ವೀಡಿಯೊ…| ಪ್ರತೀಕಾರಕ್ಕಾಗಿ ಇಸ್ರೇಲ್ ಮೇಲೆ 400 ಕ್ಷಿಪಣಿಗಳನ್ನು ಹಾರಿಸಿದ ಇರಾನ್‌…!

ಇರಾನ್‌ “ಸನ್ನಿಹಿತವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಲು” ತಯಾರಿ ನಡೆಸುತ್ತಿದೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಎಚ್ಚರಿಸಿದ ಕೆಲವೇ ಗಂಟೆಗಳ ನಂತರ ಇರಾನ್ ಮಂಗಳವಾರ ಇಸ್ರೇಲ್ ಮೇಲೆ 400 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಕ್ಷಿಪಣಿಗಳನ್ನು ಇರಾನಿನ ನಗರಗಳಾದ ಇಸ್ಫಹಾನ್, ತಬ್ರಿಜ್, ಖೋರಮಾಬಾದ್, ಕರಾಜ್ ಮತ್ತು ಅರಾಕ್‌ನಿಂದ ಹಾರಿಸಲಾಯಿತು. ಟೆಹ್ರಾನ್ ಟೈಮ್ಸ್ ವರದಿಯ ಪ್ರಕಾರ, ಇಸ್ರೇಲ್ ವಿರುದ್ಧದ ಪ್ರತೀಕಾರ … Continued

ಐಎಂಎಫ್ ಸಾಲದ ಷರತ್ತು : 1,50,000 ಸರ್ಕಾರಿ ಹುದ್ದೆಗಳು ರದ್ದು, 6 ಸಚಿವಾಲಯ ಮುಚ್ಚಲಿರುವ ಪಾಕಿಸ್ತಾನ…!

ಇಸ್ಲಾಮಾಬಾದ್‌ : ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಹಣದ ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನ ಭಾನುವಾರ (ಸೆಪ್ಟೆಂಬರ್ 29) ಸುಮಾರು 1,50,000 ಸರ್ಕಾರಿ ಹುದ್ದೆಗಳ ರದ್ದು , ಆರು ಸಚಿವಾಲಯಗಳನ್ನು ಮುಚ್ಚುವುದು ಮತ್ತು ಇತರ ಎರಡು ಸಚಿವಾಲಯಗಳನ್ನು ವಿಲೀನಗೊಳಿಸುವುದಾಗಿ ಪ್ರಕಟಿಸಿದೆ. USD 7 ಶತಕೋಟಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯ ಸಾಲದ ಒಪ್ಪಂದದ ಅಡಿಯಲ್ಲಿ ಒಪ್ಪಿಕೊಂಡಿರುವ ಸುಧಾರಣೆಗಳ … Continued

ಭೂಮಿಯೊಳಗೆ 60 ಅಡಿ ಆಳದಲ್ಲಿ ವಿಶೇಷ ಬಂಕರ್‌ ನಲ್ಲಿದ್ದ ಹಿಜ್ಬೊಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಇಸ್ರೇಲ್‌ ಸಾಯಿಸಿದ್ದು ಹೇಗೆಂದರೆ…

ಲೆಬನಾನಿನ ಬೈರುತ್‌ನಲ್ಲಿ ಭೂಗತ ಬಂಕರ್ ಅನ್ನು ಗುರಿಯಾಗಿಸಿಕೊಂಡು ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ ಶುಕ್ರವಾರ ಕೊಲ್ಲಲ್ಪಟ್ಟರು. ಇಸ್ರೇಲಿ ಏರ್ ಫೋರ್ಸ್ ನಡೆಸಿದ ನಿಖರವಾದ ಯೋಜಿತ ದಾಳಿಯು ಬಹು ಗುಪ್ತಚರ ಸಂಸ್ಥೆಗಳ ಸಹಯೋಗವನ್ನು ಒಳಗೊಂಡಿತ್ತು ಮತ್ತು ಇಸ್ರೇಲಿನ ಈ ದಾಳಿಯಲ್ಲಿ ನಸ್ರಲ್ಲಾ ಜೊತೆಗೆ ಹಲವಾರು ಹಿರಿಯ ಹಿಜ್ಬುಲ್ಲಾ ಅಧಿಕಾರಿಗಳ ಸಾವಿಗೀಡಾದರು. ಇಸ್ರೇಲ್‌ … Continued

ವೈಮಾನಿಕ ದಾಳಿಯಲ್ಲಿ ಮತ್ತೊಬ್ಬ ಹಿಜ್ಬೊಲ್ಲಾ ಉನ್ನತ ನಾಯಕನನ್ನು ಸಾಯಿಸಿದ್ದೇವೆ ಎಂದು ಘೋಷಿಸಿದ ಇಸ್ರೇಲಿ ಮಿಲಿಟರಿ

