ಅಮೆರಿಕ ವಿಮಾನ ನಿಲ್ದಾಣದಲ್ಲಿ ಭಾರತೀಯ ವ್ಯಕ್ತಿಯ ಕೈಗೆ ಕೋಳ ಹಾಕಿ ನೆಲಕ್ಕೆ ಕೆಡವಿ ಒತ್ತಿ ಹಿಡಿದ ವೀಡಿಯೊ ವೈರಲ್‌

ನ್ಯೂಜೆರ್ಸಿಯ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಭಾರತೀಯ ವ್ಯಕ್ತಿಯೊಬ್ಬರಿಗೆ ಕೈಕೋಳ ಹಾಕಿ ನೆಲಕ್ಕೆ ಬೀಳಿಸಿ ಒತ್ತಿ ಹಿಡಿದಿರುವ ಆತಂಕಕಾರಿ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಹಂಚಿಕೊಂಡ ಭಾರತೀಯ-ಅಮೆರಿಕನ್ ಉದ್ಯಮಿ ಕುನಾಲ್ ಜೈನ್ ಅವರು, ಜೂನ್ 7 ರಂದು ವಿದ್ಯಾರ್ಥಿಯನ್ನು ವಿಮಾನ ಕಳುಹಿಸಲು ನಿರ್ಧರಿಸಲಾಗಿತ್ತು ಆದರೆ ಅವರನ್ನುಬಿಟ್ಟು ಹೋಗಲಾಗಿತ್ತು, ನಂತರ ಗಡೀಪಾರು ಮಾಡಲಾಗಿದೆ … Continued

ಭಾರತೀಯ ಗಗನಯಾತ್ರಿ ಒಳಗೊಂಡ ಆಕ್ಸಿಯಮ್ -4 ಮಿಷನ್ ಉಡಾವಣೆ ಮುಂದೂಡಿಕೆ

ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಆಕ್ಸಿಯಮ್ -4 ಮಿಷನ್ ಉಡಾವಣೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಟ್ವಿಟರ್‌ನಲ್ಲಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಪೋಸ್ಟ್‌ನಲ್ಲಿ ಈ ವಿಷಯ ತಿಳಿಸಿದೆ. “ಹವಾಮಾನ ವೈಪರೀತ್ಯದಿಂದಾಗಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ಗಗನಯಾತ್ರಿಯನ್ನು ಕಳುಹಿಸುವ ಆಕ್ಸಿಯಮ್ -4 ಮಿಷನ್‌ನ ಉಡಾವಣೆಯನ್ನು … Continued

ಖಾನಾಪುರ | ಕುಸಮಳಿ ಸನಿಹ ಮಲಪ್ರಭಾ ನದಿಯ ಸೇತುವೆ ಬಳಿ ಭೂ ಕುಸಿತ

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಭೂ ಕುಸಿತಗಳು ಕಂಡು ಬಂದಿವೆ. ಖಾನಾಪುರ ತಾಲೂಕು ಕುಸಮಳಿ ಬಳಿ ಮಲಪ್ರಭಾ ನದಿಗೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ಬಳಿ ನೀರಿನ ಹರಿವು ಹೆಚ್ಚಿದೆ. ಇದರಿಂದ ಸೇತುವೆಯ ರಸ್ತೆಯ ಮೇಲೆ ಭೂಕುಸಿತ ಕಂಡು ಬಂದಿದೆ. ಹೀಗಾಗಿ ಭಾನುವಾರ ಸಂಜೆಯಿಂದ ಈ ಮಾರ್ಗವಾಗಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ. ಬೆಳಗಾವಿ ಮತ್ತು … Continued

ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತ

ಬೆಳಗಾವಿ : ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಪ್ರಯಾಣಿಸುತ್ತಿದ್ದ ಕಾರು ಹಾಗೂ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿಯ ದರೂರ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಲಕ್ಷ್ಮಣ ಸವದಿ ಅವರು ಅಥಣಿಯಿಂದ ಗೋಕಾಕ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಅವರ ಕಾರಿಗೆ ಗೂಡ್ಸ್ ವಾಹನ … Continued

