ರಷ್ಯಾದಿಂದ ತೈಲ ಖರೀದಿ: ಭಾರತದ ಮೇಲೆ ಶೇ. 500ರಷ್ಟು ಸುಂಕ ಹೇರುವ ಮಸೂದೆಗೆ ಟ್ರಂಪ್ ಸಮ್ಮತಿ…!

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಮುಂದುವರಿಸುತ್ತಿರುವ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮೇಲೆ ಸುಂಕದ ಕ್ರಮಕ್ಕೆ ಅಮೆರಿಕ ಮತ್ತೆ ಮುಂದಾಗಿದೆ. ರಷ್ಯಾದ ಮೇಲೆ ಕಠಿಣ ಆರ್ಥಿಕ ದಿಗ್ಬಂಧನ ವಿಧಿಸುವ ದ್ವಿಪಕ್ಷೀಯ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ತಿಳಿಸಿದ್ದಾರೆ. ಈ ಮಸೂದೆಯು ಕಾನೂನಾಗಿ ಜಾರಿಗೆ … Continued

ಪಶ್ಚಿಮ ಘಟ್ಟಗಳ ಧ್ವನಿ, ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಇನ್ನಿಲ್ಲ

ಪುಣೆ: ಭಾರತದ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜೀವನವಿಡೀ ಹೋರಾಡಿದ, ಹಿರಿಯ ಪರಿಸರ ವಿಜ್ಞಾನಿ ಮತ್ತು ಪರಿಸರ ತಜ್ಞ ಮಾಧವ ಗಾಡ್ಗೀಳ್ (83) ಅವರು ಬುಧವಾರ ರಾತ್ರಿ (ಜನವರಿ 7) ಪುಣೆಯಲ್ಲಿ ನಿಧನರಾದರು. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಗಾಡ್ಗೀಳ್ ಅವರ ಪುತ್ರ ಸಿದ್ಧಾರ್ಥ ಗಾಡ್ಗೀಳ್ ಅವರು ಈ ದುಃಖದ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಪಶ್ಚಿಮ ಘಟ್ಟಗಳ … Continued

ಅಮೆರಿಕ ಸುಂಕದ ಮಧ್ಯೆಯೂ ಭಾರತದ ಆರ್ಥಿಕತೆಗೆ ಬೂಸ್ಟ್: 2025-26ರಲ್ಲಿ 7.4%ರಷ್ಟು ಜಿಡಿಪಿ ಪ್ರಗತಿ ಅಂದಾಜು

ನವದೆಹಲಿ: ಜಾಗತಿಕ ಸವಾಲುಗಳು ಮತ್ತು ಅಮೆರಿಕದ ಸುಂಕದ ಸಮರದ (Tariff War) ನಡುವೆಯೂ ಭಾರತದ ಆರ್ಥಿಕತೆಯು ಸದೃಢವಾಗಿ ಬೆಳೆಯುತ್ತಿದೆ. ಜನವರಿ 7 ರಂದು ಸರ್ಕಾರ ಬಿಡುಗಡೆ ಮಾಡಿದ ಮೊದಲ ಮುಂಗಡ ಅಂದಾಜಿನ ಪ್ರಕಾರ, 2025-26ರ ಹಣಕಾಸು ವರ್ಷದಲ್ಲಿ ಭಾರತದ ನೈಜ ಒಟ್ಟು ದೇಶೀಯ ಉತ್ಪನ್ನ (GDP) ಶೇ. 7.4 ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆಯಿದೆ. ಇದು … Continued

ಅಸ್ಸಾಂ ವಿಧಾನಸಭೆ ಚುನಾವಣೆಗೆ ತಯಾರಿ : ಕಾಂಗ್ರೆಸ್ ಹಿರಿಯ ವೀಕ್ಷಕರಾಗಿ ಡಿ.ಕೆ. ಶಿವಕುಮಾರ ನೇಮಕ