ಇರಾನ್ ಬೆಂಬಲಿತ ಸಶಸ್ತ್ರ ಸಂಘಟನೆ ಹಿಜ್ಬೊಲ್ಲಾಗೆ ಮತ್ತೊಂದು ಹಿನ್ನಡೆಯಾಗಿ, ಲೆಬನಾನ್ ರಾಜಧಾನಿ ಬೈರುತ್ ನಲ್ಲಿ ಶನಿವಾರ ರಾತ್ರಿ (ಸೆಪ್ಟೆಂಬರ್ 28) ನಡೆದ ಇಸ್ರೇಲಿನ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ಉಗ್ರಗಾಮಿ ಸಂಘಟನೆಯ ಮತ್ತೊಬ್ಬ ಉನ್ನತ ಕಮಾಂಡರ್ ನಬಿಲ್ ಕೌಕ್ (Nabil Qaouk) ಅವರನ್ನು ಕೊಂದುಹಾಕಿದ್ದೇವೆ ಎಂದು ಇಸ್ರೇಲಿ ಸೇನೆ (IDF) ಪ್ರಕಟಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ … Continued

ಇಸ್ರೇಲ್‌ ದಾಳಿಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ನಸ್ರಲ್ಲಾ ಜೊತೆ ಇರಾನ್‌ ಮಿಲಿಟರಿಯ ಡೆಪ್ಯೂಟಿ ಕಮಾಂಡರ್‌ ಹತ್ಯೆ…!

ದುಬೈ : ಲೆಬನಾನಿನ ಬೈರುತ್‌ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಕೊಂದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇರಾನಿನ ಅರೆಸೈನಿಕ ರೆವುಲ್ಯಶ್ನರಿ ಗಾರ್ಡ್‌ನ ಪ್ರಮುಖ ಜನರಲ್ ಕೊಲ್ಲಲ್ಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಜನರಲ್ ಅಬ್ಬಾಸ್ ನಿಲ್ಫೊರುಶನ್ ಅವರ ಹತ್ಯೆಯು ಇರಾನಿನ ಪ್ರಮುಖ ಮಿಲಟರಿ ಸಾವುನೋವುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಗಾಜಾ ಸ್ಟ್ರಿಪ್ನಲ್ಲಿ … Continued

ವಾಯುದಾಳಿಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಕೊಂದುಹಾಕಿದ್ದೇವೆ ಎಂದು ಘೋಷಿಸಿದ ಇಸ್ರೇಲ್‌ ; ಯಾರು ಈ ಹಸನ್ ನಸ್ರಲ್ಲಾ…?

ಲೆಬನಾನಿನ ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಇಂದು, ಶನಿವಾರ ಘೋಷಿಸಿದೆ. “ಹಸನ್ ನಸ್ರಲ್ಲಾ ಸತ್ತಿದ್ದಾರೆ” ಎಂದು ಇಸ್ರೇಲಿ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಡಾವ್ ಶೋಶಾನಿ X ನಲ್ಲಿ ಪ್ರಕಟಿಸಿದ್ದಾರೆ. ಇದೇವೇಳೆ ಶುಕ್ರವಾರ ರಾತ್ರಿಯಿಂದ 64 ವರ್ಷದ ನಸ್ರಲ್ಲಾ ಅವರೊಂದಿಗಿನ ಸಂವಹನವು ಕಳೆದುಹೋಗಿದೆ ಎಂದು … Continued

ವೀಡಿಯೊ..| “ನೀವು ಈ ವೀಡಿಯೊ ವೀಕ್ಷಿಸುವುದನ್ನು ಹಿಜ್ಬೊಲ್ಲಾ ಬಯಸುವುದಿಲ್ಲ…”: ಇಸ್ರೇಲ್ ರಕ್ಷಣಾ ಪಡೆಗಳು

ಇಸ್ರೇಲ್ ಡಿಫೆನ್ಸ್ ಫೋರ್ಸಸ್ (IDF) ಲೆಬನಾನ್‌ನೊಳಗೆ ಹಿಜ್ಬೊಲ್ಲಾ ಮೇಲೆ ತನ್ನ ದಾಳಿಗಳನ್ನು ವಿವರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ, ಅಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ಅವಿತು ಇಟ್ಟುಕೊಂಡಿದೆ ಎಂದು ಇಸ್ರೇಲ್‌ ಆರೋಪಿಸಿದೆ. ಲೆಬನಾನಿನ ಮನೆಗಳಲ್ಲಿ ಹಿಜ್ಬೊಲ್ಲಾ ಗುಂಪು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದೆ ಎಂದು ಐಡಿಎಫ್‌ (IDF) ಹೇಳಿದೆ. “ಕಳೆದ 20 ವರ್ಷಗಳಿಂದ, ಹಿಜ್ಬೊಲ್ಲಾ ಗುಂಪು ಲೆಬನಾನ್‌ನಲ್ಲಿನ ಜನಸಂಖ್ಯಾ … Continued

