‘ನಾನು ಶ್ರೀರಾಮನ ಬಳಿ ಕ್ಷಮೆಯಾಚಿಸುತ್ತೇನೆ, ಯಾಕೆಂದರೆ…’ : ಅಯೋಧ್ಯೆ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನಂತರ ಪ್ರಧಾನಿ ಮೋದಿ

ಅಯೋಧ್ಯಾ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಜನವರಿ 22) ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಿದರು ಮತ್ತು ಮಂದಿರ ನಿರ್ಮಾಣವು “ಭಾರತೀಯ ಸಮಾಜದಲ್ಲಿ ತಾಳ್ಮೆ, ಶಾಂತಿ ಮತ್ತು ಸೌಹಾರ್ದತೆಯ ಸಂಕೇತ” ಎಂದು ಹೇಳಿದರು. ಇದು ಕೇವಲ ಒಂದು ಕ್ಷಣವಲ್ಲ ಎಂದ ಅವರು ಇದು ನಮ್ರತೆಯ ಗೆಲುವು. ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆಯನ್ನು ಪ್ರಧಾನಿ ಮೋದಿ … Continued

ವೀಡಿಯೊ..| ವೇದಘೋಷ-ಮಂಗಳವಾದ್ಯಗಳ ನಡುವೆ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ, ಅಯೋಧ್ಯೆ ರಾಮಮಂದಿರ ಉದ್ಘಾಟನೆ

ಅಯೋಧ್ಯೆ: 5 ಶತಮಾನಗಳ ಹೋರಾಟ ಮತ್ತು ದಶಕಗಳ ಕಾಯುವಿಕೆ ಮುಕ್ತಾಯವಾಗಿದ್ದು, ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಿ, ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ. ಸುಮಾರು ಐದುನೂರು ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ ಕನಸು ನನಸಾಗಿದೆ. ಪ್ರಧಾನಿ ಮೋದಿ ಅವರು ಅಭಿಜಿತ್ ಲಗ್ನದಲ್ಲಿ ಪೂಜಾ ವಿಧಿ ವಿಧಾನ ನಡೆಸಿದರು. ದೇಶ, ವಿದೇಶಗಳಲ್ಲಿ ಈ ಸುಂದರ ಕ್ಷಣಗಳನ್ನು ಭಕ್ತರು … Continued

ಪ್ರಧಾನಿ ಮೋದಿ ಹೆಲಿಕಾಪ್ಟರ್‌ನಿಂದ ಚಿತ್ರೀಕರಿಸಿದ ಅಯೋಧ್ಯೆಯ ರಾಮಮಂದಿರದ ವೈಮಾನಿಕ ವೀಡಿಯೊ | ವೀಕ್ಷಿಸಿ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ರಾಮ ಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ದೇವಾಲಯದ ಪಟ್ಟಣಕ್ಕೆ ಆಗಮಿಸುವ ಮುನ್ನ ಪ್ರಧಾನಿ ಕಚೇರಿಯು ಭವ್ಯ ದೇವಾಲಯದ ವೈಮಾನಿಕ ವೀಡಿಯೊವನ್ನು ಹಂಚಿಕೊಂಡಿದೆ. ಈ ವೀಡಿಯೊವನ್ನು ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್‌ನಿಂದ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಪ್ರಾಣ ಪ್ರತಿಷ್ಠೆ ಸಿದ್ಧತೆಗಾಗಿ ಪ್ರಧಾನಿ ಮೋದಿ ಅವರು 11 ದಿನಗಳ ಕಟ್ಟುನಿಟ್ಟಾದ … Continued

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಲಾಲ ಕೃಷ್ಣ ಅಡ್ವಾಣಿ ಪಾಲ್ಗೊಳ್ಳುತ್ತಿಲ್ಲ…

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಆಂದೋಲನದ ಮುಂಚೂಣಿಯಲ್ಲಿದ್ದ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ತೀವ್ರ ಚಳಿಯ ಕಾರಣ ಇಂದು, ಸೋಮವಾರ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. 96ರ ಹರೆಯದ ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರು ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಎಚ್‌ಪಿಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕಕುಮಾರ … Continued

