ಮಾಲ್ಡೀವ್ಸ್‌ ಅಪಹಾಸ್ಯದ ಮಧ್ಯೆ ಪ್ರಧಾನಿ ಮೋದಿ ಭೇಟಿ ನಂತ್ರ ಲಕ್ಷದ್ವೀಪದ ಬಗ್ಗೆ ಆನ್-ಪ್ಲಾಟ್‌ಫಾರ್ಮ್ ಹುಡುಕಾಟದಲ್ಲಿ 3400% ಪಟ್ಟು ಏರಿಕೆ ಕಂಡ ಮೇಕ್‌ ಮೈ ಟ್ರಿಪ್…!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಲಕ್ಷದ್ವೀಪ ಭೇಟಿಯು ರಮಣೀಯ ದ್ವೀಪಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ ಎಂದು ಮೇಕ್‌ಮೈಟ್ರಿಪ್ ಹೇಳಿದೆ. ಆನ್‌ಲೈನ್ ಟ್ರಾವೆಲ್ ಕಂಪನಿಯು ಲಕ್ಷದ್ವೀಪದ ಬಗ್ಗೆ ಆನ್-ಪ್ಲಾಟ್‌ಫಾರ್ಮ್ ಹುಡುಕಾಟದಲ್ಲಿ ಶೇಕಡಾ 3,400 ರಷ್ಟು ಹೆಚ್ಚಳವಾಗಿದೆ ಎಂದು ಉಲ್ಲೇಖಿಸಿದೆ. ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಮಾಲ್ಡೀವ್ಸ್‌ ರಾಜಕಾರಣಿಗಳು ಅಪಹಾಸ್ಯ ಮಾಡಿದ ನಂತರ ಈ … Continued

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಫಾರ್ಮ್‌ ಹೌಸ್‌ ಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಪನ್ವೇಲ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ನುಗ್ಗಲು ಯತ್ನಿಸಿದ ಇಬ್ಬರನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಪನ್ವೇಲ್‌ನಲ್ಲಿರುವ ನಟನ ಫಾರ್ಮ್‌ಹೌಸ್‌ಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಇಬ್ಬರೂ ವ್ಯಕ್ತಿಗಳನ್ನು ತಡೆದರು. ನಂತರ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಇಬ್ಬರೂ ವ್ಯಕ್ತಿಗಳ ಚಲನವನಗಳು ಅನುಮಾನಕ್ಕೆ ಕಾರಣವಾದ ನಂತರ … Continued

ತಮಿಳುನಾಡಿನಲ್ಲಿ ಭಾರೀ ಮಳೆ: ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಚೆನ್ನೈ: ತಮಿಳುನಾಡಿನ ಹಲವು ಭಾಗಗಳಲ್ಲಿ, ಮುಖ್ಯವಾಗಿ ಚೆನ್ನೈನಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಪುದುಚೇರಿ, ನಾಗಪಟ್ಟಿಣಂ, ಕಿಲ್ವೇಲೂರು ತಾಲೂಕು, ವಿಲುಪುರಂ ಮತ್ತು ಕಡಲೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅದೇ ರೀತಿ ಕಲ್ಲಕುರಿಚಿ, ರಾಣಿಪೇಟ್, ವೆಲ್ಲೂರು ಮತ್ತು ತಿರುವಣ್ಣಾಮಲೈ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುದುಚೇರಿಯಲ್ಲಿ ಕಳೆದ 24 … Continued

ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣ : 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಗುಜರಾತ್‌ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಲ್ಲಿ 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ  ಮತ್ತು ಆಕೆಯ ಕುಟುಂಬವನ್ನು ಏಳು ಜನರನ್ನು ಹತ್ಯೆ ಮಾಡಿದ 11 ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ  ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಅಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಗುಜರಾತ್‌ ಸರ್ಕಾರ “ಸಮರ್ಥವಾಗಿಲ್ಲ” ಎಂದು … Continued

ಬಾಂಗ್ಲಾದೇಶ ಚುನಾವಣೆ: ದಾಖಲೆಯ 5ನೇ ಅವಧಿಗೆ ಪ್ರಧಾನಿ ಶೇಖ್ ಹಸೀನಾ ಅಧಿಕಾರಕ್ಕೆ

ಢಾಕಾ : ಪ್ರಮುಖ ವಿರೋಧ ಪಕ್ಷವಾದ ಬಿಎನ್‌ಪಿ ಮತ್ತು ಅದರ ಮಿತ್ರಪಕ್ಷಗಳ ಬಹಿಷ್ಕಾರದ ನಡುವೆ ಭಾನುವಾರ ನಡೆದ ಚುನಾವಣೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಸತತ ನಾಲ್ಕನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಹಾಗೂ ಅವರ ಅವಾಮಿ ಲೀಗ್ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿದೆ. 300 ಸ್ಥಾನಗಳ ಸಂಸತ್ತಿನಲ್ಲಿ ಹಸೀನಾ … Continued

