ವಿಡಿಯೋ | ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆ: 30 ವರ್ಷಗಳ ಹಿಂದಿನ ಪ್ರಮೋದ ಮಹಾಜನ್ ಮಾರ್ಮಿಕ ಭಾಷಣ ಈಗ ಮತ್ತೆ ವೈರಲ್‌

ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯವನ್ನು ಅತಂತ್ರ ಸ್ಥಿತಿಗೆ ತಳ್ಳಿರುವ ಬೆನ್ನಲ್ಲೇ, ಸುಮಾರು ಮೂರು ದಶಕಗಳ ಹಿಂದಿನ ಸಂಸತ್ತಿನ ರೋಚಕ ಪ್ರಸಂಗವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತುಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ಅಂದು ಬಿಜೆಪಿ ನಾಯಕ ಪ್ರಮೋದ ಮಹಾಜನ್ ಅವರು ಮೈತ್ರಿ ರಾಜಕೀಯದ ವಿಡಂಬನೆ ಮಾಡುತ್ತಾ ನೀಡಿದ್ದ ಭಾಷಣವು ಇಂದಿನ … Continued

ತಮಿಳುನಾಡು : ರಾಜ್ಯಪಾಲರನ್ನು ಭೇಟಿಯಾದ ದಿನಕರನ್; ಇಪಿಎಸ್‌ಗೆ ಇದೆ 120 ಶಾಸಕರ ಬೆಂಬಲ ; ಸರ್ಕಾರ ರಚನೆಗೆ ಅಹ್ವಾನ ನೀಡಿ ಎಂದು ಮನವಿ

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುರಿತು ಅನಿಶ್ಚಿತತೆ ಮುಂದುವರಿಯುತ್ತಿರುವ ಬೆನ್ನಲ್ಲೇ, ರಾಜಕೀಯ ಬೆಳವಣಿಗೆಗಳು ನಾಟಕೀಯ ತಿರುವು ಪಡೆದುಕೊಂಡಿವೆ. ಎಎಂಎಂಕೆ (AMMK) ಪಕ್ಷದ ಮುಖ್ಯಸ್ಥ ಟಿ.ಟಿ.ವಿ ದಿನಕರನ್ ಅವರು ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿ, ಎಡಪ್ಪಾಡಿ ಪಳನಿಸ್ವಾಮಿ (EPS) ಅವರಿಗೆ 120 ಶಾಸಕರ ಬೆಂಬಲವಿದ್ದು, ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪತ್ರ ನೀಡಿದ್ದಾರೆ. … Continued

ʼಆಪರೇಷನ್ ಸಿಂಧೂರ’ ವೇಳೆ ಸಹಾಯ ಮಾಡಲು ಪಾಕ್ ವಾಯುನೆಲೆಗಳಲ್ಲಿದ್ದ ಚೀನಾ ತಜ್ಞರ ತಂಡ : ಮೊದಲ ಬಾರಿಗೆ ಒಪ್ಪಿಕೊಂಡ ಚೀನಾ !

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ನಡೆದ ಸೇನಾ ಸಂಘರ್ಷದ ವೇಳೆ ತಾನು ಪಾಕಿಸ್ತಾನಕ್ಕೆ ನೇರವಾಗಿ ‘ಆನ್-ಸೈಟ್’ ತಾಂತ್ರಿಕ ನೆರವು ನೀಡಿದ್ದಾಗಿ ಚೀನಾ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆಸಿದ್ದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಚೀನಾದ ತಜ್ಞರ ತಂಡವು ಪಾಕಿಸ್ತಾನ ಸೇನೆಗೆ ಬೆಂಬಲವಾಗಿ … Continued