ಪ್ರಧಾನಿ ಮೋದಿ ಅಯೋಧ್ಯೆ ಕಾರ್ಯಕ್ರಮದ ವೇಳಾಪಟ್ಟಿ ಹೀಗಿದೆ….ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರ ಇಲ್ಲಿ ನೋಡಿ

ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಲೈವ್‌  [  ಅಯೋಧ್ಯಾ : ಅಯೋಧ್ಯೆಯಲ್ಲಿ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದ್ದು ಪೂಜಾರಿಗಳು ವಿವಿಧ ಪೂಜಾ ವಿಧಿ ವಿಧಾನಗಳನ್ನು ಶಾಸ್ತ್ರೊಕ್ತವಾಗಿ ನೆರವೇರಿಸುತ್ತಿದ್ದಾರೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಾಧು ಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್‌ ತಾರೆಯರು ಸೇರಿದಂತೆ ಸುಮಾರು ಎಂಟು ಸಾವಿರ ಗಣ್ಯರು ಭಾಗಿಯಾಗುತ್ತಿದ್ದಾರೆ. ಬಾಲರಾಮನ … Continued

ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಕಬ್ಬಿಣ- ಉಕ್ಕನ್ನು ಬಳಸಿಯೇ ಇಲ್ಲ, ಯಾಕೆಂದರೆ….

ನವದೆಹಲಿ : ಅಯೋಧ್ಯೆಯಲ್ಲಿರುವ ರಾಮ ಲಲ್ಲಾ ಅಥವಾ ಭಗವಾನ್ ಬಾಲರಾಮನ ಭವ್ಯವಾದ ದೇವಾಲಯದ ನಿರ್ಮಾಣ ವಿಜ್ಞಾನವನ್ನು ಒಳಗೊಂಡಿರುವ ಸಾಂಪ್ರದಾಯಿಕ ಭಾರತೀಯ ಪರಂಪರೆಯ ವಾಸ್ತುಶಿಲ್ಪದ ಸಂಯೋಜನೆಯಾಗಿದ್ದು ಇದು ಶತಮಾನಗಳವರೆಗೆ ಉಳಿಯುತ್ತದೆ ಎಂದು ವಿಶ್ಲೇಸಲಾಗಿದೆ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರು “ದೇವಾಲಯವನ್ನು ಸಾವಿರ ವರ್ಷಗಳಿಗೂ ಹೆಚ್ಚು … Continued

ವೀಡಿಯೊ: ಮುಂಬೈನ ನೂತನ ಅಟಲ್‌ ಸೇತುವೆ ಮೇಲೆ ಭಯಾನಕವಾಗಿ ತಿರುಗುತ್ತ ಸೇತುವೆ ರೇಲಿಂಗ್‌ ಭೀಕರವಾಗಿ ಅಪ್ಪಳಿಸಿ ಪಲ್ಟಿಯಾದ ಕಾರು…

ಮುಂಬೈನ ನೂತನ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಸೇತುವೆ (ಅಟಲ್‌ ಸೇತುವೆ) ಮೇಲೆ ವಾಹನವೊಂದರ ನಾಟಕೀಯ ಅಪಘಾತದ ದೃಶ್ಯ ವೈರಲ್‌ ಆಗಿದೆ. ಅದು ಸೇತುವೆಯ ರೇಲಿಂಗ್‌ಗೆ ಡಿಕ್ಕಿ ಹೊಡೆದು ಸ್ಥಗಿತಗೊಳ್ಳುವ ಮೊದಲು ಅದು ಸ್ಕಿಡ್‌ ಆಗಿ ಹಲವಾರು ಪಲ್ಟಿ ಹೊಡೆದಿದೆ. 16.5 ಕಿಮೀ ಸಮುದ್ರದ ಮೂಲಕ ಹಾದು ಹೋಗುವ ಒಟ್ಟು 21.8 ಕಿಮೀ ಉದ್ದದ ಷಟ್ಪಥ … Continued

ಕುಮಟಾ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂಭ್ರಮ, ಕಡ್ಲೆ ಕಡಲತೀರದ ಮರಳಿನಲ್ಲಿ ಮೂಡಿದ ಶ್ರೀರಾಮ…

