ಪ್ರಧಾನಿ ಮೋದಿ ಪದವಿ ವಿವಾದ: ಅರವಿಂದ ಕೇಜ್ರಿವಾಲ್, ಸಂಜಯ್ ಸಿಂಗ್ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಕಾರ

ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಕುರಿತ ಟೀಕೆಗಳಿಗೆ ಸಂಬಂಧಿಸಿದಂತೆ ಗುಜರಾತ್ ವಿಶ್ವವಿದ್ಯಾನಿಲಯವು ತಮ್ಮ ವಿರುದ್ಧ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳಿಗೆ ತಡೆ ನೀಡುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ಮತ್ತು ಸಂಸದ ಸಂಜಯ ಸಿಂಗ್ ಅವರ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಉಭಯ ನಾಯಕರ ವಿರುದ್ಧ ಇಲ್ಲಿನ ಮೆಟ್ರೊಪಾಲಿಟನ್ … Continued

ಕಾಂಗ್ರೆಸ್ ಶಾಸಕ ನನಗೆ ಬೂಟು ನೆಕ್ಕುವಂತೆ ಮಾಡಿದ, ಪೋಲೀಸ್ ಅಧಿಕಾರಿ ನನ್ನ ಮೇಲೆ ಮೂತ್ರ ವಿಸರ್ಜಸಿದ: ದಲಿತ ವ್ಯಕ್ತಿಯಿಂದ ದೂರು ದಾಖಲು

ಜೈಪುರ: ಜೈಪುರ ಪೊಲೀಸರು ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ, ಮೂತ್ರ ವಿಸರ್ಜನೆ ಮತ್ತು ಶಾಸಕರ ಪಾದರಕ್ಷೆ ನೆಕ್ಕುವಂತೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಗೋಪಾಲ ಮೀನಾ ಮತ್ತು ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆ ಜೂನ್ 30 ರಂದು ಸಂಭವಿಸಿದೆ, ಆದರೆ ಸಂತ್ರಸ್ತ ‘ಭಯ’ದಿಂದ ಜುಲೈ 27 ರಂದು ದೂರು ದಾಖಲಿಸಿದ್ದಾರೆ. … Continued

ಗುರುವಾಯೂರು ದೇವಸ್ಥಾನದ ಶ್ರೀಕೃಷ್ಣನಿಗೆ ಚಿನ್ನದ ಕಿರೀಟ ಅರ್ಪಿಸಿದ ತಮಿಳುನಾಡು ಸಿಎಂ ಸ್ಟಾಲಿನ್ ಪತ್ನಿ

ತ್ರಿಶೂರ್: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ಗುರುವಾರ ತ್ರಿಶೂರ್ ಜಿಲ್ಲೆಯ ಪ್ರಖ್ಯಾತ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಡಿಎಂಕೆ ನಾಯಕನ ಪತ್ನಿ ಪ್ರಸಿದ್ಧ ದೇವಸ್ಥಾನದ ದೇವರಾದ ಶ್ರೀಕೃಷ್ಣನಿಗೆ ಚಿನ್ನದ ಕಿರೀಟವನ್ನು ಅರ್ಪಿಸಿದರು. ಸುಮಾರು 32 ಸೊವೆರಿನ್‌ ತೂಕದ ಚಿನ್ನದ ಕಿರೀಟವು ಸುಮಾರು 14 ಲಕ್ಷ ರೂ.ಗಳ ಮೌಲ್ಯದ್ದಾಗಿದೆ. … Continued

ಕ್ರಿಮಿನಲ್ ಕಾನೂನುಗಳ ಮಾರ್ಪಾಡಿಗೆ ಕೇಂದ್ರದಿಂದ ಮೂರು ನೂತನ ಮಸೂದೆಗಳ ಮಂಡನೆ: ʼದೇಶದ್ರೋಹʼ ಕಾನೂನು ರದ್ದು-ಅಮಿತ್‌ ಶಾ

