ಉತ್ತರ ಕೊರಿಯಾ ಚುನಾವಣೆ : 99.93% ಮತಗಳಿಂದ ಕಿಮ್‌ಗೆ ಜಯ ; ಗಮನ ಸೆಳೆದದ್ದು ಮಾತ್ರ ಶೇ. 0.07 ಮತದಾರರು ತೋರಿದ ಧೈರ್ಯ, ಯಾಕೆ ಗೊತ್ತೆ ?

ವಿಶ್ವದ ಅತ್ಯಂತ ನಿಗೂಢ ರಾಷ್ಟ್ರ ಉತ್ತರ ಕೊರಿಯಾದಲ್ಲಿ ಮತ್ತೊಮ್ಮೆ ‘ಕಿಮ್ ಯುಗ’ ಸಾಬೀತಾಗಿದೆ. ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ನೇತೃತ್ವದ ‘ವರ್ಕರ್ಸ್ ಪಾರ್ಟಿ’ ಚುನಾವಣೆಯಲ್ಲಿ ಅಕ್ಷರಶಃ ಕ್ಲೀನ್ ಸ್ವೀಪ್ ಮಾಡಿದೆ. ಆದರೆ, ಈ ಬಾರಿಯ ಫಲಿತಾಂಶದಲ್ಲಿ ದಶಕಗಳ ಕಾಲ ಕಾಣದ ಒಂದು ಸಣ್ಣ ‘ಬದಲಾವಣೆ’ ಜಗತ್ತಿನ ಗಮನ ಸೆಳೆದಿದೆ! ಮಾರ್ಚ್ 15 ರಂದು ನಡೆದ 15ನೇ … Continued

ಅಮೆರಿಕ ನಿರ್ಬಂಧಕ್ಕೆ ಇರಾನ್ ಟಕ್ಕರ್‌ : ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ಸುಂಕ ವಿಧಿಸಲು ಚಿಂತನೆ

ತೆಹ್ರಾನ್: ವಿಶ್ವದ ತೈಲ ಮತ್ತು ದ್ರವೀಕೃತ ಅನಿಲದ (LNG) ಐದನೇ ಒಂದು ಭಾಗದಷ್ಟು ಪೂರೈಕೆಯಾಗುವ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸಾರಿಗೆ ಶುಲ್ಕ (Transit fees) ವಿಧಿಸಲು ಇರಾನ್ ಚಿಂತಿಸುತ್ತಿದೆ ಎಂದು ಸಂಸದರೊಬ್ಬರು ಗುರುವಾರ ತಿಳಿಸಿದ್ದಾರೆ. ಈ ಆಯಕಟ್ಟಿನ ಪ್ರದೇಶದ ಮೇಲೆ ತನಗಿರುವ ನಿಯಂತ್ರಣವನ್ನು ಬಳಸಿಕೊಂಡು ಆರ್ಥಿಕ ಲಾಭ ಗಳಿಸಲು … Continued

ಮಗಳ ಮನೆಗೆ ನೀಡಿದ ಭೇಟಿ ನೀಡಿದ್ದೇ ಮುಳುವಾಯ್ತು : ಇರಾನಿನ ನಂ.2 ನಾಯಕ ಇಸ್ರೇಲ್‌ ಕಣ್ಣಿಗೆ ಬಿದ್ದಿದ್ದು ಹೇಗೆ?

ಇಸ್ರೇಲ್‌ನ ಮೊಸಾದ್ (Mossad) ಮತ್ತು ಗುಪ್ತಚರ ಪಡೆಗಳು ಇರಾನ್‌ನ ಅತ್ಯಂತ ಸುರಕ್ಷಿತ ಹಾಗೂ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಅಲಿ ಲಾರಿಜಾನಿಯನ್ನು ಭದ್ರತಾಗೋಡೆಗಳ ಮಧ್ಯೆ  ಪತ್ತೆಹಚ್ಚಿರುವುದು ಇಸ್ರೇಲಿನ ಗುಪ್ತಚರ ಸಂಸ್ಥೆಗಳ ಸಾಮರ್ಥ್ಯವನ್ನು ಅನಾವರಣ ಮಾಡುವಂತಿದೆ. ಅಭೇದ್ಯ ಭದ್ರತಾ ಗೋಡೆಗಳ ನಡುವೆ ಅಡಗಿದ್ದ ಇರಾನಿನ “ನಂಬರ್ 2”  ವ್ಯಕ್ತಿಯನ್ನು ಪತ್ತೆ ಹಚ್ಚಿದ ನಂತರ ಇಸ್ರೇಲ್‌ ನಡೆಸಿದ ವಾಯು … Continued

