ಇದು ಪವಾಡವೇ…? : ಹನುಮಂತನ ಮೂರ್ತಿಗೆ 36 ತಾಸುಗಳ ಕಾಲ ಪ್ರದಕ್ಷಿಣೆ ಹಾಕಿದ ನಾಯಿ ; ವೀಡಿಯೊ ವೈರಲ್‌…!

ಬಿಜ್ನೋರ್ : ನಂಬಿಕೆ ಮತ್ತು ವಿಜ್ಞಾನದ ನಡುವಿನ ಚರ್ಚೆಗೆ ವೇದಿಕೆಯೊದಗಿಸುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗಿನಾ ಎಂಬಲ್ಲಿ ನಡೆದಿದೆ. ಇಲ್ಲಿನ ಹನುಮಂತನ ಮೂರ್ತಿಯೊಂದರ ಸುತ್ತ ನಾಯಿಯೊಂದು ಸತತ 36 ಗಂಟೆಗಳ ಕಾಲ ಪ್ರದಕ್ಷಿಣೆ ಹಾಕಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸ್ಥಳೀಯರ ಪ್ರಕಾರ, ಈ ನಾಯಿಯು ದಣಿವಿಲ್ಲದೆ … Continued

ಸಾಗರದಾಚೆ ಮರುಕಳಿಸಿದ ಪುರಾತನ ಇತಿಹಾಸ: ಮಸ್ಕತ್ ತಲುಪಿದ ಭಾರತದ ಸಾಂಪ್ರದಾಯಿಕ ‘ಹೊಲಿಗೆ ನೌಕೆ’ ಕೌಂಡಿನ್ಯ…!

ಮಸ್ಕತ್: ಭಾರತ ಮತ್ತು ಓಮನ್ ನಡುವಿನ ಸಾವಿರಾರು ವರ್ಷಗಳ ಪುರಾತನ ಕಡಲ ಸಂಬಂಧವನ್ನು ಸ್ಮರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿದ್ದ ಸಾಹಸಯಾತ್ರೆ ಯಶಸ್ವಿಯಾಗಿದೆ. ಗುಜರಾತ್‌ನ ಪೋರ್‌ಬಂದರಿನಿಂದ ಹೊರಟಿದ್ದ ಭಾರತೀಯ ನೌಕಾಪಡೆಯ ಸಾಂಪ್ರದಾಯಿಕ ‘ಹೊಲಿಗೆ ಹಡಗು’ (stitched ship) INSV ಕೌಂಡಿನ್ಯ, 17 ದಿನಗಳ ಸುದೀರ್ಘ ಪ್ರಯಾಣದ ನಂತರ ಬುಧವಾರ ಓಮನ್‌ನ ಮಸ್ಕತ್ ತೀರವನ್ನು ಸುರಕ್ಷಿತವಾಗಿ ತಲುಪಿದೆ. ಈ ನೌಕೆಯ … Continued

ಇಬ್ಬರು ಆತ್ಮೀಯ ಗೆಳತಿಯರನ್ನು 30 ವರ್ಷಗಳ ನಂತರ ಮತ್ತೆ ಒಂದುಗೂಡಿಸಿದ 1996ರಲ್ಲಿ ಬರೆದ ಹಳೆಯ ಪತ್ರ…!

1996ರ ಹಳೆಯ ಪತ್ರ ತಂದಿತು ಗೆಳತಿಯರ ಪುನರ್ಮಿಲನ: ತಾಯಿಗಾಗಿ ಮಗಳ ಅಪರೂಪದ ಸಾಹಸ! “ಕಾಲ ಬದಲಾದಂತೆ ಸ್ನೇಹವೂ ಮರೆಯಾಗುತ್ತದೆ” ಎಂಬ ಮಾತಿದೆ. ಆದರೆ, ಇಲ್ಲೊಂದು ಅಪರೂಪದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸುಮಾರು 30  ವರ್ಷಗಳ ಹಿಂದೆ ಕಳೆದುಹೋದ ಸ್ನೇಹವೊಂದನ್ನು ಮಗಳ ಸಾಹಸದಿಂದ ಮತ್ತೆ ಬೆಸೆಯುವಂತೆ ಮಾಡಿದೆ. ಇತ್ತೀಚೆಗೆ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಮಗಳೊಬ್ಬಳು … Continued

ಅಂತ್ಯಸಂಸ್ಕಾರಕ್ಕೆ ತೆರಳಿದ್ದಾಗ 103ರ ಅಜ್ಜಿ ಎದ್ದು ಕುಳಿತರು…! ಕೇಕ್ ತಿಂದು ಜನ್ಮದಿನ ಆಚರಿಸಿಕೊಂಡರು…!!

