ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಗೆ ಪತ್ನಿ ಕಪಾಳಮೋಕ್ಷ ಮಾಡಿದರೆ ? ವೀಡಿಯೊ ವೈರಲ್‌

ವಿಯೆಟ್ನಾಂನಲ್ಲಿ ವಿಮಾನದಿಂದ ಇಳಿಯುವ ಮೊದಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪತ್ನಿ ಬ್ರಿಗಿಟ್ ಅವರು ಮ್ಯಾಕ್ರನ್‌ ಕೆನ್ನೆಗೆ ಬಾರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮ್ಯಾಕ್ರನ್ ತಮ್ಮ ಆಗ್ನೇಯ ಏಷ್ಯಾ ಪ್ರವಾಸವನ್ನು ಪ್ರಾರಂಭಿಸಲು ಭಾನುವಾರ ಸಂಜೆ ಹನೋಯ್‌ಗೆ ಬಂದಿಳಿದರು. ಆದಾಗ್ಯೂ, ಅವರು ಬಂದಿಳಿದಾಗ ದಂಪತಿ ನಡುವಿನ ‘ಜಗಳ’ದ ತರಹದ ವೀಡಿಯೊ ಹೊರಹೊಮ್ಮಿತು. ದಂಪತಿ … Continued

ಕೋವಿಡ್‌ ಸಭೆ | ಮಕ್ಕಳಿಗೆ ಜ್ವರ, ಶೀತ ಇದ್ರೆ ರಜೆ ಕೊಡಲು ಸಿಎಂ ಸೂಚನೆ ; ವೃದ್ಧರು-ಗರ್ಭಿಣಿಯರಿಗೆ ಮಾಸ್ಕ್‌ ಧರಿಸಲು ಸಲಹೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಮತ್ತೆ ಕಾಣಿಸಿಕೊಂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳ ಸಭೆ ನಡೆಸಿದರು. ಅಧಿಕಾರಿಗಳು, ತಜ್ಞರಿಂದ ಮಾಹಿತಿ ಪಡೆದ ನಂತರ ಅವರು ಕೊರೋನಾ ನಿಯಂತ್ರಣಕ್ಕೆ ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಮಸ್ಯೆ ಆಗಬಾರದು. ಕೋವಿಡ್​ ಸಹಾಯವಾಣಿ​​ ತೆರೆಯಬೇಕು … Continued

ಭಾರಿ ಮಳೆ ಮುನ್ಸೂಚನೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 27, 28 ರಂದು ಶಾಲೆ-ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು : ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಮೇ 27 ಮತ್ತು28ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಸಿಬಿಎಸ್‌ಇ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಅತೀ ಹೆಚ್ಚಿನ ಮಳೆ … Continued

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ; ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಬಣ ಪುನರಾಯ್ಕೆ

ಧಾರವಾಡ: ಇಲ್ಲಿನ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಬಣ ಭರ್ಜರಿ ಗೆಲುವು ಸಾಧಿಸಿದೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ 135 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಒಂದೇ ಬಣದ ಎಲ್ಲ ಅಭ್ಯರ್ಥಿಗಳು … Continued

ವೀಡಿಯೊ…| ಒಡಿಶಾದ ಸಮುದ್ರದಲ್ಲಿ ಮಗುಚಿದ ದೋಣಿ ; ಅದರಲ್ಲಿದ್ದ ಕ್ರಿಕೆಟಿಗ ಸೌರವ ಗಂಗೂಲಿ ಸಹೋದರ, ಅತ್ತಿಗೆ ಸ್ವಲ್ಪದರಲ್ಲೇ ಪಾರು

