ಒಮಾನ್ ಕೊಲ್ಲಿಯಲ್ಲಿ ತೈಲ ನೌಕೆ ಮೇಲೆ ಡ್ರೋನ್ ದಾಳಿ: ಭಾರತೀಯ ಸಿಬ್ಬಂದಿ ಸಾವು

ಮಸ್ಕತ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಒಮಾನ್ ಕೊಲ್ಲಿಯಲ್ಲಿ ಸ್ಫೋಟಕ ತುಂಬಿದ ಡ್ರೋನ್ ಬೋಟ್ ತೈಲ ನೌಕೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ದಾಳಿಯಲ್ಲಿ ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪ್ರಚಲಿತ ಸಂಘರ್ಷದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಇದೇ ಮೊದಲು. ಒಮಾನ್‌ನ ಅಧಿಕೃತ ಸುದ್ದಿ ಸಂಸ್ಥೆಯ ಪ್ರಕಾರ, … Continued

ವೀಡಿಯೊ…| ಅಮೆರಿಕದ 3 ಯುದ್ಧ ವಿಮಾನ ಹೊಡೆದುರುಳಿಸಿದ ಕುವೈತ್ ವಾಯುಪಡೆ : ‘ಗೊತ್ತಾಗದೆ ನಡೆದದ್ದು’ ಎಂದ ಅಮೆರಿಕ

ಕುವೈತ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಕುವೈತ್‌ನಲ್ಲಿ ಪತನಗೊಂಡ ಅಮೆರಿಕದ ಮೂರು F-15E ಸ್ಟ್ರೈಕ್ ಈಗಲ್ (Strike Eagles) ಯುದ್ಧ ವಿಮಾನಗಳನ್ನು ತಪ್ಪಾಗಿ ಗ್ರಹಿಸಿ ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದು ಉರುಳಿಸಿದೆ ಎಂದು ಸೋಮವಾರ ಅಮೆರಿಕದ ಮಿಲಿಟರಿ ತಿಳಿಸಿದೆ. ಆದಾಗ್ಯೂ, ವಿಮಾನದಲ್ಲಿದ್ದ ಎಲ್ಲಾ ಆರು ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದು (Eject), ಅವರ ಸ್ಥಿತಿ … Continued

ಸೌದಿ ಅರೇಬಿಯಾದ ಅತಿದೊಡ್ಡ ತೈಲ ಕೇಂದ್ರದ ಮೇಲೆ ಇರಾನ್ ಡ್ರೋನ್ ದಾಳಿ: ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆ

 ಸೌದಿ ಅರೇಬಿಯಾದ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾದ ರಾಸ್ ತನುರಾ (Ras Tanura) ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಸೌದಿ ಅರಾಮ್ಕೊ ಸಂಸ್ಥೆಯು ತನ್ನ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ದಾಳಿಯು ಮಧ್ಯಪ್ರಾಚ್ಯದ ಇಂಧನ ಮೂಲಸೌಕರ್ಯಗಳ ಮೇಲೆ ಆತಂಕವನ್ನು ಹೆಚ್ಚಿಸಿದೆ. ದಾಳಿಯ ಕುರಿತು ಅರಾಮ್ಕೊ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಸೌದಿ … Continued

ತೆಹ್ರಾನ್‌ ಮೇಲೆ ಅಮೆರಿಕ-ಇಸ್ರೇಲ್ ವಿನಾಶಕ ದಾಳಿ ; ಪಾಕ್‌ ನಂತ್ರ ಇರಾನಿನಲ್ಲೂ ಠುಸ್‌ ಆಯ್ತೆ ಚೀನಾದ ಹೈಟೆಕ್ ಕ್ಷಿಪಣಿ ನಿರೋಧಕ ವ್ಯವಸ್ಥೆ ?

