ಎಸ್.ಎಸ್.ಎಲ್.ಸಿ ಫಲಿತಾಂಶ : ಕುಮಟಾ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಪ್ರೌಢಶಾಲೆ ನೂರಕ್ಕೆ ನೂರು ಫಲಿತಾಂಶ, ರಾಜ್ಯಮಟ್ಟದಲ್ಲಿ 7 ರ‍್ಯಾಂಕ್‌

 ಕುಮಟಾ : ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶಾಲೆಗೆ ನೂರಕ್ಕೆ ನೂರು ಫಲಿತಾಂಶ ಬಂದಿದ್ದು, ರಾಜ್ಯಕ್ಕೆ ಏಳು ರ‍್ಯಾಂಕ್‌ ಗಳಿಸಿದ್ದಾರೆ. ಪರೀಕ್ಷೆ ಬರೆದ ಒಟ್ಟೂ 154 ವಿದ್ಯಾರ್ಥಿಗಳಲ್ಲಿ, 105 ಮಂದಿ ಡಿಸ್ಟಿಂಕ್ಷನ್‌, … Continued

ಲೈಂಗಿಕ ದೌರ್ಜನ್ಯ ಆರೋಪ: ಜನಸಾಮಾನ್ಯರಿಗೆ ರಾಜಭವನದ ಸಿಸಿಟಿವಿ ದೃಶ್ಯಾವಳಿ ತೋರಿಸಿದ ಪಶ್ಚಿಮ ಬಂಗಾಳದ ರಾಜ್ಯಪಾಲ

ಕೋಲ್ಕತ್ತಾ: ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ವಿರುದ್ಧ ಕಿರುಕುಳದ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಗುರುವಾರ ಮೇ 2ರ ರಾಜಭವನದ ಸಿಸಿಟಿವಿ ದೃಶ್ಯಾವಳಿಗಳನ್ನು ಜನಸಾಮಾನ್ಯರಿಗೆ ತೋರಿಸಿದ್ದಾರೆ. ಮೇ 2ರ ಸಂಜೆ 5:30ರ ಸಮಯದ ಮುಖ್ಯ (ಉತ್ತರ) ಗೇಟ್‌ನಲ್ಲಿರುವ ಎರಡು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ರಾಜಭವನದ ನೆಲ ಮಹಡಿಯಲ್ಲಿರುವ … Continued

1950-2015ರ ಅವಧಿಯಲ್ಲಿ ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 7.8% ಕುಸಿತ ; ಅಲ್ಪಸಂಖ್ಯಾತರ ಶೇಕಡಾವಾರು ಹೆಚ್ಚಳ : ಪಿಎಂ-ಇಎಸಿ ಅಧ್ಯಯನ

ನವದೆಹಲಿ: ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿ (Prime Minister’s Economic Advisory Council) ನಡೆಸಿದ ಅಧ್ಯಯನವು ಭಾರತದಲ್ಲಿ ಬಹುಸಂಖ್ಯಾತ ಧರ್ಮದ (ಹಿಂದೂಗಳು) ಜನಸಂಖ್ಯೆಯ ಪಾಲು 1950 ಮತ್ತು 2015 ರ ನಡುವೆ ಶೇಕಡಾ 7.8 ರಷ್ಟು ಕುಸಿದಿದೆ, ಇದೇ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ 43.15% ರಷ್ಟು ಹೆಚ್ಚಳವಾಗಿದೆ ಎಂದು ಅದು ಹೇಳಿದೆ. ಈ ಅವಧಿಯಲ್ಲಿ … Continued

ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ: 625ಕ್ಕೆ 625 ಅಂಕ ಪಡೆದ ಅಂಕಿತಾ ರಾಜ್ಯಕ್ಕೆ ಟಾಪರ್, ಉಡುಪಿ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ 2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು, ಶೇ 73.40 ಮಂದಿ ತೇರ್ಗಡೆಯಾಗಿದ್ದಾರೆ. ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 2,87,416 (65.90%) ಬಾಲಕರು ಪಾಸ್ ಆಗಿದ್ದು 3,43,788 (81.11%) ಬಾಲಕಿಯರು ಪಾಸ್​ ಆಗಿದ್ದಾರೆ. ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಶೇ 10ರಷ್ಟು ಕಡಿಮೆ ಆಗಿದೆ. … Continued

ವೀಡಿಯೊ…| ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಅಯೋಧ್ಯೆ: ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ಭಗವಾನ್‌ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಆರಿಫ್ ಮೊಹಮ್ಮದ್ ಖಾನ್ ಅವರು ದೇವಾಲಯವನ್ನು ‘ಶಾಂತಿಯ ಸ್ಥಳ’ ಎಂದು ಕರೆದರು. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಕೇರಳ ರಾಜಭವನವು ರಾಜ್ಯಪಾಲರು ರಾಮ ಮಂದಿರಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದೆ. ರಾಮಲಲ್ಲಾ ವಿಗ್ರಹದ … Continued

