ವೀಡಿಯೊ…| ಸಂಕ್ರಾಂತಿ ಹಬ್ಬದಲ್ಲಿ ಒಬ್ಬ ಅತಿಥಿಗಾಗಿ 158 ಬಗೆಯ ಭಕ್ಷ್ಯಗಳನ್ನು ತಯಾರಿಸಿದ ಕುಟುಂಬ…!

ತೆನಾಲಿ: ಭಾರತೀಯ ಸಂಪ್ರದಾಯದಲ್ಲಿ ಅಳಿಯನಿಗೆ ನೀಡುವ ಗೌರವವೇ ವಿಶಿಷ್ಟವಾದುದು. ಆದರೆ ಆಂಧ್ರಪ್ರದೇಶದ ತೆನಾಲಿಯ ಕುಟುಂಬವೊಂದು ಈ ಗೌರವವನ್ನು ಮುಂದಿನ ಹಂತಕ್ಕೆ ಕೊಂಡೊಯ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಈ ವರ್ಷದ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕಾಗಿ ತನ್ನ ಅಳಿಯನಿಗೆ ಬರೋಬ್ಬರಿ 158 ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ ಈ ಕುಟುಂಬ ಸುದ್ದಿಯಾಗಿದೆ. ಈ ವರ್ಷದ ಸಂಕ್ರಾಂತಿ ಆಚರಣೆಯನ್ನು ಗುರುತಿಸಲು … Continued

ಬೆಂಗಳೂರು : ಸಚಿವ ದಿನೇಶ ಗುಂಡೂರಾವ್ ಕಾರ್ಯಕ್ರಮದಲ್ಲಿ ಹೊತ್ತಿಕೊಂಡ ಬೆಂಕಿ

ಬೆಂಗಳೂರು: ಸಂಕ್ರಾಂತಿ ಹಬ್ಬದ ದಿನವಾದ ಗುರುವಾರ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಮಕರ ಸಂಕ್ರಾಂತಿ ಸಂಭ್ರಮದ ನಡುವೆ ಚಿಕ್ಕಪೇಟೆಯಲ್ಲಿರುವ ಬಳೇಪೇಟೆಯ ದೇವಸ್ಥಾನದ ಮುಂದೆ ಹಚ್ಚಿದ ಪಟಾಕಿ ಕಿಡಿಯಿಂದ ಬ್ಯಾನರ್ ಹೊತ್ತಿ ಉರಿದಿದೆ ಎಂದು ಹೇಳಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಕ್ರಾಂತಿ … Continued

ತಮೀಮ್ ಇಕ್ಬಾಲ್‌ ರನ್ನು ‘ಭಾರತದ ಏಜೆಂಟ್’ ಎಂದಿದ್ದ ಬಾಂಗ್ಲಾ ಕ್ರಿಕೆಟ್ ಮಂಡಳಿ ಹಣಕಾಸು ಸಮಿತಿ ಅಧ್ಯಕ್ಷ ವಜಾ

ಢಾಕಾ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ವಿಶ್ವಕಪ್ ಪಂದ್ಯದ ಸ್ಥಳದ ವಿವಾದದ ನಡುವೆ ಸರಣಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಹಣಕಾಸು ಸಮಿತಿ ಅಧ್ಯಕ್ಷ ಎಂ. ನಜ್ಮುಲ್ ಇಸ್ಲಾಂ ಅವರನ್ನು ಗುರುವಾರ ಹುದ್ದೆಯಿಂದ ವಜಾಗೊಳಿಸಲಾಗಿದೆ. ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರನ್ನು “ಭಾರತದ ಏಜೆಂಟ್” ಎಂದು ಕರೆದಿದ್ದ ನಜ್ಮುಲ್ … Continued

