ಶಿರಸಿ : ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಶಿರಸಿ: ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಸಳೂರು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿನಿಯ ಮೃತ ದೇಹ ಇಸಳೂರು ಕೆರೆಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಮೃತ ವಿದ್ಯಾರ್ಥಿನಿಯನ್ನು ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸ್ನೇಹಾ (17) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು … Continued

ಭೂಕಂಪದಲ್ಲಿ 1400 ಮಂದಿ ಸಾವಿಗೀಡಾದ 2 ದಿನಗಳ ನಂತರ ಅಫ್ಘಾನಿಸ್ತಾನದಲ್ಲಿ 5.3 ತೀವ್ರತೆಯ ಮತ್ತೊಂದು ಭೂಕಂಪ…

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಎರಡು ದಿನಗಳ ಹಿಂದೆ ಸಂಭವಿಸಿದ ಭೂಕಂಪದಲ್ಲಿ 1,400 ಕ್ಕೂ ಹೆಚ್ಚು ಜನರು ಸಾವಿಗೀಡಾದ ನಂತರ ಮಂಗಳವಾರ ಪೂರ್ವ ಅಫ್ಘಾನಿಸ್ತಾನದಲ್ಲಿ 5.2 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಇದು ಸಹ ಪ್ರಬಲ ಹಿಂದಿನ ಭೂಕಂಪದ ಕೇಂದ್ರಬಿಂದುವಿನ ಬಳಿ ಇದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ. ಯುಎಸ್‌ಜಿಎಸ್ ಪ್ರಕಾರ, ಕಂಪನದ ಕೇಂದ್ರಬಿಂದು ನಂಗರಹಾರ್ … Continued

ಅತ್ಯಾಚಾರ ಆರೋಪ; ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪರಾರಿಯಾದ ಶಾಸಕ…!

ಚಂಡೀಗಢ : ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಪಂಜಾಬಿನ ಆಮ್‌ ಆದ್ಮಿ ಪಕ್ಷದ ಶಾಸಕನನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿದ ಘಟನೆ ಹರಿಯಾಣದ ಕರ್ನಾಲ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಅತ್ಯಾಚಾರ ಆರೋಪದ ಮೇಲೆ ಪಂಜಾಬ್ ಶಾಸಕ ಹರ್ಮೀತ್ ಸಿಂಗ್ ಧಿಲ್ಲೋನ್ ಪಠಾಣಮಜ್ರ ಅವರನ್ನು ಪೊಲೀಸರು ಬಂಧಿಸಿದ್ದರು. ಸ್ಥಳೀಯ ಠಾಣೆಗೆ … Continued

ವೀಡಿಯೊ…| ಶಿರಸಿ : ಆಹಾರವೆಂದು ಭಾವಿಸಿ ‘ನಾಡ ಬಾಂಬ್‌’ ತಿನ್ನಲು ಹೋದ ಆಕಳು ; ಸ್ಫೋಟಕ್ಕೆ ಛಿದ್ರಗೊಂಡ ಮುಖ…

ಶಿರಸಿ: ಅಕ್ರಮ ಚಟುವಟಿಕೆಗಳಿಗಾಗಿ ಇರಿಸಲಾಗಿದ್ದ ನಾಡ ಬಾಂಬ್‌ ಸಿಡಿದು ಹಸುವೊಂದು ಮಾರಣಾಂತಿಕವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಮಳಲಿ ಗ್ರಾಮದ ಹೊಸಮನೆ ಬಳಿ ನಡೆದಿದೆ ಎಂದು ವರದಿಯಾಗಿದೆ. ಶಿರಸಿ ತಾಲೂಕಿನ ಹೊಸಮನೆ ನಿವಾಸಿ ಲಕ್ಷ್ಮಣ ಗೌಡ ಎಂಬವರಿಗೆ ಸೇರಿದ ಈ ಆಕಳು, ಅಕೇಶಿಯಾ ತೋಪಿನಲ್ಲಿ ಮೇಯುತ್ತಿದ್ದಾಗ ಆಹಾರವೆಂದು ತಿಳಿದು ಅಲ್ಲಿ ಇರಿಸಲಾಗಿದ್ದ ನಾಡ … Continued

ಅಕ್ರಮ ಚಿನ್ನ ಸಾಗಣೆ ಪ್ರಕರಣ : ನಟಿ ರನ್ಯಾ ರಾವ​ಗೆ 102.55 ಕೋಟಿ ರೂ. ದಂಡ

ಬೆಂಗಳೂರು : ಹೈ ಪ್ರೊಫೈಲ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಮತ್ತು ಇತರ ಮೂವರಿಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ನೂರಾರು ಕೋಟಿ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ. ಮಾರ್ಚ್ 3 ರಂದು, ಸಂಸ್ಥೆ 127.3 ಕೆಜಿ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡ ನಂತರ ರನ್ಯಾ ಅವರನ್ನು ಬಂಧಿಸಿದೆ. … Continued

ಭಾರತದಲ್ಲಿ ತಯಾರಿಸಿದ ಮೊದಲ ಸ್ವದೇಶಿ ಚಿಪ್ ; ಪ್ರಧಾನಿ ಮೋದಿಗೆ ವಿಕ್ರಮ್ 32-ಬಿಟ್ ಪ್ರೊಸೆಸರ್ ಚಿಪ್‌ ಉಡುಗೊರೆ ನೀಡಿದ ಸಚಿವ ವೈಷ್ಣವ

