ಹೆಚ್ಚು ಹೊತ್ತು ಕುಳಿತುಕೊಂಡೇ ಇದ್ದರೆ ʼಹೃದ್ರೋಗದ ಅಪಾಯʼ ಹೆಚ್ಚಳ : ಹೊಸ ಅಧ್ಯಯನ

ಹೊಸ ಅಧ್ಯಯನದ ಪ್ರಕಾರ ತಾಸುಗಟ್ಟಲೆ ಕುಳಿತುಕೊಂಡೇ ಇರುವುದರಿಂದ ಸಾಮಾನ್ಯ ರೀತಿಯ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಮಾಸ್ ಜನರಲ್ ಬ್ರಿಗಮ್‌ನ ಸಂಶೋಧಕರು ಕುಳಿತುಕೊಂಡೇ ಇರುವ ಜಡ ವರ್ತನೆಯು ಎಲ್ಲಾ ನಾಲ್ಕು ವಿಧದ ಹೃದ್ರೋಗಗಳ ಹೆಚ್ಚಿನ ಅಪಾಯದ ಸಾಧ್ಯತೆಗೆ ಸಂಬಂಧಿಸಿದೆ ಎಂದು ಕಂಡುಹಿಡಿದಿದ್ದಾರೆ. , ಜಡ ನಡವಳಿಕೆ ಅಥವಾ ಕುಳಿತುಕೊಂಡೇ ಇರುವುದುಮ ಮಲಗಗಿರುವುದು ಹಗಲಿಗೆ 10.6 ಗಂಟೆಗಳನ್ನು ಮೀರಿದಾಗ … Continued

ಇಸ್ರೇಲಿ ವಾಯು ದಾಳಿಯಲ್ಲಿ ಹೆಜ್ಬೊಲ್ಲಾ ಮುಖ್ಯ ವಕ್ತಾರ ಸಾವು

ಲೆಬನಾನಿನ ಹೆಜ್ಬೊಲ್ಲಾ ಗುಂಪಿನ ಮುಖ್ಯ ವಕ್ತಾರ ಭಾನುವಾರ ಮಧ್ಯ ಬೈರುತ್‌ನಲ್ಲಿ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರ ಸಾವಿನ ಕುರಿತು ಹೆಜ್ಬೊಲ್ಲಾಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್‌ ವರದಿ ಮಾಡಿದೆ. ಲೆಬನಾನಿನ ಮಧ್ಯ ಬೈರುತ್‌ ಮೇಲೆ ನಡೆದ ಇಸ್ರೇಲಿ ದಾಳಿಯಲ್ಲಿ ಹೆಜ್ಬೊಲ್ಲಾದ ಮುಖ್ಯ ವಕ್ತಾರ ಮೊಹಮ್ಮದ್ ಅಫೀಫ್ ಸಾವಿಗೀಡಾಗಿದ್ದಾರೆ … Continued

ವೀಡಿಯೊ…| ಇಸ್ರೇಲಿ ಪ್ರಧಾನಿ ನೆತನ್ಯಾಹು ಮನೆ ಮೇಲೆ ಫ್ಲ್ಯಾಶ್ ಬಾಂಬ್‌ ದಾಳಿ

ಶನಿವಾರ ಇಸ್ರೇಲಿನ ಉತ್ತರ ಪಟ್ಟಣವಾದ ಸಿಸೇರಿಯಾದಲ್ಲಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯ ಕಡೆಗೆ ಎರಡು ಫ್ಲಾಶ್ ಬಾಂಬ್‌ ದಾಳಿ ನಡೆದಿದೆ ಎಂದು ವರದಿಯಾಗಿದೆ. ಈ ವೇಳೆ ಪ್ರಧಾನಿ ನೆತನ್ಯಾಹು ಮತ್ತು ಅವರ ಕುಟುಂಬವು ಮನೆಯಲ್ಲಿ ಇರಲಿಲ್ಲ ಮತ್ತು ಫ್ಲ್ಯಾಷ್ ಬಾಂಬ್ ನೆತನ್ಯಾಹು ಅವರ ಮನೆಯ ಉದ್ಯಾನಕ್ಕೆ ಬಿದ್ದ ನಂತರ ಬೆಂಕಿ ಹೊತ್ತಿ ಉರಿದಿದೆ. … Continued

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಚಾಂಪಿಯನ್ಸ್ ಟ್ರೋಫಿ ಕೊಂಡೊಯ್ಯಲು ಪಾಕಿಸ್ತಾನ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ನಿರ್ಬಂಧಿಸಿದ ಐಸಿಸಿ : ವರದಿ

