ವೈದ್ಯಕೀಯ ಕಾರಣಗಳಿಗೆ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ : ವೈದ್ಯಕೀಯ ಕಾರಣಗಳಿಗಾಗಿ ಸ್ವಯಂ ಘೋಷಿತ ದೇವಮಾನವ ಮತ್ತು ಅತ್ಯಾಚಾರ ಅಪರಾಧಿ ಅಸಾರಾಂ ಬಾಪುಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ ಮತ್ತು ನ್ಯಾಯಮೂರ್ತಿ ರಾಜೇಶ ಬಿಂದಾಲ್ ಅವರಿದ್ದ ಪೀಠವು ಮಾರ್ಚ್ 31, 2025 ರ ವರೆಗೆ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು ನೀಡಿದೆ. ತಮ್ಮ ಜೈಲು ಶಿಕ್ಷೆಯನ್ನು … Continued

ವೀಡಿಯೊ…| ತಿಪಟೂರು : ಧೈರ್ಯ ಅಂದ್ರೆ ಇದಪ್ಪ…ಓಡಿ ಹೋಗುತ್ತಿದ್ದ ಚಿರತೆ ಬಾಲ ಹಿಡಿದೆಳೆದು ಬೋನಿಗೆ ಹಾಕಿದ ಯುವಕ…!

ತುಮಕೂರು: ಅರಣ್ಯ ಇಲಾಖೆ ಸಿಬ್ಬಂದಿಗಳ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಚಿರತೆಯನ್ನು ಯುವಕನೊಬ್ಬ ಅದರ ಬಾಲದಿಂದ ಹಿಡಿದು ಬೋನಿಗೆ ಹಾಕಿರುವ ಘಟನೆ ತುಮಕೂರು (Tumakuru) ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆನಂದ ಎಂಬ ಯುವಕ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಯುವಕನಾಗಿದ್ದಾನೆ. ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ … Continued

ದೆಹಲಿ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ; ಒಂದೇ ಹಂತದಲ್ಲಿ ಮತದಾನ

ನವದೆಹಲಿ: ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗವು ಪ್ರಕಟಿಸಿದ್ದು, ಫೆಬ್ರವರಿ 5 ರಂದು ಒಂದೇ ಹಂತದಲ್ಲಿ ನಡೆಯಲಿದೆ ಎಂದು ಮಂಗಳವಾರ ತಿಳಿಸಿದೆ. ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ಅವರು, “ನಾವು ಶೀಘ್ರದಲ್ಲೇ ಒಂದು ಶತಕೋಟಿ ಮತದಾರರ ಹೊಸ ದಾಖಲೆ ಮಾಡಲಿದ್ದೇವೆ” ಎಂದು ಅವರು … Continued

ವೀಡಿಯೊ…| ಮನೆಯ ಟೆರೇಸ್ ಮೇಲೆ ಗಾಳಿಪಟ ಹಾರಿಸಿದ ಮಂಗ…! ಬೆರಗಾದ ಇಂಟರ್ನೆಟ್‌….

ಭಾರತದಲ್ಲಿ ಗಾಳಿಪಟ ಹಾರಿಸುವ ಹಬ್ಬವನ್ನು ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಆಚರಿಸಲಾಗುತ್ತದೆ ಮತ್ತು ಗುಜರಾತ್ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸುತ್ತದೆ. ಉತ್ತರಾಯಣ ಎಂದು ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಮತ್ತು ಗಾಳಿಪಟಗಳನ್ನು ಹಾರಿಸುತ್ತಾರೆ. ಆದರೆ, ಕೋತಿಯೊಂದು ಕಟ್ಟಡದ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ … Continued

ಟಿಬೆಟಿನಲ್ಲಿ ಪ್ರಬಲ ಭೂಕಂಪ : 30 ಕ್ಕೂ ಹೆಚ್ಚು ಜನರು ಸಾವು ; ಭಾರತದಲ್ಲೂ ಕಂಪನದ ಅನುಭವ

ನವದೆಹಲಿ: ಮಂಗಳವಾರ ಬೆಳಿಗ್ಗೆ ಟಿಬೆಟ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 7.1 ಅಳತೆಯ ಪ್ರಬಲ ಭೂಕಂಪ ಸೇರಿದಂತೆ ಒಂದು ತಾಸಿನಲ್ಲಿ ಆರು ಭೂಕಂಪಗಳು ಸಂಭವಿಸಿ 30 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಭೂಕಂಪನದಿಂದ ಭಾರತ, ನೇಪಾಳ ಮತ್ತು ಭೂತಾನಿನ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ನಲುಗಿವೆ. ಭೂಕಂಪದಲ್ಲಿ ಟಿಬೆಟಿಯನ್ ಪ್ರದೇಶದಲ್ಲಿ ಕನಿಷ್ಠ 36 ಜನರು ಸಾವಿಗೀಡಾಗಿದ್ದಾರೆ ಎಂದು … Continued

ವೀಡಿಯೊ..| ಬೆಲ್ಟ್‌ ತೆಗೆದುಕೊಂಡು ತನಗೆ ತಾನೇ ಹೊಡೆದುಕೊಂಡ ಎಎಪಿ ನಾಯಕ…!