ವೀಡಿಯೊಗಳು | ಒಂದು ಅಡಿ ಉದ್ದದ ಚಾಕು ನುಂಗಿ ಒದ್ದಾಡಿದ ನಾಗರಹಾವು ; ಯಶಸ್ವಿಯಾಗಿ ಹೊರತೆಗೆದ ಪಶುವೈದ್ಯ-ಉರಗ ತಜ್ಞ ; ವೀಕ್ಷಿಸಿ

ಕುಮಟಾ: ನಾಗರಹಾವು ಇಲಿ, ಕೋಳಿ ಮೊಟ್ಟೆ, ಹಾಗೆಯೇ ಹಾವುಗಳನ್ನೇ ನುಂಗುವುದನ್ನು ಕೇಳಿದ್ದೇವೆ. ಆದರೆ ಚಾಕುವನ್ನೇ ತನ್ನ ಆಹಾರ ಎಂದು ಭ್ರಮಿಸಿ ನುಂಗಿದರೆ ಅದರ ಕತೆ ಏನಾಗಬಹುದು..? ಆದರೆ ಇಂಥದ್ದೇ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕ ಎಂಬವರ ಮನೆಯಲ್ಲಿ ನಡೆದಿರುವುದು ವರದಿಯಾಗಿದೆ. ಚಾಕುವನ್ನು ನುಂಗಿದ ನಾಗರ ಹಾವು ಅದನ್ನು ಜೀರ್ಣಿಸಿಕೊಳ್ಳಲೂ … Continued

“ಮೂವರು ಪುರುಷರು, ಹಿಂದಿ ಮಾತಾಡ್ತಾರೆ, ಸ್ಥಳೀಯರಲ್ಲ” : ʼಹನಿಮೂನ್ ಕೊಲೆʼ ಪ್ರಕರಣ ಭೇದಿಸಲು ಸಹಾಯ ಮಾಡಿದ ಪ್ರವಾಸಿ ಗೈಡ್‌ ನೀಡಿದ ಸುಳಿವು…

ನವದೆಹಲಿ: ರಾಜಾ ರಘುವಂಶಿಯನ್ನು ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿಯಾಗಿದ್ದ ಪ್ರವಾಸಿ ಮಾರ್ಗದರ್ಶಿಯ ಹೇಳಿಕೆಯೊಂದು, ಬಾಲಿವುಡ್ ಸಿನಿಮಾದ ಕಥಾವಸ್ತುವಿನಂತೆ ಅನೇಕ ಟ್ವಿಸ್ಟ್‌ ಗಳಿಂದ ಕೂಡಿರುವ ಭೀಕರ ಕೊಲೆ ಪ್ರಕರಣವನ್ನು ಭೇದಿಸಲು ನೆರವಾಗಿದೆ. ಪ್ರವಾಸಿ ಗೈಡ್‌ ನೀಡಿದ ಹೇಳಿಕೆಯ ಆಧರಿಸಿ ಮೇಲೆ ತನಿಖೆ ನಡೆಸಿದ ಪೊಲೀಸರು ಸುಮಾರು ಹದಿನೈದು ದಿನಗಳಿಂದ ರಹಸ್ಯವಾಗಿಯೇ ಉಳಿದಿದ್ದ ಕೊಲೆ ಪ್ರಕರಣವನ್ನು ಕೊನೆಗೂ ಭೇದಿಸಿದ್ದಾರೆ. … Continued

ಬೆಂಗಳೂರು ಕಾಲ್ತುಳಿತದ ಘಟನೆ : ಕಾಂಗ್ರೆಸ್‌ ಹೈಕಮಾಂಡ್‌ ನಿಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರಗೆ ದೆಹಲಿಗೆ ಬುಲಾವ್‌…