ವೀಡಿಯೊ..| ಬೃಹತ್‌ ಹೆಬ್ಬಾವಿನ ಮೇಲೆ ಕುಳಿತು ಜಾರು ಬಂಡಿ ಆಡುತ್ತಿರುವ ಪುಟಾಣಿ ಮಕ್ಕಳು…!

ಹಾವನ್ನು ಕಂಡರೆ ಜನರು ಭಯಭೀತರಾಗುತ್ತಾರೆ. ಕೆಲವು ಹಾವುಗಳು ವಿಷಕಾರಿಯಾಗಿರುತ್ತವೆ. ಆದರೆ ಕೆಲವು ದೈತ್ಯ ಹಾವುಗಳು ವಿಷಕಾರಿಯಲ್ಲ. ಆದರೆ ದೈತ್ಯ ಹಾವುಗಳು ಮನುಷ್ಯರನ್ನೇ ನುಂಗಿ ಹಾಕುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೆಬ್ಬಾವು ಬಿಗಿಯಾಗಿ ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸುತ್ತವೆ. ಹಾವಿನ ಹೆಸರು ಕೇಳಿದರೆ ಜನ ಭಯದಿಂದ ನಡುಗುವುದು ಇದೇ ಕಾರಣಕ್ಕೆ. ಈ ವಿಡಿಯೋದಲ್ಲಿ ಇಬ್ಬರು ಮುಗ್ಧ ಮಕ್ಕಳಿಗೆ ದೈತ್ಯ ಹೆಬ್ಬಾವು … Continued

ಹಜ್‌ ಯಾತ್ರೆಯ ನೆಪದಲ್ಲಿ ನಮ್ಮ ದೇಶಕ್ಕೆ ಭಿಕ್ಷುಕರನ್ನು ಕಳುಹಿಸಬೇಡಿ; ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ

ಇಸ್ಲಾಮಾಬಾದ್‌ : ಧಾರ್ಮಿಕ ಯಾತ್ರೆಯ ನೆಪದಲ್ಲಿ ತಮ್ಮ ದೇಶಕ್ಕೆ ಆಗಮಿಸುತ್ತಿರುವ ಪಾಕಿಸ್ತಾನಿ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸದಿದ್ದರೆ, ಪಾಕಿಸ್ತಾನಿ ಉಮ್ರಾ ಮತ್ತು ಹಜ್ ಯಾತ್ರಿಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸೌದಿ ಅಧಿಕಾರಿಗಳು ಎಚ್ಚರಿಸಿದ್ದಾರೆ ಎಂದು ಪಾಕಿಸ್ತಾನದ … Continued

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ರಾಕೆಟ್ಸ್ ಫೋರ್ಸ್ ಮುಖ್ಯಸ್ಥ ಸಾವು

ಇಸ್ರೇಲ್ ರಕ್ಷಣಾ ಪಡೆಗಳು (IDF) ಮಂಗಳವಾರ ಲೆಬನಾನಿನ ರಾಜಧಾನಿ ಬೈರುತ್‌ನಲ್ಲಿ ದಹೀಹ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾಹ್‌ನ ಕ್ಷಿಪಣಿಗಳು ಮತ್ತು ರಾಕೆಟ್ಸ್ ಫೋರ್ಸ್‌ನ ಕಮಾಂಡರ್ ಇಬ್ರಾಹಿಂ ಮುಹಮ್ಮದ್ ಖಾಬಿಸಿ ಕೊಲ್ಲಲ್ಪಟ್ಟರು ಎಂದು ಪ್ರಕಟಿಸಿದೆ. “ಹಿಜ್ಬೊಲ್ಲಾದ ಕ್ಷಿಪಣಿಗಳು ಮತ್ತು ರಾಕೆಟ್ಸ್ ಫೋರ್ಸ್‌ನಲ್ಲಿ ಹೆಚ್ಚುವರಿ ಕೇಂದ್ರೀಯ ಕಮಾಂಡರ್‌ಗಳೊಂದಿಗೆ ಖಾಬಿಸಿಯನ್ನು ಹೊರಹಾಕಲಾಯಿತು” ಎಂದು ಐಡಿಎಫ್‌ (IDF) X … Continued