ಕಾಂಗ್ರೆಸ್ ಜೊತೆ ದೋಸ್ತಿ ಕಟ್: ಲೋಕಸಭೆಯಲ್ಲಿ ಪ್ರತ್ಯೇಕ ಆಸನಕ್ಕೆ ಡಿಎಂಕೆ ಮನವಿ

ನವದೆಹಲಿ: ತಮಿಳುನಾಡಿನ ರಾಜಕೀಯ ಸಮೀಕರಣಗಳಲ್ಲಿನ ಭಾರಿ ಬದಲಾವಣೆಯ ಬೆನ್ನಲ್ಲೇ, ದ್ರಾವಿಡ ಮುನ್ನೇತ್ರ ಕಳಗಂ (DMK) ಸಂಸದೆ ಕನಿಮೊಳಿ ಕರುಣಾನಿಧಿ ಅವರು ತಮ್ಮ ಪಕ್ಷದ ಸದಸ್ಯರಿಗೆ ಲೋಕಸಭೆಯಲ್ಲಿ ಹೊಸ ಆಸನ ವ್ಯವಸ್ಥೆ ಕಲ್ಪಿಸುವಂತೆ ಸ್ಪೀಕರ್‌ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಡಿಎಂಕೆ ಅಧಿಕೃತವಾಗಿ ಕಡಿದುಕೊಂಡಿರುವುದರಿಂದ, ಸದನದಲ್ಲಿ ಡಿಎಂಕೆ ಹಾಗೂ ಕಾಂಗ್ರೆಸ್‌ ಪಕ್ಷಗಳ ಸದಸ್ಯರು ಅಕ್ಕಪಕ್ಕದಲ್ಲಿ … Continued

ಮಮತಾ ಬ್ಯಾನರ್ಜಿ ಸೋಲಿಸಿದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ನೂತನ ಸಿಎಂ ಆಗಿ ಆಯ್ಕೆ

ಕೋಲ್ಕತ್ತಾ : ಮಮತಾ ಬ್ಯಾನರ್ಜಿಗೆ ಅವರ ಕ್ಷೇತ್ರದಲ್ಲೇ ಸೋಲುಣಿಸಿದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಚುನಾಯಿತ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಔಪಚಾರಿಕವಾಗಿ ಘೋಷಿಸಿದರು. ಇತ್ತೀಚೆಗೆ … Continued

ಟಿಸಿಎಸ್ ಮತಾಂತರ ಪ್ರಕರಣ; ಪ್ರಮುಖ ಆರೋಪಿ ನಿದಾ ಖಾನ್‌ ಬಂಧನ

ಮುಂಬೈ/ನಾಸಿಕ್: ಬಹುರಾಷ್ಟ್ರೀಯ ಐಟಿ ಕಂಪನಿ ಟಿಸಿಎಸ್ (TCS) ನಲ್ಲಿ ನಡೆದಿದೆ ಎನ್ನಲಾದ ‘ಬಲವಂತದ ಮತಾಂತರ’ ಜಾಲಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಉದ್ಯೋಗಿ ನಿದಾ ಖಾನ್ ನನ್ನು ಗುರುವಾರ ರಾತ್ರಿ ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ. ಖಾನ್ ಕಳೆದ ನಾಲ್ಕು ದಿನಗಳಿಂದ ನರೇಗಾಂವ್‌ನ ಕೈಸರ್ ಕಾಲೋನಿಯಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದು, ಪೊಲೀಸರು ಫ್ಲಾಟ್ ಮೇಲೆ ನಿಗಾ ಇಟ್ಟಿದ್ದರು. ಪ್ಲಾಟ್‌ನಲ್ಲಿ ನಿದಾ ತನ್ನ … Continued

