ವೀಡಿಯೊ..| ಮತ್ತೊಂದು ಹೆಲಿಕಾಪ್ಟರ್‌ ಮೂಲಕ ಏರ್‌ ಲಿಫ್ಟ್‌ ಮಾಡುತ್ತಿದ್ದಾಗ ನದಿಗೆ ಬಿದ್ದ ಹೆಲಿಕಾಪ್ಟರ್‌

ಈ ಹಿಂದೆ ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಲ್ಯಾಂಡಿಂಗ್ ವೇಳೆ ಹಾನಿಗೊಳಗಾಗಿದ್ದ ಹೆಲಿಕಾಪ್ಟರ್ ಶನಿವಾರ ಮಂದಾಕಿನಿ ನದಿಯ ಬಳಿ ಪತನಗೊಂಡಿತ್ತು. ರಿಪೇರಿಗಾಗಿ ಮತ್ತೊಂದು ಹೆಲಿಕಾಪ್ಟರ್ ಮೂಲಕ ಗೌಚಾರ್ ಏರ್‌ಸ್ಟ್ರಿಪ್‌ಗೆ ಏರ್‌ ಲಿಫ್ಟ್‌ ಮಾಡುವಾಗ ಹೆಲಿಕಾಪ್ಟರ್ ಥಾರು ಕ್ಯಾಂಪ್ ಬಳಿ ಬಿದ್ದಿದೆ. ಯಾರಿಗೂ ಯಾವುದೇ ಗಾಯಗಳು ಅಥವಾ ಸಾವು ನೋವುಗಳು ವರದಿಯಾಗಿಲ್ಲ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೇದಾರನಾಥ … Continued

ವೀಡಿಯೊ..| 50 ಹಸುಗಳನ್ನು ನದಿಗೆ ಎಸೆದ ದುಷ್ಕರ್ಮಿಗಳು ; 20 ಹಸುಗಳು ಸಾವು..!

ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಹಲವಾರು ಹಸುಗಳನ್ನು ಉಕ್ಕಿ ಹರಿಯುತ್ತಿದ್ದ ನದಿಗೆ ಎಸೆಯುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾಗೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, 15 ರಿಂದ 20 ಹಸುಗಳು ಸಾವಿಗೀಡಾಗಿವೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ, ಆದರೂ ಇದು ಇನ್ನೂ ದೃಢೀಕರಿಸಲ್ಪಟ್ಟಿಲ್ಲ ಎಂದು … Continued

ವೀಡಿಯೊ…| ಮೈಮೇಲೆ 25 ಕೆಜಿ ಚಿನ್ನಾಭರಣ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಕುಟುಂಬ…!

ತಿರುಪತಿ: ಪುಣೆಯ ಭಕ್ತರು ಬುಧವಾರ (August 23) ಮುಂಜಾನೆ ಸುಮಾರು 25 ಕೆಜಿ ಚಿನ್ನವನ್ನು ಧರಿಸಿ ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇಬ್ಬರು ಪುರುಷರು, ಒಬ್ಬ ಮಹಿಳೆ ಮತ್ತು ಒಬ್ಬ ಬಾಲಕ ದೇವಸ್ಥಾನಕ್ಕೆ ಭೇಟಿ ನೀಡುವಾಗ ಹಲವಾರು ಚಿನ್ನದ ಸರಗಳು, ಚಿನ್ನದ ಸನ್‌ ಗ್ಲಾಸುಗಳು, ಬಳೆಗಳು, ನೆಕ್ಲೇಸುಗಳು, ‘7’ ಸಂಖ್ಯೆಯ ಚಿನ್ನದ … Continued

ವೀಡಿಯೊ…| ನನ್ನಪ್ಪನನ್ನು ಜೈಲಿಗೆ ಹಾಕಿ ; ತಂದೆ ವಿರುದ್ಧ ದೂರು ನೀಡಲು ಪೊಲೀಸ್‌ ಠಾಣೆಗೆ ಬಂದ 5 ವರ್ಷದ ಪುಟ್ಟ ಪೋರ ; ಪೊಲೀಸರು ಸುಸ್ತು !

