ಅದ್ಭುತ ವೀಡಿಯೊ..| ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತು ಕಾರನ್ನು ನಿಲ್ಲಿಸಿದ ಹಸುಗಳ ಗುಂಪು…!

ರಾಯಗಢ: ಛತ್ತೀಸ್‌ಗಢ ರಾಜ್ಯದ ರಾಯಗಢದ ಜನನಿಬಿಡ ರಸ್ತೆಯ ಮಧ್ಯೆ ಕಾರಿನಡಿ ಸಿಲುಕಿದ್ದ ಕರುವನ್ನು ರಕ್ಷಿಸಲು ಗೋವುಗಳ ಹಿಂಡು ಕಾರಿಗೆ ಅಡ್ಡಲಾಗಿ ನಿಂತು ಅದನ್ನು ತಡೆದು ನಿಲ್ಲಿಸಿದ ಅಸಮಾನ್ಯ ಘಟನೆ ನಡೆದಿದೆ. ಸಾಮಾನ್ಯವಾಗಿ ಸೌಮ್ಯವಾಗಿರುವ ಗೋವುಗಳ ಹಿಂಡು ಕಾರನ್ನು ಹಿಂಬಾಲಿಸಿಕೊಂಡು ಬಂದು ಕಾರಿಗೆ ಅಡ್ಡಲಾಗಿ ನಿಂತಿವೆ. ಕಾರು ಆಕಳು ಕರುವನ್ನು ಸುಮಾರು 200 ಮೀಟರ್ ಎಳೆದುಕೊಂಡು ಬಂದಿದೆ. … Continued

37 ಜನರನ್ನು ಕೊಂದು ತಿನ್ನಲಾಗಿತ್ತು ಎಂದ ಇಂಗ್ಲೆಂಡಿನ 4000 ವರ್ಷಗಳ ಹಳೆಯ ಹತ್ಯಾಕಾಂಡದ ಹೊಸ ಸಂಶೋಧನೆ..!

ನೈಋತ್ಯ ಇಂಗ್ಲೆಂಡ್‌ನಲ್ಲಿ 4,000 ವರ್ಷಗಳಷ್ಟು ಹಳೆಯದಾದ ಹತ್ಯಾಕಾಂಡವು ಸಂಭವನೀಯ ನರಮಾಂಸ ಭಕ್ಷಣೆಗೆ ಸಂಬಂಧಿಸಿದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.ಚಾರ್ಟರ್‌ಹೌಸ್ ವಾರೆನ್ ಫಾರ್ಮ್‌ನಲ್ಲಿ 50-ಅಡಿ ಆಳದ ಶಾಫ್ಟ್‌ನಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 37 ವ್ಯಕ್ತಿಗಳ ಛಿದ್ರಗೊಂಡ ಎಲುಬುಗಳು, ತಲೆಬುರುಡೆಗಳು ಮತ್ತು ಸ್ಲೈಸಿಂಗ್ ತುಂಡುಗಳು ಪತ್ತೆಯಾಗಿತ್ತು. ಹಬ್ಬದ ಸಮಯದಲ್ಲಿ ತಿನ್ನಬಹುದೆಂದು ಇವರನ್ನು ಹತ್ಯೆಗೈಯಲಾಗಿದೆ ಎಂದು … Continued

ಪಾರ್ಸೆಲ್‌ ಬಂದಿದೆ ಎಂದು ಮನೆಗೆ ನುಗ್ಗಿ ಮರ ಕತ್ತರಿಸುವ ಯಂತ್ರದಿಂದ ವೃದ್ಧನ ಬರ್ಬರ ಹತ್ಯೆ

ಮಂಡ್ಯ: ಮರ ಕತ್ತರಿಸುವ ಯಂತ್ರದಿಂದ ವೃದ್ಧನನ್ನು ಕತ್ತರಿಸಿ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಮಂಡ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ತೋಟದ ಮನೆಗೆ ಒಂಟಿ ಮನೆಗೆ ಮರ ಕತ್ತರಿಸೋ ಯಂತ್ರದ ಜೊತೆ ನುಗ್ಗಿದ ದರೋಡೆಕೋರ ಈ ಘೋರ ಕೃತ್ಯ ಎಸಗಿದ್ದಾನೆ. ಸಾವಿಗೀಡಾದ ವೃದ್ಧನನ್ನು ರಮೇಶ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ಯಶೋಧಮ್ಮ … Continued

ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳ ; ತಾಜ್ ಮಹಲ್ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಏರಿದ ಅಯೋಧ್ಯೆ ರಾಮಮಂದಿರ

ನವದೆಹಲಿ: ಈಗ ಅಯೋಧ್ಯೆಯು ಆಗ್ರಾದ ತಾಜ್ ಮಹಲ್‌ ಅನ್ನು ಹಿಂದಿಕ್ಕಿ ಈಗ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಸ್ಥಳವಾಗಿ ಹೊರಹೊಮ್ಮಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, 2024 ರ ಜನವರಿ-ಸೆಪ್ಟೆಂಬರ್ ನಡುವೆ ಅಯೋಧ್ಯೆಗೆ 13.55 ಕೋಟಿ ದೇಶೀಯ ಪ್ರವಾಸಿಗರು ಮತ್ತು 3,153 ವಿದೇಶಿಯರು ಭೇಟಿ ನೀಡಿದ್ದಾರೆ. ಇದು ಹೊಸ ದಾಖಲೆಯಾಗಿದೆ. ನಿರೀಕ್ಷಿತ … Continued

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 3 ದಿನ ಮಳೆ ಸಾಧ್ಯತೆ

ಹೈದರಾಬಾದ್‌: ಡಿಸೆಂಬರ್‌ 23ರಿಂದ ಮೂರು ದಿನ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ ಬಂಗಾಳ ಕೊಲ್ಲಿಯ ಮೇಲಿನ ವಾಯುಭಾರ ಕುಸಿತ ಆಗಿರುವ ಕಾರಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಡಿಸೆಂಬರ್‌ 23ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, … Continued

ರಾಮಾಯಣ, ಮಹಾಭಾರತವನ್ನು ಅರೇಬಿಕ್ ಭಾಷೆಗೆ ಅನುವಾದಿಸಿದವರನ್ನು ಭೇಟಿಯಾದ ಪ್ರಧಾನಿ ಮೋದಿ

ಕುವೈತ್‌: ಎರಡು ದಿನಗಳ ಕಾಲ ಕುವೈತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೊದಲ ದಿನವಾದ ಶನಿವಾರ ಭಾರತದ ಎರಡು ಅಪ್ರತಿಮ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣವನ್ನು ಅರೇಬಿಕ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ ಇಬ್ಬರು ಕುವೈತ್ ಪ್ರಜೆಗಳನ್ನು ಭೇಟಿ ಮಾಡಿದ್ದಾರೆ. ಲೇಖಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಎರಡು ಮಹಾಕಾವ್ಯಗಳ ಅರೇಬಿಕ್ ಆವೃತ್ತಿಗಳಿಗೆ ಸಹಿ ಹಾಕಿದ್ದಾರೆ. “ರಾಮಾಯಣ … Continued

ವೀಡಿಯೊ..| ಬೆಂಗಳೂರು ; ಕಾರಿನ ಮೇಲೆ ಕಂಟೈನರ್‌ ಪಲ್ಟಿಯಾಗಿ 6 ಮಂದಿ ಸಾವು ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಕಂಟೈನರ್‌ ಲಾರಿ ಉರುಳಿ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಮೃತಪಟ್ಟ ದುರ್ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರಿನ ಮೇಲೆ ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್​ ಲಾರಿ ಬಿದ್ದಿತ್ತು. ಪರಿಣಾಮ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿ, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಜನ ಸ್ಥಳದಲ್ಲೇ … Continued

ದೇಗುಲದ ಹುಂಡಿಯಲ್ಲಿ ಆಕಸ್ಮಿಕವಾಗಿ ಐಫೋನ್ ಬೀಳಿಸಿಕೊಂಡ ವ್ಯಕ್ತಿ ; ಅದನ್ನು ವಾಪಸ್‌ ಕೊಡಲ್ಲ ಎಂದ ಆಡಳಿತ ಮಂಡಳಿ ; ಯಾಕೆಂದರೆ…

