ಇರಾನ್ : ನೊಬೆಲ್ ಪ್ರಶಸ್ತಿ ಪುರಸ್ಕೃತ ನರ್ಗಿಸ್ ಮೊಹಮ್ಮದಿಗೆ 6 ವರ್ಷ ಜೈಲು ಶಿಕ್ಷೆ

ಇರಾನ್‌ : ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಹಿಳೆ ನರ್ಗೆಸ್ ಮೊಹಮ್ಮದಿ ಅವರಿಗೆ ಇರಾನಿನ ನ್ಯಾಯಾಲಯವು ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಅವರ ವಕೀಲರು ಭಾನುವಾರ ತಿಳಿಸಿದ್ದಾರೆ. “ಅಪರಾಧಗಳನ್ನು ಎಸಗಲು ಗುಂಪುಗೂಡಿಸಿದ್ದು ಮತ್ತು ಪಿತೂರಿ ನಡೆಸಿದ್ದಕ್ಕಾಗಿ ಅವರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ” ಎಂದು ವಕೀಲೆ ಮೊಸ್ತಫಾ ನಿಲಿ ತಿಳಿಸಿದ್ದಾರೆ. ನ್ಯಾಯಾಲಯವು … Continued

ಎಐ ಕ್ರಾಂತಿ: ರೋಬೋಟ್‌ಗಳೇ ಈಗ ಮನುಷ್ಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ..! ಏನಿದು ‘RentAHuman.ai’..?

 ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆಯು (AI) ಮಾನವನ ಕಲ್ಪನೆಗೂ ಮೀರಿದ ವೇಗದಲ್ಲಿ ಜಗತ್ತನ್ನು ಬದಲಿಸುತ್ತಿದೆ. ಇಂದಿನವರೆಗೂ ಇ ಮೇಲ್ ಬರೆಯಲು, ವೇಳಾಪಟ್ಟಿ ನಿರ್ವಹಿಸಲು ಅಥವಾ ವೀಡಿಯೊ ತಯಾರಿಸಲು ನಾವು ಎಐ ಅನ್ನು ಬಳಸುತ್ತಿದ್ದೆವು. ಆದರೆ, ಭೌತಿಕ ಜಗತ್ತಿನಲ್ಲಿ ಒಂದು ಕೆಲಸ ಮಾಡಬೇಕಾದಾಗ ಎಐ ಏನು ಮಾಡುತ್ತದೆ? ಈಗ ಅದಕ್ಕೊಂದು ಅಚ್ಚರಿಯ ಉತ್ತರ ಸಿಕ್ಕಿದೆ. ತನ್ನ … Continued

ಪಾಕಿಸ್ತಾನ: ಇಸ್ಲಾಮಾಬಾದ್‌ನ ಮಸೀದಿಯಲ್ಲಿ ಭೀಕರ ಆತ್ಮಹತ್ಯಾ ದಾಳಿ: 30 ಮಂದಿ ಸಾವು, 160ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್‌ : ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಶಹಜಾದ್ ಟೌನ್ ಪ್ರದೇಶದಲ್ಲಿರುವ ತರ್ಲೈ ಇಮಾಂಬರ್ಗಾ (Tarlai Imambargah) ಎಂಬ ಶಿಯಾ ಮಸೀದಿಯೊಳಗೆ ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಿಸಿಕೊಂಡ ಪರಿಣಾಮ ಕನಿಷ್ಠ 30 ಜನರು ಸಾವಿಗೀಡಾಗಿದ್ದಾರೆ ಮತ್ತು 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಸ್ಲಾಮಾಬಾದ್‌ನ ಶಹಜಾದ್ ಟೌನ್‌ನಲ್ಲಿರುವ ಶಿಯಾ ಪ್ರಾರ್ಥನಾ ಮಂದಿರದ ಮುಖ್ಯ ದ್ವಾರದ ಬಳಿ … Continued

ಬ್ರಿಟನ್ ಸಂಪತ್ತಿನ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ ಭಾರತೀಯ ಮೂಲದ ಕುಟುಂಬಗಳ ಆದಾಯ : ಎಲ್‌ ಎಸ್‌ ಇ ವರದಿ