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಸಾರ

ನವದೆಹಲಿ : ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ನಡೆಯುವ ಪ್ರಾಣಪ್ರತಿಷ್ಠೆ ಸಮಾರಂಭದ ನೇರ ಪ್ರಸಾರವನ್ನು ಅಮೆರಿಕದ ನ್ಯೂಯಾರ್ಕ್ ನಗರದ ಐಕಾನಿಕ್ ಟೈಮ್ಸ್ ಸ್ಕ್ವೇರ್ನಲ್ಲಿ ಪ್ರದರ್ಶಿಸಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವದ ಕಾರ್ಯಕ್ರಮವನ್ನು ವಿವಿಧ ಭಾರತೀಯ ರಾಯಭಾರ … Continued

ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ತನ್ನ ಮೂವರು ಸಚಿವರನ್ನು ಅಮಾನತು ಮಾಡಿದ ಮಾಲ್ಡೀವ್ಸ್‌ ಸರ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಅಪಹಾಸ್ಯ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್‌ನಲ್ಲಿ ಮೂವರು ಸಚಿವರ ತಲೆದಂಡವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಪ್ರವಾಸದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ಹಂಚಿಕೊಂಡ ಮಾಲ್ಡೀವ್ಸ್‌ನ ಮೂವರು ಸಚಿವರನ್ನು ಅಲ್ಲಿನ ಸರ್ಕಾರವು ಭಾನುವಾರ ಅಮಾನತುಗೊಳಿಸಿದೆ ಎಂದು ಮಾಲ್ಡೀವ್ಸ್ ವಕ್ತಾರರು ತಿಳಿಸಿದ್ದಾರೆ. ಭಾನುವಾರ ಭಾರತವು ಮಾಲ್ಡೀವ್ಸ್‌ … Continued

ಅಯೋಧ್ಯೆಯಿಂದ ಕಾಶಿಗೆ ʼರಾಮಜ್ಯೋತಿʼ ತಂದು ಮೆರವಣಿಗೆ ಮಾಡಲಿರುವ ಮುಸ್ಲಿಂ ಮಹಿಳೆಯರು…!

ಲಕ್ನೋ:  ಕಾಶಿ (ವಾರಾಣಸಿ)ಯ  ಇಬ್ಬರು ಮುಸ್ಲಿಂ ಮಹಿಳೆಯರಾದ ನಜ್ನೀನ್ ಅನ್ಸಾರಿ ಮತ್ತು ನಜ್ಮಾ ಪರ್ವಿನ್ ಅವರು ಅಯೋಧ್ಯೆ ರಾಂಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಮುಂಚಿತವಾಗಿ ಮಹತ್ವದ ಪ್ರಯಾಣ ಪ್ರಾರಂಭಿಸಲಿದ್ದಾರೆ. ರಾಮ ಜ್ಯೋತಿ ತಂದು ಅದನ್ನು ಕಾಶಿಯ  ಮುಸ್ಲಿಂ ಪ್ರದೇಶಗಳಲ್ಲಿ ಮೆರವಣಿಗೆ ಮಾಡಿ ರಾಮ ಜ್ಯೋತಿ ಎಲ್ಲೆಡೆ ದರ್ಶನ ಮಾಡಿಸಲು ಮುಂದಾಗಿದ್ದಾರೆ. ಭಗವಾನ್ ರಾಮನು ತಮ್ಮ ಪೂರ್ವಜ … Continued

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ತೃಣಮೂಲ ಕಾಂಗ್ರೆಸ್ ನಾಯಕನ ಗುಂಡಿಕ್ಕಿ ಹತ್ಯೆ

ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸತ್ಯನ್ ಚೌಧರಿ ಅವರನ್ನು ಭಾನುವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳದ ಬಹರಂಪುರದಲ್ಲಿ ಈ ಘಟನೆ ನಡೆದಿದೆ. ಮುರ್ಷಿದಾಬಾದ್‌ನ ಟಿಎಂಸಿ) ಪ್ರಧಾನ ಕಾರ್ಯದರ್ಶಿ ಸತ್ಯನ್ ಚೌಧರಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪ್ರಕಟಿಸಲಾಯಿತು. ಸ್ಥಳೀಯ ಟಿಎಂಸಿ … Continued

‘ಕ್ರಮ ಕೈಗೊಳ್ಳಲು ಹಿಂಜರಿಯಲ್ಲ…’: ಪ್ರಧಾನಿ ಮೋದಿ ವಿರುದ್ಧ ಸಚಿವರ ಅವಹೇಳನಕಾರಿ ಹೇಳಿಕೆ ನಂತರ ಮಾಲ್ಡೀವ್ಸ್ ಸರ್ಕಾರ

ನವದೆಹಲಿ: ಮಾಲ್ಡೀವ್ಸ್ ಸರ್ಕಾರವು ಭಾನುವಾರ ಹೇಳಿಕೆಯಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದೇಶದ ಸಚಿವರು ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ಸರ್ಕಾರ ಒಪ್ಪುವುದಿಲ್ಲ ಎಂದು ಹೇಳಿದೆ ಹಾಗೂ ಅವರ ಹೇಳಿಕೆಯು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದೆ. “ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ … Continued