ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಲವಾದ ಗಾಳಿಮಳೆ ಮುನ್ಸೂಚನೆ

ಬೆಂಗಳೂರು : ಕರ್ನಾಟಕದಲ್ಲಿ ಕೆಲ ದಿನಗಳ ಕಾಲ ಗುಡುಗು – ಮಿಂಚು ಸಹಿತ ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಂಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವೇಳೆ ಗಾಳಿಯ ವೇಗ ಪ್ರತಿ ಗಂಟೆಗೆ 40 – 50 ಕಿ.ಮೀ. ವರೆಗೆ ಇರಬಹುದು. ಕೆಲವು ಕಡೆ 60 ಕಿ.ಮೀ.ವರೆಗೆ ಗಾಳಿ ಬೀಸುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ, … Continued

ವಿಡಿಯೊ | ದೇಹದಲ್ಲಿ ಬೆಂಕಿಯಂತೆ ಉರಿ; ಐದು ವರ್ಷಗಳಿಂದ ನೀರಿನ ಕೊಳದಲ್ಲೇ ಬದುಕು: 16 ವರ್ಷದ ಬಾಲಕನ ನೋವಿನ ಕಥೆ

ಮುರ್ಷಿದಾಬಾದ್: ದೇಹದಾದ್ಯಂತ ಕಾಣಿಸಿಕೊಳ್ಳುವ ತೀವ್ರ ಉರಿ ಮತ್ತು ಸುಡುವಂತಹ ನೋವಿನಿಂದ ತಾತ್ಕಾಲಿಕ ಪರಿಹಾರ ಪಡೆಯಲು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ 16 ವರ್ಷದ ಬಾಲಕನೊಬ್ಬ ವರ್ಷಗಳಿಂದ ಕೊಳದ ನೀರಿನಲ್ಲೇ ಹೆಚ್ಚಿನ ಸಮಯ ಕಳೆಯುತ್ತಿರುವ ಘಟನೆ ಇದೀಗ ವ್ಯಾಪಕ ಗಮನ ಸೆಳೆದಿದೆ. ಬೆಲ್ಡಂಗಾ ಪ್ರದೇಶದ ಇಕ್ಬಾಲ್ ಶೇಖ್ ಎಂಬ ಬಾಲಕನಿಗೆ ನೀರಿನಿಂದ ಹೊರಬಂದ ಕೂಡಲೇ ದೇಹದಲ್ಲಿ ಉರಿ … Continued

ಕರ್ನಾಟಕದಲ್ಲಿ ಇನ್ಮುಂದೆ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗೂ ನೆಗೆಟಿವ್ ಅಂಕ

ಬೆಂಗಳೂರು: ರಾಜ್ಯ ಸರ್ಕಾರಿ ಉದ್ಯೋಗಾಕ್ಷಾಂಕ್ಷಿಗಳಿಗೆ ಸರ್ಕಾರ ಕಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ((FDA) ಮತ್ತು ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ನೇಮಕಾತಿ ಪರೀಕ್ಷಾ ನಿಯಮಗಳಲ್ಲಿ (Exam Rules) ಮಹತ್ವದ ಬದಲಾವಣೆ ತರಲಾಗಿದ್ದು, ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಕರಡು … Continued

ಐಫೋನ್‌ ಸಾಲದ ಕಂತಿನ ವಿಚಾರದ ಜಗಳ ದುರಂತದಲ್ಲಿ ಅಂತ್ಯ : ಬೆಟ್ಟದ ಪ್ರಪಾತಕ್ಕೆ ಬಿದ್ದು ಮಗ, ತಂದೆ-ತಾಯಿ ಸಾವು

ಛತ್ರಪತಿ ಸಂಭಾಜಿನಗರ: ಐಫೋನ್‌ ಖರೀದಿಯ ಕಂತು (EMI) ಪಾವತಿಸುವ ವಿಚಾರವಾಗಿ ತಂದೆ-ಮಗನ ನಡುವೆ ನಡೆದ ವಾಗ್ವಾದವು ಇಡೀ ಕುಟುಂಬದ ದುರಂತ ಅಂತ್ಯಕ್ಕೆ ಕಾರಣವಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. 18 ವರ್ಷದ ಕುನಾಲ್‌ ಚಾಂದ್‌ಗುಡೆ, ಆತನ ತಂದೆ ಮುರಳೀಧರ ಚಾಂದ್‌ಗುಡೆ ಹಾಗೂ ತಾಯಿ ಸಂಗೀತಾ ಚಾಂದ್‌ಗುಡೆ ಬೆಟ್ಟದಿಂದ ಆಳವಾದ ಕಂದಕಕ್ಕೆ ಬಿದ್ದು … Continued

ಪೆಲೆಟ್ ಗನ್ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಎಫ್‌ಐಆರ್‌ ದಾಖಲು ; ರಾಹುಲ್ ಗಾಂಧಿಯ 7 ತಾಸುಗಳ ಧರಣಿ ಅಂತ್ಯ

ನವದೆಹಲಿ: ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೊನೆಗೂ ಎಫ್‌ಐಆರ್‌ (FIR) ದಾಖಲಿಸಿದ್ದಾರೆ. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 118 ಮತ್ತು 125ರ ಅಡಿಯಲ್ಲಿ ದಾಖಲಿಸಲಾಗಿದೆ. ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ … Continued

