ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ: 400 ಸಾವು, 250 ಜನರಿಗೆ ಗಾಯ ; ತಾಲಿಬಾನ್‌

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 400 ಜನರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 250 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರರು ಮಂಗಳವಾರ ಬೆಳಿಗ್ಗೆ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರತ್ ಈ ಬಗ್ಗೆ ಮಾಹಿತಿ ನೀಡಿ, ಸ್ಥಳೀಯ ಕಾಲಮಾನ ರಾತ್ರಿ 9 ಗಂಟೆ ಸುಮಾರಿಗೆ … Continued

ಇರಾನ್‌ ಸರ್ವೋಚ್ಚ ನಾಯಕ ಬಳಸುತ್ತಿದ್ದ ವಿಮಾನ ಧ್ವಂಸ ಮಾಡಿದ್ದೇವೆ ಎಂದ ಇಸ್ರೇಲ್‌

ತೆಹ್ರಾನ್: ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಲಿ ಹೊಸೇನಿ ಖಮೇನಿ ಅವರ ವಿಮಾನವನ್ನು ತೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಧ್ವಂಸಗೊಳಿಸಿರುವುದಾಗಿ ಇಸ್ರೇಲ್ ತಿಳಿಸಿದೆ. ಈ ದಾಳಿಯು ಇರಾನ್‌ನ ಪ್ರಾದೇಶಿಕ ಸಮನ್ವಯ ಸಾಮರ್ಥ್ಯಕ್ಕೆ ಬಿದ್ದ ದೊಡ್ಡ ಹೊಡೆತ ಎಂದು ಇಸ್ರೇಲ್ ಬಣ್ಣಿಸಿದೆ. ಇಸ್ರೇಲ್ ರಕ್ಷಣಾ ಪಡೆ (IDF) ಪ್ರಕಾರ, ಈ … Continued

ವೀಡಿಯೊ | ರಾಡಾರ್‌ಗಳಿಗೂ ಸಿಗದ ಇರಾನಿನ ‘ಮಾಯಾವಿ’ ಕ್ಷಿಪಣಿ; ಯುದ್ಧದಲ್ಲಿ ಮೊದಲ ಬಾರಿಗೆ ‘ಡ್ಯಾನ್ಸಿಂಗ್ ಮಿಸೈಲ್’ ಬಳಕೆ

ಇರಾನ್ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಭಾನುವಾರ ಇರಾನ್ ರಾಜಧಾನಿ ತೆಹ್ರಾನ್‌ನಿಂದ ಇಸ್ರೇಲ್‌ ಮತ್ತು ಅಮೆರಿಕಕ್ಕೆ ಸಂಬಂಧಿಸಿದ ನೆಲೆಗಳನ್ನು ಗುರಿಯಾಗಿಸಿಕೊಂಡು ಸುಧಾರಿತ ಕ್ಷಿಪಣಿಗಳನ್ನು ಉಡಾಯಿಸಿದೆ. ಇದರಲ್ಲಿ ಇರಾನ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ಸೆಜ್ಜಿಲ್’ (Sejjil) ಕ್ಷಿಪಣಿಯೂ ಸೇರಿದೆ. ಫೆಬ್ರವರಿ 28 ರಂದು ಯುದ್ಧ ಆರಂಭವಾದ ನಂತರ ಈ ಕ್ಷಿಪಣಿಯನ್ನು ಇರಾನ್‌ … Continued

ಹಾರ್ಮುಜ್ ಜಲಸಂಧಿ ಎಲ್ಲರಿಗೂ ಮುಕ್ತ, ಆದರೆ….: ಇರಾನಿನ ಷರತ್ತು ಏನೆಂದರೆ….

ತೆಹ್ರಾನ್: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿರುವ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಶನಿವಾರ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. “ಹಾರ್ಮುಜ್ ಜಲಸಂಧಿಯು ಎಲ್ಲರಿಗೂ ಮುಚ್ಚಿಲ್ಲ; ಇದು ಕೇವಲ ಅಮೆರಿಕ, ಇಸ್ರೇಲ್ ಮತ್ತು ಅವರ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಮಾತ್ರ ಬಂದ್ ಆಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶತ್ರು ರಾಷ್ಟ್ರಗಳಿಗೆ … Continued

ಇರಾನ್-ಅಮೆರಿಕ ಯುದ್ಧ : ಇರಾನಿನ ಖಾರ್ಗ್ ದ್ವೀಪದ ಸೇನಾ ನೆಲೆಗಳು ಧ್ವಂಸ ; ಡೊನಾಲ್ಡ್ ಟ್ರಂಪ್ ಘೋಷಣೆ

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ನ ತೈಲ ರಫ್ತಿನ ಪ್ರಮುಖ ಕೇಂದ್ರವಾದ ಖಾರ್ಗ್ ದ್ವೀಪದ (Kharg Island) ಮೇಲಿರುವ ಎಲ್ಲಾ ಸೇನಾ ಗುರಿಗಳನ್ನು ಅಮೆರಿಕದ ಪಡೆಗಳು “ಸಂಪೂರ್ಣವಾಗಿ ಧ್ವಂಸಗೊಳಿಸಿವೆ” ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸಿದ್ದಾರೆ. ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಯನ್ನು ನಡೆಸಿದೆ … Continued

ಇರಾನಿನ ನೂತನ ಸರ್ವೋಚ್ಚ ನಾಯಕ, ಐಆರ್‌ಜಿಸಿ ಅಧಿಕಾರಿಗಳ ಮಾಹಿತಿ ನೀಡಿದವರಿಗೆ 92 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ

ಇರಾನ್‌ನ  ನೂತನ ಸರ್ವೋಚ್ಚ ನಾಯಕ (Supreme Leader) ಮೊಜ್ತಬಾ ಖಮೇನಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸಂಬಂಧಿಸಿದ ಹಲವಾರು ಹಿರಿಯ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕವು 10 ಮಿಲಿಯನ್ ಡಾಲರ್ ಅಥವಾ ಪ್ರಸ್ತುತ ವಿನಿಮಯ ದರದಂತೆ 92,47,48,000 ರೂಪಾಯಿಗಳ ವರೆಗೆ ಬಹುಮಾನವನ್ನು ಘೋಷಿಸಿದೆ. ಡಿಪ್ಲೊಮ್ಯಾಟಿಕ್ ಸೆಕ್ಯುರಿಟಿ ಸರ್ವಿಸ್ ನಡೆಸುತ್ತಿರುವ ಅಮೆರಿಕ … Continued

ವೀಡಿಯೊ | ಯುದ್ಧದ ಮಧ್ಯೆ ರಹಸ್ಯ ‘ಕ್ಷಿಪಣಿ ನಗರ’ ಪ್ರದರ್ಶಿಸಿದ ಇರಾನ್ : ಭೂಗತ ಸುರಂಗದಲ್ಲಿ ‘ಆತ್ಮಾಹುತಿ’ ಡ್ರೋನ್‌ಗಳ ದೊಡ್ಡ ಸೈನ್ಯ…!

ನವದೆಹಲಿ: ಜಾಗತಿಕ ತೈಲ ಪೂರೈಕೆಯ ಶೇ. 20 ರಷ್ಟು ಪ್ರಮಾಣದ ತೈಲಗಳು ಹಾದುಹೋಗುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಅಂತಾರಾಷ್ಟ್ರೀಯ ಸಮುದ್ರ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಈಗ ಇರಾನ್ ಸೇನೆಯು ತನ್ನ ಬಳಿ ಬೃಹತ್ ಪ್ರಮಾಣದ ‘ಸುಸೈಡ್ ಡ್ರೋನ್ ಬೋಟ್’ (Suicide Drone Boats) ಗಳ ಸಂಗ್ರಹವಿರುವುದಾಗಿ ಘೋಷಿಸಿದ್ದು, ಇವುಗಳನ್ನು … Continued

ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಗೆ ಗಂಭೀರ ಗಾಯ ; ಅಮೆರಿಕ ರಕ್ಷಣಾ ಸಚಿವ

ವಾಷಿಂಗ್ಟನ್: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ವಿರೂಪಗೊಂಡಿರುವ ಸಾಧ್ಯತೆಯಿದೆ ಎಂದು ಅಮೆರಿಕದ ರಕ್ಷಣಾ ಸಚಿವ (Secretary of War) ಪೀಟ್ ಹೆಗ್ಸೆತ್ ಶುಕ್ರವಾರ ತಿಳಿಸಿದ್ದಾರೆ. ಇರಾನ್ ಮತ್ತು ಅಮೆರಿಕದ ಜಂಟಿ ವೈಮಾನಿಕ ದಾಳಿಯಲ್ಲಿ ತಮ್ಮ ತಂದೆ ಅಲಿ ಖಮೇನಿ ನಿಧನದ ನಂತರ ಮೊಜ್ತಬಾ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ … Continued

ವೀಡಿಯೊ | ವಿವಾದಾತ್ಮಕ ರನ್ ಔಟ್: ಸಿಟ್ಟಿನಿಂದ ಹೆಲ್ಮೆಟ್ ಎಸೆದು ಆಕ್ರೋಶ ವ್ಯಕ್ತಪಡಿಸಿದ ಪಾಕ್ ಬ್ಯಾಟರ್ ಸಲ್ಮಾನ್ ಅಘಾ !

ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬಾಂಗ್ಲಾದ ಆಲ್ ರೌಂಡರ್ ಮೆಹಿದಿ ಹಸನ್ ಮಿರಾಜ್ ಅವರ ನಡೆ ಪಾಕಿಸ್ತಾನದ ಬ್ಯಾಟರ್ ಸಲ್ಮಾನ್ ಅಘಾ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಪಂದ್ಯದ 39ನೇ ಓವರ್‌ನಲ್ಲಿ ಮೊಹಮ್ಮದ್ ರಿಜ್ವಾನ್ ನೇರವಾಗಿ ಹೊಡೆದ ಚೆಂಡು ಮಿರಾಜ್ ಕಾಲಿಗೆ ಬಡಿದು … Continued

ಜಾಗತಿಕ ತಲ್ಲಣದ ನಡುವೆ ಮಹತ್ವದ ಬೆಳವಣಿಗೆ :ಹಾರ್ಮುಜ್ ಜಲಸಂಧಿ ಬಳಸಲು ಕೆಲವು ದೇಶಗಳಿಗೆ ಅನುಮತಿ ಎಂದ ಇರಾನ್

ತೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್‌ ಜೊತೆಗಿನ ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಆಯಕಟ್ಟಿನ ಹಾರ್ಮುಜ್ ಜಲಸಂಧಿ ಬಹುತೇಕ ಮುಚ್ಚಲ್ಪಟ್ಟಿದ್ದರೂ, ಕೆಲವು ದೇಶಗಳ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಇರಾನ್ ಉಪ ವಿದೇಶಾಂಗ ಸಚಿವ ಮಜೀದ್ ತಖ್ತ್-ರಾವಂಚಿ ತಿಳಿಸಿದ್ದಾರೆ. ಸುದ್ದಿಸಂಸ್ಥೆ ಎಎಫ್‌ಪಿ (AFP)ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಹಲವು ದೇಶಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ … Continued