ಅಮೆರಿಕ ಮತ್ತು ಇಸ್ರೇಲ್ ಸಂಘಟಿತವಾಗಿ ನಡೆಸಿದ ವಾಯುದಾಳಿಗಳಿಂದ ಇರಾನ್ ನಗರಗಳಲ್ಲಿ ಭಾರಿ ವಿನಾಶ ಸಂಭವಿಸಿದೆ. ಈ ಘಟನೆಯು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ(air defence system)ಯು ಶತ್ರುವಿನ ಕ್ಷಿಪಣಿಗಳನ್ನು ತಡೆಯುವಲ್ಲಿ ವಿಫಲವಾಗಿರುವುದನ್ನು ಎತ್ತಿ ತೋರಿಸಿದೆ. ಇರಾನ್ ತನ್ನ ಶಸ್ತ್ರಾಸ್ತ್ರಗಳ ಬಲ  ಹೆಚ್ಚಿಸಲು ಇತ್ತೀಚೆಗಷ್ಟೇ ಚೀನಾದಿಂದ ಖರೀದಿಸಿದ್ದ HQ-9B ವಾಯು ರಕ್ಷಣಾ ವ್ಯವಸ್ಥೆಯು ಶತ್ರು ದೇಶಗಳ ಕ್ಷಿಪಣಿಗಳನ್ನು … Continued

10ಕ್ಕೂ ಹೆಚ್ಚು ಇಂಟರ್‌ಸೆಪ್ಟರ್ ಕ್ಷಿಪಣಿಗಳಿಂದ ತಪ್ಪಿಸಿಕೊಂಡು ಮುನ್ನುಗ್ಗಿ ಗುರಿಗೆ ಅಪ್ಪಳಿಸಿದ ಇರಾನ್ ಕ್ಷಿಪಣಿ : ವೀಡಿಯೊ ವೈರಲ್‌

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಎರಡೂ ದೇಶಗಳು ಪರಸ್ಪರ ಕ್ಷಿಪಣಿ ದಾಳಿ ನಡೆಸುತ್ತಿವೆ. ಈ ನಡುವೆ, ಹತ್ತಕ್ಕೂ ಹೆಚ್ಚು ಪ್ರತಿರೋಧಕ (Interceptor) ಕ್ಷಿಪಣಿಗಳಿಂದ ತಪ್ಪಿಸಿಕೊಂಡು ಇರಾನ್‌ನ ಕ್ಷಿಪಣಿಯೊಂದು ಗುರಿ ತಲುಪುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಜೆರುಸಲೇಂನದ್ದು ಎಂದು ಹೇಳಲಾಗುತ್ತಿದ್ದು, ಪ್ರತಿರೋಧಕ ಕ್ಷಿಪಣಿಗಳ ಕಣ್ತಪ್ಪಿಸಿ ಇರಾನ್ ಕ್ಷಿಪಣಿಯು … Continued

ಖಮೇನಿ ಹತ್ಯೆಗೆ ಪಾಕಿಸ್ತಾನದಲ್ಲಿ ಆಕ್ರೋಶ ; ಅಮೆರಿಕ ಕಾನ್ಸುಲೇಟ್ ಕಚೇರಿಮೇಲೆ ದಾಳಿ ; ಹಿಂಸಾಚಾರದಲ್ಲಿ 21 ಮಂದಿ ಸಾವು

ಇಸ್ಲಾಮಾಬಾದ್‌ : ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಪಾಕಿಸ್ತಾನದಾದ್ಯಂತ ಭಾನುವಾರ ಪ್ರತಿಭಟನೆಗಳು ಭುಗಿಲೆದ್ದವು. ಹಲವಾರು ಶಿಯಾ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು, ಬೆಂಕಿ ಹಚ್ಚಿದ ಘಟನೆಗಳು ಮತ್ತು ಅಮೆರಿಕ ವಿರೋಧಿ ಪ್ರದರ್ಶನಗಳಿಗೆ ಕಾರಣವಾಯಿತು. ಹಲವಾರು ನಗರಗಳಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೆ ಕನಿಷ್ಠ 21 ಜನರು ಸಾವಿಗೀಡಾಗಿದ್ದಾರೆ ಎಂದು … Continued

ಇರಾನ್‌-ಅಮೆರಿಕ ಸಂಘರ್ಷ | ಇರಾನ್‌ನ 9 ಯುದ್ಧ ನೌಕೆಗಳು ನಾಶ, ನೌಕಾಪಡೆ ಕೇಂದ್ರ ಕಾರ್ಯಾಲಯ ಧ್ವಂಸ : ಡೊನಾಲ್ಡ್ ಟ್ರಂಪ್