ಇತ್ತೀಚೆಗೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ 5 ವರ್ಷದ ಪುಟ್ಟ ಪೋರನೊಬ್ಬ ತನ್ನ ತಂದೆಯ ವಿರುದ್ಧ ದೂರು ದಾಖಲು ಮಾಡಲು ಪೊಲೀಸ್‌ ಠಾಣೆಗೆ ಬಂದಿದ್ದಾನೆ..! ಯಾರ ಭಯವೂ ಇಲ್ಲದೆ ನೇರವಾಗಿ ಪೊಲೀಸ್‌ ಠಾಣೆಗೆ ಬಂದ 5 ವರ್ಷದ ಬಾಲಕ ನದಿ ನೀರಿನಲ್ಲಿ ಆಟವಾಡಲು ಬಿಡದ ಹಾಗೂ ಜನನಿಬಿಡ ಬೀದಿಯಲ್ಲಿ ಆಟವಾಡುವುದನ್ನು ನಿರ್ಬಂಧಿಸಿದ್ದರಿಂದ ತಂದೆಯ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ … Continued

ಆಟಿಕೆ ಎಂದು ಭಾವಿಸಿ ಹಾವನ್ನೇ ಕಚ್ಚಿ ಸಾಯಿಸಿದ 1 ವರ್ಷದ ಬಾಲಕ ; ವೈದ್ಯರೇ ಕಂಗಾಲು…!

ಒಂದು ವಿಲಕ್ಷಣ ಘಟನೆಯಲ್ಲಿ, ಒಂದು ವರ್ಷದ ಮಗು ಅಂಬೆಗಾಲಿಡುವ ಮಗು ಹಾವನ್ನು ಕಚ್ಚಿ ಸಾಯಿಸಿದ ಬಗ್ಗೆ ವರದಿಯಾಗಿದೆ. ಕಳೆದ ವಾರ ಬಿಹಾರದ ಗಯಾ ಜಿಲ್ಲೆಯ ಜಮುಹರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಂಬೆಗಾಲಿಡುವ ಮಗು ತನ್ನ ಟೆರೇಸ್‌ನಲ್ಲಿ ಆಟವಾಡುತ್ತಿದ್ದಾಗ ಹಾವನ್ನು ಕಂಡು ಅದನ್ನು ಕಚ್ಚಿದೆ. ಬಾಲಕ ಅಪಾಯದಿಂದ ಪಾರಾಗಿದ್ದು, ಹಾವು ಮಾತ್ರ ಸತ್ತಿದೆ. ಈ ಘಟನೆಯು … Continued

ಆಘಾತಕಾರಿ ವೀಡಿಯೊ | ಕೌಟುಂಬಿಕ ಕಲಹಕ್ಕೆ ರಸ್ತೆ ರಂಪಾಟ : ಮಗು ಜತೆ ಮಹಿಳೆ ಕುಳಿತಿದ್ದ ಕಾರಿಗೆ ತನ್ನ ಕಾರಿನಿಂದ 2 ಸಲ ಡಿಕ್ಕಿ ಹೊಡೆದ ವ್ಯಕ್ತಿ ; ನಾಲ್ವರಿಗೆ ಗಾಯ

ಮುಂಬೈ : ಕೌಟುಂಬಿಕ ಕಲಹದ ಕಾರಣಕ್ಕೆ ಕಾರು ಚಾಲಕನೊಬ್ಬ ತನ್ನ ವಾಹನವನ್ನು ಮತ್ತೊಂದು ಕಾರಿಗೆ ಎರಡು ಬಾರಿ ಡಿಕ್ಕಿ ಹೊಡೆಸಿದ ಘಟನೆಯಲ್ಲಿ ನಾಲ್ವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಘಟನೆ ಥಾಣೆ ಜಿಲ್ಲೆಯ ಅಂಬರನಾಥ್-ಬದ್ಲಾಪುರ ರಸ್ತೆಯಲ್ಲಿ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಕಪ್ಪು ಬಣ್ಣದ ಎಸ್‌ಯುವಿ ಜನನಿಬಿಡ … Continued

ವೀಡಿಯೊ..| ಬೆಂಗಳೂರು : ಒಳಗೆ ಮಗುವಿದೆ ಎಂದು ಕೂಗಿಕೊಂಡ್ರೂ ಕಾರಿನ ಗಾಜು ಒಡೆದು ಯುವಕನ ಪುಂಡಾಟ..

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಕಾರಿನ ಗ್ಲಾಸ್​ ಒಡೆದು ಗದ್ದಲ ಎಬ್ಬಿಸಿರುವ ಘಟನೆ ಸರ್ಜಾಪುರ ಮುಖ್ಯರಸ್ತೆಯ (Sarjapur Road) ದೊಡ್ಡಕನ್ನೆಹಳ್ಳಿ ಬಳಿ ನಡೆದಿದೆ. ಗ್ಲಾಸ್ ಒಡೆಯುತ್ತಿದ್ದಂತೆ ಕಾರಿನ‌ ಒಳಗಿದ್ದವರು ಕೂಗಿಕೊಂಡಿದ್ದಾರೆ. ಕಾರಿನಲ್ಲಿ ಪುಟ್ಟ ಮಗು ಇದೆ ಎಂದು ಚಾಲಕನ ಸೀಟಿನಲ್ಲಿ ಕುಳಿತಿದ್ದವರು ಕೂಗುತ್ತಿದ್ದರೂ ಯುವಕ ಗಲಾಟೆ ಮುಂದುವರೆಸಿದ್ದಾನೆ. ರಸ್ತೆಯ ಮಧ್ಯದಲ್ಲಿ ಕಾರಿನ ವಿಂಡ್‌ಸ್ಕ್ರೀನ್ ಒಡೆಯುವ … Continued