ನವದೆಹಲಿ: ದೇಶದ ಕ್ರಿಮಿನಲ್ ಕಾನೂನುಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಕೇಂದ್ರ ಸರ್ಕಾರ ಶುಕ್ರವಾರ (ಆಗಸ್ಟ್‌ ೧೧) ಸಂಸತ್ತಿನಲ್ಲಿ ಮೂರು ನೂತನ ಮಸೂದೆಗಳನ್ನು ಮಂಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಸಂಸತ್ತಿನಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಉದ್ದೇಶದಿಂದ ಮೂರು ಮಸೂದೆಗಳನ್ನು ಮಂಡಿಸಿದ್ದಾರೆ. ಹಾಗೂ ದೇಶದ್ರೋಹ ಕಾನೂನನ್ನು “ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು” ಎಂದು ಹೇಳಿದ್ದಾರೆ. ರದ್ದುಗೊಳಿಸಲು … Continued

ʼಫೋರ್ಜರಿʼ ಮಾಡಿದ ಆರೋಪದ ಮೇಲೆ ಎಎಪಿ ಸಂಸದ ರಾಘವ ಚಡ್ಡಾ ರಾಜ್ಯಸಭೆಯಿಂದ ಅಮಾನತು

ನವದೆಹಲಿ: ಆಮ್ ಆದ್ಮಿತ್ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ರಾಜ್ಯಸಭೆಯಲ್ಲಿ ದೆಹಲಿ ಸೇವಾ ಮಸೂದೆಗೆ ಸಂಬಂಧಿಸಿದ ಪ್ರಸ್ತಾವನೆಯಲ್ಲಿ ಐವರು ಸಂಸದರ ಸಹಿಯನ್ನು ನಕಲಿ ಮಾಡಿದ ಆರೋಪದ ಮೇಲೆ ವಿಶೇಷಾಧಿಕಾರ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ನಾಲ್ಕು ರಾಜ್ಯಸಭಾ ಸಂಸದರು ತಮ್ಮ ಅನುಮತಿಯಿಲ್ಲದೆ ತಮ್ಮ ಹೆಸರನ್ನು ಆಗಸ್ಟ್ 7 ರಂದು ಸದನ … Continued

ನಟಿ, ಮಾಜಿ ಸಂಸದೆ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ..

ಖ್ಯಾತ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ಚೆನ್ನೈನ ಎಗ್ಮೋರ್ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಚೆನ್ನೈನ ರಾಯಪೇಟೆಯಲ್ಲಿ ಆಕೆಯ ಒಡೆತನದ ಚಿತ್ರಮಂದಿರದ ಉದ್ಯೋಗಿಗಳು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಆಕೆಗೆ 5,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಚಿತ್ರ ಮಂದಿರದ ನೌಕರರ ಇಎಸ್‌ಐ ಪಾವತಿಸಲು ಆಡಳಿತ ಮಂಡಳಿ ವಿಫಲವಾಗಿದ್ದರಿಂದ ಸಮಸ್ಯೆ ಆರಂಭವಾಗಿದ್ದು, ಅವರು … Continued

ಗುತ್ತಿಗೆದಾರರಿಗೆ ಬಿಲ್ ಪಾವತಿಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ ಕೆಂಪಣ್ಣ : ಕಾಮಗಾರಿಗಳ ತನಿಖೆಗೆ ಎಸ್‌ಐಟಿ ರಚನೆಗೆ ವಿರೋಧ

ಬೆಂಗಳೂರು : ಕಳೆದ ಸರ್ಕಾರದ ವಿರುದ್ಧ ಕಮಿಷನ್​ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗ ಕಾಂಗ್ರೆಸ್​ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದು ಹೇಳಿದ್ದಾರೆ. ಇಂದು, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಂಪಣ್ಣ ಅವರು, ಸರ್ಕಾರದ ವಿರುದ್ಧ ನಾವು ಯಾರೂ ಕಮಿಷನ್ ಆರೋಪ ಮಾಡಿಲ್ಲ. ಯಾವ ಸಚಿವರೂ … Continued