ಲಂಡನ್: ಬ್ರಿಟನ್‌ನ ಆರ್ಥಿಕ ಸಂಪತ್ತಿನಲ್ಲಿ ಭಾರತೀಯ ಮೂಲದ ಕುಟುಂಬಗಳು ಅತ್ಯಂತ ಬಲಿಷ್ಠವಾಗಿ ಹೊರಹೊಮ್ಮಿವೆ. ಇತ್ತೀಚಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (LSE) ಅಧ್ಯಯನದ ಪ್ರಕಾರ, ಕಳೆದ ದಶಕದಲ್ಲಿ ಅನೇಕ ಅಲ್ಪಸಂಖ್ಯಾತ ಸಮುದಾಯಗಳು ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದರೆ, ಭಾರತೀಯ ಮೂಲದವರು ಮಾತ್ರ ಸ್ಥಿರವಾದ ಮತ್ತು ಗಮನಾರ್ಹ ಬೆಳವಣಿಗೆಯನ್ನು ಸಾಧಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ಬ್ರಿಟನ್‌ನ ಜನಾಂಗೀಯ ಸಂಪತ್ತಿನ ವಿವರ… … Continued

ಸಮುದ್ರದಲ್ಲಿ ಸಿಲುಕಿದ ತನ್ನ ಕುಟುಂಬದವರನ್ನು ಬಚಾವ್‌ ಮಾಡಲು ದೈತ್ಯ ಅಲೆಗಳ ಮಧ್ಯೆ 4 ಗಂಟೆ ಈಜಿದ 13 ವರ್ಷದ ಬಾಲಕ…!

ಕ್ವಿಂಡಲಪ್ : “ಅತಿ ಮಾನವ” ಎಂದು ಹೇಳಬಹುದಾದ ಒಂದು ಘಟನೆಯಲ್ಲಿ, ಪರ್ತ್‌ನ 13 ವರ್ಷದ ಬಾಲಕ ಆಳ ಸಮುದ್ರದಲ್ಲಿ ಸಿಲುಕಿದ್ದ ತನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರನ್ನು ರಕ್ಷಿಸಲು ಪಶ್ಚಿಮ ಆಸ್ಟ್ರೇಲಿಯಾದ ಒರಟಾದ ಸಮುದ್ರದ ಅಲೆಗಳ ಮಧ್ಯೆ ನಾಲ್ಕು ಗಂಟೆಗಳ ಕಾಲ ಈಜಿರುವ ಘಟನೆ ನಡೆದಿದೆ. ಜನವರಿ 30 ರಂದು  ಕ್ವಿಂಡಲಪ್‌ನಲ್ಲಿ ವಿಹಾರಕ್ಕೆ ತೆರಳಿದ್ದ ವೇಳೆ … Continued

ವೈದ್ಯಕೀಯ ಲೋಕದ ಅದ್ಭುತ…! ಶ್ವಾಸಕೋಶಗಳಿಲ್ಲದೆಯೇ 48 ಗಂಟೆಗಳ ಕಾಲ ಬದುಕುಳಿದ ವ್ಯಕ್ತಿ…!! ಅದು ಸಾಧ್ಯವಾದದ್ದು ಹೇಗೆ..?

ವೈದ್ಯಕೀಯ ವಿಜ್ಞಾನವು ಇಂದು ಕಲ್ಪನೆಗೂ ನಿಲುಕದ ಸಾಧನೆಗಳನ್ನು ಮಾಡುತ್ತಿದೆ. ಅಂತಹದ್ದೇ ಒಂದು ರೋಚಕ ಮತ್ತು ಐತಿಹಾಸಿಕ ಸಾಧನೆಯ ವೈದ್ಯಕೀಯ ವಿದ್ಯಮಾನ ಅಮೆರಿಕದ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರನ್ನು, ಅವರ ದೇಹದಲ್ಲಿ ಶ್ವಾಸಕೋಶಗಳೇ ಇಲ್ಲದಿದ್ದರೂ ಬರೋಬ್ಬರಿ 48 ಗಂಟೆಗಳ ಕಾಲ ಬದುಕಿಸಿಡುವ ಮೂಲಕ ಶಸ್ತ್ರಚಿಕಿತ್ಸಕರು ವೈದ್ಯಕೀಯ ಲೋಕದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. … Continued

ಬಲೂಚಿಸ್ತಾನ್‌ : ಬಿಎಲ್‌ ಎ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕಿಸ್ತಾನ ಸೈನಿಕರು ಸಾವು

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭೀಕರ ಹಿಂಸಾಚಾರ ನಡೆದಿದ್ದು, ಪ್ರತ್ಯೇಕತಾವಾದಿ ಗುಂಪು ‘ಬಲೂಚ್ ಲಿಬರೇಶನ್ ಆರ್ಮಿ’ (BLA) ನಡೆಸಿದ ‘ಆಪರೇಷನ್ ಹೆರೋಫ್ – ಫೇಸ್ 2’ (Operation Herof Phase II) ದಾಳಿಯಲ್ಲಿ ಪಾಕಿಸ್ತಾನದ ಸುಮಾರು 80ಕ್ಕೂ ಹೆಚ್ಚು ಸೈನಿಕರು, ಪೊಲೀಸ್ ಅಧಿಕಾರಿಗಳು ಮತ್ತು ಗುಪ್ತಚರ ದಳದ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಜನವರಿ 31 ರಂದು … Continued

