ಸಿಗರೇಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಸಾಫ್ಟ್‌ವೇರ್ ಉದ್ಯೋಗಿಯ ಮೇಲೆ ಕಾರು ಹರಿಸಿದ ಬೆಂಗಳೂರಿನ ವ್ಯಕ್ತಿ….!

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಹಿಟ್ ಅಂಡ್ ರನ್ ಘಟನೆಯಲ್ಲಿ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಸಾವಿಗೀಡಾಗಿದ್ದು, ಅವರ ಸ್ನೇಹಿತ ಗಾಯಗೊಂಡಿದ್ದಾರೆ. ಸಿಗರೇಟ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳವೇ ಇದಕ್ಕೆ ಕಾರಣ ಎನ್ನಲಾಗಿದೆ. ಮೇ 10 ರ ಮುಂಜಾನೆ ಈ ಘಟನೆ ನಡೆದಿದೆ ಎನ್ನಲಾಗಿದ್ದು ಮೃತ ಸಂಜಯ ಮತ್ತು ಅವರ ಸ್ನೇಹಿತ … Continued

ಪಾಕಿಸ್ತಾನ ಪರ ಬೇಹುಗಾರಿಕೆ: ಹರಿಯಾಣ ಮೂಲದ ಯೂಟ್ಯೂಬರ್ ಸೇರಿ 6 ಜನರ ಬಂಧನ

ನವದೆಹಲಿ: ಪಾಕಿಸ್ತಾನಿ ಆಪರೇಟಿವ್ಸ್‌ ಗಳಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಹರಿಯಾಣ ಮೂಲದ ಟ್ರಾವೆಲ್ ಬ್ಲಾಗರ್ ಸೇರಿದಂತೆ ಆರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಈ ಜಾಲವು ಹರಿಯಾಣ ಮತ್ತು ಪಂಜಾಬಿನಾದ್ಯಂತ ವ್ಯಾಪಿಸಿದ್ದು, ಪ್ರಮುಖ ಕಾರ್ಯಕರ್ತರು ಏಜೆಂಟ್‌ಗಳು, ಹಣಕಾಸು ಮಾರ್ಗದರ್ಶಕರು ಮತ್ತು ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಆರೋಪಿಗಳಲ್ಲಿ ಹರಿಯಾಣ ಮೂಲದ ಟ್ರಾವೆಲ್ ಬ್ಲಾಗರ್ ಜ್ಯೋತಿ … Continued

ಜಮಖಂಡಿಯಲ್ಲಿ ಘೋರ ದುರಂತ ; ತಾಳಿ ಕಟ್ಟಿದ 15-20 ನಿಮಿಷದಲ್ಲೇ ಮದುಮಗ ಸಾವು…!

ಬಾಗಲಕೋಟೆ : ತಾಳಿ ಕಟ್ಟಿದ 15- 20 ನಿಮಿಷದಲ್ಲಿ ವರ (Groom) ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ತಾಳಿಕಟ್ಟಿ ಅಕ್ಷತೆ ಬಿದ್ದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮದುಮಗ ಕುಸಿದುಬಿದ್ದಿದ್ದಾರೆ. ಇದೆಲ್ಲವೂ ಎರಡೂ ಕುಟುಂಬಗಳು ಹಾಗೂ ಆಪ್ತರ … Continued

ವೀಡಿಯೊ | ಈಗ ಯೂ ಟರ್ನ್‌ ; ಪಾಕಿಸ್ತಾನ ಸೇನೆ ವಾಯುನೆಲೆಗಳ ಮೇಲೆ ಭಾರತದ ದಾಳಿ ಒಪ್ಪಿಕೊಂಡ ಪ್ರಧಾನಿ ಶೆಹಬಾಜ್ ಷರೀಫ್…!

