ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕ ಬದಲು

ನವದೆಹಲಿ: ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಪರಿಷ್ಕರಿಸಿದೆ. ಈ ಹಿಂದೆ ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿತ್ತು. ಈಗ ಫಲಿತಾಂಶಗಳ ದಿನಾಂಕವನ್ನು ಡಿಸೆಂಬರ್ 4 ಕ್ಕೆ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಮಿಜೋರಾಂ ಎನ್‌ಜಿಒ ಸಮನ್ವಯ ಸಮಿತಿ (ಎನ್‌ಜಿಒಸಿಸಿ) ಆಯೋಜಿಸಿದ ಪ್ರತಿಭಟನೆಗಳ ನಂತರ ಎಣಿಕೆ ದಿನಾಂಕವನ್ನು ಪರಿಷ್ಕರಿಸುವ ನಿರ್ಧಾರವು ಬಂದಿದೆ. … Continued

ಕುಶಾಲನಗರ: ನಿಂತಿದ್ದ ಕಾರಿನಲ್ಲಿ ವೈದ್ಯ ಶವವಾಗಿ ಪತ್ತೆ

ಮಡಿಕೇರಿ : ವೈದ್ಯರೊಬ್ಬರ ಶವ ಕುಶಾಲನಗರದ ಆನೆಕಾಡಿನ ಕಾರಿನಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ವೈದ್ಯನ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರದ ಶಿವಳ್ಳಿ ಗ್ರಾಮದ ಡಾ. ಸತೀಶ (47) ಮೃತಪಟ್ಟ ವೈದ್ಯರು ಎಂದು ಗುರುತಿಸಲಾಗಿದೆ. ಇವರ ಹೆಸರು ರಾಜ್ಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿರುವ ಭ್ರೂಣ ಹತ್ಯೆ ಪ್ರಕರಣದಲ್ಲಿ ಕೇಳಿಬಂದಿತ್ತು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು … Continued

ಚಿಕ್ಕಮಗಳೂರಿನಲ್ಲಿ ವಕೀಲನ ಮೇಲೆ ಹಲ್ಲೆ : ಸ್ವಯಂಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸಿದ ಹೈಕೋರ್ಟ್‌

ಬೆಂಗಳೂರು : ಚಿಕ್ಕಮಗಳೂರಿನ ವಕೀಲ ಪ್ರೀತಂ ಅವರ ಮೇಲಿನ ಪೊಲೀಸರ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತುರ್ತು ವಿಚಾರಣೆ ನಡೆಸಿತು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕ್ರಮಕೈಗೊಂಡಿರುವುದರಿಂದ ಕಲಾಪಕ್ಕೆ ಗೈರಾಗದಂತೆ ವಕೀಲರಿಗೆ ಸಲಹೆ ನೀಡಿತು. “ಪ್ರೀತಂ ಮೇಲಿನ ಪೊಲೀಸರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು … Continued

ಚಿಕ್ಕಮಗಳೂರಲ್ಲಿ ವಕೀಲನ ಮೇಲೆ ಹಲ್ಲೆ: ಪಿಎಸ್‌ಐ ಸೇರಿ 6 ಪೊಲೀಸರ ಅಮಾನತು

ಚಿಕ್ಕಮಗಳೂರು : ಹೆಲ್ಮೆಟ್‌ ಧರಿಸದ ವಕೀಲರೊಬ್ಬರನ್ನು ಪೊಲೀಸರು ಮನಸೋಇಚ್ಛೆ ಥಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ವಕೀಲ ಸಮುದಾಯ ಶುಕ್ರವಾರ ಭಾರೀ ಪ್ರತಿಭಟನೆ ನಡೆಸಿದ್ದು ಇದೇ ವೇಳೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮಹೇಶ್‌ ಪೂಜಾರಿ ಸೇರಿದಂತೆ ಆರು ಆರಕ್ಷಕ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ವಿಚಾರಣೆ ನಡೆಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ ಅಮಾನತು ಆದೇಶ ಹೊರಡಿಸಿದ್ದಾರೆ. ಈ … Continued

ಖಲಿಸ್ತಾನ್ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌ ಕೊಲ್ಲುವ ಸಂಚು ರೂಪಿಸಿದ್ದನೆಂದು ಅಮೆರಿಕ ಆರೋಪ ಹೊರಿಸಿದ ಈ ನಿಖಿಲ್ ಗುಪ್ತಾ ಯಾರು..?

ಅಮೆರಿಕ ಮತ್ತು ಕೆನಡಾದ ಪೌರತ್ವ ಹೊಂದಿರುವ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌ನನ್ನು ಅಮೆರಿಕ ನೆಲದಲ್ಲಿ ಹತ್ಯೆ ಮಾಡಲು ಭಾರತೀಯ ಸರ್ಕಾರಿ ಅಧಿಕಾರಿಯೊಂದಿಗೆ ಸಂಚು ರೂಪಿಸಿದ್ದಕ್ಕಾಗಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ವಿರುದ್ಧ ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಗುಪ್ತಾ ಒಬ್ಬ ಹಿಟ್‌ಮ್ಯಾನ್ ಅನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನೆಂದು ಆರೋಪಿಸಲಾಗಿದೆ. ಆದರೆ ಹಿಟ್‌ಮ್ಯಾನ್ ಒಬ್ಬ ರಹಸ್ಯ ಅಮೆರಿಕ … Continued

ನಿತ್ಯಾನಂದನ ʼಕೈಲಾಸʼದ ಜೊತೆ ಜ್ಞಾಪಕ ಪತ್ರಕ್ಕೆ ಸಹಿ : ಕೆಲಸ ಕಳೆದುಕೊಂಡ ಪರಾಗ್ವೆ ಅಧಿಕಾರಿ…!