ಪುರಿ: ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಸಹೋದರ ಸ್ನೇಹಶಿಶ್ ಗಂಗೂಲಿ ಮತ್ತು ಅವರ ಪತ್ನಿ ಅರ್ಪಿತಾ ಇದ್ದ ಸ್ಪೀಡ್‌ ಬೋಟ್‌ ಒಡಿಶಾದ ಸಮುದ್ರದಲ್ಲಿ ಭಾನುವಾರ ಮಗುಚಿ ಬಿದ್ದಿದೆ. ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದು, ಅವರನ್ನು ರಕ್ಷಣಾ ಗಾರ್ಡ್‌ಗಳು ರಕ್ಷಿಸಿದ್ದಾರೆ. ಪುರಿಯಲ್ಲಿ ರಜೆಯಲ್ಲಿದ್ದ ಗಂಗೂಲಿ ದಂಪತಿ ಕಡಲತೀರದಲ್ಲಿ ಆನಂದಿಸುತ್ತಿದ್ದಾಗ ಈ ಘಟನೆ … Continued

ಬೆಚ್ಚಿಬೀಳಿಸುವ ವೀಡಿಯೊ…| ಮಲಗಿದ್ದ ವ್ಯಕ್ತಿಯ ಮೈಮೇಲೆ ಹರಿದಹೋದ ಬೃಹತ್‌ ಕಾಳಿಂಗ ಸರ್ಪ; ಆದ್ರೂ ಆತ ಶಾಂತವಾಗಿ ಮಲಗಿದ್ದ…!

ಡೆಹ್ರಡೂನ್‍: ಹಾವೆಂದರೆ ಸಾಕು ಎಲ್ಲರೂ ಬೆಚ್ಚಿಬೀಳುತ್ತಾರೆ. ಅಂಥದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಮೇಲೆ ಬೃಹತ್‌ ಕಾಳಿಂಗ ಸರ್ಪ ಹರಿದು ಹೋದರೂ ತಲೆಕೆಡಿಸಿಕೊಳ್ಳದೆ ಶಾಂತವಾಗಿ ಮಲಗಿರುವ ವೀಡಿಯೊವೊಂದು ವೈರಲ್‌ ಆಗಿದೆ. ಹಾಸಿಗೆಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ಎಚ್ಚರದಲ್ಲಿದ್ದಾಗಲೇ ಆತನ ಮೈಮೇಲೆ ಕಾಳಿಂಗ ಸರ್ಪ (King Cobra) ತೆವಳಿಕೊಂಡು ಹೋಗಿದೆ. ಮೈ ಮೇಲೆ ಹಾವು ಹರಿಯುತ್ತಿರುವುದು ಆತನಿಗೆ ಗೊತ್ತಿದ್ದರೂ … Continued

ಗೋಕಾಕ | ಗೋಡೆ ಕುಸಿದು ಮಗು ಸಾವು ; ಇನ್ನೊಂದು ಮಗುವಿಗೆ ಗಾಯ

ಬೆಳಗಾವಿ: ಜಿಲ್ಲೆಯ ಗೋಕಾಕದ ಮಹಾಲಿಂಗೇಶ್ವರ ಕಾಲೊನಿಯಲ್ಲಿ ಸೋಮವಾರ ನಸುಕಿನಲ್ಲಿ ಮನೆ ಗೋಡೆ ಕುಸಿದು ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದೆ ಹಾಗೂ ಮತ್ತೊಂದು ಮಗುವಿಗೆ ಗಾಯವಾಗಿದೆ. ಮೃತಪಟ್ಟ ಮಗುವನ್ನು ಕೃತಿಕಾ ನಾಗೇಶ ಪೂಜಾರಿ (3.9 ವರ್ಷ) ಎಂದು ಗುರುತಿಸಲಾಗಿದೆ. ಈ ಮಗುವಿನ ಪಕ್ಕದಲ್ಲೇ ಮಲಗಿದ್ದ, ಈಕೆಯ ಐದು ವರ್ಷದ ಅಕ್ಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ … Continued

ಭಾರತದ ವಿರುದ್ಧ ತನ್ನ ಸೇನಾ ಕಾರ್ಯಾಚರಣೆ ಫೋಟೊ ಎಂದು ಪಾಕ್‌ ಸೇನಾ ಮುಖ್ಯಸ್ಥರಿಗೆ ‘ಚೀನಾ ಸೇನೆ ಕವಾಯತು ಚಿತ್ರ’ ಗಿಫ್ಟ್‌ ನೀಡಿ ಅಪಹಾಸ್ಯಕ್ಕೀಡಾದ ಪಾಕ್ ಪ್ರಧಾನಿ…!