ನವದೆಹಲಿ : ಹಲವು ದಿನಗಳಿಂದಲೂ ನಿರಾಕರಿಸುತ್ತಲೇ ಬಂದಿದ್ದ ಕೊನೆಗೂ ಭಾರತದ ಸೇನೆಯು ತನ್ನ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದೆ ಎಂಬುದನ್ನು ಪಾಕಿಸ್ತನವು ಬಹಿರಂಗವಾಗಿ ಒಪ್ಪಿಕೊಂಡಿದೆ. ಸ್ವತಃ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮೇ 10 ರಂದು ಆಪರೇಶನ್‌ ಸಿಂದೂರ ಅಡಿಯಲಲಿ ಹಾರಿಸಲಾದ ಭಾರತದ ಕ್ಷಿಪಣಿಗಳು ಪಾಕಿಸ್ತಾನದ ಸೇನೆಯ ವಾಯುನೆಲೆಗಳ ದಾಳಿ ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆ. … Continued

ಭಾರತೀಯ ಸಂಜಾತ ಲೇಖಕ ಸಲ್ಮಾನ್ ರಶ್ದಿ ಇರಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ

ನ್ಯೂಯಾರ್ಕ್: 2022 ರಲ್ಲಿ ನ್ಯೂಯಾರ್ಕ್ ಉಪನ್ಯಾಸ ವೇದಿಕೆಯಲ್ಲಿ ಖ್ಯಾತ ಲೇಖಕ ಹಾಗೂ ಭಾರತದ ಸಂಜಾತ ಸಲ್ಮಾನ್ ರಶ್ದಿ ಅವರನ್ನು ಇರಿದು, ಅವರ ಒಂದು ಕಣ್ಣನ್ನು ಕುರುಡನನ್ನಾಗಿ ಮಾಡಿದ ಆರೋಪದ ಮೇಲೆ ಶಿಕ್ಷೆಗೊಳಗಾದ ವ್ಯಕ್ತಿಗೆ ಶುಕ್ರವಾರ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 27 ವರ್ಷದ ಹಾದಿ ಮತರ್ ಎಂಬಾತನನ್ನು ಕೊಲೆ ಯತ್ನ ಮತ್ತು ಹಲ್ಲೆಯ ಆರೋಪದಲ್ಲಿ … Continued

ಸ್ಕೂಟಿ ಮೇಲೆ ಹತ್ತಿದ ಬ್ಯಾಲೆನ್ಸ್ ತಪ್ಪಿ ಹಿಂದೆ ಬರುತ್ತಿದ್ದ ಟ್ರಕ್ ; ಮುಂದೇನಾಯ್ತೆಂದರೆ…

ಕೋಝಿಕ್ಕೋಡ್: ಶುಕ್ರವಾರ ಕೇರಳದ ಕೋಝಿಕ್ಕೋಡ್‌ನಲ್ಲಿ ಸ್ಕೂಟಿಯ ಮುಂದೆ ಚಲಿಸುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಲು ಪ್ರಾರಂಭಿಸಿದಾಗ ಮಹಿಳೆಯೊಬ್ಬರು ಅದೃಷ್ಟಶಾತ್‌ ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪೆರಿಂಗಲಂ ಪಟ್ಟಣದ ರಸ್ತೆಯ ಬೆಟ್ಟದ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 7:30 ರ ಸುಮಾರಿಗೆ … Continued

‘ಅಂತಾರಾಷ್ಟ್ರೀಯ ಭಯೋತ್ಪಾದಕ ಮಸೂದ್ ಅಜರಗೆ ಪಾಕಿಸ್ತಾನದಿಂದ 14 ಕೋಟಿ ರೂ…’: ಪಾಕ್ ಭಯೋತ್ಪಾದನಾ ಯೋಜನೆಗಳ ಬಗ್ಗೆ ರಾಜನಾಥ ಸಿಂಗ್

ನವದೆಹಲಿ:ಪಾಕಿಸ್ತಾನ ಸರ್ಕಾರವು “ತನ್ನ ನಾಗರಿಕರಿಂದ ಸಂಗ್ರಹಿಸಿದ ತೆರಿಗೆಯನ್ನು ಖರ್ಚು ಮಾಡಿ ಘೋಷಿತ ಭಯೋತ್ಪಾದಕ ಮಸೂದ್ ಅಜರ್‌ಗೆ 14 ಕೋಟಿ ರೂ.ಗಳನ್ನು ನೀಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ ಹಾಗೂ” ಯೋಜನೆಗಳ ಬಗ್ಗೆ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ವಿಶ್ವಸಂಸ್ಥೆಯು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಿದ ಹಾಗೂ 2019 ರ ಪುಲ್ವಾಮಾ ಮತ್ತು … Continued