ನವದೆಹಲಿ: ಮುಂಬರುವ ಅಸ್ಸಾಂ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಭರ್ಜರಿ ಸಿದ್ಧತೆ ನಡೆಸಿದ್ದು, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮಹತ್ವದ ಜವಾಬ್ದಾರಿ ನೀಡಿದೆ. ಎಐಸಿಸಿ (AICC) ಬುಧವಾರ ಅಸ್ಸಾಂ ಚುನಾವಣೆಗೆ ಹಿರಿಯ ವೀಕ್ಷಕರ ತಂಡವನ್ನು ಘೋಷಿಸಿದ್ದು, ಡಿ.ಕೆ. ಶಿವಕುಮಾರ ಅವರೊಂದಿಗೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್ ಮತ್ತು ಜಾರ್ಖಂಡ್‌ನ ಮಾಜಿ ಶಾಸಕ ಬಂಧು … Continued

ಚಾಕುವಿನಿಂದ ಇರಿದು ಮಹಾರಾಷ್ಟ್ರ ಕಾಂಗ್ರೆಸ್ ಉಪಾಧ್ಯಕ್ಷನ ಹತ್ಯೆ

ಮುಂಬೈ: ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ಹಿದಾಯತ್ ಪಟೇಲ್ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಸಾವಿನಲ್ಲಿ ಅಂತ್ಯಗೊಂಡಿದೆ. ಮಂಗಳವಾರ ಅಕೋಲಾ ಜಿಲ್ಲೆಯ ಅಕೋಟ್ ನಗರದಲ್ಲಿ ದುಷ್ಕರ್ಮಿಯೊಬ್ಬರಿಂದ ಚಾಕು ಇರಿತಕ್ಕೊಳಗಾಗಿದ್ದ ಪಟೇಲ್, ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅಕೋಲಾ ಪೊಲೀಸ್ ಅಧೀಕ್ಷಕ ಅರ್ಚಿತ್ ಚಂದಕ್ ಅವರ ಮಾಹಿತಿ ಪ್ರಕಾರ, ಮಂಗಳವಾರ … Continued

ದಾಖಲೆ ಬರೆದ ಪ್ರಧಾನಿ ಮೋದಿಯ ಪರೀಕ್ಷಾ ಪೆ ಚರ್ಚಾ- 2026ರ ನೋಂದಣಿ ; 4 ಕೋಟಿ ದಾಟಿದ ಅಭ್ಯರ್ಥಿಗಳ ಸಂಖ್ಯೆ…!

 ನವದೆಹಲಿ: ಈ ವರ್ಷದ ‘ಪರೀಕ್ಷಾ ಪೆ ಚರ್ಚಾ’ (PPC 2026) ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆಯು ಈಗಾಗಲೇ 4 ಕೋಟಿಯ ಗಡಿಯನ್ನು ದಾಟುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ, ಜನವರಿ 7, 2026ರ ಸಂಜೆ 5:30ರ ವೇಳೆಗೆ ಒಟ್ಟು 4,03,12,346 ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರ ವಿವರ ಹೀಗಿದೆ: ವಿದ್ಯಾರ್ಥಿಗಳು: 3,75,00,671 ಶಿಕ್ಷಕರು: 22,89,974 … Continued

ಪಾಕ್ ಅಪಪ್ರಚಾರ ಬಯಲಿಗೆ : ಆಪರೇಶನ್‌ ಸಿಂಧೂರ ವೇಳೆ ಸಹಾಯಕ್ಕಾಗಿ ಅಮೆರಿಕದ ಬಳಿ ಓಡಿ ಹೋಗಿದ್ದ ಪಾಕಿಸ್ತಾನ…!

ನವದೆಹಲಿ: ಭಾರತೀಯ ವಾಯುಪಡೆ ನಡೆಸಿದ ‘ಆಪರೇಷನ್ ಸಿಂಧೂರ’ ದಾಳಿಯ ವೇಳೆ ಪಾಕಿಸ್ತಾನವು ಅಮೆರಿಕದ ಸಹಾಯಕ್ಕಾಗಿ ಅಂಗಲಾಚಿತ್ತು ಎಂಬ ಆಘಾತಕಾರಿ ವಿಷಯ ಈಗ ಬಹಿರಂಗವಾಗಿದೆ. ಅಮೆರಿಕ ಸರ್ಕಾರದ ಫಾರಾ (FARA) ಕಾಯ್ದೆಯಡಿ ಸಲ್ಲಿಕೆಯಾದ ದಾಖಲೆಗಳು ಪಾಕಿಸ್ತಾನದ ಸುಳ್ಳು ಮತ್ತು ಅಪಪ್ರಚಾರವನ್ನು ಜಗತ್ತಿನ ಮುಂದೆ ತೆರೆದಿಟ್ಟಿವೆ. ಭಾರತದ ವಾಯುದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನವು, ತನ್ನ ವಾಯುನೆಲೆಗಳು ಮತ್ತು ಉಗ್ರರ ಶಿಬಿರಗಳನ್ನು … Continued