ಸೂರತ್‌ : ಆಮ್ ಆದ್ಮಿ ಪಕ್ಷದ ನಾಯಕ ಗೋಪಾಲ ಇಟಾಲಿಯಾ ಅವರು ಸೋಮವಾರ ಗುಜರಾತಿನ ಸೂರತ್‌ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಗುಜರಾತಿನಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಎಸಗಿದ ವಿವಿಧ ಅಪರಾಧಗಳ ಸಂತ್ರಸ್ತರಿಗೆ “ನ್ಯಾಯ ದೊರಕಿಸಿಕೊಡಲು ವಿಫಲವಾದ” ಕಾರಣದಿಂದ ಪಶ್ಚಾತ್ತಾಪಕ್ಕಾಗಿ ಮತ್ತು ಜನರನ್ನು ನಿದ್ದೆಯಿಂದ ಎಬ್ಬಿಸಲು ತಮಗೆ ತಾವೇ ಬೆಲ್ಟ್‌ನಿಂದ ಹೊಡೆದುಕೊಂಡಿದ್ದಾರೆ. ವೇದಿಕೆಯಲ್ಲಿ ಕ್ಷಮೆ ಕೋರಿದ ಎಎಪಿ … Continued

ಮಂಗಳೂರು : ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ…!

ಮಂಗಳೂರು : ನಗರದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತೆಲಂಗಾಣ ರಾಜ್ಯದ ತೇಜ ಎಂಬುವವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿಯಾಗಿದ್ದಾರೆ. ದುರ್ಗಾ ಅವರು ಎರಡು … Continued

ಕರ್ನಾಟಕ ಸೇರಿ ಸೋಮವಾರ ದೇಶದ 5 ಮಕ್ಕಳಲ್ಲಿ ಎಚ್‌ ಎಂಪಿ ವೈರಸ್‌ ಪತ್ತೆ ; ಆತಂಕ ಪಡುವ ಅಗತ್ಯವಿಲ್ಲ ಎಂದ ಸಚಿವ ನಡ್ಡಾ

ನವದೆಹಲಿ : ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್‌ ಸೇರಿ ಸೋಮವಾರ ಭಾರತದಲ್ಲಿ ಐದು ಶಿಶುಗಳಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಸೋಂಕು ಪತ್ತೆಯಾಗಿದೆ. ಕರ್ನಾಟಕದಲ್ಲಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ವಾಡಿಕೆಯ ಕಣ್ಗಾವಲು ಮೂಲಕ ಎರಡು ಶಿಶುಗಳಲ್ಲಿ ವೈರಸ್‌ ಪತ್ತೆಯಾಗಿದೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ ನಂತರ ಬ್ರಾಂಕೋಪ್ನ್ಯುಮೋನಿಯಾದ ಇತಿಹಾಸ ಹೊಂದಿರುವ ಮೂರು … Continued

ಪಕ್ಷದೊಳಗೆ ಭಿನ್ನಮತ ; ಕೆನಡಾ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಜಸ್ಟಿನ್ ಟ್ರುಡೊ

ಒಟ್ಟಾವಾ (ಕೆನಡಾ): ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸೋಮವಾರ (ಜನವರಿ 6) ಕೆನಡಾದ ಲಿಬರಲ್ ಪಾರ್ಟಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಕೆನಡಾದ ಪ್ರಧಾನಿಯಾಗಿ ಒಂಬತ್ತು ವರ್ಷಗಳ ಅಧಿಕಾರಾವಧಿಗೆ ಅಂತ್ಯ ಹಾಡಿದ್ದಾರೆ. ಅವರ ವಿರುದ್ಧ ಪಕ್ಷದೊಳಗೆ ಭಿನ್ನಾಭಿಪ್ರಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಅವರು ಒಟ್ಟಾವಾದ ರೈಡೋ ಕಾಟೇಜ್‌ನಲ್ಲಿರುವ ತಮ್ಮ ನಿವಾಸದ ಹೊರಗೆ … Continued

ಮೈ ಜುಂ ಎನ್ನುವ ವೀಡಿಯೊ | ಕಾಜಿರಂಗದಲ್ಲಿ ಸಫಾರಿ ಜೀಪಿನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು…

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಆತಂಕಕಾರಿ ವೀಡಿಯೊವೊಂದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಫಾರಿ ವೇಳೆ ಅದೃಷ್ಟವಶಾತ್‌ ತಾಯಿ-ಮಗಳು ಅಪಾಯದಿಂದ ಪಾರಾಗಿದ್ದಾರೆ. ತಾಯಿ ಮತ್ತು ಅವರ ಮಗಳು ಚಲಿಸುತ್ತಿದ್ದ ಸಫಾರಿ ಜೀಪ್‌ನಿಂದ ಘೇಂಡಾಮೃಗಗಳ ಮುಂದೆ ಬಿದ್ದಿದ್ದಾರೆ. ಘೇಂಡಾಮೃಗವೊಂದು ದಾಳಿ ಮಾಡಲು ಸಿದ್ಧವಾಗಿದ್ದರೂ ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈರಲ್ ವೀಡಿಯೊದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸಫಾರಿ ಜೀಪ್‌ಗಳು ತಿರುಗುತ್ತಿರುವಾಗ ಯುವತಿ … Continued