38 ಬೇಡಿಕೆಗಳು, 48 ಗಂಟೆಗಳ ಗಡುವು: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೊಂದು ಮಹಾಸಂಘರ್ಷದ ಮುನ್ಸೂಚನೆ

ನವದೆಹಲಿ: ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ (PoK) ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಮ್ಮು ಕಾಶ್ಮೀರ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (JAAC) ಪಾಕಿಸ್ತಾನ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿ, ತಮ್ಮ 38 ಅಂಶಗಳ ಬೇಡಿಕೆಗಳಿಗೆ  ಸ್ಪಂದಿಸದಿದ್ದರೆ “ಭಾರೀ ಹಾಗೂ ಅಂತಿಮ ಹಂತದ ಪ್ರತಿಭಟನೆ” ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ. ಈ ಬಾರಿಯ ಉದ್ವಿಗ್ನತೆಗೆ … Continued

ಸುಟ್ಟ ಶವ, ಯಾವುದೇ ಕುರುಹುಗಳಿಲ್ಲದ ಪ್ರಕರಣ…: ಆದ್ರೆ ಹಂತಕರ ಪತ್ತೆಗೆ ಕಾರಣವಾಯ್ತು ‘ಹಪ್ಪಳ’ದ ಪ್ಯಾಕೆಟ್‌….!

ಅನಂತಪುರ: ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವದ ಪ್ರಕರಣವನ್ನು ಆರಂಭದಲ್ಲಿ ‘ಬ್ಲೈಂಡ್ ಕೇಸ್’ ಎಂದು ಪರಿಗಣಿಸಿದ್ದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗಂ ಪೊಲೀಸರು, ವೈಜ್ಞಾನಿಕ ತನಿಖೆ ಹಾಗೂ ಘಟನೆ ಸ್ಥಳದಲ್ಲಿ ಸಿಕ್ಕಿದ್ದ ಒಂದು ಸಣ್ಣ ಸುಳಿವಿನ ನೆರವಿನಿಂದ ಅದನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಪ್ರಮುಖ ಸುಳಿವಾಗಿ ಸಿಕ್ಕಿದ್ದ ಹಪ್ಪಳ(ಪಾಪಡ್)ದ ಪ್ಯಾಕೆಟ್ ಕೊಲೆಯ ರಹಸ್ಯವನ್ನು ಬಯಲಿಗೆಳೆಯುವಲ್ಲಿ … Continued

ಥಾಣೆ ಆಸ್ಪತ್ರೆಯಲ್ಲಿ ಶಿವಸೇನೆ ಕಾರ್ಪೊರೇಟರ್‌ನಿಂದ ವೈದ್ಯರ ಮೇಲೆ ಹಲ್ಲೆ : ‘ಭಯದಿಂದ ರಾಜೀನಾಮೆ ನೀಡಿದ್ದೇನೆ’ ಎಂದ ವೈದ್ಯ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುನ್ಸಿಪಲ್ ಆಸ್ಪತ್ರೆಯಲ್ಲಿ ಶಿವಸೇನೆ (ಏಕನಾಥ ಶಿಂಧೆ ಬಣ) ಕಾರ್ಪೊರೇಟರ್ ರಮೇಶ ಮ್ಹಾತ್ರೆ ನಡೆಸಿದ್ದಾರೆ ಎನ್ನಲಾದ ಹಲ್ಲೆ ಪ್ರಕರಣದ ಬಳಿಕ, ಹಲ್ಲೆಗೊಳಗಾದ ವೈದ್ಯರಲ್ಲಿ ಒಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಭಯದಿಂದ ಶಾಶ್ವತವಾಗಿ ನಗರವನ್ನೇ ತೊರೆದಿರುವುದಾಗಿ ತಿಳಿಸಿದ್ದಾರೆ. ಎನ್‌ಡಿಟಿವಿ ಜೊತೆ ಮಾತನಾಡಿದ ವೈದ್ಯರು, ಈ ಘಟನೆ ತಮ್ಮನ್ನು ತೀವ್ರವಾಗಿ ಬೆಚ್ಚಿಬೀಳುವಂತೆ … Continued

ಇಂಡೋನೇಷ್ಯಾದ 1000 ವರ್ಷಗಳ ಹಿಂದಿನ ಶಿವ ದೇವಾಲಯದ ಪುನರುಜ್ಜೀವನಕ್ಕೆ ಭಾರತದ ನೆರವು ಘೋಷಿಸಿದ ಮೋದಿ; ಈ ದೇಗುಲದ ಮಹತ್ವವೇನು?