ವೀಡಿಯೊ | ನೆಲದಿಂದ ಕೆಲವೇ ಇಂಚುಗಳ ಎತ್ತರದಲ್ಲಿ ನಿಯಂತ್ರಣ ತಪ್ಪಿ ಅಪ್ಪಳಿಸಿದ ಹೆಲಿಕಾಪ್ಟರ್‌

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಖೋಟಾಂಗ್ ಜಿಲ್ಲೆಗೆ ಶವವೊಂದನ್ನು ಹೊತ್ತು ಸಾಗುತ್ತಿದ್ದ ಏರ್ ಡೈನಾಸ್ಟಿ ಸಂಸ್ಥೆಯ ಹೆಲಿಕಾಪ್ಟರ್ ಬುಧವಾರ ಇಳಿಯುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದೆ. ಖೋಟಾಂಗ್ ಜಿಲ್ಲೆಯ ಬಾಲಬೇಸಿ ಎಂಬಲ್ಲಿನ ಕೃಷಿ ಭೂಮಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಕಾಲಮಾನ ಸುಮಾರು ಬೆಳಿಗ್ಗೆ 11:51 ಕ್ಕೆ ಈ ಅಪಘಾತ ಸಂಭವಿಸಿದ್ದು, ಈ ವೇಳೆ ಹೆಲಿಕಾಪ್ಟರ್‌ನಲ್ಲಿ ಐವರು ಪ್ರಯಾಣಿಕರಿದ್ದರು. … Continued

ಪೆಟ್ರೋಲ್, ಡೀಸೆಲ್‌ ಅಭಾವದಿಂದ ಕಂಗೆಟ್ಟ ಪಾಕಿಸ್ತಾನ: ಗಣರಾಜ್ಯೋತ್ಸವ ಪರೇಡ್‌, ಸಂಭ್ರಮಾಚರಣೆ ರದ್ದುಗೊಳಿಸಿದ ಪಾಕ್‌…!

ಇಸ್ಲಾಮಾಬಾದ್‌ : ಮಧ್ಯಪ್ರಾಚ್ಯದಲ್ಲಿ ಇರಾನ್ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಈಗ ಪಾಕಿಸ್ತಾನಕ್ಕೆ ಹೊಸ ಸಮಸ್ಯೆ ತಂದೊಡ್ಡಿದೆ. ವರದಿಗಳ ಪ್ರಕಾರ, ಮಾರ್ಚ್ 23 ರಂದು ನಡೆಯಬೇಕಿದ್ದ ಪಾಕಿಸ್ತಾನದ ‘ಗಣರಾಜ್ಯೋತ್ಸವ’ದ (Republic Day) ಮಿಲಿಟರಿ ಪರೇಡ್ ಮತ್ತು ಔಪಚಾರಿಕ ನಡಾವಳಿಗಳನ್ನು ರದ್ದುಗೊಳಿಸಲು ಪಾಕಿಸ್ತಾನದ ಪ್ರಧಾನ ಮಂತ್ರಿ ಕಾರ್ಯಾಲಯ ಮಂಗಳವಾರ ನಿರ್ಧರಿಸಿದೆ. ಪ್ರಧಾನಿ ಶೆಹಬಾಜ್ ಶರೀಫ್ ಅವರ ಕಚೇರಿಯು, … Continued

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಸಾವು

ತೆಹ್ರಾನ್/ಜೆರುಸಲೇಂ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇರಾನ್‌ನ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಬುಧವಾರ ಪ್ರಕಟಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಈ ಸುದ್ದಿಯನ್ನು ಖಚಿತಪಡಿಸಿದ್ದು, ಇದೊಂದು “ಹೇಡಿಗಳ ಕೃತ್ಯ” ಎಂದು ಕಿಡಿಕಾರಿದ್ದಾರೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬುಧವಾರ ರಾತ್ರಿಯಿಡೀ ನಡೆದ ದಾಳಿಯಲ್ಲಿ … Continued

ಹಾರ್ಮುಜ್ ಜಲಸಂಧಿ ಬಳಿ ಇರಾನ್ ಕ್ಷಿಪಣಿ ನೆಲೆಗಳ ಮೇಲೆ 2,200 ಕೆಜಿ ತೂಕದ ‘ಬಂಕರ್ ಬಸ್ಟರ್’ ಬಾಂಬ್ ಹಾಕಿದ ಅಮೆರಿಕ

ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ  (Strait of Hormuz) ಮೇಲೆ ನಿಯಂತ್ರಣ ಪಡೆಯಲು ಅಮೆರಿಕ ಸೇನೆಯು ತನ್ನ ಮೊದಲ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಇರಾನ್‌ನ ಕರಾವಳಿ ತೀರದಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳ ಮೇಲೆ ಅಮೆರಿಕ ತನ್ನ ಅತ್ಯಂತ ಶಕ್ತಿಶಾಲಿ ‘ಬಂಕರ್ ಬಸ್ಟರ್’ ಬಾಂಬ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಪ್ರಕಟಿಸಿದೆ. ಅಮೆರಿಕದ … Continued

ಇಸ್ರೇಲ್ ದಾಳಿಯಲ್ಲಿ ತಂದೆ, ಹಿರಿಯ ಅಧಿಕಾರಿಗಳು ಸಾವಿಗೀಡಾದರು ; ಆದ್ರೆ ಮೊಜ್ತಾಬಾ ಖಮೇನಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಹೇಗೆ ?

ಇರಾನ್‌ ರಾಜಧಾನಿ ತೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ಸಂದರ್ಭದಲ್ಲಿ ಈಗಿನ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಕೂದಲೆಳೆ ಅಂತರದಲ್ಲಿ ಬದುಕುಳಿದಿರುವುದು ಜಾಗತಿಕ ಗಮನ ಸೆಳೆದಿದೆ. ಹೊರಬರುತ್ತಿರುವ ವಿವರಗಳ ಪ್ರಕಾರ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಬಲಿಪಡೆದ ಅದೇ ದಾಳಿಯಿಂದ ಮೊಜ್ತಾಬಾ ಕೆಲವೇ ಸೆಕೆಂಡುಗಳ ವ್ಯತ್ಯಾಸದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. … Continued

ವಾಯು ದಾಳಿಯಲ್ಲಿ ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ, ಕಮಾಂಡರ್ ಗುಲಾಮ್ರೆಜಾ ಸೊಲೈಮಾನಿ ಸಾವು : ಇಸ್ರೇಲ್ ಹೇಳಿಕೆ

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಮಂಗಳವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಮತ್ತು ಉನ್ನತ ಕಮಾಂಡರ್ ಘೋಲಮ್ರೆಜಾ ಸೊಲೈಮನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಆದರೆ, ಇರಾನ್ ಈ ವರದಿಯನ್ನು ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ.  ಇರಾನ್ ರಾಜಧಾನಿ ತೆಹ್ರಾನ್ ಸೇರಿದಂತೆ … Continued

2000 ವರ್ಷಗಳ ನಂತರ ಪತ್ತೆಯಾದ ʼಅಲೆಕ್ಸಾಂಡರ್ ದಿ ಗ್ರೇಟ್ʼ ನಿರ್ಮಿಸಿದ್ದ ‘ಕಣ್ಮರೆಯಾಗಿದ್ದ ನಗರ’..!

ಜಗತ್ತನ್ನೇ ಗೆಲ್ಲ ಹೊರಟಿದ್ದ ಗ್ರೀಕ್ ಚಕ್ರವರ್ತಿ ಅಲೆಕ್ಸಾಂಡರ್ ದಿ ಗ್ರೇಟ್ ಸ್ಥಾಪಿಸಿದನೆನ್ನಲಾದ, ಶತಮಾನಗಳಿಂದ ಮಣ್ಣಿನಡಿಯಲ್ಲಿ ಹೂತುಹೋಗಿದ್ದ ಐತಿಹಾಸಿಕ ನಗರವೊಂದನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ದಕ್ಷಿಣ ಇರಾಕ್‌ನ ಟೈಗ್ರಿಸ್ ನದಿಯ ದಡದಲ್ಲಿರುವ ಈ ನಗರವನ್ನು ‘ಅಲೆಕ್ಸಾಂಡ್ರಿಯಾ’ ಎಂದು ಗುರುತಿಸಲಾಗಿದೆ. ಸುಮಾರು ಕ್ರಿ.ಪೂ. 4ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಈ ನಗರವು ಕಾಲಕ್ರಮೇಣ ಇತಿಹಾಸದ ಪುಟಗಳಿಂದ ಮರೆಯಾಗಿತ್ತು. ಕಳೆದ ದಶಕದಿಂದಲೂ … Continued