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಸಾವಿಗೀಡಾದ ಘಟನೆಯ ಕೆಲವು ದಿನಗಳ ನಂತರ, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ದೆಹಲಿಗೆ ಬುಲಾವ್‌ ನೀಡಿದೆ ಎಂದು ತಿಳಿದುಬಂದಿದೆ. ಕಾಲ್ತುಳಿತ ಘಟನೆಯಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಹೈಕಮಾಂಡ್  ಮಂಗಳವಾರ ಬೆಳಿಗ್ಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ ಅವರಿಗೆ … Continued

ಬೆಂಗಳೂರು : ಪ್ರಿಯತಮೆಯನ್ನು ಹೋಟೆಲಿಗೆ ಕರೆಯಿಸಿಕೊಂಡು ಬರ್ಬರ ಹತ್ಯೆ ; 17 ಬಾರಿ ಇರಿದ ಟೆಕ್ಕಿ…

ಬೆಂಗಳೂರು: ಘಟನೆ ನಡೆದು ಎರಡು ದಿನಗಳ ನಂತರ ಭಾನುವಾರ ನಗರದ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿರುವ ಹೋಟೆಲ್ ಕೋಣೆಯೊಳಗೆ 36 ವರ್ಷದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಹರಿಣಿ (36) ಎಂದು ಗುರುತಿಸಲಾದ ಮಹಿಳೆಯನ್ನು ಗೆಳೆಯ 25 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯಶಸ್ ಎಂಬಾತ 17 ಬಾರಿ ಇರಿದು ಕೊಂದ … Continued

ಮುಂಬೈ ಲೋಕಲ್ ರೈಲಿನಿಂದ ಬಿದ್ದು 5 ಮಂದಿಯ ಸಾವಿನ ಶಂಕೆ ; ಹಲವರಿಗೆ ಗಾಯ

ಮುಂಬೈ: ಸೋಮವಾರ ಬೆಳಿಗ್ಗೆ ಮುಂಬ್ರಾ ಬಳಿ ಕಿಕ್ಕಿರಿದು ತುಂಬಿದ್ದ ಮುಂಬೈ ಲೋಕಲ್ ರೈಲಿನಿಂದ 10 ಕ್ಕೂ ಹೆಚ್ಚು ಪ್ರಯಾಣಿಕರು ಕೆಳಕ್ಕೆ ಬಿದ್ದು, ಕನಿಷ್ಠ ಆರು ಮಂದಿ ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರೈಲು ಗರಿಷ್ಠ ಜನದಟ್ಟಣೆಯಿಂದ ತುಂಬಿರುವ ಸಮಯದಲ್ಲಿ ಇದು ಸಂಭವಿಸಿದೆ. ರೈಲು ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಛತ್ರಪತಿ ಶಿವಾಜಿ … Continued

70 ವರ್ಷಗಳ ಲಿವ್-ಇನ್ ಸಂಬಂಧದ ನಂತರ 90 ವರ್ಷದ ಸಂಗಾತಿ ಮದುವೆಯಾದ 95 ವರ್ಷದ ವ್ಯಕ್ತಿ…!

ರಾಜಸ್ಥಾನದ ವೃದ್ಧ ದಂಪತಿಯೊಬ್ಬರು 70 ವರ್ಷಗಳ ಕಾಲ ಲಿವ್-ಇನ್ ಸಂಬಂಧ (live-in relationship)ದಲ್ಲಿ ಕಳೆದ ನಂತರ ಈಗ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ವರ 95 ವರ್ಷದ ರಾಮಭಾಯಿ ಅಂಗಾರಿ ಮತ್ತು ವಧು, 90 ವರ್ಷದ ಜೀವಲಿ ದೇವಿ, ಡುಂಗರಪುರ ಜಿಲ್ಲೆಯ ಗಲಂದರ್ ಗ್ರಾಮದಲ್ಲಿ ತಮ್ಮ ಕುಟುಂಬ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಪರಸ್ಪರ ವಿವಾಹವಾದರು. ರಾಜಸ್ಥಾನದ ಬುಡಕಟ್ಟು … Continued