ವೀಡಿಯೊ…| ವೈದ್ಯರು ಪರೀಕ್ಷಿಸುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು

ಇಂದೋರ್ : 31 ವರ್ಷದ ಆಟೋ ಚಾಲಕರೊಬ್ಬರು ವೈದ್ಯರು ತಪಾಸಣೆ ನಡೆಸುತ್ತಿದ್ದ ವೇಳೆಯೇ ಹಠಾತ್ ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಇಂದೋರ್‌ನ ಶಿವಾಜಿ ನಗರದ ನಿವಾಸಿ ಸೋನು ಮಟ್ಕರ್ ಎಂದು ಗುರುತಿಸಲಾಗಿದೆ. ತಡರಾತ್ರಿ ಎದೆನೋವು ಕಾಣಿಸಿಕೊಂಡ ನಂತರ ಮಟ್ಕರ್ ಅವರೇ ಸಮೀಪದ ಕ್ಲಿನಿಕ್‌ಗೆ ತೆರಳಿದ್ದರು. ವೈದ್ಯರು ಅವರನ್ನು ಪರೀಕ್ಷಿಸುತ್ತಿದ್ದಾಗ ಏಕಾಏಕಿ ಕುಸಿದು … Continued

ನಕಲಿ ಬೆಳ್ಳುಳ್ಳಿ | ಇರಲಿ ಎಚ್ಚರ… ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ ; ವೀಡಿಯೊ ನೋಡಿದ್ರೆ ದಂಗಾಗ್ತೀರಾ…!

ಮುಂಬೈ : ಈ ಹಿಂದೆ ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಹಾಗೂ ಮೊಟ್ಟೆ ಮಾರುಕಟ್ಟೆಗೆ ಬಂದಿದ್ದವು. ಈಗ ಗಗನಕ್ಕೇರುತ್ತಿರುವ ಬೆಳ್ಳುಳ್ಳಿ ಬೆಲೆಯಿಂದಾಗಿ ನಕಲಿ ಬೆಳ್ಳುಳ್ಳಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಅಕೋಲಾದಲ್ಲಿ, ಗಗನಕ್ಕೇರುತ್ತಿರುವ ಬೆಳ್ಳುಳ್ಳಿ ಬೆಲೆಗಳಿಂದಾಗಿ ಸಿಮೆಂಟ್‌ನಿಂದ ಮಾಡಿದ ನಕಲಿ ಬೆಳ್ಳುಳ್ಳಿಯನ್ನು ಖರೀದಿದಾರರಿಗೆ ಮಾರಾಟ ಮಾಡಲಾಗುತ್ತಿದೆ ಎಂದು … Continued

ಬೆಂಗಳೂರು | ನಡು ರಸ್ತೆಯಲ್ಲಿ ಸ್ಟಂಟ್ ; ಬೇಸತ್ತು 2 ಸ್ಕೂಟರ್‌ಗಳನ್ನು ಫ್ಲೈಓವರ್‌ನಿಂದ ಕೆಳಕ್ಕೆ ಎಸೆದ ಜನ : ದೃಶ್ಯ ಕ್ಯಾಮರಾದಲ್ಲಿ ಸೆರೆ

ಬೆಂಗಳೂರು: ರೀಲ್‌ಗಳನ್ನು ಮಾಡುವ ಭರಾಟೆ ದೇಶದ ಯುವಕರನ್ನು ಆವರಿಸಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಲು ಇನ್ಸ್ಟಾಗ್ರಾಂ (Instagram)ರೀಲ್‌ಗಳಿಗಾಗಿ ವೀಡಿಯೊಗಳನ್ನು ಚಿತ್ರೀಕರಿಸಲು ಯಾವುದೇ ಹಂತಕ್ಕೆ ಹೋಗಿ ಅಪಾಯ ತಂದುಕೊಂಡ ಅನೇಕ ಉದಾಹರಣೆಗಳಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಲೈಕ್‌ಗಳು ಮತ್ತು ಫಾಲೋವರ್ಸ್‌ಗಳಿಗಾಗಿ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡುತ್ತಾರೆ, ಅಲ್ಲದೆ ಇತರರ ಜೀವವನ್ನೂ ಅಪಾಯಕ್ಕೆ ಒಡ್ಡುತ್ತಾರೆ. ಇದೇ ಇಂಥಹದ್ದೇ ವಿದ್ಯಮಾನವೊಂದರಲ್ಲಿ … Continued