ಅಸುನ್ಸಿಯಾನ್ : ಅಸ್ತಿತ್ವದಲ್ಲಿ ಇಲ್ಲದ ಕೈಲಾಶ ದೇಶದೊಂದಿಗೆ ಸಹಕಾರ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ ನಂತರ ಪರಾಗ್ವೆಯ ಹಿರಿಯ ಅಧಿಕಾರಿಯೊಬ್ಬರು ಈ ವಾರ ಕೆಲಸ ಕಳೆದುಕೊಂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಉದ್ದೇಶಿತ ಅಧಿಕಾರಿಗಳೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ ನಂತರ ಕೃಷಿ ಸಚಿವರ ಸಿಬ್ಬಂದಿಯ ಮುಖ್ಯಸ್ಥ ಹುದ್ದೆಯಿಂದ ತನ್ನನ್ನು ವಜಾಗೊಳಿಸಲಾಗಿದೆ ಎಂದು ಅರ್ನಾಲ್ಡೊ ಚಮೊರೊ … Continued

ಶಿಕ್ಷಕರನ್ನು ಅಪಹರಿಸಿ ಗನ್ ಪಾಯಿಂಟ್‌ನಲ್ಲಿ ಅಪಹರಣಕಾರನ ಮಗಳ ಜೊತೆ ಮದುವೆ

ಪಾಟ್ನಾ: ಬಿಹಾರದಲ್ಲಿ ಹೊಸದಾಗಿ ನೇಮಕಗೊಂಡ ಸರ್ಕಾರಿ ಶಿಕ್ಷಕರೊಬ್ಬರನ್ನು ಅವರ ಶಾಲೆಯಿಂದ ಬುಧವಾರ ಅಪಹರಿಸಲಾಗಿದೆ ಮತ್ತು ಬಂದೂಕು ತೋರಿಸಿ ಯುವತಿಯೊಬ್ಬರ ಜೊತೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಆರೋಪಿಸಿ ಶಿಕ್ಷಕನ ಪತ್ತೆ ಹಚ್ಚಿದ ನಂತರ ಪೊಲೀಸರು ಗುರುವಾರ ತಿಳಿಸಿದ್ದಾರೆ. ಯುವತಿ ತಂದೆ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಿಕ್ಷಕರಾಗಿದ್ದ … Continued

ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ವೇಳಾಪಟ್ಟಿ ಪ್ರಕಟ ಮಾಡಿದ್ದು, ಈ ವೇಳಾಪಟ್ಟಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್‌ 25 ರಿಂದ ಏಪ್ರಿಲ್‌ 6ರ ವರೆಗೆ ಹಾಗೂ ದ್ವಿತೀಯ ಪಿಯುಸಿ‌ ಪರೀಕ್ಷೆ ಮಾರ್ಚ್‌ 2‌ ರಿಂದ ಮಾರ್ಚ್ … Continued

ಮಿಥನಾಲ್ ಮಿಶ್ರಿತ ಆಯುರ್ವೇದ ಸಿರಪ್ ಸೇವಿಸಿ ಐದು ಮಂದಿ ಸಾವು

ನಾಡಿಯಾದ್ (ಗುಜರಾತ) : ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಮೀಥೈಲ್ ಆಲ್ಕೋಹಾಲ್ ಹೊಂದಿರುವ ಆಯುರ್ವೇದ ಸಿರಪ್ ಸೇವಿಸಿದ ಶಂಕಿತ ಪ್ರಕರಣದಲ್ಲಿ ಕನಿಷ್ಠ ಐವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ನವೆಂಬರ್ 28 ಮತ್ತು 29 ರಂದು ಸಾವು ಸಂಭವಿಸಿದೆ ಎಂದು ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ ಗಢಿಯಾ ಹೇಳಿದ್ದಾರೆ. ಮೀಥೈಲ್ ಆಲ್ಕೋಹಾಲ್ ಒಂದು ವಿಷಕಾರಿ ವಸ್ತುವಾಗಿದೆ. … Continued

ಮನಕಲಕುವ ಘಟನೆ….: ತಾಯಿಯ ಶವದ ಜೊತೆ 1 ವರ್ಷದಿಂದ ವಾಸಿಸುತ್ತಿದ್ದ ಅಕ್ಕ-ತಂಗಿ…!

ವಾರಾಣಸಿ : ವಾರಾಣಸಿಯ ಲಂಕಾ ಪೊಲೀಸ್ ಠಾಣೆ ವ್ಯಾಪ್ತಿಯ ಮದರ್ವಾನ್‌ನಲ್ಲಿ ಬುಧವಾರ ಸಂಜೆ ಇಬ್ಬರು ಮಹಿಳೆಯರು ಮನೆಯೊಳಗೆ ತಮ್ಮ ತಾಯಿಯ ಶವದೊಂದಿಗೆ ವಾಸಿಸುತ್ತಿರುವುದು ಕಂಡುಬಂದಿದೆ. ಪೊಲೀಸ್ ಅಧಿಕಾರಿಯ ಪ್ರಕಾರ, ಉಷಾ ತ್ರಿಪಾಠಿ (52) ಎಂದು ಗುರುತಿಸಲಾದ ಮಹಿಳೆ 2022, ಡಿಸೆಂಬರ್ 8 ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ ಆದರೆ, ಆಕೆಯ ಇಬ್ಬರು ಪುತ್ರಿಯರಾದ ಪಲ್ಲವಿ ಮತ್ತು ವೈಷ್ಣವಿ … Continued