ಭಾರತವನ್ನು ಕೆರಳಿಸುವ ಕೆಲಸಕ್ಕೆ ಮುಂದಾಗಿದ್ದ ಪಾಕಿಸ್ತಾನಕ್ಕೆ, ಐಸಿಸಿ ಖಡಕ್ ಎಚ್ಚರಿಕೆ ನೀಡಿದೆ. ಅದರಂತೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ವಿವಾದಿತ ಪ್ರದೇಶವಾದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕೊಂಡೊಯ್ಯುವಂತಿಲ್ಲ ಎಂದು ಪಾಕಿಸ್ತಾನಕ್ಕೆ ಐಸಿಸಿ ನಿರ್ಬಂಧಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2025 ರ ಚಾಂಪಿಯನ್ಸ್ ʼಟ್ರೋಫಿ ಪ್ರವಾಸʼವನ್ನು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ಮೂರು ನಗರಗಳಲ್ಲಿಯೂ ಆಯೋಜಿಸುವ, … Continued

ಶ್ರೀಲಂಕಾ ಚುನಾವಣೆ : ಅಧ್ಯಕ್ಷ ಅನುರ ದಿಸ್ಸಾನಾಯಕ ನೇತೃತ್ವದ ಎನ್‌ಪಿಸಿ ಪಕ್ಷಕ್ಕೆ ಬಹುಮತ

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರ ಎಡಪಂಥೀಯ ಒಕ್ಕೂಟವು ಸಂಸದೀಯ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಆರ್ಥಿಕ ಕುಸಿತವು ದ್ವೀಪ ರಾಷ್ಟ್ರದ ಮೇಲೆ ವ್ಯಾಪಕವಾದ ಸಂಕಷ್ಟಗಳ ಎರಡು ವರ್ಷಗಳ ನಂತರ ದಿಸ್ಸಾನಾಯಕೆ, ಸೆಪ್ಟೆಂಬರ್ ಅಧ್ಯಕ್ಷೀಯ ಚುನಾವಣೆಗಳನ್ನು ಗೆದ್ದಿದ್ದರು. 225 ಸದಸ್ಯರ ಸಂಸತ್ತಿನಲ್ಲಿ ಅವರ ನ್ಯಾಷನಲ್ ಪೀಪಲ್ಸ್ ಪವರ್ (NPP) ಸಮ್ಮಿಶ್ರ ಒಕ್ಕೂಟವು ಕನಿಷ್ಠ … Continued

ವೀಡಿಯೊ…| ತನ್ನ ಎರಡು ಮರಿಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಸಿಂಹಿಣಿ ಜೊತೆ ಹೋರಾಡಿದ ತಾಯಿ ಚಿರತೆ…!

ತಾಯಿಯ ಪ್ರೀತಿಗಿಂತ ಸುಂದರವಾದದ್ದು ಹಾಗೂ ದೊಡ್ಡದು ಯಾವುದೂ ಇಲ್ಲ. ತಾಯಿ ಮಾತ್ರ ತಮ್ಮ ಮಕ್ಕಳಿಗಾಗಿ ಯಾವುದೇ ತ್ಯಾಗಕ್ಕೆ ಸಿದ್ಧವಾಗುತ್ತಾಳೆ. ಇದಕ್ಕೆ ಪ್ರಾಣಿಗಳೂ ಹೊರತಾಗಿಲ್ಲ. ತಾಯಿಯ ಪ್ರೀತಿ ಮತ್ತು ಧೈರ್ಯದ ಪ್ರದರ್ಶನದಲ್ಲಿ ತಾಯಿ ಚಿರತೆಯೊಂದು ತನ್ನ ಎರಡು ಮರಿಗಳನ್ನು ರಕ್ಷಿಸಲು ಸಿಂಹದ ವಿರುದ್ಧ ಹೋರಾಡಿದ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಘಟನೆಯನ್ನು ತಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿ … Continued

ಅಮೆರಿಕ: ಡೊನಾಲ್ಡ್ ಟ್ರಂಪ್ ಕ್ಯಾಬಿನೆಟ್‌ನಲ್ಲಿ ಎಲೋನ್ ಮಸ್ಕ್, ವಿವೇಕ ರಾಮಸ್ವಾಮಿಗೆ ಮಹತ್ವದ ಸ್ಥಾನ