ಮನೆ ಕಳ್ಳತನಕ್ಕೆ ಬಂದ ಕಳ್ಳ ಎಕ್ಸಾಸ್ಟ್ ಫ್ಯಾನ್ ರಂಧ್ರದಲ್ಲಿ ಸಿಲುಕಿಕೊಂಡು ಒದ್ದಾಡಿದ ; ವೀಡಿಯೊ ವೈರಲ್‌…!

ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾದಲ್ಲಿ ವಿಚಿತ್ರ ಹಾಗೂ ಹಾಸ್ಯಾಸ್ಪದ ಘಟನೆಯೊಂದು ನಡೆದಿದೆ. ಮನೆಯೊಂದಕ್ಕೆ ಕಳ್ಳತನ ಮಾಡಲು ಬಂದ ಕಳ್ಳನೊಬ್ಬ ಎಕ್ಸಾಸ್ಟ್ ಫ್ಯಾನ್ ಅಳವಡಿಸುವ ರಂಧ್ರದಲ್ಲಿ ಸಿಲುಕಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಕೋಟಾ ನಿವಾಸಿ ಸುಭಾಷಕುಮಾರ ರಾವತ್ ಅವರು ತಮ್ಮ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಹೋಗಿ ಭಾನುವಾರ ರಾತ್ರಿ ಮನೆಗೆ ಮರಳಿದ್ದರು. ಅವರು ಮನೆಗೆ … Continued

ಭಾರತದ ಆಪರೇಷನ್ ಸಿಂಧೂರ ನಿಲ್ಲಿಸುವಂತೆ ಅಮೆರಿಕದ ಕೈಕಾಲು ಹಿಡಿದ ಪಾಕಿಸ್ತಾನ : ಅಮೆರಿಕ ಉನ್ನತಾಧಿಕಾರಿಗಳ ಜೊತೆ 60ಕ್ಕೂ ಹೆಚ್ಚು ಸಭೆ…!

ವಾಷಿಂಗ್ಟನ್/ನವದೆಹಲಿ: 2025ರ ಮೇ ತಿಂಗಳಲ್ಲಿ ನಡೆದ ‘ಆಪರೇಷನ್ ಸಿಂಧೂರ’ (Operation Sindoor) ವೇಳೆ ಭಾರತೀಯ ಸೇನೆಯು ನಡೆಸಿದ ಭೀಕರ ದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ತಡೆಯಲು ಅಮೆರಿಕಾದಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ಲಾಬಿ ರೂಪಿಸಿತ್ತು ಎಂಬ ವಿಷಯ ಈಗ ಹೊರಬಿದ್ದಿದೆ. ಅಮೆರಿಕಾ ಸರ್ಕಾರದ ಇತ್ತೀಚಿನ ದಾಖಲೆಗಳ ಪ್ರಕಾರ, ಭಾರತದ ಸೈನಿಕ ಕಾರ್ಯಾಚರಣೆಯನ್ನು ಹೇಗಾದರೂ … Continued

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ(Sonia Gandhi) ಅವರನ್ನು ಮಂಗಳವಾರ ದೆಹಲಿಯ ಸರ್ ಗಂಗಾ ರಾಮ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.  ಪ್ರಸ್ತುತ ಅವರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ ಎಂದು ವರದಿ ತಿಳಿಸಿದೆ. ದೀರ್ಘಕಾಲದ ಕೆಮ್ಮಿನ ಸಮಸ್ಯೆಗಳನ್ನು ಎದುರಿಸುತ್ತಿರುವ 79 ವರ್ಷದ … Continued