ನಾಗ್ಪುರ: ಸಾವು ಎಂಬುದು ಅನಿವಾರ್ಯ, ಆದರೆ ಅನಿರೀಕ್ಷಿತವಾಗಿ ಸಾವು ಬಂದು ಮತ್ತೆ ಮರಳಿ ಹೋದರೆ? ಇಂತಹದ್ದೊಂದು ನಂಬಲಾಗದ ಪವಾಡ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ರಾಮ್ಟೆಕ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮನೆಯವರೆಲ್ಲ ಸೇರಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ, ಸತ್ತಿದ್ದಾರೆಂದು ಭಾವಿಸಲಾಗಿದ್ದ 103 ವರ್ಷದ ಮುತ್ತಜ್ಜಿ ದಿಢೀರನೆ ಉಸಿರಾಡಲು ಆರಂಭಿಸಿ ಎದ್ದು ಕುಳಿತು ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದ್ದಾರೆ. ರಾಮ್ಟೆಕ್ … Continued

ಇರಾನ್‌ನಲ್ಲಿರುವ ಭಾರತೀಯರಿಗೆ ತಕ್ಷಣ ದೇಶ ತೊರೆಯಲು ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಇರಾನ್‌ನಲ್ಲಿ ದಿನೇ ದಿನೇ ಉಲ್ಬಣಿಸುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಅಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಭಾರತ ಸರ್ಕಾರ ಬುಧವಾರ (ಜನವರಿ 14, 2026) ತುರ್ತು ಸಲಹೆ (Advisory) ನೀಡಿದೆ. ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಲಭ್ಯವಿರುವ ವಿಮಾನಗಳು ಅಥವಾ ಇತರೆ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು … Continued

ಬೀದರ : ಗಾಳಿಪಟದ ದಾರ ಕುತ್ತಿಗೆಗೆ ಸುತ್ತಿ ಬೈಕ್ ಸವಾರ ಸಾವು

ಬೀದರ: ಸಂಕ್ರಾಂತಿ ಸಂಭ್ರಮದ ನಡುವೆಯೇ ಗಾಳಿಪಟದ ದಾರ (ಮಾಂಜಾ) ಮತ್ತೊಂದು ಬಲಿ ಪಡೆದಿದೆ. ಕರ್ನಾಟಕದ ಬೀದರ ಜಿಲ್ಲೆಯಲ್ಲಿ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ 48 ವರ್ಷದ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಮೃತರು ಸಂಜುಕುಮಾರ ಹೊಸಮನಿ ಎಂದು ತಿಳಿದುಬಂದಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ, ಹುಮನಾಬಾದಿನಲ್ಲಿ ವಾಸವಾಗಿರುವ ತಮ್ಮ ಮಗಳನ್ನು ಕರೆದುಕೊಂಡು ಬರಲು ಅವರು ಬೈಕ್‌ನಲ್ಲಿ … Continued

ಕಾಂಗ್ರೆಸ್‌ ಮುಖಂಡನ ವಿರುದ್ಧ ಶಿಡ್ಲಘಟ್ಟ ಪೌರಾಯುಕ್ತೆಗೆ ಅಶ್ಲೀಲವಾಗಿ ನಿಂದಿಸಿ ಬೆದರಿಕೆ ಹಾಕಿದ ಆರೋಪ ; ಆಡಿಯೊ ವೈರಲ್‌