‘ಆಪರೇಷನ್ ಸಿಂಧೂರ’ ವೇಳೆ ‘ಉಗ್ರರ’ ಪ್ರಧಾನ ಕಚೇರಿ ಸಂಪೂರ್ಣ ಧ್ವಂಸ : ಪಾಕಿಸ್ತಾನ ಕಂಗಾಲಾಗಿತ್ತು ; ಸತ್ಯ ಒಪ್ಪಿಕೊಂಡ ಎಲ್‌ಇಟಿ ಕಮಾಂಡರ್‌…!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ (Operation Sindoor) ಸೇನಾ ಕಾರ್ಯಾಚರಣೆಯು ಪಾಕಿಸ್ತಾನದ ಬೆನ್ನೆಲುಬು ಮುರಿದಿದೆ. ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಹಫೀಜ್ ಅಬ್ದುರ್ ರೌಫ್, ಭಾರತದ ಈ ದಾಳಿಯಿಂದ ಪಾಕಿಸ್ತಾನದ ಮುರುದ್ಕೆಯಲ್ಲಿರುವ ಮರ್ಕಜ್ -ಎ- ತೊಯ್ಬಾ ಪ್ರಧಾನ ಕಚೇರಿ ನಾಶವಾಗಿರುವುದಾಗಿ … Continued

ಇರಾನಿನಲ್ಲಿ ಅಸ್ಥಿರತೆ ಆತಂಕ : ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಸಜ್ಜು

ನವದೆಹಲಿ: ಇರಾನ್‌ನಲ್ಲಿ ದಿನೇ ದಿನೇ ಉಲ್ಬಣಿಸುತ್ತಿರುವ ಹಿಂಸಾಚಾರ ಮತ್ತು ಅಸ್ಥಿರತೆಯ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ, ಜನವರಿ 16ರೊಳಗೆ ಮೊದಲ ತಂಡವನ್ನು ಭಾರತಕ್ಕೆ ಕರೆತರುವ ಸಾಧ್ಯತೆಯಿದೆ. “ಇರಾನ್‌ನಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತಕ್ಕೆ ಮರಳಲು ಇಚ್ಛಿಸುವ ನಾಗರಿಕರಿಗೆ ಅಗತ್ಯ ವ್ಯವಸ್ಥೆಗಳನ್ನು ವಿದೇಶಾಂಗ ವ್ಯವಹಾರಗಳ … Continued

ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ ; ಬಿಜೆಪಿ ಮೈತ್ರಿಕೂಟ-ಶಿವಸೇನೆಯಲ್ಲಿ ಗೆಲ್ಲೋದು ಯಾರು ?. ಎಕ್ಸಿಟ್ ಪೋಲ್‌ ಹೇಳಿದ್ದೇನು..?

ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿದ್ದು, ಬಿಜೆಪಿ ಮತ್ತು ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟ (ಮಹಾಯುತಿ) ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆಯಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (BMC)ಯ ಒಟ್ಟು 227 ವಾರ್ಡ್‌ಗಳ ಪೈಕಿ … Continued

ಭಾರತ-ಚೀನಾ ಯುದ್ಧದ ಸಮಯದಲ್ಲಿ ದೇಶಕ್ಕೆ 600 ಕೆಜಿ ಚಿನ್ನ, 3 ಖಾಸಗಿ ವಿಮಾನ ನೀಡಿದ್ದ ದರ್ಬಾಂಗ ಮಹಾರಾಣಿ ನಿಧನ

ದರ್ಬಾಂಗ (ಬಿಹಾರ): ಬಿಹಾರದ ಖ್ಯಾತ ದರ್ಬಾಂಗ ರಾಜಮನೆತನದ ಮಹಾರಾಣಿ ಕಾಮಸುಂದರಿ ದೇವಿ ಅವರು ಸೋಮವಾರ ತಮ್ಮ 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ದರ್ಬಾಂಗದಲ್ಲಿರುವ ಐತಿಹಾಸಿಕ ಕಲ್ಯಾಣಿ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು. ಕಳೆದ ಕೆಲವು ದಿನಗಳಿಂದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನದೊಂದಿಗೆ ದರ್ಬಾಂಗ ರಾಜಮನೆತನ ಮಾತ್ರವಲ್ಲದೆ, ಇಡೀ ಮಿಥಿಲಾಂಚಲದ ದೇಶಪ್ರೇಮ ಹಾಗೂ ಸೇವೆಯ ಒಂದು ಗತವೈಭವದ … Continued

