇಲೆ ಭದ್ರತಾ ಸಿಬ್ಬಂದಿ ರಾಷ್ಟ್ರಪತಿ ಮುರ್ಮು ಅವರನ್ನು ಕರೆದುಕೊಂಡು ಹೋದರು, ನಂತರ ಅವರು ರಾಂಪ್ ಮೇಲೆ ಹತ್ತಿ ಸ್ನಾನ ಮಾಡಿದರು. ರಾಷ್ಟ್ರಪತಿ ಮುರ್ಮು ಅವರು … Continued

ವೀಡಿಯೊಗಳು…| ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್‌..! ಮಹಾಕುಂಭದಿಂದ 300 ಕಿಮೀ ವರೆಗೆ ಟ್ರಾಫಿಕ್ ಜಾಮ್ ; ಪ್ರಯಾಗರಾಜ್‌ ವಾಹನಗಳ ಸಮುದ್ರ…!!

ಮಹಾಕುಂಭಮೇಳ 2025 ಕ್ಕೆ ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ಲಕ್ಷಾಂತರ ಭಕ್ತರು ಹರಿದುಬರುತ್ತಿರುವುದರಿಂದ, ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಅಭೂತಪೂರ್ವಸಂಚಾರ ದಟ್ಟಣೆಗೆ ಸಾಕ್ಷಿಯಾಗುತ್ತಿದೆ, ಸುಮಾರು 300 ಕಿಲೋಮೀಟರ್ ದೂರದ ವರೆಗೆ ಟ್ರಾಫಿಕ್ ಜಾಮ್‌ ಉಂಟಾಗಿದೆ. ಪ್ರಯಾಗರಾಜ್ ಮಹಾಕುಂಭಮೇಳ ವಾಹನಗಳ ಸಮುದ್ರದಂತೆ ಭಾಸವಾಗುತ್ತಿದ್ದು, ಲಕ್ಷಾಂತರ ಜನರು ಟ್ರಾಫಿಕ್‌ರು ಜಾಮ್‌ಗಳಲ್ಲಿ ಭಾನುವಾರ ಸಿಲುಕಿಕೊಂಡಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ … Continued

ಮೈ ಜುಂ ಎನ್ನುವ ವೀಡಿಯೊ | ರೈತನಿಗೆ ದಾರಿಯಲ್ಲಿ ಎದುರಾದ ದೈತ್ಯ ಹುಲಿ; ಮುಂದಾಗಿದ್ದು….?

ಉತ್ತರ ಪ್ರದೇಶದ ಪಿಲಿಭಿತ್‌ನ ಹೊಲವೊಂದರಲ್ಲಿ ರೈತನೊಬ್ಬನಿಗೆ ಹುಲಿ ಎದುರಾಗಿದ್ದು, ಆತ ಕ್ಷಣಕಾಲ ಸ್ತಂಭಿಭೂತನಾಗಿದ್ದಾನೆ. ಈ ವಿಸ್ಮಯಕಾರಿಯಾಗಿ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊ ಕ್ಲಿಪ್‌ನಲ್ಲಿ ರೈತ ತನ್ನ ಬೈಕ್‌ನಲ್ಲಿ ಬರುತ್ತಿದ್ದಾಗ ಹುಲಿ ಎದುರಾಗಿರುವುದನ್ನು ನೋಡಬಹುದು. ರೈತ ಬೈಕ್‌ನಲ್ಲಿ ಕುಳಿತಿದ್ದಾರೆಹಾಗೂ ಇನ್ನೊಬ್ಬ ವ್ಯಕ್ತಿ ಅವರ ಪಕ್ಕದಲ್ಲಿ ನಿಂತಿದ್ದಾರೆ. … Continued

ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗಲೇ ಕಾಂಗ್ರೆಸ್‌ ಸಂಸದರನ್ನು ಬಂಧಿಸಿದ ಪೊಲೀಸರು…

ಲಕ್ನೋ: ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ ಅವರನ್ನು ಗುರುವಾರ ಬಂಧಿಸಲಾಗಿದೆ. ಉತ್ತರ ಪ್ರದೇಶದ ಸೀತಾಪುರದ ಲೋಕಸಭಾ ಸಂಸದ ರಾಥೋಡ್ ಅವರನ್ನು ಅವರ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗಲೇ ಬಂಧಿಸಲಾಯಿತು. ಸಂಸದ ರಾಥೋಡ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದು, ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಕೊತ್ವಾಲಿ ನಗರ ಪೊಲೀಸರು ರಾಥೋಡ್ ಅವರನ್ನು … Continued