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ರಾಜೀವ ಗೌಡ ವಿರುದ್ಧ ನಗರಸಭೆ ಪೌರಾಯುಕ್ತೆಗೆ ಪ್ರಾಣ ಬೆದರಿಕೆ ಹಾಕಿರುವ ಕೇಳಿ ಬಂದಿದೆ. ಅವರು ಬೆದರಿಕೆ ಹಾಕಿದ್ದು ಎನ್ನಲಾದ ಆಡಿಯೋ ಕ್ಲಿಪ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಡಿಯೊದಲ್ಲಿ ನಗರಸಭೆ ಆಯುಕ್ತೆ ಅಮೃತಾ ಗೌಡ ಅವರಿಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ … Continued

ತೆಲಂಗಾಣದಲ್ಲಿ ಮಾರಕ ಇಂಜೆಕ್ಷನ್ ನೀಡಿ 500 ಬೀದಿ ನಾಯಿಗಳ ಮಾರಣಹೋಮ…!

ಹೈದರಾಬಾದ್: ತೆಲಂಗಾಣದಲ್ಲಿ ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಹನುಮಕೊಂಡ ಮತ್ತು ಕಾಮಾರೆಡ್ಡಿ ಜಿಲ್ಲೆಗಳ ಏಳು ಮಂದಿ ಗ್ರಾಮ ಪಂಚಾಯt ಅಧ್ಯಕ್ಷರು (ಸರಪಂಚ್‌ಗಳು) ಸೇರಿದಂತೆ ಒಟ್ಟು 15 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೊಸ ವರ್ಷದ ಮೊದಲ ಎರಡು ವಾರಗಳಲ್ಲಿ ಕನಿಷ್ಠ 500 ನಾಯಿಗಳಿಗೆ ವಿಷ ಹಾಕಿ ಕೊಲ್ಲಲಾಗಿದ್ದು, … Continued

ಉತ್ತರ ಭಾರತದ ಮಹಿಳೆಯರ ಕುರಿತು ಡಿಎಂಕೆ ನಾಯಕ ದಯಾನಿಧಿ ಮಾರನ್ ವಿವಾದಾತ್ಮಕ ಹೇಳಿಕೆ

ಚೆನ್ನೈ: ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಉತ್ತರ ಭಾರತ ಮತ್ತು ತಮಿಳುನಾಡಿನ ಮಹಿಳೆಯರನ್ನು ಹೋಲಿಕೆ ಮಾಡಿ ನೀಡಿರುವ ಹೇಳಿಕೆಯೊಂದು ಇದೀಗ ದೊಡ್ಡ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಚೆನ್ನೈನ ಕ್ವೈಡ್-ಎ-ಮಿಲ್ಲತ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಮಾರನ್, “ತಮಿಳುನಾಡಿನಲ್ಲಿ ಹೆಣ್ಣುಮಕ್ಕಳಿಗೆ ಓದಲು ಪ್ರೋತ್ಸಾಹ ನೀಡಲಾಗುತ್ತದೆ. ಆದರೆ ಉತ್ತರ ಭಾರತದಲ್ಲಿ ಮಹಿಳೆಯರನ್ನು ಅಡುಗೆ ಮನೆಗೆ … Continued

ಥೈಲ್ಯಾಂಡ್‌ನಲ್ಲಿ ಭೀಕರ ರೈಲು ಅಪಘಾತ: ಕ್ರೇನ್ ಬಿದ್ದು 22 ಪ್ರಯಾಣಿಕರು ಸಾವು

ಬ್ಯಾಂಕಾಕ್: ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನಿಂದ ಈಶಾನ್ಯ ಭಾಗಕ್ಕೆ ಸಂಚರಿಸುತ್ತಿದ್ದ ರೈಲಿನ ಮೇಲೆ ನಿರ್ಮಾಣ ಹಂತದ ಕಾಮಗಾರಿ ಮಾಡುತ್ತಿದ್ದ ಬೃಹತ್ ಕ್ರೇನ್ ಒಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ 22 ಜನರು ಸಾವಿಗೀಡಾಗಿದ್ದಾರೆ ಮತ್ತು 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಖೋನ್ ರಾಚಸಿಮಾ ಪ್ರಾಂತ್ಯದ ಸಿಖಿಯು ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಈ … Continued