ನವದೆಹಲಿ: ಅಪಹಾಸ್ಯದ ಮತ್ತೊಂದು ವಿದ್ಯಮಾನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ಆಪರೇಶನ್‌ ಸಿಂಧೂರಕ್ಕೆ ಪ್ರತೀಕಾರವಾಗಿ ತಾನು ಭಾರತದ ವಿರುದ್ಧ ನಡೆಸಿದ ಆಪರೇಷನ್ ಬನ್ಯಾನ್ ಅಲ್-ಮಾರ್ಸಸ್ ಕಾರ್ಯಾಚರಣೆ ಚಿತ್ರವೆಂದು ಹೇಳಿಕೊಂಡು ಪಾಕ್‌ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ವರ್ಣಚಿತ್ರವೊಂದನ್ನು ಉಡುಗೊರೆಯಾಗಿ ನೀಡಿ ವ್ಯಾಪಕವಾಗಿ ನಗೆಪಾಟಲಿಗೀಡಾಗಿದ್ದಾರೆ. ಯಾಕೆಂದರೆ ಭಾರತದ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಫೋಟೋ … Continued

ಪಾಕಿಸ್ತಾನಕ್ಕೆ ಭಾರತದ ಹೆದರಿಕೆ ; ಚೀನಾ ಜೊತೆ ಸೇರಿ ಪರಮಾಣು ಶಸ್ತ್ರಾಸ್ತ್ರಗಳ ಆಧುನೀಕರಣ : ಅಮೆರಿಕ ಗುಪ್ತಚರ ವರದಿ

ನವದೆಹಲಿ: ಪಾಕಿಸ್ತಾನವು ಭಾರತವನ್ನು “ಅಸ್ತಿತ್ವಕ್ಕೆ ಬೆದರಿಕೆ” ಎಂದು ಪರಿಗಣಿಸುತ್ತದೆ, ಆದರೆ ಭಾರತವು ಚೀನಾವನ್ನು ತನ್ನ “ಪ್ರಾಥಮಿಕ ಎದುರಾಳಿ” ಪರಿಗಣಿಸುತ್ತದೆ ಹಾಗೂ ಪಾಕಿಸ್ತಾನವನ್ನು ನಿರ್ವಹಿಸಬೇಕಾದ “ಭದ್ರತಾ ಸಮಸ್ಯೆ” ಎಂದು ಪರಿಗಣಿಸುತ್ತದೆ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ 2025 ರ ತನ್ನ ವಿಶ್ವಾದ್ಯಂತ ಬೆದರಿಕೆ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ. 2025ರ ಮೇ 25ರಂದು ಬಿಡುಗಡೆಯಾದ ಅಮೆರಿಕ ಡಿಫೆನ್ಸ್ … Continued

ಜೂನ್‌ 1ರಿಂದ ವಿಧಾನಸೌಧ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ; ಪ್ರವೇಶ ಶುಲ್ಕ ನಿಗದಿ

ಬೆಂಗಳೂರು: ಇದೇ ಮೊದಲ ಬಾರಿಗೆ ವಿಧಾನಸಭೆಯ ಸಭಾಂಗಣದ ವೀಕ್ಷಣೆಗೆ (vidhana soudha tour) ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್‌ಗೆ (Guided tour) ಚಾಲನೆ ನೀಡಲಾಗಿದ್ದು, ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ವಿಧಾನಸೌಧದ ಗೈಡೆಡ್ ಟೂರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಬೆಳಗ್ಗೆ 8ರಿಂದ … Continued