ಕಾಂಗ್ರೆಸ್ಸಿನ ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ಅಖಿಲೇಶ ಯಾದವ್ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ

ಲಕ್ನೋ : ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಅವರು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ ಜೋಡೋ ನ್ಯಾಯ ಯಾತ್ರೆಗೆ ಹೋಗುವ ಸಾಧ್ಯತೆಯಿಲ್ಲ ಎಂದು ಬುಧವಾರ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಯಾದವ್ ಅವರನ್ನು ಪ್ರಶ್ನಿಸಿದಾಗ, ‘ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ನಮ್ಮನ್ನು ತಮ್ಮ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಿಲ್ಲ ಎಂದು ಹೇಳಿದ್ದಾರೆ. ಇಲ್ಲಿನ ಪಕ್ಷದ … Continued

ವೀಡಿಯೊ..| ಪ್ರಧಾನಿ ಮೋದಿಯವರ ತವರೂರಾದ ವಡ್ನಗರದಲ್ಲಿ 2800 ವರ್ಷಗಳಷ್ಟು ಪುರಾತನವಾದ ಮಾನವ ವಸಾಹತು ಪತ್ತೆ

ಪ್ರಧಾನಿ ನರೇಂದ್ರ ಮೋದಿಯವರ ತವರು ಗ್ರಾಮವಾದ ಗುಜರಾತಿನ ವಡ್ನಗರದಲ್ಲಿರುವ 2,800 ವರ್ಷಗಳಷ್ಟು ಹಳೆಯದಾದ ಮಾನವ ವಸಾಹತು ಅವಶೇಷಗಳು ಪತ್ತೆಯಾಗಿವೆ. ಐಐಟಿ ಖರಗಪುರ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ), ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (ಪಿಆರ್‌ಎಲ್), ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ಡೆಕ್ಕನ್ ಕಾಲೇಜು ನಡೆಸಿದ ಸಂಶೋಧನೆಯಲ್ಲಿ ವಡ್ನಗರದಲ್ಲಿ ಕ್ರಿಸ್ತಪೂರ್ವ 800ರಷ್ಟು ಹಳೆಯದಾದ ಮಾನವ ವಸಾಹತುಗಳ ಪುರಾವೆಗಳು … Continued

ರಾಜತಾಂತ್ರಿಕ ಗದ್ದಲದ ನಂತರ ಕೆನಡಾಕ್ಕೆ ತೆರಳುವ ಭಾರತದ ವಿದ್ಯಾರ್ಥಿಗಳ ಸಂಖ್ಯೆ ತೀವ್ರ ಇಳಿಕೆ : 86%ರಷ್ಟು ಕುಸಿತ ಎಂದ ಸಚಿವರು

ಎರಡು ದೇಶಗಳ ನಡುವಿನ ರಾಜತಾಂತ್ರಿಕ ಗದ್ದಲದ ನಂತರ 2023 ರಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾ ನೀಡಿದ ಅಧ್ಯಯನ ಪರವಾನಗಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದೆ ಎಂದು ಕೆನಡಾದ ಉನ್ನತ ಅಧಿಕಾರಿಗಳು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ. ಭಾರತೀಯರಿಗೆ ಅಧ್ಯಯನ ಪರವಾನಗಿಗಳ ಸಂಖ್ಯೆಯು ಸನಿಹದಲ್ಲಿ ಮರುಕಳಿಸುವ ಸಾಧ್ಯತೆಯಿಲ್ಲ ಎಂದು ತಾವು ನಂಬಿದ್ದಾಗಿ ಎಂದು ಉನ್ನತ ಅಧಿಕಾರಿ ಸಂದರ್ಶನದಲ್ಲಿ … Continued

ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳದಿರಲು ಶರದ್‌ ಪವಾರ್‌ ನಿರ್ಧಾರ: ಶೀಘ್ರದಲ್ಲೇ “ದರ್ಶನʼ ಪಡೆಯುವೆ ಎಂದ ಎನ್‌ಸಿಪಿ ನಾಯಕ

ನವದೆಹಲಿ : ಅಯೋಧ್ಯೆ ರಾಮಮಂದಿರದಲ್ಲಿ ಜನವರಿ 22 ರಂದು ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಆಹ್ವಾನ ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ಅವರು, ದೊಡ್ಡ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಜನವರಿ 22 ರ ನಂತರ ದರ್ಶನ ಪಡೆಯಲು ಸುಲಭವಾಗುವುದರಿಂದ ಶೀಘ್ರದಲ್ಲೇ ಅಯೋಧ್ಯೆಗೆ ಭೇಟಿ … Continued

ಅರವಿಂದ್ ಕೇಜ್ರಿವಾಲರನ್ನು ‘ಆರ್‌ಎಸ್‌ಎಸ್ ಕಾ ಚೋಟಾ ರೀಚಾರ್ಜ್’ ಎಂದು ಕರೆದ ಓವೈಸಿ, ತಿರುಗೇಟು ನೀಡಿದ ಎಎಪಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂಘ ಪರಿವಾರದ ರಾಜಕೀಯವನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು “ಆರ್‌ಎಸ್‌ಎಸ್ ಕಾ ಚೋಟಾ ರೀಚಾರ್ಜ್” ಎಂದು ಕರೆದ ನಂತರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ. ದೆಹಲಿಯಲ್ಲಿ ಸುಂದರಕಾಂಡ ಪಠಣ ಕಾರ್ಯಕ್ರಮವನ್ನು … Continued