ಶಿರಸಿ ಶಾಸಕ ಭೀಮಣ್ಣ ನಾಯ್ಕ ಮೇಲೆ ಜೇನು ದಾಳಿ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೆಂಗ್ರೆ ಹೊಳೆ ಬಳಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್(Bhimanna Naik) ಹಾಗೂ ಪೌರಾಯುಕ್ತ ಕಾಂತರಾಜ ಸೇರಿದಂತೆ ಹಲವರ ಮೇಲೆ ಜೇನು ದಾಳಿ ಮಾಡಿದೆ ಎಂದು ವರದಿಯಾಗಿದೆ. ಶಿರಸಿ ನಗರಕ್ಕೆ ನೀರು ಪೂರೈಸುವ ತಾಲೂಕಿನ ಕೆಂಗ್ರೆ ಹೊಳೆಯಲ್ಲಿರುವ ನೀರಿನ ಪ್ರಮಾಣ ವೀಕ್ಷಣೆಗೆ ತೆರಳಿದ್ದ ವೇಳೆ ಜೇನು ನೋಣಗಳು ದಾಳಿ … Continued

ಶಿವಮೊಗ್ಗ : ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರ ಬರ್ಬರ ಹತ್ಯೆ

ಶಿವಮೊಗ್ಗ: ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಬುಧವಾರ ಹಾಡಹಗಲೇ ಜೋಡಿ ಕೊಲೆ ನಡೆದಿದೆ., ಇಬ್ಬರು ಯುವಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮತ್ತೊಬ್ಬ ಗಾಯಗೊಂಡಿದ್ದಾನೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ರೌಡಿಗಳ ನಡುವೆ ನಡೆದ ಗಲಾಟೆಯಿಂದಾಗ ಮರ್ಡರ್ ಆಗಿರಬಹುದು ಎಂದು ಶಂಕಿಸಲಾಗಿದೆ. ಲಷ್ಕರ್ ಮೊಹಲ್ಲಾದ ಜನತಾ … Continued

ಅಪರೂಪದ ಮದುವೆ; 2ನೇ ವಿಶ್ವ ಮಹಾಯುದ್ಧದ ಸೇನಾನಿ, 100 ವರ್ಷದ ವ್ಯಕ್ತಿಯೇ ಮದುವೆ ಗಂಡು ….ವಧುವಿಗೆ 96 ವರ್ಷ…!

ಬೊಕಾ ರಾಟನ್: ಅಮೆರಿಕನ್ನರಾದ ಹೆರಾಲ್ಡ್ ಟೆರೆನ್ಸ್ ಮತ್ತು ಜೀನ್ ಸ್ವೆರ್ಲಿನ್ ಅವರ ಪ್ರಣಯವು “ರೋಮಿಯೋ ಮತ್ತು ಜೂಲಿಯೆಟ್‌ಗಿಂತ ಕಡಿಮೆಯೇನಿಲ್ಲ” ಎಂದು ಈ ಜೋಡಿ ಹೇಳಿಕೊಳ್ಳುತ್ತದೆ. ಯಾಕೆಂದರೆ ಹೆರಾಲ್ಡ್ ಟೆರೆನ್ಸ್ ಅವರಿಗೆ 100 ವರ್ಷ, ಜೀನ್ ಸ್ವೆರ್ಲಿನ್ ವಯಸ್ಸು 96, ಮತ್ತು ಅವರು ಮುಂದಿನ ತಿಂಗಳು ಫ್ರಾನ್ಸ್‌ನಲ್ಲಿ ಮದುವೆಯಾಗಲಿದ್ದಾರೆ. ಯಾಕೆಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ವರ ಫ್ರಾನ್ಸ್‌ನಲ್ಲಿ … Continued

ಜನಾಂಗೀಯ ಕಾಮೆಂಟ್‌ ವಿವಾದದ ಬೆನ್ನಲ್ಲೇ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್‌ ಪಿತ್ರೋಡಾ

ನವದೆಹಲಿ : ಲೋಕಸಭೆ ಚುನಾವಣೆ ವೇಳೆ ತಮ್ಮ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಕಾಂಗ್ರೆಸ್ಸಿನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಸಂವಹನ ಉಸ್ತುವಾರಿ ಜೈರಾಮ ರಮೇಶ ಅವರು ಈ ಬಗ್ಗೆ ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ” ಸ್ಯಾಮ್ ಪಿತ್ರೋಡಾ … Continued

ಗೋಪಾಲಕೃಷ್ಣ ಭಟ್ಟ ನಿಧನ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ  ಸಿದ್ದಾಪುರ  ತಾಲೂಕಿನ ವಾಜಗದ್ದೆ ಸಮೀಪದ ಗೊಡ್ವೆಮನೆಯ ಗೋಪಾಲಕೃಷ್ಣ ಸುಬ್ರಾಯ ಭಟ್ಟ (59) ಮೇ 7ರಂದು  ನಿಧನರಾಗಿದ್ದಾರೆ. ಅವರು ಪತ್ನಿ, ಓರ್ವ ಪುತ್ರ, ತಾಯಿ, ಮೂವರು ಸಹೋದರರು,ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತುಮಕೂರಿನ ಸಾಕೇತ್ ಅಟೋಮೊಬೈಲ್ಸ್‌ನಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಹೃದಯಸ್ಥಂಭನದಿಂದ ಹಠಾತ್ತಾಗಿ ನಿಧನರಾಗಿದ್ದಾರೆ. ಅವರ … Continued