ಶಿಗ್ಗಾವಿ | ದೇವಸ್ಥಾನದ ಆವರಣದಲ್ಲಿ ಮೂತ್ರ ವಿಸರ್ಜನೆ ಆರೋಪ; ವ್ಯಕ್ತಿಯ ಬಂಧನ

ಶಿಗ್ಗಾವಿ: ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಶಿಗ್ಗಾವಿ ಪಟ್ಟಣದಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಹಾನಗಲ್ ಪಟ್ಟಣದ ನಿವಾಸಿ ಎನ್ನಲಾಗಿರುವ ಮಹಮ್ಮದ್ ಜಾಫರ್ ಖದರಮಂಡಲಗಿ ಎಂಬಾತನ ವಿರುದ್ಧ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು … Continued

“ಕಣ್ಣಿನಲ್ಲಿ 3, ದೇಹದಲ್ಲಿ 200 ಪೆಲೆಟ್‌ಗಳು”..: ಎಫ್‌ಐಆರ್‌ ದಾಖಲಿಸಲು ಒತ್ತಾಯಿಸಿ ಠಾಣೆ ಮುಂದೆ ರಾಹುಲ್ ಗಾಂಧಿ ಧರಣಿ

ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೆಲೆಟ್‌ ಗನ್‌ ಬಳಸಿ ಗುಂಡಿನ ದಾಳಿ ನಡೆಸಲು ಆದೇಶ ನೀಡಿದ್ದು ಯಾರು ಎಂಬುದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪೆಲೆಟ್‌ ಗನ್‌ ದಾಳಿಗೆ ಒಳಗಾದ ವಿದ್ಯಾರ್ಥಿ ಸಾಹಿಲ್ ಲೋಚಬ್‌ ಅವರನ್ನು ಜೊತೆಯಲ್ಲಿ ಕರೆದುಕೊಂಡು ಇಂದು, ಶುಕ್ರವಾರ ಸಂಸತ್‌ ಸ್ಟ್ರೀಟ್‌ ಪೊಲೀಸ್ ಠಾಣೆಗೆ ತೆರಳಿ ಎಫ್‌ಐಆರ್‌ … Continued

400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಬಹುಭಾಷಾ ನಟಿ ಸಾಹಕಾರ ಜಾನಕಿ ಇನಿಲ್ಲ

ಚೆನ್ನೈ : ದಕ್ಷಿಣ ಭಾರತದ ಹಿರಿಯ ನಟಿ, ಬಹುಭಾಷಾ ತಾರೆ ಸಾಹಕಾರ ಜಾನಕಿ ಅವರು ಶುಕ್ರವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ತೀವ್ರ ಎದೆನೋವಿನ ಹಿನ್ನೆಲೆಯಲ್ಲಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಧ್ಯಾಹ್ನ 1:59ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ನಟರ … Continued

ವಿಡಿಯೋ | ಶಾಲಾ ಪರಿಶೀಲನೆಗೆ ವಿರೋಧ; ಸಿಜೆಪಿ ಕಾರ್ಯಕರ್ತರನ್ನು ಗ್ರಾಮದಿಂದ ಹೊರಕ್ಕೆ ಕಳುಹಿಸಿದ ಗ್ರಾಮಸ್ಥರು

ಜೈಪುರ : ರಾಜಸ್ಥಾನದ ಜೈಪುರ ಜಿಲ್ಲೆಯ ಬಾಗ್ರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ‘ಸ್ಕೂಲ್ ಠೀಕ್ ಕರೋ’ ಅಭಿಯಾನದ ಅಂಗವಾಗಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದನ್ನು ಪರಿಶೀಲಿಸಲು ತೆರಳಿದ್ದ ಕಾಕ್ರೋಚ್‌ ಜನತಾ ಪಾರ್ಟಿ (CJP) ತಂಡಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಮಪುರಾ ಕನ್ವಾರ್‌ಪುರಾ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಗ್ರಾಮಸ್ಥರು ಸಿಜೆಪಿ ಕಾರ್ಯಕರ್ತರನ್ನು ಗ್ರಾಮದಿಂದ ಹೊರಕ್ಕೆ ಕಳುಹಿಸಿದ್ದಾರೆ … Continued

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : 43.80 ಲಕ್ಷ ಮತದಾರರಿಗೆ ನೋಟಿಸ್‌ ನೀಡಲು ಚುನಾವಣಾ ಆಯೋಗ ಸಿದ್ಧತೆ

ಬೆಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision—SIR) ಚುನಾವಣಾ ಪಟ್ಟಿಯ ಎರಡನೇ ಹಂತದಲ್ಲಿ 43,80,740 ನಾಗರಿಕರಿಗೆ ನೋಟಿಸ್ ಜಾರಿ ಮಾಡಿ ಅಗತ್ಯ ಮಾಹಿತಿ ಪಡೆಯಲು ಚುನಾವಣಾ ಆಯೋಗ ಮುಂದಾಗಿದೆ. ಈ ಪೈಕಿ ಬೆಂಗಳೂರಿನ ನಾಲ್ಕು ಜಿಲ್ಲೆಗಳಲ್ಲೇ 24,05,990 ಮಂದಿ ಇದ್ದಾರೆ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ … Continued