ವೀಡಿಯೊ…| ರಾಮಮಂದಿರ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ಮುನ್ನ 108 ಅಡಿ ಉದ್ದದ ಅಗರಬತ್ತಿ ಬೆಳಗಿಸಲಾಯ್ತು…ಇದು 45 ದಿನಗಳ ಕಾಲ ಬೆಳಗಲಿದೆ

ಅಯೋಧ್ಯೆ : ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರ ರಾಮನ ಮೂರ್ತಿ ಪ್ರಾಣ ಪ್ರತಿಷ್ಠೆ ಸಮಾರಂಭದ ಪೂರ್ವಭಾವಿಯಾಗಿ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹಾಂತ ನೃತ್ಯ ಗೋಪಾಲ ದಾಸ್ ಅವರು ಮಂಗಳವಾರ 108 ಅಡಿ ಉದ್ದದ ಅಗರಬತ್ತಿಯನ್ನು ಬೆಳಗಿಸಿದ್ದಾರೆ. “ಜೈ ಶ್ರೀ ರಾಮ” ಎಂದು ಘೋಷಣೆಗಳನ್ನು ಕೂಗುತ್ತಿದ್ದ ಭಾರೀ ಜನಸಮೂಹದ ನಡುವೆ … Continued

ಪ್ರಧಾನಿ ಮೋದಿ ಪದವಿ ವಿವಾದ: ಅರವಿಂದ ಕೇಜ್ರಿವಾಲ್, ಸಂಜಯ ಸಿಂಗ್ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದ ಹೇಳಿಕೆಗಳಿಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಂಸದ ಸಂಜಯ್ ಸಿಂಗ್ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ. ಈ ವೇಳೆ ಮಧ್ಯಂತರ ಪರಿಹಾರ ಕೋರಿ ಈ ಇಬ್ಬರೂ ಸಲ್ಲಿಸಿರುವ ಮನವಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ನ್ಯಾಯಮೂರ್ತಿಗಳಾದ ಬಿ.ಆರ್‌. … Continued

ಅಯೋಧ್ಯೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೂ ಮುನ್ನ ಆಂಧ್ರದ ರಾಮಾಯಣದ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಮಹತ್ವದ ಸ್ಥಾನ ಪಡೆದಿರುವ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಿದರು. ರಾವಣನಿಂದ ಸೀತಾದೇವಿಯನ್ನು ಅಪಹರಿಸಿದ ನಂತರ ಜಟಾಯು ಸೀತಾದೇವಿಯನ್ನು ಹಿಂಬಾಲಿಸಿದ ಸ್ಥಳ ಲೇಪಾಕ್ಷಿ ಎಂದು ನಂಬಲಾಗಿದೆ. ಸಾಯುತ್ತಿರುವ ಜಟಾಯು, ಸೀತಾ ದೇವಿಯ ಸೆರೆಯಲ್ಲಿರುವ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ತಿಳಿಸಿದ ನಂತರ, ಲೇಪಾಕ್ಷಿಯಲ್ಲಿ … Continued

9 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 25 ಕೋಟಿ ಜನರು ಬಡತನದಿಂದ ಮುಕ್ತ: ನೀತಿ ಆಯೋಗ

ನವದೆಹಲಿ: ಕಳೆದ 9 ವರ್ಷಗಳಲ್ಲಿ ಬಾರತದಲ್ಲಿ ಸುಮಾರು 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ ಎಂದು ನೀತಿ (NITI) ಆಯೋಗ ಹೇಳಿದೆ. ನೀತಿ ಆಯೋಗದ ವರದಿಯ ಪ್ರಕಾರ, 2013-14ರಲ್ಲಿ ದೇಶದಲ್ಲಿ ಬಹು ಆಯಾಮದ ಬಡತನವು ಶೇಕಡಾ 29.17 ರಷ್ಟಿತ್ತು, ಇದು 2022-23 ರಲ್ಲಿ ಶೇಕಡಾ 11.28 ಕ್ಕೆ ಇಳಿದಿದೆ. 2013-14ರಿಂದ 2022-23ರವರೆಗಿನ 9 ವರ್ಷಗಳ ಅವಧಿಯಲ್ಲಿ … Continued

ಆಂಧ್ರ ಕಾಂಗ್ರೆಸ್ ಅಧ್ಯಕ್ಷರಾಗಿ ವೈ.ಎಸ್. ಶರ್ಮಿಳಾ ನೇಮಕ

ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಅವರನ್ನು ಮಂಗಳವಾರ ಆಂಧ್ರಪ್ರದೇಶದ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಶರ್ಮಿಳಾ ಅವರು ತಮ್ಮ ವೈಎಸ್ಆರ್ ತೆಲಂಗಾಣ ಪಕ್ಷವನ್ನು (ವೈಎಸ್‌ಆರ್‌ಟಿಪಿ) ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿ ಜನವರಿ 4 ರಂದು ಕಾಂಗ್ರೆಸ್‌ಗೆ ಸೇರಿದ್ದರು. ಆಂಧ್ರಪ್ರದೇಶದ ಅಧ್ಯಕ್ಷ ಸ್ಥಾನಕ್ಕೆ ಗಿಡುಗು ರುದ್ರರಾಜು ರಾಜೀನಾಮೆ ನೀಡಿದ ಒಂದು … Continued