ಮನೆಯ ಹೊರಗೆ ವಾಕಿಂಗ್‌ ಮಾಡುತ್ತಿದ್ದ ಬಿಜೆಪಿ ನಾಯಕನ ಗುಂಡು ಹಾರಿಸಿ ಹತ್ಯೆ

ಮೊರಾದಾಬಾದ್‌ : ಬಿಜೆಪಿ ಕಿಸಾನ್ ಮೋರ್ಚಾ ನಾಯಕನನ್ನು ಗುರುವಾರ ಸಂಜೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ ಅವರ ನಿವಾಸದ ಹೊರಗೆ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ನಗರದ ಮಜೋಲಾ ಪ್ರದೇಶದಲ್ಲಿ ನಡೆದ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಜೆಪಿ ಮುಖಂಡ ಅನುಜ್ ಚೌಧರಿ (34) ತನ್ನ ಸಹೋದರನೊಂದಿಗೆ ಉದ್ಯಾನವನಕ್ಕೆ ವಾಕ್ ಮಾಡಲು ಹೊರಟಿದ್ದಾಗ ಬೈಕ್‌ನಲ್ಲಿ … Continued

ವೀಡಿಯೊ…: ರಾಹುಲ್ ಗಾಂಧಿ 50 ವರ್ಷದ ಮುದುಕಿಗೆ ಏಕೆ ಫ್ಲೈಯಿಂಗ್ ಕಿಸ್ ಕೊಡ್ತಾರೆ ? ; ಮತ್ತೊಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ಶಾಸಕಿ ಹೇಳಿಕೆ

ನವದೆಹಲಿ: ರಾಹುಲ್ ಗಾಂಧಿ ಅವರ ‘ಫ್ಲೈಯಿಂಗ್ ಕಿಸ್’ ವಿವಾದದ ನಡುವೆ, ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ವ್ಯಂಗ್ಯವಾಡುವ ಮೂಲಕ ಈಗ ಹೊಸ ವಿವಾದ ಸೃಷ್ಟಿಸಿದ್ದಾರೆ. ಹುಡುಗಿಯರ ಕೊರತೆಯಿಲ್ಲ, ಹೀಗಾಗಿ ರಾಹುಲ್‌ ಗಾಂಧಿ 50 ವರ್ಷದ ಮಹಿಳೆಗೆ ಏಕೆ ಫ್ಲೈಯಿಂಗ್ ಕಿಸ್ ನೀಡುತ್ತಾರೆ ಎಂದು ನೀತು ಸಿಂಗ್‌ … Continued

ಐಜ್ವಾಲ್ ಬಾಂಬ್ ದಾಳಿಯಿಂದ ಹಿಡಿದು 1962ರ ನೆಹರೂ ಭಾಷಣದ ವರೆಗೆ…: ಈಶಾನ್ಯದ ಹಿಂದಿನ ಘಟನೆ ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅವಿಶ್ವಾಸ ನಿರ್ಣಯದ ಮೇಲಿನ ಉತ್ತರದ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಈಶಾನ್ಯ ರಾಜ್ಯಗಳ ಹಿಂದಿನ ಘಟನೆಗಳ ಉದಾಹರಣೆಗಳನ್ನು ನೀಡಿದ್ದಾರೆ. . ಮಣಿಪುರದಲ್ಲಿನ ಹಿಂಸಾಚಾರದ ಕುರಿತು ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳು ಮಂಡಿಸಿದ ಪ್ರಸ್ತಾಪಕ್ಕೆ ಕಾಂಗ್ರೆಸ್ ಅನ್ನು ಮೂಲೆಗೆ ತಳ್ಳಲು ಪ್ರಧಾನಿ ಮೋದಿ ಮಿಜೋರಾಂ ಮತ್ತು ಮಣಿಪುರದ … Continued