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರು ಎಲೋನ್ ಮಸ್ಕ್ ಅವರು ‘ಸರ್ಕಾರಿ ದಕ್ಷತೆಯ ಇಲಾಖೆ’ಯನ್ನು ಮುನ್ನಡೆಸಲಿದ್ದಾರೆ ಎಂದು ಪ್ರಕಟಿಸಿದ್ದಾರೆ. ಮಸ್ಕ್ ಹಾಗೂ ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ ರಾಮಸ್ವಾಮಿ ಅವರು ಈ ವಿಭಾಗದ ಮುಖ್ಯಸ್ಥರಾಗಿರುತ್ತಾರೆ ಎಂದು ಪ್ರಕಟಿಸಿದ್ದಾರೆ, “ಈ ಇಬ್ಬರು ಅದ್ಭುತ ಅಮೆರಿಕನ್ನರು ಒಟ್ಟಾಗಿ, ಸರ್ಕಾರಿ ಅಧಿಕಾರಶಾಹಿಯನ್ನು ಕಿತ್ತೊಗೆಯಲು, ಹೆಚ್ಚುವರಿ ನಿಯಮಾವಳಿಗಳನ್ನು ಕಡಿತಗೊಳಿಸಲು, ವೆಚ್ಚಗಳನ್ನು ಕಡಿತಗೊಳಿಸಲು … Continued

ವೀಡಿಯೊ..| ವಿಚ್ಛೇದನದಿಂದ ಅಸಮಾಧಾನ, ಜನರ ಮೇಲೆ ಕಾರು ನುಗ್ಗಿಸಿದ ವ್ಯಕ್ತಿ ; 35 ಜನರು ಸಾವು, 43 ಮಂದಿಗೆ ಗಾಯ

ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಕೇಂದ್ರದ ಸುತ್ತ ವ್ಯಾಯಾಮ ಮಾಡುತ್ತಿದ್ದ ಜನರ ಮೇಲೆ ಕಾರೊಂದು ನುಗ್ಗಿದ್ದರಿಂದ ಮೂವತ್ತೈದು ಜನರು ಸಾವಿಗೀಡಾಗಿದ್ದಾರೆ ಮತ್ತು 43 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ಈ ಘಟನೆ ನಡೆದಿದೆ, ಆದರೆ ಆ ಸಮಯದಲ್ಲಿ ಪೊಲೀಸರು ಜನರು ಗಾಯಗೊಂಡಿದ್ದಾರೆ ಎಂದು ಮಾತ್ರ ಹೇಳಿದ್ದರು, ಆದರೆ ಘಟನೆಯ … Continued

ಭಾರತದ ತಂಡ ಪಾಕಿಸ್ತಾನಕ್ಕೆ ಹೋಗದಿದ್ದರೆ ಅದು ಚಾಂಪಿಯನ್ಸ್ ಟ್ರೋಫಿಯಿಂದ ಹಿಂದಕ್ಕೆ ಸರಿಯಬಹುದು ; ವರದಿ

ಪಾಕಿಸ್ತಾನದ ಪತ್ರಿಕೆ ಡಾನ್ ವರದಿ ಪ್ರಕಾರ, 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೇ ಪಾಕಿಸ್ತಾನ ಹಿಂದಕ್ಕೆ ಸರಿಯಬಹುದು. 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಅದರ ಆತಿಥೇಯ ಹಕ್ಕುಗಳನ್ನು ಐಸಿಸಿ ಕಸಿದುಕೊಂಡರೆ ಮುಂದಾಗುವ ಸಮಸ್ಯೆ ಬಗೆಹರಿಯುವ ವರೆಗೆ ಯಾವುದೇ ಐಸಿಸಿ ಅಥವಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಂದ್ಯಾವಳಿಗಳಲ್ಲಿ … Continued

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಶಹೀದ್‌ ಭಗತ್‌ ಸಿಂಗ್‌ ಭಯೋತ್ಪಾದಕ ಎಂದ ಪಾಕಿಸ್ತಾನ…!

ಪಾಕಿಸ್ತಾನದ ಲಾಹೋರಿನ ಶಾದ್ಮನ್ ಚೌಕಕ್ಕೆ ಮರುನಾಮಕರಣ ಮಾಡಿ ಅಲ್ಲಿ ಭಗತ್ ಸಿಂಗ್ ಪ್ರತಿಮೆ ನಿರ್ಮಿಸುವ ಪಾಕಿಸ್ತಾನದ ಯೋಜನೆಯನ್ನು ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರ ಅಭಿಪ್ರಾಯದಿಂದಾಗಿ ರದ್ದುಗೊಳಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿಯ ಜಿಲ್ಲಾಡಳಿತವು ಲಾಹೋರ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ. ಸಹಾಯಕ ಅಡ್ವೊಕೇಟ್ ಜನರಲ್ ಅಸ್ಗರ್ ಲೆಘರಿ ಅವರು ಶುಕ್ರವಾರ ಲಾಹೋರ್ ಹೈಕೋರ್ಟ್‌ಗೆ (ಎಲ್‌ಎಚ್‌ಸಿ) … Continued