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅರಬ್ಬಿ ಸಮುದ್ರದ ಕಡ್ಲೆಯ ತೀರದ ಮರಳಿನಲ್ಲಿ ವಿನಾಯಕ ಆಚಾರಿ ಎಂಬವರು ಶ್ರೀರಾಮನನ್ನು ಅರಳಿಸಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22ರಂದು ಸೋಮವಾರ ಬಾಲರಾಮನ ಮೂರ್ತಿಯ ಪ್ರತಿಷ್ಠಾಪನೆ ನಿಮಿತ್ತ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಕಡ್ಲೆಯ ಜಟ್ಟಿ ಆಚಾರಿ ಕುಟುಂಬದ ವಿನಾಯಕ ಆಚಾರಿ ಸಮುದ್ರ ತೀರಕ್ಕೆ ಬಂದಾಗ ಮುಸ್ಸಂಜೆ ಹೊತ್ತಲ್ಲಿ … Continued

ವೀಡಿಯೊ…| ಅಯೋಧ್ಯೆಯಲ್ಲಿ ಭಗವಾನ್ ರಾಮಲಲ್ಲಾ ವಿಗ್ರಹದ ‘ಪ್ರಾಣ ಪ್ರತಿಷ್ಠೆ’ ಸಮಾರಂಭವನ್ನು ಮರಳಿನಲ್ಲಿ ಅದ್ಭುತವಾಗಿ ಚಿತ್ರಿಸಿದ ಕಲಾವಿದ | ವೀಕ್ಷಿಸಿ

ಸೋಮವಾರ ಭವ್ಯವಾದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ವಿಗ್ರಹದ ‘ಪ್ರಾಣ ಪ್ರತಿಷ್ಠಾ’ (ಪ್ರತಿಷ್ಠಾಪನೆ) ಸಮಾರಂಭವನ್ನು ಅದ್ಭುತವಾಗಿ ಚಿತ್ರಿಸುವ ಮರಳು ಅನಿಮೇಷನ್ ಅನ್ನು ಒಡಿಶಾ ಮೂಲದ ಕಲಾವಿದರೊಬ್ಬರು ಹಂಚಿಕೊಂಡಿದ್ದಾರೆ. ಆರು ನಿಮಿಷಗಳ ವೀಡಿಯೊದಲ್ಲಿ ಮರಳು ಕಲಾವಿದ ಮಾನಸ್ ಸಾಹೂ ಎಂಬವರು ಬ್ರಷ್‌ನ ಬದಲಿಗೆ ಕ್ಯಾನ್ವಾಸ್ ಮತ್ತು ಮರಳಿನ ಮೇಲೆ ತನ್ನ ಕೈಗಳನ್ನು ಬಳಸಿ ಚಿತ್ರಿಸುವುದನ್ನು ತೋರಿಸುತ್ತದೆ. ಕಲಾವಿದನು ರಾಮನ … Continued

ರಾಮಮಂದಿರ ಸ್ಫೋಟಿಸುವುದಾಗಿ ಬೆದರಿಕೆ : ವ್ಯಕ್ತಿ ಬಂಧನ

ಅರರಿಯಾ : ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಾಯಕನಂತೆ ಪೋಸು ನೀಡಿ, ಜನವರಿ 22 ರಂದು (ಸೋಮವಾರ) ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ 21 ವರ್ಷದ ವ್ಯಕ್ತಿಯನ್ನು ಬಿಹಾರದ ಅರರಿಯಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ. . ಆರೋಪಿ ಇಂತೇಖಾಬ್ ಆಲಂ ಎಂಬಾತನನ್ನು ಶನಿವಾರ ತಡರಾತ್ರಿ ಬಲುವಾ ಕಲಿಯಗಂಜ್‌ನಲ್ಲಿರುವ ಆತನ ಮನೆಯಿಂದ ಬಂಧಿಸಲಾಗಿದ್ದು, ಆತ ಮಾನಸಿಕವಾಗಿ ಅಸ್ವಸ್ಥನಂತೆ … Continued