ಚೆನ್ನೈ: ತಮಿಳುನಾಡಿನ ದೇವಸ್ಥಾನದ ಹುಂಡಿಯಲ್ಲಿ ಆಕಸ್ಮಿಕವಾಗಿ ಐಫೋನ್ ಬಿದ್ದ ವ್ಯಕ್ತಿಯೊಬ್ಬ ತನ್ನ ಫೋನ್ ಅನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ. ಯಾಕೆಂದರೆ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಅವರ ಮನವಿಯನ್ನು ನಯವಾಗಿ ತಿರಸ್ಕರಿಸಿದ್ದು, ದೇವಾಲಯದ ಹುಂಡಿಗೆ ಬಿದ್ದಿದ್ದು ಈಗ ಅದು ದೇವಾಲಯದ ಆಸ್ತಿ ಎಂದು ಹೇಳಿದೆ. ಹುಂಡಿ ನಿಯಮಗಳ ಸ್ಥಾಪನೆ, ಸುರಕ್ಷತೆ ಮತ್ತು ಲೆಕ್ಕಪತ್ರ … Continued

ಪಿಎಫ್ ವಂಚನೆ ಆರೋಪದ ಮೇಲೆ ಅರೆಸ್ಟ್‌ ವಾರಂಟ್ ; ಮೌನ ಮುರಿದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ

ಭವಿಷ್ಯ ನಿಧಿ (ಪಿಎಫ್) ವಂಚನೆ ಆರೋಪದ ಮೇಲೆ ಬಂಧನ ವಾರಂಟ್ ಹೊರಡಿಸಿದ ನಂತರ, ಭಾರತದ ಮಾಜಿ ಕ್ರಿಕೆಟ್‌ ಆಟಗಾರ ರಾಬಿನ್ ಉತ್ತಪ್ಪ ಈ ವಿಷಯದಲ್ಲಿ ಮೌನ ಮುರಿದಿದ್ದಾರೆ. ಅವರು ನಡೆಸುತ್ತಿರುವ ಬಟ್ಟೆ ಕಂಪನಿಯೊಂದರಲ್ಲಿ ಉದ್ಯೋಗಿಗಳ ಪಿಎಫ್ ಗೆ ಸಂಬಂಧಿಸಿದಂತೆ ವಂಚನೆ ಆರೋಪದ ಮೇಲೆ ರಾಬಿನ್‌ ಉತ್ತಪ್ಪ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ಸುಮಾರು 24 ಲಕ್ಷ … Continued

ವೀಡಿಯೊ : 9/11 ದಾಳಿ ಹೋಲುವ ರೀತಿಯಲ್ಲಿ ಉಕ್ರೇನ್‌ ನಿಂದ ಡ್ರೋಣ್‌ ದಾಳಿ ; ಹಾನಿಗೊಳಗಾದ ರಷ್ಯಾದ ಕಟ್ಟಡಗಳು

ಉಕ್ರೇನಿಯನ್ ಡ್ರೋನ್‌ಗಳು ರಷ್ಯಾದಲ್ಲಿನ ಬಹುಮಹಡಿ ಕಟ್ಟಡಗಳ ಮೇಲೆ ದಾಳಿ ನಡೆಸಿವೆ. ಇದು 2001 ರಲ್ಲಿ ಅಮೆರಿಕದ ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳನ್ನು ವಿಮಾನಗಳು ಢಿಕ್ಕಿ ಹೊಡೆಸಿದ 9/11 ದಾಳಿಯ ಹೋಲಿಕೆಯಂತೆ ಕಾಣುತ್ತದೆ. X ನಲ್ಲಿ ಹಂಚಿಕೊಳ್ಳಲಾದ ಪರಿಶೀಲಿಸದ ವೀಡಿಯೊಗಳಲ್ಲಿ, ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 500 ಮೈಲಿಗಳು (800 ಕಿಮೀ) ನಗರವಾದ ಕಜಾನ್‌ನಲ್ಲಿರುವ ಎರಡು … Continued