ಭಾರತದ ವಿರುದ್ಧ ಪಾಕಿಸ್ತಾನದ ದಾಳಿಗಳಿಗೆ ಚೀನಾದ ಬೆಂಬಲ ; ಇಲ್ಲಿವೆ ಪ್ರಮುಖ ಪುರಾವೆಗಳು…

ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತೀಯ ವಾಯುದಾಳಿಗಳನ್ನು ಒಳಗೊಂಡ ಆಪರೇಷನ್ ಸಿಂಧೂರದ ನಂತರ ವಿವಿಧ ವರದಿಗಳು ಚೀನಾ ಸರಬರಾಜು ಮಾಡಿದ PL-15 ಕ್ಷಿಪಣಿಗಳು ಮತ್ತು ಟರ್ಕಿಶ್ UAV ಗಳ ಬಳಕೆ ಸೇರಿದಂತೆ ಪಾಕಿಸ್ತಾನಕ್ಕೆ ಚೀನಾದ ಮಿಲಿಟರಿ ಬೆಂಬಲದ ವ್ಯಾಪ್ತಿಯನ್ನು ಎತ್ತಿ ತೋರಿಸಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ನಾಲ್ಕು ದಿನಗಳ ಸಂಘರ್ಷದಲ್ಲಿ ಭಾರತದ … Continued

ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟ ಮಧ್ಯೆ ಪಾಕ್‌ ಜತೆ ಟ್ರಂಪ್ ಕುಟುಂಬದ ರಹಸ್ಯ ಕ್ರಿಪ್ಟೋ ಒಪ್ಪಂದ…! ಇದಕ್ಕೆ ಪಾಕ್‌ ಸೇನಾ ಮುಖ್ಯಸ್ಥರ ಮಧ್ಯಸ್ಥಿಕೆ ?!

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಒಪ್ಪಂದಕ್ಕೆ ತಾನು ಮಧ್ಯವರ್ತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡ ಕೆಲವು ದಿನಗಳ ನಂತರ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕೆಲವು ದಿನಗಳ ಮೊದಲು ಪಾಕಿಸ್ತಾನದಲ್ಲಿ ಸಹಿ ಹಾಕಲಾದ ಒಪ್ಪಂದವು ಟ್ರಂಪ್ ಅವರ ಕುಟುಂಬ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಒಳಗೊಂಡಿತ್ತು ಎಂದು … Continued

ಆಪರೇಷನ್ ಸಿಂಧೂರ | ಸಂಸದ ತರೂರ್ ನಿಲುವಿಗೆ ಕಾಂಗ್ರೆಸ್‌ ಅತೃಪ್ತಿ ; ಆದ್ರೆ ಪಾಕ್ ಭಯೋತ್ಪಾದನೆ ವಿರುದ್ಧ ಸರ್ಕಾರದ ಜಾಗತಿಕ ಸಂಪರ್ಕ ಯೋಜನೆಯಲ್ಲಿ ಪ್ರಮುಖ ಪಾತ್ರ..?

ನವದೆಹಲಿ: ಆಪರೇಷನ್ ಸಿಂಧೂರ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೇಳಿಕೆಗಳು ಪಕ್ಷದ ನಾಯಕರು ‘ಲಕ್ಷ್ಮಣ ರೇಖೆ’ಯನ್ನು ಮೀರಿದೆ ಎಂದು ಹೇಳಿದ ನಂತರ, ಶಶಿ ತರೂರ ಅವರಿಗೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧದ ಭಾರತದ ಅಭಿಯಾನದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಅವರ ರಾಜತಾಂತ್ರಿಕ ಪ್ರಯತ್ನಕ್ಕಾಗಿ … Continued