ತಮಿಳುನಾಡಲ್ಲಿ ಮುಗಿಯದ ಗೊಂದಲ : ಡಿಎಂಕೆ-ಎಐಎಡಿಎಂಕೆ ಸರ್ಕಾರ ರಚನೆಗೆ ಮುಂದಾದ್ರೆ ಟಿವಿಕೆಯ 107 ಶಾಸಕರಿಂದ ರಾಜೀನಾಮೆ..?!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಅತಂತ್ರ ವಿಧಾನಸಭೆ ಹಿನ್ನೆಯಲ್ಲಿ ಸರ್ಕಾರ ರಚನೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.  ಒಂದು ವೇಳೆ ಡಿಎಂಕೆ ಅಥವಾ ಎಐಎಡಿಎಂಕೆ ಅಡ್ಡಹಾದಿಯ ಮೂಲಕ ಸರ್ಕಾರ ರಚಿಸಲು ಮುಂದಾದರೆ ತನ್ನೆಲ್ಲಾ 107 ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ … Continued

ಜೈಲಿನಲ್ಲೇ ಚಿಗುರೊಡೆದ ಪ್ರೇಮ ; ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮಾಜಿ ಕೈದಿಯ ಮದುವೆಯಾದ ಮಹಿಳಾ ಪೊಲೀಸ್‌ ಅಧಿಕಾರಿ…!

ಭೋಪಾಲ : ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಅಪರೂಪದ ಹಾಗೂ ಅಚ್ಚರಿಯ ಪ್ರೇಮಕಥೆಯೊಂದು ಮದುವೆಯಲ್ಲಿ ಅಂತ್ಯಗೊಂಡಿದೆ. ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಮಾಜಿ ಕೈದಿಯನ್ನು, ಅದೇ ಜೈಲಿನ ಮಹಿಳಾ ಅಧಿಕಾರಿಯೊಬ್ಬರು ಅಂತರ್ಧರ್ಮೀಯ ವಿವಾಹವಾಗಿದ್ದಾರೆ. ಸತ್ನಾ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕಿಯಾಗಿ (Assistant Superintendent) ಸೇವೆ ಸಲ್ಲಿಸುತ್ತಿರುವ ಫಿರೋಜಾ ಖಾತೂನ್, ಅಲ್ಲಿಯೇ ಶಿಕ್ಷೆ ಅನುಭವಿಸುತ್ತಿದ್ದ ಧರ್ಮೇಂದ್ರ … Continued

ಪಾಕಿಸ್ತಾನದ 9 ಭಯೋತ್ಪಾದಕ ಶಿಬಿರ, 11 ವಾಯುನೆಲೆ, 13 ಯುದ್ಧ ವಿಮಾನ ಧ್ವಂಸ : ಆಪರೇಷನ್ ಸಿಂಧೂರ ವರ್ಷಾಚರಣೆ ; ಭಾರತದಿಂದ ಮಾಹಿತಿ ಬಿಡುಗಡೆ

ನವದೆಹಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ಭಾರತವು ಪಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ‘ಆಪರೇಷನ್ ಸಿಂಧೂರ (Operation Sindoor)ʼ ಸೇನಾ ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವದಂದು ಭಾರತವು ಪಾಕಿಸ್ತಾನಕ್ಕೆ ಉಂಟಾದ ಭಾರಿ ನಷ್ಟದ ಅಂಕಿಅಂಶಗಳನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳು, ವಾಯುನೆಲೆಗಳು ಮತ್ತು ಯುದ್ಧ ವಿಮಾನಗಳನ್ನು … Continued

ರಾಜೀನಾಮೆ ಕೊಡಲ್ಲ ಎಂದು ಹಠ ಹಿಡಿದ ಮಮತಾಗೆ ಶಾಕ್‌ ; ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಸಂಘರ್ಷಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿದ ಬೆನ್ನಲ್ಲೇ, ರಾಜ್ಯಪಾಲ ಆರ್.ಎನ್. ರವಿ ಅವರು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ. ವಿಧಾನಸಭೆಯ ಐದು ವರ್ಷಗಳ ಅವಧಿಯು ಗುರುವಾರ ಮಧ್ಯರಾತ್ರಿ ಅಂತ್ಯಗೊಳ್ಳಲಿದ್ದು, ಅದಕ್ಕೂ ಮುನ್ನವೇ ರಾಜ್ಯಪಾಲರು … Continued