ನವದೆಹಲಿ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಕ್ರಂ-32 ಬಿಟ್ ಪ್ರೊಸೆಸರ್ ಚಿಪ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ ಅವರು ಮೂರು ದಿನಗಳ ಸೆಮಿಕಾನ್ ಇಂಡಿಯಾ 2025 ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು. ದೇಶದ ಸೆಮಿಕಂಡಕ್ಟರ್ ಸ್ವಾವಲಂಬನೆ ಪ್ರಯಾಣದಲ್ಲಿ ಇದನ್ನು ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಭಾರತೀಯ … Continued

ಮಗಳನ್ನೇ ಪಕ್ಷದಿಂದ ಅಮಾನತುಗೊಳಿಸಿದ ಬಿಆರ್‌ ಎಸ್‌ ಅಧ್ಯಕ್ಷ ಕೆ. ಚಂದ್ರಶೇಖರ ರಾವ್

ಹೈದರಾಬಾದ್ : ತಮ್ಮ ಪುತ್ರಿ ಹಾಗೂ ತೆಲಂಗಾಣ ಶಾಸಕಿ ಕೆ. ಕವಿತಾ ಅವರನ್ನು ಬಿಆರ್‌ಎಸ್‌ ಅಧ್ಯಕ್ಷ -ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಭಾರತ ರಾಷ್ಟ್ರ ಸಮಿತಿ ಪಕ್ಷದಿಂದ ಅಮಾನತುಗೊಳಿಸಿದ್ದಾರೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ವಿಧಾನ ಪರಿಷತ್‌ ಸದಸ್ಯೆ ಕೆ. ಕವಿತಾ ಅವರನ್ನು ಮಂಗಳವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ, ಅವರ ಸೋದರಸಂಬಂಧಿಗಳಾದ ಮಾಜಿ ನೀರಾವರಿ … Continued

ಜೂನ್ 1ರಿಂದ ಸೆಪ್ಟೆಂಬರ್ 1ರ ವರೆಗಿನ ಅವಧಿಯಲ್ಲಿ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಆದ್ರೂ ಕೆಲ ಜಿಲ್ಲೆಗಳಲ್ಲಿ ಮಳೆ ಕೊರತೆ….

ಬೆಂಗಳೂರು : ಈ ಸಲದ ನೈಋತ್ಯ ಮಾನ್ಸೂನ್‌ನಲ್ಲಿ ಕಳೆದ ಜೂನ್ 1 ರಿಂದ ಸೆಪ್ಟೆಂಬರ್ 1ರ ವರೆಗೆ ಕರ್ನಾಟಕದಲ್ಲಿ 786 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 675.6 ಮಿಮೀ ಮಳೆಯಾಗಬೇಕಿತ್ತು. ಆದಾಗ್ಯೂ, ಕೊಡಗು, ಶಿವಮೊಗ್ಗ, ಬೆಂಗಳೂರು ದಕ್ಷಿಣ (ಹಿಂದೆ ರಾಮನಗರ) ಮತ್ತು ಹಾಸನ ಸೇರಿದಂತೆ ಏಳು ಜಿಲ್ಲೆಗಳು ಮಳೆಯ ಕೊರತೆಯಾಗಿದೆ … Continued

ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಮಿಚೆಲ್ ಸ್ಟಾರ್ಕ್

ಆಸ್ಟ್ರೇಲಿಯಾದ ಲೆಜೆಂಡರಿ ವೇಗಿ ಮಿಚೆಲ್ ಸ್ಟಾರ್ಕ್ ಮಂಗಳವಾರ (ಸೆಪ್ಟೆಂಬರ್ 2) ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಎಡಗೈ ವೇಗಿ 2012 ರಿಂದ 2024 ರವರೆಗೆ ಆಸ್ಟ್ರೇಲಿಯಾ ತಂಡದ ಪರವಾಗಿ 20 ಓವರ್‌ಗಳ ಸ್ವರೂಪದ ಟಿ20ಯ 65 ಪಂದ್ಯಗಳನ್ನು ಆಡಿದ್ದಾರೆ ಮತ್ತು 79 ವಿಕೆಟ್‌ಗಳನ್ನು ಪಡೆದಿದ್ದಾರೆ. ಸ್ಟಾರ್ಕ್ ಜೂನ್ 24, 2024 ರಂದು ಸೇಂಟ್ ಲೂಸಿಯಾದ ಗ್ರಾಸ್ … Continued

ಪ್ರಧಾನಿ ಮೋದಿ ಜೊತೆ ಕಾರಿನಲ್ಲಿ ಹೋಗಲು 10 ನಿಮಿಷಗಳ ಕಾಲ ಕಾದ ಪುತಿನ್; 45 ನಿಮಿಷಗಳ ಕಾಲ ಕಾರಿನಲ್ಲೇ ಮಾತುಕತೆ…!

ಬೀಜಿಂಗ್: ಚೀನಾದ ಟಿಯಾಂಜಿನ್‌ನಲ್ಲಿರುವ ಎಸ್‌ಸಿಒ (SCO) ಶೃಂಗಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಸೋಮವಾರ ಒಂದೇ ವಾಹನದಲ್ಲಿ ತಮ್ಮ ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ ಪ್ರಯಾಣಿಸಿದ್ದಾರೆ. – ಇದು ರಷ್ಯಾ ಜೊತೆಗಿನ ಭಾರತದ ತೈಲ ವ್ಯಾಪಾರದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದ ದಾಳಿಯ ಮಧ್ಯೆ ಬಂದಿದೆ. … Continued