ನವದೆಹಲಿ: ಅಮೆರಿಕದ ಸೇನೆಯು ಇರಾನಿನ ಒಂಬತ್ತು ನೌಕೆಗಳನ್ನು ಮುಳುಗಿಸಿದೆ ಮತ್ತು ಇರಾನ್ ನೌಕಾಪಡೆಯ ಕೇಂದ್ರ ಕಾರ್ಯಾಲಯವನ್ನು ಭಾಗಶಃ ಧ್ವಂಸಗೊಳಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ. ತಮ್ಮ ‘ಟ್ರುತ್ ಸೋಶಿಯಲ್’ (Truth Social) ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, “ನಾವು ಇರಾನ್‌ನ 9 ನೌಕಾ ಹಡಗುಗಳನ್ನು ನಾಶಪಡಿಸಿ ಮುಳುಗಿಸಿದ್ದೇವೆ ಎಂಬ ಮಾಹಿತಿ ನನಗೆ … Continued

ಇರಾನ್ ಮಧ್ಯಂತರ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ನೇಮಕ

ತೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ (Supreme Leader) ಅಲಿ ಖಮೇನಿ ಅವರ ನಿಧನದ ನಂತರ ಉಂಟಾಗಿರುವ ರಾಜಕೀಯ ಸ್ಥಿತ್ಯಂತರದ ನಡುವೆ, ಪ್ರಭಾವಿ ಧರ್ಮಗುರು ಅಲಿರೆಜಾ ಅರಾಫಿ ಅವರನ್ನು ಅಲಿ ಖಮೇನಿ (Ali Khamenei) ಸ್ಥಾನಕ್ಕೆ ಧರ್ಮಗುರು ಅಯತೊಲ್ಲಾ ಆಯ್ಕೆ ಮಾಡಲಾಗಿದ್ದು,  ಮಧ್ಯಂತರ ಪರಮೋಚ್ಛ ನಾಯಕ ಎಂದು ಘೋಷಣೆ ಮಾಡಿದೆ. ಇರಾನ್​ನ ಗಾರ್ಡಿಯನ್ ಕೌನ್ಸಿಲ್​ ಸದಸ್ಯರಾಗಿರುವ ಅಲಿರೆಜಾ … Continued

ಇರಾನ್ ಸುಪ್ರೀಂ ನಾಯಕ ಖಮೇನಿ ಸಾವಿನ ನಂತ್ರ ಉತ್ತರ ಪ್ರದೇಶ ಹಳ್ಳಿಗೂ ಇರಾನ್ ಆಡಳಿತಕ್ಕೂ ಇರುವ ನಂಟು ಮತ್ತೆ ಮುನ್ನೆಲೆಗೆ

ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಮಧ್ಯಪ್ರಾಚ್ಯದಲ್ಲಿ ಯುಧದ ಆತಂಕ ಎದುರಾಗಿದೆ. ಈ ಘಟನೆಯ ನಡುವೆಯೇ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ‘ಕಿಂತೂರ್’ ಎಂಬ ಪುಟ್ಟ ಗ್ರಾಮವೊಂದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ, ಖಮೇನಿಗೂ ಈ ಹಳ್ಳಿಗೂ ಇರುವ ಆಳವಾದ ಪೂರ್ವಜರ … Continued

ವೀಡಿಯೊ..| ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಕೊಂದ ನಿಖರ ದಾಳಿ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇಸ್ರೇಲಿ ರಕ್ಷಣಾ ಪಡೆಗಳು (IDF) ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೀಡಾಗಿದ್ದಾರೆ. ಖಮೇನಿಯವರ ಪ್ರಧಾನ ಕಚೇರಿಯ ಮೇಲೆ ನಡೆಸಿದ ಭೀಕರ ಬಾಂಬ್ ದಾಳಿಯ ದೃಶ್ಯಗಳನ್ನು ಇಸ್ರೇಲ್‌ ಬಿಡುಗಡೆ ಮಾಡಿದೆ. ‘ಆಪರೇಷನ್ ರೋರಿಂಗ್ ಲಯನ್’ (Operation Roaring Lion) … Continued