ನವದೆಹಲಿ/ಜಕಾರ್ತಾ : ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾದ ಮೂರು ದಿನಗಳ ಅಧಿಕೃತ ಭೇಟಿ ಹಲವು ಮಹತ್ವದ ಫಲಿತಾಂಶಗಳನ್ನು ನೀಡಿದ್ದು, ರಕ್ಷಣೆ, ಸಾಗರ ಸಹಕಾರ, ಅಪರೂಪದ ಖನಿಜಗಳು, ತಂತ್ರಜ್ಞಾನ, ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ಶಿಕ್ಷಣ ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ. ಈ ಮಹತ್ವದ ಒಪ್ಪಂದಗಳ ನಡುವೆ ವಿಶೇಷ ಸಾಂಸ್ಕೃತಿಕ … Continued

ಸರ್ಕಾರಿ ಹುದ್ದೆ-ಕುಟುಂಬದ ಆಸ್ತಿ ಲಾಲಸೆಗೆ ತಾಯಿಯನ್ನೇ ಕೊಲೆ ಮಾಡಿಸಿ ರಸ್ತೆ ಅಪಘಾತವೆಂದು ಕಥೆ ಹೆಣೆದ ಮಗಳು !

ಜೈಪುರ : ಆಸ್ತಿ ಹಾಗೂ ಅನುಕಂಪದ ಆಧಾರದ ಮೇಲೆ ದೊರೆಯುವ ಸರ್ಕಾರಿ ಉದ್ಯೋಗವನ್ನು ತಾನು ಪಡೆಯುವ ಉದ್ದೇಶದಿಂದ 23 ವರ್ಷದ ಯುವತಿಯೊಬ್ಬಳು ತನ್ನ ಸಂಬಂಧಿಕರ ಜೊತೆ ಸೇರಿ ತಾಯಿಯನ್ನೇ ಹತ್ಯೆಗೈದು, ಅದನ್ನು ರಸ್ತೆ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದ ಬೆಚ್ಚಿಬೀಳಿಸುವ ಘಟನೆ ಜೈಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಆಯುಷಿ, ಆಕೆಯ ಚಿಕ್ಕಪ್ಪ ಹಾಗೂ ಸೋದರ … Continued

ಯಲ್ಲಾಪುರ : ಕ್ರೂಸರ್-ಲಾರಿ ಮುಖಾಮುಖಿ ಡಿಕ್ಕಿ, 6 ಮಂದಿ ಸಾವು

ಕಾರವಾರ : ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಆರು ಮಂದಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬಳಗಾರ ಸಮೀಪ ಅಂಕೋಲಾ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ ಎಂದು ವರದಿಯಾಗಿದೆ. ಪ್ರವಾಸಿಗರಿದ್ದ ತೂಫಾನ್ ಕ್ರೂಸರ್ ಮತ್ತು ಲಾರಿಯ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಆರು ಮಂದಿ … Continued

ವಿಡಿಯೊ…| ಭಾರಿ ಮಳೆ : ಪಾತಾಳಗಂಗಾ ನದಿಗೆ ಕೊಚ್ಚಿಹೋದ 3 ಸಾವಿರದಷ್ಟು ಅಡುಗೆ ಅನಿಲ (LPG) ಸಿಲಿಂಡರ್‌ಗಳು….!

ಮುಂಬೈ : ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದ ಪರಿಣಾಮ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)ನ ಎಲ್‌ಪಿಜಿ ಬಾಟಲಿಂಗ್ ಘಟಕದಿಂದ ಸಾವಿರಾರು ಅಡುಗೆ ಅನಿಲ (LPG) ಸಿಲಿಂಡರ್‌ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ವರದಿಯಾಗಿದೆ. ಪಾತಾಳಗಂಗಾ ನದಿಯಲ್ಲಿ ಸಿಲಿಂಡರ್‌ಗಳು ತೇಲುತ್ತಾ ಸಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯ … Continued

ವಿಡಿಯೋ | ತಾಳೆಮರ ಏರಲು ಹೊಸ ಮಾರ್ಗ ; 55 ಅಡಿ ಎತ್ತರದ ತಾಳೆಮರಕ್ಕೆ ಸುರುಳಿ ಮೆಟ್ಟಿಲು ನಿರ್ಮಿಸಿದ ರೈತ…!

ಚೆನ್ನೈ : ಹೊಸತನ (ಇನ್ನೋವೇಷನ್) ಎಂದರೆ ಯಾವಾಗಲೂ ಅತ್ಯಾಧುನಿಕ ಪ್ರಯೋಗಾಲಯಗಳು ಅಥವಾ ದುಬಾರಿ ಯಂತ್ರೋಪಕರಣಗಳಿಂದಲೇ ಆಗಬೇಕೆಂದಿಲ್ಲ. ದೈನಂದಿನ ಬದುಕಿನ ಸಮಸ್ಯೆಗೆ ಸರಳ ಪರಿಹಾರ ಕಂಡುಕೊಳ್ಳುವ ಒಂದು ಆಲೋಚನೆಯೇ ಕೆಲವೊಮ್ಮೆ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಇದಕ್ಕೆ ತಮಿಳುನಾಡಿನ ರೈತರೊಬ್ಬರು ಉತ್ತಮ ಉದಾಹರಣೆಯಾಗಿದ್ದು, 55 ಅಡಿ ಎತ್ತರದ ತಾಳೆಮರದ ಸುತ್ತ ಕಬ್ಬಿಣದ ಸುರುಳಿ (ಸ್ಪೈರಲ್) ಮೆಟ್ಟಿಲು ನಿರ್ಮಿಸಿ, ಪನೆರಾ … Continued