ವೀಡಿಯೊ..| ಸೇನಾ ದಿನಾಚರಣೆ : ʼಆಪರೇಷನ್ ಸಿಂಧೂರʼ ಕಾರ್ಯಾಚರಣೆಯ ಹೊಸ ವೀಡಿಯೊ ಬಿಡುಗಡೆ ಮಾಡಿದ ಸೇನೆ

ನವದೆಹಲಿ: ಕಳೆದ ವರ್ಷ ಪಾಕಿಸ್ತಾನದ ಗಡಿ ದಾಟಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ರೋಚಕ ದೃಶ್ಯಗಳನ್ನು ಸೇನಾ ದಿನಾಚರಣೆಯ (Army Day) ಸಂದರ್ಭದಲ್ಲಿ ಗುರುವಾರ ಬಿಡುಗಡೆ ಮಾಡಲಾಗಿದೆ. ಶತ್ರು ರಾಷ್ಟ್ರದ ರಾಡಾರ್ ವ್ಯವಸ್ಥೆ ಹಾಗೂ ವಾಯುನೆಲೆಗಳನ್ನು ಧ್ವಂಸಗೊಳಿಸಿದ ದೃಶ್ಯಗಳು ಈ ವೀಡಿಯೊದಲ್ಲಿವೆ. ಸುಮಾರು ಮೂರು ನಿಮಿಷಗಳ ಕಾಲ ಇರುವ … Continued

ಕುಂದಗೋಳ ; ಅಪ್ರಾಪ್ತರಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಹತ್ಯೆ

ಹುಬ್ಬಳ್ಳಿ : ಧಾರವಾಡ (Dharawad) ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಶಾಲಾ ಬಾಲಕರೇ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಬಾಲಕನನ್ನು ಮೂವರು ಬಾಲಕರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. … Continued

ಒಡಿಶಾದಲ್ಲಿ 10,000 ವರ್ಷ ಹಳೆಯ ನಾಗರಿಕತೆ ಪತ್ತೆ ? ಪುರಾತತ್ವ ಇಲಾಖೆಯಿಂದ ಉತ್ಖನನ ; ಮಹತ್ವದ ಅಂಶಗಳು ಬಹಿರಂಗ

ಭುವನೇಶ್ವರ: ಒಡಿಶಾದ ಮಣ್ಣಿನ ಅಡಿಯಲ್ಲಿ 10,000 ವರ್ಷಗಳಷ್ಟು ಹಳೆಯದಾದ ನಾಗರಿಕತೆಯೊಂದು ಅಡಗಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆ ಈಗ ಸಂಶೋಧಕರಲ್ಲಿ ಕುತೂಹಲ ಮೂಡಿಸಿದೆ. ಸಂಬಲ್ಪುರ ಜಿಲ್ಲೆಯ ರೆಢಾಖೋಲ್‌ನಲ್ಲಿರುವ ಭೀಮಮಂಡಲಿ ಪರ್ವತ ಶ್ರೇಣಿಗಳಲ್ಲಿ ಶಿಲಾಯುಗದ ನಾಗರಿಕತೆಯ ಕುರುಹುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ಸಂಶೋಧನೆಯನ್ನು ತೀವ್ರಗೊಳಿಸಿದೆ. ಹರಪ್ಪ, ಮೊಹೆಂಜೋದಾರೋಗಿಂತಲೂ ಹಳೆಯದೇ? ಈ ಭಾಗದಲ್ಲಿ ಶಿಲಾ ಕೆತ್ತನೆಗಳು, … Continued