ವೀಡಿಯೊ | ವಾಹನದಲ್ಲಿ ಪೈಪುಗಳಿಲ್ಲದ್ದಕ್ಕೆ ಬೆಂಕಿ ನಂದಿಸಲು ಬಕೆಟ್‌ ಬಳಸಿದ ಪಾಕ್ ಅಗ್ನಿಶಾಮಕ ಸಿಬ್ಬಂದಿ ; ಇದು ಪಾಕಿಸ್ತಾನದ ಸ್ಥಿತಿ..!

ಪಾಕಿಸ್ತಾನದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಗ್ನಿಶಾಮಕ ವಾಹನ ಸ್ಥಳದಲ್ಲಿದ್ದರೂ ಸಹ, ಬೆಂಕಿ ನಂದಿಸಲು ಪೈಪ್‌ ಗಳನ್ನು ಬಳಸದೆ, ಸಿಬ್ಬಂದಿ ಬಕೆಟ್ ಮೂಲಕ ನೀರು ಸುರಿಯುತ್ತಿರುವುದು ಜನರಲ್ಲಿ ಆಕ್ರೋಶ ಮತ್ತು ಮುಜುಗರವನ್ನುಂಟು ಮಾಡಿದೆ. ಪಾಕಿಸ್ತಾನದ ವಸತಿ ಪ್ರದೇಶವೊಂದರಲ್ಲಿ ಕಟ್ಟಡಕ್ಕೆ ಬೆಂಕಿ ಬಿದ್ದಾಗ ಈ ಘಟನೆ … Continued

ವೀಡಿಯೊ | ಕಾಡಿನ ಬಾಯಾರಿಕೆ : ನೀರಿನ ಹೊಂಡದ ಬಳಿ ಸಿಂಹ-ಆನೆ ಮುಖಾಮುಖಿ ; ಮುಂದೇನಾಯ್ತು ನೋಡಿ…

ವನ್ಯಲೋಕ ಎನ್ನುವುದು ಬಣ್ಣಿಸಲಾಗದ ವಿಸ್ಮಯಗಳ ಗೂಡು. ಅಲ್ಲಿ ಹಸಿವು ಎಷ್ಟು ಸತ್ಯವೋ, ಬಾಯಾರಿಕೆಯೂ ಅಷ್ಟೇ ದೊಡ್ಡ ಸತ್ಯ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನಿಸರ್ಗದ ವಿಚಿತ್ರ ಸ್ನೇಹ ಮತ್ತು ಶೌರ್ಯದ ಮುಖಾಮುಖಿಯನ್ನು ನಮಗೆ ಪರಿಚಯಿಸುತ್ತಿದೆ. ಆಫ್ರಿಕಾದ ಸುಡುಬಿಸಿಲಿನ ನಡುವೆ ಒಂದು ನೀರಿನ ಹೊಂಡ. ಅಲ್ಲಿಗೆ ಸುಸ್ತಾಗಿ ಬಂದ ಸಿಂಹಿಣಿಯೊಂದು ಹೊಂಡದ ಮರೆಯಲ್ಲಿ ಅಡಗಿ … Continued

ಜಾಗತಿಕವಾಗಿ 16,000 ಸಿಬ್ಬಂದಿ ವಜಾಗೊಳಿಸಲಿರುವ ಅಮೆಜಾನ್‌

ನವದೆಹಲಿ: ವಿಶ್ವದ ಪ್ರಮುಖ ಇ-ಕಾಮರ್ಸ್ ಮತ್ತು ತಂತ್ರಜ್ಞಾನ ಸಂಸ್ಥೆಯಾದ ಅಮೆಜಾನ್ ಜಾಗತಿಕವಾಗಿ ಸುಮಾರು 16,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ವರದಿಯಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಕಂಪನಿಯು ಕೈಗೊಂಡ ಎರಡನೇ ಅತಿದೊಡ್ಡ ಉದ್ಯೋಗ ಕಡಿತ ಪ್ರಕ್ರಿಯೆ ಇದಾಗಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಮಾಡಿಕೊಂಡಿದ್ದ ಅತಿಯಾದ ನೇಮಕಾತಿ ಮತ್ತು ಪ್ರಸ್ತುತ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಕೃತಕ ಬುದ್ಧಿಮತ್ತೆ (AI) … Continued